ಚುಟುಕಗಳು: ವೀಣಾ ಭಟ್

ವ್ಯರ್ಥ
ಸುಂದರಿಯ ನಡೆಯಲ್ಲಿ 
ಸುಗುಣವಿಲ್ಲದಿರೆ 
ಆ ಸೌಂದರ್ಯ 
ಸುಡುಗಾಡು ಹೊಗೆಯಲ್ಲಿ 
ಸುರುಗಿ ಹೂ ಕಂಪು  
ಚೆಲ್ದಂತೆ ವ್ಯರ್ಥ. 

ಗ್ರಹಚಾರ
ಈ ರಾಜಕೀಯ ಮಂತ್ರಿಗಳ ಸರ್ಕಾರ 
ರಾಕ್ಷಸರ ಅವತಾರ 
ಅವರದೇ ದರ್ಬಾರ 
ಹೇಳುವರು ಮಾಡುವೆವು ನಮ್ಮ ಉದ್ದಾರ 
ಕೇಳಿ ಪ್ರಶ್ನಿಸಿದರೆ ಇಲ್ಲದ 
ಟೆಕ್ಸಾಕಿ ಬಿಡಿಸುವರು ನಮ್ಮ ಗ್ರಹಚಾರ
ಹಿಂಗಿದೆ ನೋಡಿ ಸ್ವಾಮೀ ಸಮಾಚಾರ  

ಪಜೀತಿ 
ನನ್ನುಡುಗಿ ಪಾರ್ವತಿ 
ನಾ ಮಾಡ್ತಿದ್ದೆ ತುಂಬಾ ಪಿರೂತಿ 
ಅವಳ ಚೆಂದದ ಗೆಳತಿ ಮಾಲತಿ  
ಕಂಡಾಗಿನಿಂದ ನಾನಾದೆ ಮಾರುತಿ 

ನನ್ನುಡುಗಿ
ನನ್ನುಡುಗಿ ಕಪ್ಪು 
ಪಾಪ ಅದರಲ್ಲಿ ಅವಳದೇನು ತಪ್ಪು 
ಎಲ್ಲ ಅವಳಮ್ಮನದೆ ಛಾಪು 
ಬದಲಾಗದು ಎಷ್ಟು ಬಳಸಿದರೂ ಫೇರ್ ಎನ್ಲವ್ಲಿ ಸೋಪು

ತುತ್ತು-ಮುತ್ತು 
ಕನಸೆಲ್ಲ ನನಸಾದಂತೆ
ಗರಿಗೆದರುವ ಮುಸ್ಸಂಜೆ ಹೊತ್ತು 
ನಾನು-ನೀನು ಕಣ್ಣು ಮಿಟಕಿಸುತ ಪಡೆದ 
ಮಾತುಗಳ ಮುತ್ತು 
ಕಿಟ್ಟಣ್ಣನ ಅಂಗಡಿಯಲ್ಲಿ ನೀ ತಿನ್ನಿಸಿದ 
ಪಾವ್ ಬಾಜಿಯ ತುತ್ತು 
ಈ ಚಟುವಟಿಕೆಯ ಮೇಲೆ ತಿಳಿಯಲ್ಲಿಲ್ಲ ಗೆಳೆಯ 
ಯಾವಾಗ ನಮ್ಮಪ್ಪನ ಕಣ್ಣು ಬಿತ್ತು 

ಬಣ್ಣದ ಹುಡುಗಿ 
ನನ್ನುಡುಗಿಯ ಕಣ್ಗಳು 
ಕಡುಗಪ್ಪು ಬಣ್ಣ 
ಲಿಪ್ಸ್ಟಿಕ್ ಹಚ್ಚಿದ ತುಟಿಗಳು 
ಅಚ್ಚ ಹವಳದ ಬಣ್ಣ 
ಅಪ್ರಾಪ್ತ ವಯಸ್ಸಲ್ಲಿ ಬಿಳಿನೆರಿಗೆ ಬಂದು 
ತಲೆಯೆಲ್ಲ ಬಣ್ಣ 
ತಾ  ಕರಿಹುಡುಗಿಯೆಂದು ತಿಳಿಯಗೂಡದೆಂದು 
ಹಚ್ಚುವಳು ಪ್ರತಿದಿನವೂ 
ಮುಖತುಂಬ ಸುಣ್ಣ 

ಭಗ್ನ ಭಾವ 
ಭರವಸೆಯ ಭಾವಗಳು 
ಬದಲಾದ ಮೇಲೆ 
ಬಿಕ್ಕುವುದು ಒಳಮನಸು 
ತನ್ನೊಳಗೆ ನೊಂದು 
ಹಿಂಡುವುದು 
ಹಸಿಜೀವ
ಉಸಿರಲ್ಲೆ ಬೆಂದು

ಸಾಲ-ಶೂಲ 
ನಾ ಮಾಡಿರಲ್ಲಿಲ್ಲ ಸಾಲ 
ಸಿಗುವವರೆಗೆ ನಮ್ಮೊಪಿಸಿನಲ್ಲಿ ಮಾಲ 
ಸುತ್ತಿಕೊಂಡಿತು ಮೊದಲ ನೋಟದಲ್ಲೇ 
ನನ್ನ ಅವಳ ಪ್ರೇಮ ಜಾಲ 
ಈಗ ಪ್ರತಿದಿನವೂ ಚುಚ್ಚುತಿದೆ ಸಾಲಗಾರರ ಶೂಲ

ಹೀಗೊಂದು ಭ್ರಮೆ 
ಭ್ರಮೆನಿರಸ ಬದುಕಾದರೆ 
ಭಗ್ನಗೊಳ್ಳುವವು ಭರವಸೆಯ 
ಬಾಳ ಪಯಣದ ನೌಕೆ
ಹಾರುತಿರೋ ವಿಮಾನ 
ಬುವಿಗೆ ಅಪ್ಪಳಿಸಿದಂತೆ; 
ಅಂತ್ಯವಿಲ್ಲದ ಭವಿಷ್ಯದ ಕನಸುಗಳು 
ಚೂರು ಚೂರು

ಅಯೋಮಯ
ಚಂದ್ರನಿಲ್ಲದ ಇರುಳಿನ ಬಾನು 
ಪಾಳುಬಿದ್ದ ಕೂಪದಂತೆ 
ಗಾಢಂದಕಾರದಲ್ಲ್ಲಿ 
ವಿಷಯ ವಸ್ತುಗಳೆಲ್ಲ 
ಅಯೋಮಯ 

ಆಶಯ 
ಈ ಗುಡಿಯ ದೀವಿಗೆ 
ನೀ ಬರುವ ದಾರಿಗೆ 
ಕನಸಿರಲಿ ನಾಳೆಗೆ 
ಸೊಗಸಿರಲಿ ಬಾಳಿಗೆ 
ತುಂಬುತಿರಲಿ ಪ್ರತಿದಿನವೂ 
ನವೋಲ್ಲಾಸದ ಜೋಳಿಗೆ 

ದೈನ್ಯತೆ 
ಮೌನದ ನೋಟಗಳಲ್ಲಿ 
ಹೇಳದ ಮಾತುಗಳು ಹಲವು 
ನಗುವ ಮೊಗದಲ್ಲಿ ಒಂದು
ಸೋತ ನೆನಪಿನ ಗೆರೆಯು 

ಹಣೆಬರಹ
ಬದಲಾವಣೆ ಜಗನಿಯಮ 
ಈ ಬದುಕು ವಿಧಿ ನಿಯಮ 
ಕನ್ನಿದ್ದರು ಓದಲಾಗದು 
ಆ ಭ್ರಹ್ಮ ಬರೆದ 
ಅಸ್ಪಷ್ಟ ಹಣೆಬರಹ. 

ಹದಿಹರೆಯದ ವಯಸು
 ಹಲವು ಬಯಸಿ 
ಹಪಹಪಿಸುವ ಮನಸು 
ನೈಜತೆಯ ಸೋಲುಗಳ 
ಒಪ್ಪಿಕೊಳ್ಳದೆ ಪರಿತಪಿಸುವ ಮನಸು 
ಅದೇ ಹುಚ್ಚುಕೋಡಿಯ
ಹದಿಹರೆಯದ ವಯಸು
ಹಸಿಹಸಿಯ ಕನಸು 

ಮತ್ತೆ ಕಾಡುತಿದೆ 
ಮತ್ತೆ ಕವಿದಿದೆ ಕರಿಯ ಮೋಡವು 
ಮೆಲ್ಲ ಬೀಸಿದೆ ತಂಪು ಗಾಳಿಯು 
ಮತ್ತೆ ಬರುತಿದೆ ಮಳೆಯ ದಿನಗಳು 
ಸಿಟ್ಟು ಬರಿಸಿದೆ ನಿನ್ನ ನೆಪಗಳು 

ನನ್ನವಳು
ನನ್ನವಳು ತಂಗಾಳಿ 
ನಾ ಸಂಬಳ ಅವಳ ಕೈಗಿಟ್ಟಾಗ
ಸಿಟ್ಟಾದರೆ ಬಿರುಗಾಳಿ 
ನಾ ಹೇಳಿದ್ದ ಮಾಡದಾಗ.. 

ಗೋ ಗೋ ಗೋವಾ(go GOA)
ಮಾಡಿದ್ರೂ ಪ್ಲಾನು 
ಹೋಗಲಿಲ್ಲ ನಾನು 
ಅದ್ಯಾಕೆ ಗೊತ್ತೇನು 
ದುಡ್ಕೊಡಲು ಇನ್ನೂ ಸಿಕ್ಕಿಲ್ಲ ಜಾನು!!

ಬೆಟ್ಟ 
ನೃಪತುಂಗ ಬೆಟ್ಟ 
ಅದು ತುಂಬಾ ಘಟ್ಟ 
ಒಣಗಿರುವ ಕಂಠ 
ನೋಯ್ತಿರುವ ಸೊಂಟ 

ಟ್ರಿಪ್ಪು 
ದಾಂಡೇಲಿ ಟ್ರಿಪ್ಪು 
ಇಟ್ಟಿದ್ದೆ ತಪ್ಪು 
ಆಗಿದ್ದು ಡ್ರಾಪು 
ನಮ್ಗುರುತು ಮಾತ್ರ thums uppu

ನಮ್ಮೂರ ಕೆರೆ
ಉಣಕಲ್ಲು ಕೆರೆ 
ಕಸ ಕಡ್ಡಿಗಳ ಹೊರೆ 
ಬಿಸಿಲು ಉರಿ ಬೇರೆ 
ಹೋಗೋಣ ಆದರೆ
 
ಚಿನ್ನದ ಪ್ಲೇಟು
ಬಂಗಾರದ ಪ್ಲೇಟು 
ಸ್ವಲ್ಪಿಲ್ಲ ವೇಟು 
ದುಡ್ಮಾಡಿದ್ದು ಸೇಟು 
ತಿಳಿದ owner ಸೀದಾ ಸ್ವರ್ಗಕ್ಕೆ ರೈಟು

ನಮ್ಮ ತೋಟ 
ನಮ್ಮದೊಂದು ತೋಟ 
ಅದಕ್ಕೆ ಯಾವಾಗಲೂ ದನಗಳ ಕಾಟ 
ಪ್ರದಿನವು ನಡೆಯುವುದು ಜನದನಗಳ ಓಟ 
ಬೇಕಾದರೆ ಗಿಟ್ಟಿಸಿಕೊಳ್ಳಿ ಅದ ಒಂದು ಫ್ರೀ ನೋಟ 

ಪ್ರೀತಿ ಕುರುಡು
ಭಾವಗಳು ಬದಲಾದಮೇಲೆ 
ಅನಿಸುವುದು ಈ ಬದುಕು ಬರೀ ಬರಡು 
ಅದಕ್ಕಾಗಿಯೇ ಹೇಳುವುದು 
ಈ ಪ್ರೀತಿ ಬಾಂಧವ್ಯಗಳ ಸ್ವಾರ್ಥಗಳು 
ಎಂದಿಗೂ ಬರಿ ಕುರುಡು 

ಶಿವರಾತ್ರೆ ಜಾತ್ರೆ 
ನಮ್ಮೂರ ಜಾತ್ರೆ 
ಮಜವಿರುವುದೇ ರಾತ್ರೆ 
ಮುಂದೋಗಬಹುದು ಕೂಡ ನಿತ್ರೆ 
ಅದೇ ಶಿವರಾತ್ರೆ
 
ಅನಾನಸು 
ಅದೊಂದು ಅನಾನಸು 
ಕೊಳೆತಿದೆಯೋ ನೋಡು ಮೂಸು 
ಕೊಳೆತು ಆಗಿತ್ತು ಜೂಸು 
ಬೇಗ ಮಾರೋದೆ ಲೇಸು 
ಮಾರಿದರೆ ಸಿಕ್ಕುತ್ತೆ ಮೂರ್ ಕಾಸು 
ಮಾರದಿದ್ರೆ ನಮಗೆ ಸುಮ್ನೆ ಲೋಸು 

ಜೀವನ- ಭಾವನ
ಸ್ನೇಹ ವಿಶ್ವಾಸಗಳು ಮನಸ್ಸಿನ ಭಾವನೆಗಳು 
ಪ್ರೀತಿ ಅನುಕಂಪಗಳು ಅದರ ಕಾಮನೆಗಳು 
ಇರಬೇಕು ಸ್ವಲ್ಪ ಉತ್ಪ್ರೆಕ್ಷೆಗಳು 
ಒಲುಮೆಯೇ ಭಾವನ ಸಮರಸವೆ ಜೀವನ 

ಮಾನವ 
ಪ್ರಕೃತಿ ಪುರುಷ ಮಾನವ 
ಏಕೆ ಆಗಿದ್ದೀಯ ಧಾನವ 
ಮುನಿದು ಏಕೆ ನೋಯಿಸುತ್ತೀಯ ತಾಯ ಮಾನವ 
ಇನ್ನಾದರೂ ಕಲಿ ನಯ ವಿನಯವ. 

ಭಾವ ಶೂನ್ಯತೆ
ಕಣ್ಣರಿಯದ ಭಾವಗಳ 
ಕರುಳ ಬಳ್ಳಿಯು ಅರಿತು 
ತನ್ನೊಳಗೆ ಮರುಗಿ ಸುಡುತಿದೆ 
ಜಾಠರಾಗ್ನಿಯ ದಗೆಯಲಿ
ನೆನೆದ ಭಾವ ಶೂನ್ಯತೆಯ 
ಮ್ಲಾನ ಕನವರಿಕೆಯ ಕೋರಿಕೆಯಲಿ  

ಮೌನಿಯಾದಾಗ 
ಮಾತೊಳಗೆ ಮೌನವು 
ಮುಗ್ಗರಿಸಿ ಬಿದ್ದಾಗ
ವಾಚಾಳಿಗೂ ಶಬ್ದಗಳ ಕೊರತೆ 
ತಲೆಯೊಳಗೆ ಮನದೊಳಗೆ

ನೆನಪು 
ನೆನಪಿನ ಕಡಲಿನ ದೋಣಿ 
ನೆನೆಪಿಸುವವು ಮರೆವಿನಾಳದ 
ಬಣ್ಣ ಬಣ್ಣದ ಮುಖಗಳ 
ಸುಖ – ದುಃಖದ 
ನೋವು-ನಲಿವಿನ
ಸಂದರ್ಭ ಸಂತಾಪಗಳ
ಭಾವಗಳ ಜೀವನಾಡಿಯ ಒಳಗೆ 
ಆ ಕ್ಷಣಕೆ ಹಸಿರಾಗಿ.. 

-ವೀಣಾ ಭಟ್

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x