ನಗೆ ಹನಿ: ರಾಮಪ್ರಸಾದ.ಬಿ.

ಸಂಗೀತ ಮೇಷ್ಟ್ರು:ಏನಮ್ಮ ರಾಗಿಣಿ!

ಸ…ರಿ…ಅನ್ನು….

ರಾಗಿಣಿ:ಸಾರಿ ಅನ್ನೋಂತಹ ತಪ್ಪು ನಾನೇನು ಮಾಡಿದ್ದೇನೆ ಗುರುಗಳೇ?!

****

ರಮ್ಯ:ಡ್ಯಾಡಿ,ನನಗೆ ಟೀಚರ್ ಶಿಕ್ಷೆ ಕೊಟ್ರು …

ತಂದೆ:ಯಾಕೋ ಪುಟ್ಟ ಅಂತಾ ತಪ್ಪು ನೀನೇನು ಮಾಡಿದೆ?!

ರಮ್ಯ:ನಮ್ ಟೀಚರ್ ನನ್ಹತ್ರ ಸ್ಕೇಲ್ ತೋರಿಸಿ ಎಲ್ರ ಮುಂದೆ ಹೇಳ್ತಿದ್ರು-"ಈ ಸ್ಕೇಲ್ ತುದಿಗೆ ಒಬ್ಬ ಮೂರ್ಖ ವ್ಯಕ್ತಿ ನಿಂತಿದ್ದಾಳೆ…"

ಆಗ ನಾನು ಸ್ಕೇಲ್ ನ ಯಾವ ತುದಿ ಟೀಚರ್ ಅಂತ ಕೇಳಿದೆಯಷ್ಟೇ!"

****

ಡಾಕ್ಟರ್:ನೀವೇನು ಭಯಪಡಬೇಡಿ!ಆಪರೇಷನ್ ಆದಕೂಡಲೇ ನೀವು ಹಾಯಾಗಿ ನಿಮ್ಮ ಮನೆಗೆ ನಡೆದುಕೊಂಡೇ ಹೋಗಬಹುದು….

ರಂಗ:ಯಾಕೆ..ಆಟೋ ಖರ್ಚಿಗೂ ಉಳಿಯದಷ್ಟು ಬಿಲ್ ಮಾಡ್ಬೇಕು ಅಂದ್ಕೊಂಡಿದ್ದೀರಾ ಹೇಗೆ ಡಾಕ್ಟ್ರೇ?!

****

ಟೀಚರ್:ನಮ್ಮೂರಿಗೆ ಕೋಳಿ ಮರಿಗಳು ವಲಸೆ ಬಂದಿವೆಯಂತೆ!

ಇದು ಏನನ್ನು ಸೂಚಿಸುತ್ತದೆ? 

ಚಿಂಟು:ಟೀಚರ್ ಯಾರೋ ಹೇಳಿದ್ದನ್ನು ಕೇಳಿ ಹೇಳುತ್ತಿದ್ದಾರೆ ಎಂಬುದನ್ನು ಸೂಚಿಸುತ್ತದೆ.

****

ಸರ್ಕಾರಿ ಶಾಲಾ ಶಿಕ್ಷಕ:ನಿಮ್ಮಲ್ಲಿ ಸಿ.ಸಿ.ಕ್ಯಾಮೆರಾ ವ್ಯವಸ್ಥೆ ಇದೆಯಾ?

ಖಾಸಗಿ ಶಾಲಾ ಶಿಕ್ಷಕ:ಇನ್ನೂ ಆಗಿಲ್ಲ,ಆದ್ರೆ ಶಿಕ್ಷಕರ ಪಾಠ ವೀಕ್ಷಣೆಗೆ ನಮ್ಮ ಮುಖ್ಯೋಪಾಧ್ಯಾಯರು ತಪ್ಪದೇ ಬರ್ತಾರೆ. ನಿಮ್ಮಲ್ಲಿ ಹೇಗೆ?

ಸರ್ಕಾರಿ ಶಾಲಾ ಶಿಕ್ಷಕ:ನಮ್ಮ ಮುಖ್ಯೋಪಾಧ್ಯಾಯರು ಹೋಗ್ತಾರೆ…..

ಖಾಸಗಿ ಶಾಲಾ ಶಿಕ್ಷಕ:ಓ ಹೌದಾ?!

ಸರ್ಕಾರಿ ಶಾಲಾ ಶಿಕ್ಷಕ:ಹೂಂ ಆಗಾಗ ಅಡುಗೆ ಮನೆಗೆ ಹೋಗ್ತಾ ಇರ್ತಾರೆ ಅಡಿಗೆ ರುಚಿ ನೋಡೋಕೆ!

****

ಮಗ:ಅಪ್ಪಾ!ನಾನು ಈಗ ಉನ್ನತ ಮಟ್ಟಕ್ಕೇರಿದ್ದೇನೆ.

ತಂದೆ:ಅದ್ಹೇಗೋ?!

ಮಗ:ಮೊನ್ನೆವರೆಗೂ ನಮ್ಮ ತರಗತಿ ಕೊಠಡಿ ಕೆಳಗಿತ್ತು.ಹೊಸ ಕಟ್ಟಡವಾದುದರಿಂದ ನಮ್ಮನ್ನು ಈಗ ಐದನೇ ಅಂತಸ್ತಿಗೆ ಕಳಿಸಿದ್ದಾರೆ!.

****

ರಾಜು:ಹೊಸದಾಗಿ ಯಾವ್ದಾದ್ರೂ ಸಿ.ಡಿ.ಗಳು ಬಂದಿವೆಯಾ?

ವ್ಯಾಪಾರಿ:ಎರಡು ಆಲ್ಬಂ ಬಂದಿವೆ.ಕೊಡ್ಲಾ?

ರಾಜು:ಸಿ.ಡಿ.ಕೇಳಿದ್ರೆ ಆಲ್ಬಂ ಅಂತಿದಿಯಾ,ತಲೆ ಸರಿಯಾಗಿದೆಯೇ

ಯಾರ ಮುಖ ನೋಡಿ ಎದ್ದಿದಿಯೋ!

****

ಶಿಕ್ಷಕಿ:ಈಗ ಯಾಕೋ ಅಳ್ತಿದ್ದೀಯಾ?

ರವಿ:ನನ್ನ ಮುದ್ದಾಡೋದು ಬಿಟ್ಟು ಯಾಕೆ ಹೊಡಿತೀರಾ ಮಿಸ್?

ಶಿಕ್ಷಕಿ:ಮಗ್ಗಿ ಸರಿಯಾಗಿ ಒಪ್ಸಿದ್ರೆ ಏಟು ಬೀಳ್ತಿದ್ವಾ?

ರವಿ:ನಿನ್ನೆ ಪಕ್ಕದಮನೆ ಅಂಕಲ್ ನ ಮುದ್ದಾಡ್ತಾ ಇದ್ರಲ್ವಾ,ಅವರೇನು ಮಗ್ಗಿ  ಒಪ್ಸಿದ್ರಾ?!

****

ತಾಯಿ:ಯಾಕೋ,ಯಾವಾಗ ನೋಡಿದ್ರೂ ತಮ್ಮನ ಜೊತೆ ಕುಸ್ತಿ ಆಡ್ತಾ ಇರ್ತೀಯಾ?

ಮಗ:ಇಲ್ಲಮ್ಮ ..ಕರಾಟೆ ಕ್ಲಾಸಿನಲ್ಲಿ ಹೇಳಿಕೊಟ್ಟಿದ್ದನ್ನು ಮನೆಯಲ್ಲಿ ಹೆಚ್ಚಿನ ಅಭ್ಯಾಸ ಮಾಡ್ತಾ ಇದ್ದೇನೆ. ತಮ್ಮನಿಗೆ ಹೊಟ್ಟೆಯುರಿ ಅದ್ಕೇ ನಿನ್ನ ಮುಂದೆ ಸುಳ್ಳು ಹೇಳಿದ್ದಾನೆ!.

****

–ರಾಮಪ್ರಸಾದ.ಬಿ.

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x