ಬಸ್ ಸ್ಟಾಫಿ ನಲ್ಲಿ ನಿನ್ನ ನೋಡಿದಾಗ ಹುಟ್ಟಿದ ಪ್ರೀತಿ ಇಂದೂ ಮುಂದುವರೆದಿದೆ. ಅದಕ್ಕೆ ಯವುದೂ ಇಂಟೆರ್ವಲ್ ಇಲ್ಲ. ಅದರೆ ಈ ಪ್ರೀತಿಗೆ ಇನ್ನೂ ಯಾವ ಭಾಷೆಯೂ ಗೊತ್ತಿಲ್ಲ. ಕಲಿಯುವ ಯಾವ ಬಯಕೆಯೂ ಬರ್ತಾ ಇಲ್ಲ. ಈ ಮೌನದಲ್ಲೂ ಎಂಥಹ ಪ್ರೀತಿ ಇದೆ …ಅಲ್ವಾ….??? ಈ ಪ್ರೀತಿಗೆ ನಾನು ಏನಾದರೂ ಹೆಸರು ಇಡಬೇಕು ಅಂತ ಅಂದರೆ ನಾನು ’ಮೌನದ ಮಾತು" ಅಂತ ಇಡುತ್ತೇನೆ. ಕಾಡುವ ನಿನ್ನ ಕನಸುಗಳು, ಕನ್ನಡಿ ಮುಂದೆ ನಿಂತಾಗ ಕಾಣುವ ನಿನ್ನ ರೂಪ, ಹಸಿ ಮುನಿಸು, ಪಿಸುನಗೆ ನಿನ್ನ ನೆನಪು, ಎಲ್ಲವೂ ಮೌನವಾಗಿ ಕಾಡುತ್ತವೆ.
ಅಂದು ಬಸ್ ಸ್ಟ್ಯಾಂಡಿನಲ್ಲಿ ನಿಂತಾಗ, ಬಸ್ಸು ಬಂದು ಅನತಿ ದೂರದಲ್ಲಿ ನಿಂತಿತು. ಬಸ್ಸಿನ ಮುಂಬಾಗದ ಎಡ ಭಾಗದಲ್ಲಿ ಕುಳಿತ್ತಿದ್ದ ನೀನು, ಒಂದು ಸಾರಿ ತಿರುಗಿ ನೋಡಿ, ನಸುನಕ್ಕ ಗಳಿಗೆಯಲ್ಲಿಯೇ ನಾನು ಜಿಗಿದು ಬಸ್ಸಿನ ಒಳಗೆ ಹತ್ತಿ ಬಿಟ್ಟಿದ್ದೆ. ಹತ್ತಿದ್ದೆ ತಡ ಕಂಡಕ್ಟರ್ ಬಯ್ಯಲು ಶುರುಮಾಡಿದ. ನಾನು ಬಹುಶ್ ಟಿಕೆಟ್ ತೆಗೆದುಕೊಂಡಿಲ್ಲವಲ್ಲಾ…!!! ಅದಕ್ಕಿರಬಹುದು ಎಂದು "ಸರ್ ಜಯನಗರ್ ಒಂದು ಕೊಡಿ ಎಂದೆ"..ಯಾವ ಜಯನಗರೂ ಇಲ್ಲ ಕೆಳಗೆ ಇಳಿ ಮೊದಲು ಎಂದ.. ಅಲ್ಲಿದ್ದವರು ಎಲ್ಲರೂ ಗೊಳ್ಳೆಂದು ನಕ್ಕು ಬಿಟ್ಟರು. ಎಷ್ಟು ವಿಪರ್ಯಾಸ ಎಂದರೆ ಅಲ್ಲಿದ್ದವರು ಎಲ್ಲರೂ "ಮಹಿಳೆಯರೆ".ಎಷ್ಟು ನಾಚಿಕೆಯಾಗಬಾರದು ನನಗೆ. ಆಮೇಲೆ ಗೊತ್ತಯ್ತು ನಾನು ಹತ್ತಿದ್ದ್ದು"WOMENS SPECIAL BUS'" ನ್ನು. ನಿನ್ನ ಒಂದು ನಗು ಅಂದು ಮಾಡಿದ ಕಿತಾಪತಿಯನ್ನು ಇಂದಿಗೂ ಮರೆಯಲು ಸಾದ್ಯವಿಲ್ಲ.
ಅಂದು ನಿನ್ನ ನಗಿವಿನಿಂದ ಶುರುವಾದ ಶುಭಗಳಿಗೆ, ಇಂದಿಗೂ ನಗುವಿನ ಸಿಂಚನವನ್ನು ತಂದಿದೆ. ಕೆಲವು ದಿನಗಳವರೆಗೆ ನಡೆದ ನಮ್ಮ ಮೌನಾ ಮಾತು,ಪ್ರೀತಿ ಎಂಬ ಎವೆರೆಸ್ಟಿನ ತುತ್ತ ತುದಿ ತಲುಪಿತ್ತು. ನೀನು ಪ್ರತೀ ಕ್ಷಣವೂ ಈ ಹ್ರದಯದ ಹತ್ತಿರ ಇರ್ತಿಯಾ…ಜೀವನದ ಪ್ರತಿಯೋಂದು ಗಳಿಗೆಯೂ ಜೇನಿನ ಸಿಹಿಯಂತಗಿದೆ. ನಿನ್ನೆ ನೀನು ನನ್ನ ಕನಸ್ಸಿನಲ್ಲಿ ಬಂದು ಏನು ಕೇಳ್ತಾ ಇದ್ದೆ ಗೊತ್ತಾ…!! ಒಂದು ಸಾರಿ ನಿನ್ನನ್ನು ನನ್ನ ಬಾಹು ಬಂಧನದಲ್ಲಿ ಅಪ್ಪಿಕೊಳ್ಳಲು.
ನಿಜ ಹೇಳಲಾ…? ನಿನ್ನ ಬಿಟ್ಟು ನನಗೆ ಯಾವ ಯೋಚನೆಯೂ ಮನಸ್ಸಿನಲ್ಲಿ ಬರ್ತಾ ಇಲ್ಲಾ. ಒಂದು ರೀತಿ ಮನಸ್ಸಿನ ಹತೋಟಿ ತಪ್ಪಿ ತಪ್ಪಿ ಹೋಗಿದೆ. ಯಾರದರೂ ಇದನ್ನು ನೋಡಿ, ಏನಾದರೂ ಅಂದು ಬಿಟ್ಟರೆ?? ಎಂಬ ಭಯ.ಹೇ….!!! ನನಗೆ ಪ್ರೀತಿ ಎನಾದರೂ ಆಗಿದೆಯಾ…!! ಎಂದು ಮನಸ್ಸನ್ನು ಕೇಳಿದರೆ ಅದು "ಹೌದು ಗುರು"ಎಂದು ನಾಚಿಕೆ ಪಟ್ಟು ಕೊಳ್ಳುತ್ತಿದೆ.
ಇಷ್ಟೆಲ್ಲಾ ಆದ ಮೇಲು ಮನಸ್ಸು ಸುಮ್ನೆ ಇರಲು ಹೇಗೆ ಸಾದ್ಯ. ಎರಡೂ ಹ್ರದಯಗಳು ಜೊತೆಗೂಡಿದರೂ, ನಿನ್ನ ಮನಸ್ಸು ಇನ್ನೂ ಒಂಟಿ ಯಾಗಿರಲು ಬಯಸುತ್ತಾ…??
ನಿನ್ನ ಉತ್ತರದ ನಿರೀಕ್ಶೆಯಲ್ಲಿ….
ರಾಜು ಬಾಡಗಿ