ಅಬ್ಬಾ ! ಆ ದಿನಗಳು ನನ್ನಲ್ಲಿ ಅದೆಷ್ಟು ಸಂತೋಷ, ಅದೆಷ್ಟು ಉಲ್ಲಾಸದಿಂದ ಕೂಡಿದ್ದವು ಎಂದು ಹೇಳೋದಕ್ಕೆ ಈಗ ಮನಸ್ಸು ಭಾರವಾಗುತ್ತದೆ. ಈ ಜಗತ್ತಿನಲ್ಲಿ ಕಾಣದ ಸುಂದರ ವಸ್ತು ಕಂಡು ನನ್ನದೆಂದು ಭಾವಿಸಿ ಅದನ್ನು ಅತಿಯಾಗಿ ಹಚ್ಚಿಕೊಂಡಿದ್ದೆ ನಂದೆ ತಪ್ಪು. ಈ ಹರಿದ ಜೀವನದಲ್ಲಿ ಯಾರು ನೆನಪಿಲ್ಲ ಎಂಬ ಭಾವನೆಯ ಮುಖಾಂತರ ನನ್ನಿಂದ ನಾನೆ ದೂರಾಗಿದ್ದು, ಭಾವದ್ವೇಗಕ್ಕೆ ಒಳಗಾಗಿದ ದಿನಗಳು ಅದೆಷ್ಟೋ ಇವೆ ಎಂಬದನ್ನು ಎಣಿಸಲು ನೆನಪು ಉಳಿಯದೆ ಹೋಗಿದೆ. ಆ ಕ್ಷಣಗಳನ್ನು ನೆನಪು ಮಾಡಿಕೊಂಡರೆ ಇಂದಿಗೂ ಸಂತೋಷದ ಜೋತೆ ದು:ಖ ಎಂಬ ಬೆಂಕಿಮಳೆ ಬಂದು ಹೋಗುತ್ತದೆ. ಇಂತಹ ಸಂತೋಷ, ಬೇಜಾರಾದ ಭಾವನೆಗಳಿಗೆ ಬೆಲ್ಲದಂತಹ ಸಿಹಿ ಮಾತನ್ನಾಡಿ ಬಾಯ್ ಅಂದು ದೂರಾದ ನನ್ನ ಸುಂದರಿಯ ನೆನಪಿನ ನೋಟದಿಂದ ಹಿಡಿದು ಇಂದಿಗೂ ಸಹ ನನ್ನ ಹೃದಯ, ಎಲ್ಲಿರುವಳು? ಹೇಗಿರುವಳು? ಎಂದು ಪ್ರತಿ ನಿಮಿಷ, ಪ್ರತಿ ಗಳಿಗೆಯು ಪರಿತಪಿಸುತ್ತದೆ.
ಅವಳನ್ನು ನೋಡಿ ಅದೆಷ್ಟೂ ದಿನಗಳು ಕಳೆದೋಯ್ತು ಆದರೆ ನಿನ್ನ ಕೆಂಡಸಂಪಿಗೆಯಂತ ಮುಖ ನನ್ನ ಕಣ್ಣು, ಮನಸ್ಸಿನಲ್ಲಿ ಅಚ್ಚೆ ಹಾಕಿ ದೂರಾಗಿಸಿದೆ. ನಿನ್ನ ನಗು ಹೃದಯಕ್ಕೆ ಬಿರುಗಾಳಿ ಬೆಂಕಿಯಂತೆ ಹೊತ್ತಿಸಿ ದೂರಾಗಿದೆ, ಅದಕ್ಕೆ ಇಂದಿಗೂ ಯಾವುದೆ ರೀತಿಯ ನೆಮ್ಮದಿಯೆಂಬ ತಣ್ಣೀರೆರಚಲು ಮುಂದಾದರೆ ನಿನ್ನ ನೆನಪೆಂಬ ಉರಿಗಾಳಿ ಅಡ್ಡಿ ಬಂದು ದೂರಾಗಿಸುತ್ತದೆ ಗೆಳತಿ. ನಿನ್ನ ನೆನಪಿನಿಂದ ಅದೆಷ್ಟು ಮನಸ್ಸು, ಹೃದಯ ಸುಟ್ಟಿದೆ ಅಂತ ತಿಳಿಯೋದಕ್ಕೆ ಹೋದಾಗ ನಿನ್ನ ಮಗುವಿನಂತ ನಗು, ಮೂರಕ್ಷರದ ಭಾವನೆಗಳ ಮಾತುಗಳ ನನ್ನ ಹೃದಯಕ್ಕೆ ಬಡಿಯುತ್ತವೆ ಎಂಬ ಒಂದೇ ಒಂದು ಕಾರಣಕ್ಕೆ ನಿನ್ನನ್ನು ಮರೆಯಲು ಸಾಧ್ಯವಾಗುತ್ತಿಲ್ಲ.
ಗೆಳತಿ ನೀ ಬಂದ ದಿನಗಳು ನನ್ನಲ್ಲಿ ಅದೆಂತಹ ಉಲ್ಲಾಸದ ಹೂಸ ಚೈತನ್ಯ ಹುಟ್ಟಿಸಿದಿ ಗೊತ್ತಿಲ್ಲ. ಅದರಳೊಗೆ ಸ್ವಲ್ಪ ನಗುವಿನ ಜೊತೆ ಅಳುವಂತಹ ವೇದ ವಾಕ್ಯಗಳನ್ನು ನನ್ನ ಎದೆಗೆ ತಟ್ಟಿದರು ಅವುಗಳನ್ನು ಯಾವದೆ ನೋವಿಲ್ಲದೆ ಸ್ವಿಕರಿಸಿದಂತಹ ಈ ದು:ಖದ ಹೃದಯವನ್ನು ಬಿಟ್ಟು ನೀ ದೂರಾದೆ. ಒಂದೂದು ಸಲ ನಿನ್ನ ಜೊತೆ ಮಾತನಾಡ್ಬೇಕು ಕಣೋ! ಅಂತ ಕರೆ ಮಾಡಿ ಕರೆದಾಗ ಕಲ್ಲು, ಮುಳ್ಳು, ಮಳೆ, ಮನೆ ಎನ್ನದೆ ಕರೆದ ಕಡೆ ಬಂದು ಮಾತನಾಡಿದ ಆ ದಿನಗಳನ್ನು ನೆನಪಿಸಿಕೊಂಡರೆ, ನನ್ನ ಹೃದಯ ಸಿಡಿಲಿನ ಹೊಡೆತಕ್ಕೆ ಸಿಲುಕಿದಂತೆ ಆಗುತ್ತದೆ. ಅಂದಿನ ನಿನ್ನ ದಿನಗಳು ಇಂದಿಗೂ ನನಗೆ ದಿನಗಳ ಎಣಿಸುವಂತಹ ಸ್ಥಿತಿಗೆ ನೂಕಿದಂತಹ ಮನಸ್ಸು ನಿನ್ನದು ಎಂದು ಯೋಚಿಸುತ್ತಿರುತ್ತದೆ.
ಆದರೆ ನನ್ನ ಮನಸ್ಸು ನಿನ್ನ ಪ್ರೀತಿ, ವಾತ್ಸಲ್ಯ, ವಿಶ್ವಾಸಕ್ಕೆ ಎಂದಿಗೂ ಕೊನೆಬಾರದಿರಲಿ ಎಂದು ಪ್ರತಿ ಕ್ಷಣವು ನಿನಗೋಸ್ಕರ ಆಶಿಸುತ್ತದೆ. ನಿ ಕೊಟ್ಟು ಬಿಟ್ಟು ಹೋದ ನೆನಪುಗಳು ನೆನಸಿಕೊಂಡಾಗ ಕಣ್ಣಲ್ಲಿ ವಾತ್ಸಲ್ಯದ ಹನಿಗಳು ತುಂಬಿ ಕೆನ್ನೆಯ ಮೇಲೆ ಹರಿಯುತ್ತಿರುತ್ತದೆ. ಅದನ್ನ ಒರೆಸುವಂತಹ ನಿನ್ನ ಕೈಗಳೆ ದೂರಾದಾಗ ಆ ಹನಿಗಳು ಭೂಮಿ ತಾಯಿಯ ಮೇಲೆ ಬಿದ್ದು ನಿನ್ನ ಹೆಸರಿನ ಮೇಲೆ ಪ್ರೀತಿಯ ಮಳೆ ಸುರಿದ, ನನ್ನ ಮನಸ್ಸು ತಣ್ಣಾಗಾಗಲಿ ಎಂದು ಒಬ್ಬನೆ ದು:ಖಮಯದಿಂದ ನಿನ್ನ ನೆನಪಿಸಿಕೊಂಡು ಕಣ್ಣುಗಳು ಕಡುಗೆಂಪು ಸೂರ್ಯನಂತೆ ಆಗಿವೆ ಗೆಳತಿ. ಮುಂದೊಂದು ದಿನ ಈ ಹೃದಯ ಬಡಿತ ನಿಂತ ಸುದ್ದಿ ನಿನ್ನ ಕಿವಿಗೆ ಬಿದ್ದರೆ ನಿನ್ನ ಕಣ್ಣಲಿ ನೆನಪಿನ ಹನಿ ಬಂದರೆ ಅದನ್ನು ತಡೆದುಕೊಳ್ಳುವಂತಹ ಶಕ್ತಿ ನನಗಿಲ್ಲ. ಎಂದೆಂದಿಗೂ ನಿನ್ನಲ್ಲಿ ನಗುವಿನ ಉಲ್ಲಾಸದ ಜೀವನ ನಿನ್ನದಾಗಿರಲಿ. ನೀ ಈ ಲೇಖನ ಓದಿದರು ನನ್ನ ನೆನಪು ನಿನಗೆ ಬರಲಿಲ್ಲವೆಂದರೆ ಬೇಜಾರಿಲ್ಲ ಆದರೆ ಎದುರಿಗೆ ಬಂದಾಗ ಗುರುತು ಹಿಡಿತೀಯ ಎಂಬ ನಂಬಿಕೆ ಮಾತ್ರ ನನ್ನಲ್ಲಿ ಹಾಗೆ ಉಳಿದಿದೆ ಸಂಪಿಗೆ ಪರಿಮಳದಂತ ನನ್ನ ಕೋಮಲೆ.
-ಶಿವಕುಮಾರ ಓಲೇಕಾರ