ಕನ್ನಡ ಪ್ರೇಮಿ: ಮಹಾಂತೇಶ್ ಯರಗಟ್ಟಿ


ನರಕಕ್ ಇಳ್ಸಿ, ನಾಲ್ಗೆ ಸೀಳ್ಸಿ

ಬಾಯ್ ವೊಲಿಸ್ಯಾರೆದ್ರೊವೆ||

ಮೂಗ್ನಲ್ ಕನ್ನಡ ಪದವಾಡ್ತೀನಿ

ನನ್ನ ಮನಸನ್ ನೀ ಕಾಣೆ||

ಈ ಮೇಲಿನ ಸಾಲುಗಳನ್ನು ಓದಿದರೆ ತುಂಬಾ ರೋಮಾಂಚನ ಅನಿಸುತ್ತೆ ಅಲ್ವಾ..? ನಮ್ಮ ನಾಡಿನ ಗಡಿ ಜಿಲ್ಲೆಯಾದ ಚಾಮರಾಜನಗರದ, ಗುಂಡ್ಲುಪೇಟೆಯ ಹಿರಿಯ ಸಾಹಿತಿಗಳಾದ ಶ್ರೀ ಜಿ.ಪಿ.ರಾಜರತ್ನಂರವರ ಈ ಸಾಲುಗಳು ನಿಜಕ್ಕೂ ಪ್ರತಿಯೊಬ್ಬ ಕನ್ನಡಿಗನನ್ನು ಬಡಿದ್ದೆಬ್ಬಿಸುತ್ತವೆ. ಅವರ ಅಪ್ಪಟ ಕನ್ನಡಾಭಿಮಾನವನ್ನು ಬಿಂಭಿಸುವ, ಈ ಸಾಲುಗಳಂತೆ ಇದೇ ಗುಂಡ್ಲುಪೇಟೆಯ “ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ” ದಲ್ಲಿ ಕಂಡಕ್ಟರಾಗಿ ಕೆಸಲನಿರ್ವಹಿಸುತ್ತಿರುವ, ಶ್ರೀ ನಟರಾಜ ಕುಂದೂರು ರವರು ಅಪ್ಪಟ ಕನ್ನಡ ಪ್ರೇಮಿಗಳ ಸಾಲಿನಲ್ಲಿ ನಿಲ್ಲುತ್ತಾರೆ.

ಮೂಲತಃ ನಟರಾಜ ಕುಂದೂರುರವರು ನಮ್ಮ ನಾಡಿನ ಹೃದಯಭಾಗವಾದ ದಾವಣಗೆರೆಯ ಹೊನ್ನಾಳಿ ತಾಲ್ಲೂಕಿನ ಕುಂದೂರು ಗ್ರಾಮದವರು. ಇವರು ತಮ್ಮ ವಿದ್ಯಾಭ್ಯಾಸದ ದಿನದಿಂದಲೂ ಕನ್ನಡ ಪ್ರೇಮವನ್ನು ಜೊತೆಗಂಟಿಸಿಗೊಂಡು ಬೆಳೆಯೂದರ ಜೊತೆಗೆ, ಕನ್ನಡ ನಾಡು-ನುಡಿ ಸಾಹಿತ್ಯದ ಬಗ್ಗೆ ಅಪಾರ ಗೌರವ ಹೊಂದಿದವರು. ಹಿರಿಯ ಸಾಹಿಗಳು, ಕವಿಗಳು, ದಾಸರು, ಶರಣರು, ಸಂಗೀತಗಾರರು, ವಿಜ್ಞಾನಿಗಳು, ರಾಜಕಾರಣಿಗಳು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರ ಭಾವ ಚಿತ್ರಗಳನ್ನು ಮತ್ತು ಅದರ ಬಗೆಗಿನ ಮಾಹಿತಿಗಳನ್ನು ಸಂಗ್ರಹಿಸುವುದು, ಇವರ ವಿದ್ಯಾರ್ಥಿ ಜೀವನದ ಹವ್ಯಾಸ.

ಕಳೆದ ಹತ್ತು ವರ್ಷಗಳ ಹಿಂದೆ ಕಂಡಕ್ಟರಾಗಿ ನೇಮಕಗೊಂಡ ಶ್ರೀ ನಟರಾಜ್ ಕುಂದೂರು ರವರು, ವೃತ್ತಿ ಜೊತೆಗೆ ಕನ್ನಡದ ಸೇವೆಗಾಗಿ ಪಣತೊಟ್ಟವರು. ಕನ್ನಡ ರಾಜ್ಯೋತ್ಸವ ಬಂತ್ತೆಂದರೆ ಸಾಕು ತಾವು ಕಾರ್ಯ ನಿರ್ವಹಿಸುವ ಬಸ್ಸಿನಲ್ಲಿ ವಿಶಿಷ್ಟ ರೀತಿಯಲ್ಲಿ ರಾಜ್ಯೋತ್ಸವ ಆಚರಿಸುವ ಪದ್ಧತಿಯನ್ನು ಅಂದಿನಿಂದ ಇಂದಿನ ವರೆಗೂ ರೂಢಿಸಿಕೊಂಡು ಬಂದಿದ್ದಾರೆ.

ಭವ್ಯ ಕರ್ನಾಟಕ ದಿವ್ಯ ದರ್ಶನ, ಕೈಮುಗಿದು ಏರು ಇದು ಕನ್ನಡ ತೇರು, ಕನ್ನಡ ಜಾಗೃತಿ ರಥ, ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ, ನಿತ್ಯೋತ್ಸವ, ಕರ್ನಾಟಕ ಸಾರಿಗೆಯಲ್ಲಿ ಕನ್ನಡ ಸಂಚಾರ (ಈ ವರ್ಷ ನವೆಂಬರ್-2013).

ಈ ರೀತಿಯ ವಿಶಿಷ್ಟ ಹೆಸರುಗಳಿಂದ ಬಸ್ಸನ್ನು ಹೆಸರಿಸಿ, ಬಸ್ಸಿನ ಒಳಗಡೆ ನಮ್ಮ ನಾಡಿನ 30 ಜಿಲ್ಲೆಗಳ ರೇಖಾಚಿತ್ರದ ಜೊತೆಗೆ ಅವುಗಳ ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ಸಮಗ್ರ ಮಾಹಿತಿಯನ್ನು ಸ್ವತಃ ತಾವೇ ಬರೆದು ತೂಗುಹಾಕುತ್ತಾರೆ.

ಕನ್ನಡ ಚಳುವಳಿಯಲ್ಲಿ ಭಾಗವಿಸಿದ ಸಾಹಿತಿಗಳು, ಪಂಪ, ಜ್ಞಾನಪೀಠ ಪ್ರಶಸ್ತಿ ಪುರಸ್ಕøತರ ಭಾವ ಚಿತ್ರಗಳನ್ನು ಅಂಟಿಸುವುದರ ಜೊತೆಗೆ 1915ರಿಂದ 2013ರ ವರೆಗೆ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಭಾವ ಚಿತ್ರಗಳನ್ನು ಹಾಗೂ ಕನ್ನಡ ಚಿತ್ರರಂಗ, ಕ್ರೀಡೆ, ವಿಜ್ಞಾನ, ಇನ್ನೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದ  ಮಹನೀಯರ ಭಾವ ಚಿತ್ರಗಳನ್ನು ತುಂಬಾ ಆಕರ್ಷಣೀಯವಾಗಿ ತೂಗು ಹಾಕುತ್ತಾರೆ. ಇನ್ನೂ ಬಸ್ಸಿನ ಹೊರಗಡೆಯಿಂದ, ಕನ್ನಡ ಬಾವುಟಗಳನ್ನು ಕಟ್ಟಿ ಬಸ್ಸಿನ ಗಾಜುಗಳ ಮೇಲೆ ನಮ್ಮ ನಾಡಿನಲ್ಲಿ ಹುಟ್ಟಿ ಹರಿಯುವ ಎಲ್ಲಾ ನದಿಗಳ ಹೆಸರುಗಳನ್ನು ಬರೆದಿದ್ದಾರೆ.

ಗುಂಡ್ಲುಪೇಟೆಯಿಂದ – ದಾವಣಗೆರೆಗೆ ಸಂಚರಿಸುವ ಈ ಬಸ್ಸಿನಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವುದರ ಜೊತೆಗೆ – ಕನ್ನಡ ನಾಡಗೀತೆಗಳು ಸೇರಿ 500ಕ್ಕೂ ಹೆಚ್ಚು ನಾಡಭಕ್ತಿಗೀತೆಗಳನ್ನು ಧ್ವನಿ ವರ್ಧಕದ ಮೂಲಕ ಪ್ರಯಾಣಿಕರಿಗೆ ಕೇಳಿಸುತ್ತಾರೆ. ಒಟ್ಟಾರೆ ಹೇಳಬೇಕೆಂದರೆ, ಒಮ್ಮೆ ಈ ಬಸ್ಸಿನಲ್ಲಿ ಪ್ರಯಾಣಿಸಿದರೆ ಸಾಕು  ನಮ್ಮ ನಾಡಿನ ಅದ್ಭುತ ಹಲವಾರು ವಿಷಯಗಳ ಜೊತೆಗೆ ಸ್ಪರ್ಧಾ ಪರೀಕ್ಷೆಗಳ ಉಪಯುಕ್ತ ಮಾಹಿತಿಗಳನ್ನು ಕಾಣಬಹುದು.

ಇದಲ್ಲದೆ ಪ್ರಯಾಣಿಕರಿಗೆ ಟಿಕೇಟ್ ನೀಡುವುದರ ಜೊತೆಗೆ ನಮ್ಮ ನಾಡಿನ ಕವಿಗಳು ,ಚಿತ್ರನಟರು, ಸಂಗೀತಗಾರರ ಭಾವ ಚಿತ್ರಗಳನ್ನು ನೀಡುತ್ತಾರೆ. ಬಸ್ಸಿನಲ್ಲಿ ತಾವು ಕಾರ್ಯ ನಿರ್ವಹಿಸುವುದರ ಜೊತೆಗೆ “ಕನ್ನಡ ಪ್ರಶ್ನಮಾಲಾ” ಸ್ಪರ್ಧೆ ನಡೆಸಿ ವಿಜೇತ ಪ್ರಯಾಣಿಕರಿಗೆ ಕನ್ನಡ ಹಿರಿಯ ಕಿರಿಯ ಸಾಹಿಗಳ ಕೃತಿಗಳ ಜೊತೆಗೆ ತಮ್ಮ ಸ್ವಂತ ಖರ್ಚಿನಲ್ಲಿ ಸಿಹಿ ತಿಂಡಿಗಳನ್ನು ನೀಡುತ್ತಾರೆ.

ಈ ನಾಡಿನ ಸೇವೆಗಾಗಿ ಅವರು ಮಾಡುವ ಹಲವು ಖರ್ಚಿಗಾಗಿ ಪ್ರತಿ ತಿಂಗಳದ ತಮ್ಮ ಸಂಬಳದಲ್ಲಿ 1500ರೂಗಳನ್ನು ಮೀಸಲಿಡುತ್ತಾರೆ. ನವೆಂಬರ್ ತಿಂಗಳ ಪೂರ್ತಿ ನಡೆಯುವ ಈ ಸೇವೆಯನ್ನು ಹೊರತು ಪಡಿಸಿ ತಮಗೆ ಬಿಡುವಿದ್ದಾಗ ಹತ್ತಿರದ ಶಾಲಾ-ಕಾಲೇಜುಗಳಿಗೆ ಹೋಗಿ “ನಾಡು-ನುಡಿ” ಶೀರ್ಷಿಕೆಯ ರಸಪ್ರಶ್ನೆ ಕಾರ್ಯಕ್ರಮ ನಡೆಸಿ, ಅನ್ಯ ಭಾಷೆಗಳಿಗೆ ಮಾರುಹೋಗುವ ಇಂದಿನ ವಿದ್ಯಾರ್ಥಿಗಳಿಗೆ ನಮ್ಮ ನಾಡಿನ ಭಾಷೆ – ನೆಲ – ಜಲದ ಬಗ್ಗೆ ಅರಿವು ಮೂಡಿಸುತ್ತಾರೆ.

ಶ್ರೀ ನಟರಾಜ ಕುಂದೂರುರವರು ಚುಟುಕು ಕವಿ ಕೂಡ ಸಾಧನೆ. ಕಣ್ಣೀರು, ಮೂಡಲ ಗಾಳಿ, ಸಂಬಂಧ, ನನ್ನಶಾಲೆ, ನಾಕಂಡ ಕನಸು (ಕಥೆ) ಹೀಗೆ ಹಲವಾರು ಚುಟುಕುಗಳನ್ನು ಮತ್ತು ಕವನಗಳನ್ನು ರಚಿಸಿದ್ದಾರೆ. ಇವುಗಳಲ್ಲಿ “ನನ್ನ ಶಾಲೆ” ಕವನಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಬಹುಮಾನ ಲಭಿಸಿದೆ. ಇವರ ಕವಿವಾಣಿಯಲ್ಲಿ ಕನ್ನಡ . . . . .

“ಎತ್ತಿಕೋ ನಿನ್ನ ಕೈಗಳಲ್ಲಿ ಕನ್ನಡವನ್ನ

 ಒತ್ತಿಕೋ ನಿನ್ನ ಕಣ್ಣುಗಳಲ್ಲಿ ಕನ್ನಡವನ್ನ

 ಕೆತ್ತಿಕೋ ನಿನ್ನ ಹೃದಯದಲ್ಲಿ ಕನ್ನಡವನ್ನ

 ಬಿತ್ತಿಕೋ ನಿನ್ನ ವಂಶದಲ್ಲಿ ಕನ್ನಡವನ್ನ”

ಶ್ರೀ ನಟರಾಜ ಕುಂದೂರು ರವರ ಈ ಅರ್ಥಪೂರ್ಣ ಕನ್ನಡ ಸೇವೆಯನ್ನು ಮೆಚ್ಚಿ ನಮ್ಮ ನಾಡಿನ ರಾಜ್ಯ ಸಾರಿಗೆ ನಿಗಮ ಮತ್ತು ಅನೇಕ ಸಂಘ ಸಂಸ್ಥೆಗಳು ಈ ಕೆಳಗಿನಂತಿರುವ ಪ್ರಶಸ್ತಿಗಳನ್ನು ಕೊಟ್ಟು ಗೌರವಿಸಿವೆ.

ಡಾ||ವಿಷ್ಣುವರ್ಧನ, ಕನ್ನಡದ ರತ್ನ, ಅಮೋಘವರ್ಷ, ಸುವರ್ಣ ಕರ್ನಾಟಕ ಪ್ರಶಸ್ತಿ, ಅಪ್ಪಟ ಕನ್ನಡ ಅಭಿಮಾನ, ಕನ್ನಡ ಸೇವಕ, ವಿಶ್ವ ಚೇತನ ಕಲಾ ಪ್ರಶಸ್ತಿ, ಅಮೃತ ಸಿಂಚನ ಪ್ರಶಸ್ತಿ, ಸುವರ್ಣ ಕರ್ನಾಟಕ ಕಾಮಧೇನು, ಕನ್ನಡಸಾರಥಿ, ಸಮಾಜ ಭೂಷಣ, ಕನ್ನಡದ ಕೇಸರಿ, ಕನ್ನಡ ಸಾರಿಗೆ ಕುವರ ಮತ್ತ ಕನ್ನಡ ಕುವರ.

ರಾಜ್ಯ ಪ್ರಶಸ್ತಿಗಳು :   “ಗಡಿನಾಡಧ್ವನಿ” (ರಾಜ್ಯ ಪ್ರಶಸ್ತಿ ಕಾಸರಗೋಡಿನ ಕನ್ನಡ ಧ್ವನಿ ಪತ್ರಿಕೆ)

“ವರ್ಷದ ಕನ್ನಡಿಗ”  (2011 ದಾವಣಗೆರೆ ಅಭಿಮಾನಿಗಳ ಸಂಘ)

“ಕುವೆಂಪು ವಿಶ್ವ ಮಾನವ ಪ್ರಶಸ್ತಿ” (ಅಮೃತ ಧಾರೆ ಸಂಸ್ಥೆ ಬೆಂಗಳೂರು)

ರಾಷ್ಟ್ರ ಪ್ರಾಶಸ್ತಿಗಳು : “ಡಾ|| ಅಂಬೇಡ್ಕರ್ ನ್ಯಾಷನಲ್ ಫಿಲಾಸಫಿ ಅವಾರ್ಡ್” (2011 ದಲಿತ 

ಸಾಹಿತ್ಯ ಪರಿಷತ್ ದೆಹಲಿ)

“ಡಾ|| ಭಗವಾನ್ ಬುದ್ಧ ನ್ಯಾಷನಲ್ ಅವಾರ್ಡ್” (2012 ಬೌದ್ಧರ ಸಾಹಿತ್ಯ ಪರಿಷತ್ ದೆಹಲಿ)

ಕನ್ನಡ ರಾಜ್ಯೋತ್ಸವವನ್ನು ಪ್ರಯಾಣಿಕರ ಜೊತೆಗೆ ಆಚರಿಸುವ ಶ್ರೀ ನಟರಾಜ ಕುಂದೂರುರವರಿಗೆ ಪ್ರಯಾಣಿಕರಿಂದ “ಕನ್ನಡ ಪ್ರೇಮಿ” ಎಂದು ಬಿರುದು ಬಂದಿದೆ.

ಒಟ್ಟಿನಲ್ಲಿ ಇವರ ಪ್ರಕಾರ ನೆಲ-ಜಲ-ನಾಡು-ನುಡಿಯನ್ನು ಒಂದೇ ವೇದಿಕೆಯಲ್ಲಿ ಕಟ್ಟಬಲ್ಲ ಶಕ್ತಿ ಸಾಮಥ್ರ್ಯ ಇರುವುದು ನಮ್ಮ ಕನ್ನಡ ಭಾಷೆಗೆ. ಆದ್ದರಿಂದ ಆ ಭಾಷೆಯನ್ನು ನಾವು ಉಳಿಸಿಕೊಂಡರೆ ಮಾತ್ರ ಕನ್ನಡಿಗರಿಗೆ ಯಶಸ್ಸು ಎಂದು ಹೇಳುತ್ತಾರೆ. 

ಮಾತೆತ್ತಿದರೆ ಅನ್ಯ ಭಾಷೆ ದಬ್ಬಾಳಿಕೆ ಬಗ್ಗೆ ಮಾತನಾಡುವ ಶ್ರೀ ನಟರಾಜು ಕುಂದೂರುರವರು ಸದ್ದಿಲ್ಲದೆ ತಾವಿರುವಲ್ಲೇ ಕನ್ನಡ ಜಾಗೃತಿಯನ್ನು ಮೂಡಿಸುತ್ತಿದ್ದಾರೆ ಮತ್ತು ಕೆ.ಎಸ್.ನಿಸ್ಸಾರ್ ಅಹಮ್ಮದ್‍ರವರ ಕನಸಾದ “ನಿತ್ಯೋತ್ಸವ” ವನ್ನು ನನಸು ಮಾಡಲು ಹೊರಟ್ಟಿದ್ದಾರೆ.

ಇದೇ ನವೆಂಬರ್ 1 ಕನ್ನಡ ರಾಜ್ಯೋತ್ಸವ ದಿನದಂದು ಚಾಲನೆಗೊಳ್ಳಲಿರುವ “ಕರ್ನಾಟಕ ಸಾರಿಗೆಯಲ್ಲಿ ಕನ್ನಡ ಸಂಚಾರ” ಶೀರ್ಷಿಕೆಯ ಕನ್ನಡ ಸಾರಿಗೆ ರಥದ ರುವಾರಿಯಾದ ಶ್ರೀ ನಟರಾಜ್ ಕುಂದೂರುರವರಿಗೆ ಸಾಧ್ಯವಾದರೆ ಜಂಗಮವಾಣಿ (9900478868) ಗೊಂದು ಕರೆ ಅಥವಾ ಸಂದೇಶದ ಮೂಲಕ ಯಶಸ್ಸು ಸಿಗಲಿ ಎಂದು ಹಾರೈಸೋಣ.

“ಜೈ ಕರ್ನಾಟಕ ಮಾತೇ”

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

5 Comments
Oldest
Newest Most Voted
Inline Feedbacks
View all comments
K.M.Vishwanath
10 years ago

ಬಹಳ ಒಳ್ಳೆಯ ಲೇಖನ ಪ್ರಯತ್ನದ ಹಾದಿಯಲ್ಲಿ ಶುಭವಾಗಲಿ 

prashasti
10 years ago

shubhavagali 🙂

Ramesh Jakkappanavar
Ramesh Jakkappanavar
10 years ago

Rajyotsavada sandarbhadalli nimma lekhana chennagi bandide.

Mahantesh Yaragatti
Mahantesh Yaragatti
10 years ago

Ellarigu dhanyavadagaluuuuu……………

Dilshad
Dilshad
6 years ago

ಕನ್ನಡ ಅನ್ನದ ಭಾಷೆ ಆಗಲಿಲ್ಲ ಎಂದು ದೂರುವ ಸಣ್ಣವರ ನಡುವೆ ನಿಮ್ಮಂಥ ಕನ್ನಡದ ಕಟ್ಟಾಳು!!! ನಿಮಗೊಂದು ನಮಸ್ಕಾರ ನಟರಾಜು🙏🙏🙏

5
0
Would love your thoughts, please comment.x
()
x