1. ಬೈತಲೆ ಬಟ್ಟು ಧರಿಸುವವಳು ಬೈತಲೆ ತಗೆಯಲೇ ಬೇಕೆಂಬ ನಿಯಮ ಇಲ್ಲ !
2. ಸಾಮನ್ಯವಾಗಿ ಡಾಕ್ಟರ್ ದಂಪತಿಗಳು ತಮ್ಮ ಮಕ್ಕಳ ಹ್ಯಾಂಡ್ ರೈಟಿಂಗ್ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. 🙂
3. ವರ ಪೂಜೆಯ ಸಮಾರಂಭದಿಂದಲೇ ಮದುವೆ ಆಗುವವನ ಪೂಜೆ ಶುರುವಾಗುತ್ತದೆ. 🙂
4. ಮನೆಗೆ ಬಂದ ನಂತರ ಮಾಮೂಲಿಗಿಂತಲೂ ಹೆಚ್ಚು ಮೌನಿಯಾಗಿ ಗಂಡ ಕುಳಿತ್ತಿದ್ದರೆ (ಆಫೀಸಿನಲ್ಲಿ) ಏನಾದರೂ ಎಡವಟ್ಟು ಮಾಡಿಕೊಂಡಿದ್ದಾನೆಂದೇ ಅರ್ಥ.
5. ಪೆನ್ ಅಂಗಡಿಗಳಲ್ಲಿ ಹೊಸ ಪೆನ್ ಪರೀಕ್ಷಿಸುವವರೆಲ್ಲರೂ ಅಲ್ಲಿದ್ದ ಪೇಪರ್ ಮೇಲೆ ಗೀಚೀಯೇ ನೋಡುತ್ತಾರೆ. (ಹೀಗಾಗಿ ಅದು ಬರೆಯುವ ಬದಲು ಗೀಚಲಿಕ್ಕೇ ಲಾಯಕ್ಕು ಅನ್ನಬಹುದು ) 🙂
6. ಮನೆಯೊಳಗೆ ನೀರೆ ಇಲ್ಲ ಅಂದ ಮಾತ್ರಕ್ಕೆ ಯಾರೂ ಕಣ್ಣೀರಿನಲ್ಲಿ ಕೈ ಮುಖ ತೊಳೆಯುವುದಿಲ್ಲ !
7. ದಿನಪೂರ್ತಿ ತೊಡುವ ನೈಟಿಗೆ dayಟಿ ಎಂದು ಕರೆಯಬಹುದು. 🙂
8. ಪಬ್ಲಿಕ್ ಬಾತ್ ರೂಮಿನಲ್ಲೂ ಕೂಡಾ ಇಬ್ಬರ ಹೆಂಗಸರ ನಡುವೆ ಗೆಳೆತನ ಚಿಗರಬಹುದು !
9. ಹೊಸ ನೈಲ್ ಪಾಲಿಶ್ ಧರಸಿದ ಹುಡುಗಿಯರು ಆಗಾಗ ಉಗುರು ಕಚ್ಚುವಂತೆ ನಟಿಸುತ್ತಾರೆ 🙂
10. ಗಂಡ ಹೆಂಡತಿ ಇಬ್ಬರೂ ಒಟ್ಟಿಗೇ ಕುಳಿತು ಟೀವಿಯಲ್ಲಿ ಬರುವ ಸ್ಪೋರ್ಟ್ಸ್ ಚಾನೆಲ್ ನೋಡುತ್ತಿದ್ದರೆ, ಹೆಂಡತಿ ಖಂಡಿತಾ ಫೋನಿನಲ್ಲಿ ಹರಟುತ್ತಿದ್ದಾಲೆಂದೇ ಅರ್ಥ 🙂
11. ಕೆಲವು ಹೆಂಗಸರು ಮಾತಾಡಿದರೆ ಆಕಳಿಕೆ ಬರಬಹುದು, ಆದರೆ ಕೆಲವು ಗಂಡಸರು ಮಾತಾಡಿದರೆ ನಿದ್ದೆಯೇ ಬರುವುದು !
12. ಹೆಂಗಸರು ವಾರಕೊಮ್ಮೆ, ಇಲ್ಲ ಕನಿಷ್ಠ ಪಕ್ಷ ತಿಂಗಳಿಗೊಮ್ಮೆ ತಮ್ಮ ವ್ಯಾನಿಟಿ ಬ್ಯಾಗನ್ನು ಸ್ವಚ್ಛ ಗೊಳಿಸುವುದು ಉತ್ತಮ 🙂
13. ಸೀರೆ ಅಂಗಡಿಯಲ್ಲಿ ಹಂಗಸರಿಗೆ ತಮ್ಮ ಕೈಯಲ್ಲಿ ರುವ ಸೀರೆಗಿಂತಾ, ಯಾವಾಗಲೂ ಮತ್ತೊಬ್ಬ ಮಹಿಳೆ ಕೈಯಲ್ಲಿರುವ ಸೀರೆಯೇ ಚೆಂದವಾಗಿ ಕಾಣಿಸುವುದು 🙂
14. ಜೋಕ್ ಬುಕ್ಕುಗಳೂ ನಿಮಗೆ ನಗು ತರೆಸಲು ಅಸಫಲವಾದರೆ ರಾಜಕಾರಣಿಗಳ ಹೇಳಿಕೆಗಳನ್ನು ಓದಿಕೊಳ್ಳಬಹುದು.
ಆಂಗ್ಲ – ಕನ್ನಡ ಇತ್ತೀಚಿನ ನಿಘಂಟು :)))))
ಮೊಂಬತ್ತಿ ======= MOM ಮಾಡಿದ ಬತ್ತಿ
ವೈಮನಸ್ಸು ====== WHYಮನಸ್ಸು ======ಮನಸ್ಸು ಏಕೆ ಬೇಕು ( ಹೃದಯದಿಂದಲೇ ನಿರ್ಧಾರ ತೆಗೆದುಕೊಳ್ಳಿ ಎಂಬ ಉದ್ದೇಶ ವಿರಬಹುದು 🙂
ಗೋದಾನ =====GOದಾನ ======ದಾನ ಮಾಡಲು ಹೋಗು !
ಶಿಕಾರ ======== SHE ಕಾರ ========ಅವಳು ಹಾಕಿದ ಕಾರ !
ಮೈಲಾರ =======MY ಲಾರ ============ ನನ್ನ ಲಾರ ( ಬಹುಶ ಮಹೇಶ್ ಭೂಪತಿ ಆಗಾಗ ಹೇಳುವ ಮಾತು 🙂
ವೈವಿಧ್ಯ ======= WHY ವಿದ್ಯ =========ವಿದ್ಯ ಏಕೆ ? ( ವಿದ್ಯ ಬಾಲನ್ ಅವರ ಏರುತ್ತಿರುವ ಪ್ರಸಿದ್ದಿ ಕಂಡು ಈಗಿನ ಬಾಲಿವುಡ್ ನಟಿಯರು ಮಾಡುವ ಉದ್ಘಾರ :))
ಸಂಸಾರ ========SUM ಸಾರ =======ಸಾರ ‘ಳ ಲೆಕ್ಕಗಳು !
ನೋವಿಲ್ಲ ======== NO ವಿಲ್ಲಾ ========ವಿಲ್ಲಾ .ಮನೆ ,ಮಠ ಇಲ್ಲದವ !
ಸಂಸಾರಿ ======== SUM ಸಾರಿ ========ಲೆಕ್ಕ ಬರದೆ ತಿಣುಕಾಡಿ ನಂತರ ಮಾಡುವ ಕ್ಷಮಾಯಾಚನೆ ( ಸಾರಿ ====ಇದು ಕನ್ನಡದ SORRY 🙂
🙂 🙂
ಅಕ್ಕನ ನಿಘಂಟು ಓದಿದ ನಂತರವೂ….ಕಟ್ಟ ಕಡೆಗೆ ಕಾಡುವ ಪ್ರಶ್ನೆ….ಅರ್ಥಗಳು ಹೀಗೂ ಉಂಟೆ????
🙂
ಧನ್ಯವಾದಗಳು ಪಂಜು ಬಳಗಕ್ಕೆ 🙂 ಹಾಗು ಪ್ರತಿಕ್ರೆಯೆ ನೀಡಿದ ಎಲ್ಲರಿಗೂ .
ಆಹಾ ಮಸ್ತ್ ಮಸ್ತ್
Super