ಹೀಗೊಂದು ಸಂಜೆ…!
ಇಳಿಸಂಜೆಯ ಹೊತ್ತಲ್ಲಿ
ತಂಗಾಳಿಯ ಹಂಬಲಕೆ
ಮೆಲ್ಲನೆ ತೆರೆದುಕೊಳ್ಳುತ್ತೇನೆ
ಕಡುಕಪ್ಪು ಹಾಸಿನ ರಸ್ತೆಯಲ್ಲಿ
ಲಯಬದ್ದ ಹೆಜ್ಜೆಗಳೊಂದಿಗೆ…
ತಲೆಯ ಮೇಲೆ ಸಾಗುತಿಹ
ಅರ್ಧ ಚಂದ್ರನ ಮೊಗದಲ್ಲೂ
ನನ್ನದೇ ಒಂಟಿಬಿಂಬ ಕಂಡಾಗ
ನಗಬೇಕೆನಿಸಿದರೂ
ನಗುಬಾರದವನಂತೆ
ಮುಂದೆ ಸಾಗುತ್ತೇನೆ…
ಬೆಳದಿಂಗಳಿಗೂ
ಪೈಪೋಟಿ ಎಂಬಂತೆ
ಬೆಳಗುತಿಹ ಹಳದಿ
ಬೀದಿ ದೀಪಗಳು;
ತರಗೆಲೆಯು ಸದ್ದು ಮಾಡುವ
ಗಾಡ ಮೌನದ ಜೊತೆಗೆ
ಹೊಸ ಸಂಭಂದ ಬೆಳೆಸಿ
ಹುನ್ನಾರ ನಡೆಸಿದಂತಿದೆ…!
ಯಾಕೊ ಕಳೆದು ಹೋದದ್ದೆಲ್ಲಾ
ನೆನಪಾಗಿ ಕಣ್ಣಂಚಲಿ
ಸಂತಾಪದ ಹನಿಗಳು ಜಾರಿದಾಗ
ಎದೆಭಾರ ಕಳಚಿದಂತೆ
ಹಗುರ ಹಗುರ…!
ಸಾಕೆನಿಸಿ ಹೊರಟುನಿಂತಾಗ
ಹೂನಗೆಯ ಚೆಲ್ಲುತ್ತಾ
ಚಂದಿರನೂ ಜೊತೆಯಾದ
ಮುಗುಳ್ನಕ್ಕು ಹೆಜ್ಜೆ ಮುಂದಿಟ್ಟೆ…!!
-ಸಚಿನ್ ನಾಯ್ಕ
ಬೆಳದಿಂಗಳು..
ಬೆಳದಿಂಗಳೆಂದರೆ
ಚಂದ್ರ ಅಗಲವಾಗುವುದಲ್ಲ!
ಬೆಳದಿಂಗಳೆಂದರೆ..
ಬರೀ ಹುಣ್ಣಿಮೆಯಲ್ಲ!
ಬೆಳದಿಂಗಳೆಂದರೆ
ಅಜ್ಞಾನದಿಂದ ಹತ್ತಿ ಉರಿವ
ಮನದ ತಾಪ ತಣ್ಣಗಾಗಿಸುವ ತಂಪು..!
ಬೆಳದಿಂಗಳೆಂದರೆ..
ಕತ್ತಲದಾರಿಗೆ ದಿಕ್ಸೂಚಿಯಾಗುವ
ಜೀವಂತ ಬೆಳ್ಳಿ ದೀಪ..!
ಬೆವರುವ
ಎಲ್ಲಾ ಮೈಗಳ ಒಳಗೂ
ಕಾರ್ಲುಮಾರ್ಕ್ಸ್
ಕದಲುವುದಿಲ್ಲ!
ಅರಳೀಮರದಡಿ
ಅಂಗಾತ ಮಲಗಿದವರಿಗೆ
ಕರುಣೆಯ ಬುದ್ಧನ
ಕನಸೂ ಬೀಳುವುದಿಲ್ಲ!
ಮೈತುಂಬ ವಿಭೂತಿ ಬಳಿದು
ಲಿಂಗಪೂಜೆ ಮಾಡುವಾಗ
ಹಲವರಿಗೆ ಬಸವಣ್ಣನ
ಸಮಾನತೆ ನೆನಪೇ ಇರುವುದಿಲ್ಲ!
ಏಕೆಂದರೇ..
ಜೀವವಿರುವ
ಎಷ್ಟೋ ಜನರ ಕತ್ತಲ ಮನಗಳಿಗೆ
ಚಂದ್ರನ ಪ್ರವೇಶವೇ ಆಗಿರುವುದಿಲ್ಲ!!
ಅಂತರಂಗದ
ದೀವಟಿಗೆ
ಬಹಿರಂಗದ
ಕಾವಲಿಗೆ
ಕಾದುಕುಳಿತಾಗ
ಸುತ್ತೆಲ್ಲ ಬೆಳದಿಂಗಳು!;
ಎಲ್ಲರೊಳಗೂ ಬುದ್ಧಪೌರ್ಣಿಮೆ!!
-ಪರಶಿವ ಧನಗೂರು.
ಹೀಗೊಂದು ಸಂಜೆ…!
ಸಚಿನ್ ನಾಯ್ಡ ಅವರ ಕವನ ಭಾವಪೂರ್ಣವಾಗಿದೆ
ಬೆಳದಿಂಗಳು…ಕವನದಲ್ಲಿ-ಪರಶಿವ ಧನಗೂರು…
ಬೆಳದಿಂಗಳೆಂದರೆ
ಚಂದ್ರ ಅಗಲವಾಗುವುದಲ್ಲ!
ಬೆಳದಿಂಗಳೆಂದರೆ..
ಬರೀ ಹುಣ್ಣಿಮೆಯಲ್ಲ!
ಬೆಳದಿಂಗಳೆಂದರೆ
ಅಜ್ಞಾನದಿಂದ ಹತ್ತಿ ಉರಿವ
ಮನದ ತಾಪ ತಣ್ಣಗಾಗಿಸುವ ತಂಪು..!
ಬೆಳದಿಂಗಳೆಂದರೆ..
ಕತ್ತಲದಾರಿಗೆ ದಿಕ್ಸೂಚಿಯಾಗುವ
ಜೀವಂತ ಬೆಳ್ಳಿ ದೀಪ..
ಸಾಲುಗಳಲ್ಲಿ ಬೆಳದಿಂಗಳನ್ನು ಹೋಲಿಸಿದ್ದು ಇಷ್ವವಾಯ್ತು
thanks all of u dear..editor.. readers..& writers
ಎರಡೂ ಕವನಗಳೂ ಚೆನ್ನಾಗಿವೆ.
thank u sir..
Thank U Sharad & Gaviswami avare…….:)
nice kavanas sachin….