ಇರಲಿರಲಿ ಈ ಗರ್ಭ
ಪ್ರಸವಕ್ಕಿನ್ನೂ ಒಂಬತ್ತು ದಿನ
ಒಂಬತ್ತು ನಿಮಿಷ
ಒಂಬತ್ತು ಘಳಿಗೆಗಳಿವೆಯಂತೆ
ಏದುಸಿರು ನಿಟ್ಟಿಸುರಿನೊಂದಿಗೆ ಮಿಳಿತವಾಗಿದೆ
ಗರ್ಭ ಕಟ್ಟುವುದು ಒಂದು ಅಮೃತ ಘಳಿಗೆಯಂತೆ
ಸತ್ತ ವೀರ್ಯದ ಜೋತೆಗೆ ಒಂದೇ ಒಂದು ಗೆದ್ದ ವೀರ್ಯ
ಕಾದು ಕುಳಿತ ಅಂಡಾಣು
ಕೂಡುವಿಕೆಗೆ ಮಹೂರ್ತವಿಟ್ಟುಕೊಂಡಿರಬೇಕಂತೆ ಮನಸ್ಸು ಮನಸ್ಸು ಒಂದಾಗಿ
ಆದರೆ ನನ್ನದು
ಕೊಳಕು ಮನಸ್ಸಿನ, ಅವನ ದೇಹ ಮುಗಿಬಿದ್ದು ತೆವಲು ತಿರಿಸಿಕೊಳ್ಳಲು
ತೊಟ್ಟಿಯೊಳಗೆ ಸುರಿವ ಕೊಳಕಿನಂತೆ ಸ್ರವಿಸಿ ಬಿಟ್ಟ ವೀರ್ಯಧಾರೆ
ಮನಸ್ಸು, ದೇಹವನ್ನು ಕಿತ್ತು ತಿಂದು ಅತ್ಯಾಚಾರ ಮಾಡಿಟ್ಟುಬಿಟ್ಟ
ಆ ಮೃಗದ ದಿನಂಪ್ರತಿ ಅತ್ಯಾಚಾರಕ್ಕೆ ಧಿಕ್ಕಾರವಾಗಿ
ನಿರಾಕರಿಸಿದ್ದೇನೆ ಅವನ ಕೊಳಕು ದೇಹ, ಮನಸ್ಸು,
ಇರಲಿರಲಿ ಈ ಗರ್ಭ
ಗೆಲುವು ಸಾದಿಸಿತ್ತೇನೆ ದೇಹದ ಮೇಲೆ
ಹುಟ್ಟುವ ಕಂದನಿಗೂ ಹೇಳಿಕೊಡುತ್ತೇನೆ ವೀರ್ಯದ ಮಹತ್ವವ.
ಬದುಕಿಗೊಂದು ಅರ್ಥಕಂಡುಕೊಳ್ಳುತ್ತೇನೆ
ಮನಸ್ಸು ಗೆಲ್ಲದೆ ಹೋದ ಈ ವೀರ್ಯದೊಂದಿಗೆ.
ನನ್ನದೊಂದು ಜೀವಕಣ ಸೇರಿಸಿ………
-ಎಂ.ಎಂಸ್. ಕೃಷ್ಣಮೂರ್ತಿ.
ಕನ್ನಡಿ
ಕನ್ನಡಿಯೂ ಅಸಹ್ಯ ಪಡುತ್ತಿತ್ತು
ಗೋಸುಂಬೆಗಳನ್ನೂ ಮೀರಿಸುವಂತವರ ಕಂಡು…
ಕೂಗಿಕೊಳ್ಳುತ್ತಿತ್ತು ಹಕ್ಕಿಯೊಂದು ಗೂಡು ಉಳಿಸಿಕೊಳ್ಳಲು…
ಕುಣಿಸುತ್ತಿತ್ತು, ಕುಣಿಯುತ್ತಿತ್ತು,
ತುಳಿಯುತ್ತಿತ್ತು,
ಕರುಣೆಯಿಲ್ಲದ
ದುಡ್ಡು…
ಆದರೂ ಮಲಗಿದ್ದಾಳೆ
ಶಾಂತಿ
ದರಿದ್ರ, ಆಲಸ್ಯ, ದಿವ್ಯ ನಿರ್ಲಕ್ಷ್ಯದಿಂದ ಮತ್ತು ಭಯದಿಂದ…
-ಮೋಹನ್, ಡಿ.
ಚಿತ್ರದುರ್ಗ.
Kisnana thumba chenagidhe athiyollagina mithiyollage
gathi kannisuvanthe
Mohan avara kavanavu sogasagidhe
ಧನ್ಯವಾದಗಳು ಉತ್ತಂ
"ಇರಲಿರಲಿ ಈ ಗರ್ಭ" kavite thumba hidisitu.
kaviya kalpanege namo namaha……………
ಧನ್ಯವಾದಗಳು ,
ನಿಜಕ್ಕೂ ಎರಡೂ ಕವಿತೆಗಳು ತುಂಬಾನೇ ಇಷ್ಟವಾದವು….
ಧನ್ಯವಾದಗಳು
ಅರ್ಥಗರ್ಭಿತ …ಈ ಗರ್ಭ. ಉಚ್ಚ ವಿಚಾರಧಾರೆ.
ಕನ್ನಡಿಯಲ್ಲಿ ಬೇಂದ್ರೆಯವರ 'ಕುರುಡು ಕಾಂಚಾಣ'ದ ನೆರಳಿದೆ. ಸೊಗಸಾಗಿದೆ.
ಧನ್ಯವಾದಗಳು ಉಪೇಂದ್ರ ಸರ್
ಕೃಷ್ಣಮೂರ್ತಿ ಸರ್ ಮತ್ತು ಮೋಹನ್ ಅವರೆ, ನಿಮ್ಮಿಬ್ಬರ ಕವಿತೆ ತುಂಬಾನೇ ಚೆನ್ನಾಗಿದೆ. ಇಷ್ಟ ಆಯ್ತು..
ಧನ್ಯವಾದಗಳು ಸುಮತಿಯವರೆ
ನಿಮ್ಮ "ಕನ್ನಡಿ" ಕವಿತೆ ಚೆನ್ನಾಗಿದೆ ಮೊಹನ್ ಡಿ ಅವರೆ, ಪಂಜು ವಿನಲ್ಲಿ ಪ್ರಕಟವಾಗಿರುವುದಕ್ಕಾಗಿ ಅಭಿನಂದನೆಗಳು
ಗೆದ್ದ ವೀರ್ಯ ಸೋಲಿಸಿ ಕಾಡುವಂತೆ ಅರಂಭವಾಗಿ, ಸೋತ ನೋವನ್ನ ಕಣದೊಳಗೆ ಸೇರಿಸಿ ಗೆಲ್ಲಿಸುವ ಹಪಹಪಿಯಂತೆ ಮುಕ್ತಾಯವಾದ ಕವನದ ತೀವ್ರತೆ ಇಷ್ಟವಾಯಿತು… ಎಂದಿನಂತೆ ಕೃಷ್ಣಮೂರ್ತಿಯವರಿಂದ ಿಷ್ಟವಾಗುವಂತಹ ಕವನ…
ಕನ್ನಡಿ ಇನ್ನಷ್ಟು ಹೊಳೆಯಬೇಕಿದೆ…
ಎರಡು ಕೂಡ ತುಂಬಾ ಚನ್ನಾಗಿವೆ
ಧನ್ಯವಾದಗಳು ಶರತ್ ಜಿ
ಎಂ. ಎಸ್. ಕೃಷ್ಣಮೂರ್ತಿ:
"ಪ್ರಸವಕ್ಕಿನ್ನೂ ಒಂಬತ್ತು ದಿನ
ಒಂಬತ್ತು ನಿಮಿಷ
ಒಂಬತ್ತು ಘಳಿಗೆಗಳಿವೆಯಂತೆ" ಇದರ ಬದಲು:
"ಪ್ರಸವಕ್ಕಿನ್ನೂ ಒಂಬತ್ತು ದಿನ
ಒಂಬತ್ತು ಘಳಿಗೆ
ಒಂಬತ್ತು ನಿಮಿಷಗಳಿವೆಯಂತೆ" ಇದು ಸೂಕ್ತ.
ಪ್ರವಕ್ಕಿನ್ನು ಕೇವಲ ಒಂಬತ್ತು ದಿನಗಳಿರುವಾಗ ಗರ್ಭ ಇರಬೇಕೋ ಅಥವಾ ಬೇಡವೋ ಅನ್ನುವ ನಿರ್ಧಾರ ತೆಗೆದುಕೊಳ್ಳಲು ಸೂಕ್ತ ಸಮಯವೇ?
ಕವಿತೆಯಲ್ಲಿನ ಇನ್ನುಳಿದ ಭಾವ, ಭಾವಾಭಿವ್ಯಕ್ತಿ ಹಾಗೂ ಆಶಯಗಳಿಗೆ ನನ್ನ ಮೆಚ್ಚುಗೆಗಳಿವೆ!
ಧನ್ಯವಾದ ,, ಗರ್ಭ ಇರಬೇಕು ಎಂಬ ನಿರ್ದಾರ ತೆಗೆದುಕೊಂಡಾದ( ನಂಬಿಕೆ ದ್ರೋಹ- ಮತ್ತು ಅನಿವಾರ್ಯವಾಗಿ) ಮೇಲೆ ತನಗೆ ತಾನೆ ಹೇಳಿಕೊಳ್ಳುವ ಸಾಲುಗಳು ಅವು… ಒಂದು ರೀತಿಯ ಆತಂಕದಿಂದ ಹೇಳಿಕೊಳ್ಳುವುದು…
ಮೋಹನ್. ಡಿ. ಇದು ತಪ್ಪು.
ಮೋಹನ್ ಡಿ. ಇದು ಸರಿ
ಒಂಟಿ ಬಿಂದು (.) ಬಳಕೆಯಾಗುವುದು ಸಂಕ್ಷಿಪ್ತ ರೂಪದೊಂದಿಗೆ ಅಥವಾ ವಾಕ್ಯದ ಕೊನೆಯಲ್ಲಿ ಮಾತ್ರ.
ಎರಡೂ ಕವಿತೆಗಳು ಅನನ್ಯವಾಗಿ ಮೂಡಿ ಬಂದಿವೆ…………………
eradu kavana galu chennagive..