ಪಂಜು ಕಾವ್ಯಧಾರೆ

ಪಾಣೀಗ್ರಹಣ ಎಲ್ಲೂ ಅವಳಿಗೊಂದು ಹೊಚ್ಚ ಹೊಸ ಸವಿಯಿರುವ ವರ ಸಿಗುತ್ತಿಲ್ಲ ದೇವಾನುದೇವತೆಗಳ ವರಗಳ ಸ್ಟಾಕ್ ಖಾಲಿಯಾಗಿದೆ…… ಹಣ್ಣು ರುಚಿಕಟ್ಟನ್ನು ಕಳೆದುಕೊಳ್ಳುತ್ತಾ ರಾಶಿ ಬಿದ್ದಿರುವ ವಸಂತಗಳ ಎಣಿಸುತ್ತಿದೆ ಮತ್ತೊಂದು ವಸಂತಕ್ಕೆ ಕಾದಿರುವ ಬೂರಗ ಸತ್ತಂತೆ ನಿಂತಿದೆ ತಪೋನಿರತತೆಯಲ್ಲಿ ವಸಂತ ಕಟ್ಟಲು ಬೇಕಿರುವ ಮತ್ತೆರೆಡು ಜತೆ ಕೈಗಳು ಇಲ್ಲೆ ಎಲ್ಲೋ ಅಡಗಿರಬಹುದೆಂದು ಉಳಿ ಸುತ್ತಿಗೆ ತೆಗೆದು ಕಟೆಕಟೆದು ನೋಡುತ್ತಿದ್ದಾಳೆ  ನಿರರ್ಥಕವಾಗಿ ಮನದ ಮಾದರಿ ಮಸಕಾಗುತ್ತಿರುವ ಹೊತ್ತಲ್ಲಿ ಅದು ತನ್ನದೇ ಚಿತ್ರ ! ನಿರಾಶೆಯ ಮಡುವು ಸಂತೋಷದ ಚಿಲುಮೆ ಒಟ್ಟೊಟ್ಟಿಗೆ ಕಣ್ಣಿ … Read more

ವಿಕ್ಷೇಪ: ಸಾತ್ವಿಕ್ ಹ೦ದೆ

ಮತ್ತದೇ ಕನಸು, ದೂರದೂರದವರೆಗೂ ಚಾಚಿದ ರಸ್ತೆ. ರಸ್ತೆಯ ಇಕ್ಕೆಲಗಳಲ್ಲಿ ಮರಗಿಡಗಳಿರಲಿ ಒ೦ದು ಹುಲ್ಲುಕಡ್ಡಿಯೂ ಇಲ್ಲ. ಬಿರುಬಿಸಿಲಿನಲ್ಲಿ ಐವರು ಅಪರಿಚಿತರು ನಡೆದೇ ಸಾಗುತ್ತಿದ್ದಾರೆ. ಸಮವಸ್ತ್ರ ಧರಿಸಿದವರ೦ತೆ ಐವರೂ ಬಿಳಿಯ ಅ೦ಗಿ ಮತ್ತು ಷರಾಯಿಯನ್ನು ತೊಟ್ಟಿದ್ದಾರೆ. ಅ೦ಗಿಯ ಮೇಲೆಲ್ಲಾ ರಕ್ತದ ಕಲೆಗಳು. ರಕ್ತದ ಕೆ೦ಪು ಭುಜದಿ೦ದ ಇಳಿದು ಹೊಟ್ಟೆಯ ಉಬ್ಬುತಗ್ಗುಗಳನ್ನು ದಾಟಿ ಇಳಿಯುತ್ತಿದೆ. ಐವರಲ್ಲೊಬ್ಬರಿಗೂ ಅದರ ಅರಿವೇ ಇದ್ದ೦ತಿಲ್ಲ. ಒಬ್ಬೊಬ್ಬರೂ ಹೆಗಲ ಮೇಲೆ ಸತ್ತ ನಾಯಿಗಳನ್ನು ಹೊತ್ತಿದ್ದಾರೆ. ಮುಖದ ಮೇಲೆಲ್ಲಾ ರಕ್ತದ ಕಲೆಗಳಿದ್ದುದರಿ೦ದ ಯಾರೆ೦ದು ಕ೦ಡುಹಿಡಿಯುವುದು ಕಷ್ಟ. ಆ ಐವರಲ್ಲೊಬ್ಬ … Read more

ಸಾಲ: ಗಿರಿಜಾ ಜ್ಞಾನಸುಂದರ್

ಬೆಳಿಗ್ಗೆ ಎದ್ದದ್ದು ತಡವಾಗಿತ್ತು. ಇನ್ನು ಆಲಸ್ಯ. ಇವತ್ತು ಕೆಲಸಕ್ಕೆ ಹೋಗಲು ಮನಸ್ಸೇ ಇಲ್ಲ. ಆದರೆ ರಜೆ ಇಲ್ಲದ ಕಾರಣ ಸೂರ್ಯ ಎದ್ದು ತನ್ನ ದೈನಂದಿನ ಕೆಲಸ ಮುಗಿಸಿ ಕೆಲಸಕ್ಕೆ ಹೊರಟ. ಸೂರ್ಯ ತನ್ನ ಊರನ್ನು ಬಿಟ್ಟು ಬಂದು ೮ ತಿಂಗಳು ಆಗಿತ್ತು. ಅಪ್ಪ ಅಮ್ಮನ ಹತ್ತಿರ ದುಡ್ಡಿಗಾಗಿ ಬೇಡುವುದು ಅವನಿಗೆ ಹಿಂಸೆ ಅನ್ನಿಸುತ್ತಿತ್ತು. ಮೊದಲೆಲ್ಲ ಹೀಗೆ ಆಡುತ್ತಿರಲಿಲ್ಲ ಅವರು. ಕೇಳುವುದಕ್ಕೆ ಮುಂಚೆಯೇ ಸೂರ್ಯನಿಗೆ ದೊಡ್ದು ಕೊಡುವುದು, ಬಟ್ಟೆ ಕೊಡಿಸುವುದು, ತಿಂಡಿ ತಿನಿಸು ಹೀಗೆ ಹಲವಾರು ವಿಷಯಗಳಲ್ಲಿ ಸೂರ್ಯನ … Read more

ನಮ್ಮ ನಡುವಿನ ಗೋಮುಖವ್ಯಾಘ್ರರು: ಪ್ರಸಾದ್ ಕೆ.

“ಹೌದು, ಕಳೆದ ಕೆಲ ವರ್ಷಗಳಿಂದ ಈ ಕೃತ್ಯಗಳನ್ನು ಮಾಡುತ್ತಾ ಬಂದಿದ್ದೇನೆ. ಅವುಗಳೆಲ್ಲಾ ಹತ್ತರಿಂದ ಹದಿನೈದು ವರ್ಷದ ಮಕ್ಕಳು''  ಮುಖಕ್ಕೆ ಮಂಕಿ ಕ್ಯಾಪ್ ಹಾಕಿಕೊಂಡು ಹೇಳುತ್ತಾ ಹೋಗುತ್ತಿದ್ದ ಆತನನ್ನು ನೋಡಿ ನನಗೆ ದಿಗಿಲಾಗಿದ್ದು ಸತ್ಯ. ಈಗಷ್ಟೇ ಹತ್ತನೇ ತರಗತಿಯ ಕ್ಲಾಸಿನಿಂದ ಬಂಕ್ ಮಾಡಿಕೊಂಡು ಬಂದವನೇನೋ ಎಂಬಂತಿದ್ದ, ಇವನಿಗೇನಾದರೂ ಪೋಲೀಸರು ಎರಡೇಟು ಬಿಟ್ಟರೆ ಸತ್ತೇಹೋಗುವನೇನೋ ಎಂಬಂತಿದ್ದ ಈ ನರಪೇತಲನನ್ನು ನೋಡಿ ನಾನು ಒಂದು ಕ್ಷಣ ನಕ್ಕೂ ಬಿಟ್ಟಿದ್ದೆ. ವಿಪಯರ್ಾಸವೆಂದರೆ ಈತನ ಕೃತ್ಯಗಳನ್ನು ಟೆಲಿವಿಷನ್ ವರದಿಯಲ್ಲಿ ನೋಡಿದ ನಂತರ ನಾನು ನಗುವ … Read more

ತ್ಯಾಜ್ಯ-ಮಾಲಿನ್ಯ-ತ್ಯಾಜ್ಯ: ಅಖಿಲೇಶ್ ಚಿಪ್ಪಳಿ

ಪ್ರೇಮಿಗಳ ದಿನದಂದೇ ಸಾಗರದಲ್ಲಿ ಮಾರಿಜಾತ್ರೆಯೂ ಶುರುವಾಗಿದೆ. ಮಾರಿಗೆ ಉಡಿ ತುಂಬಲು ಜನ ಬೆಳಗಿನ ಜಾವದಲ್ಲೇ ಸರತಿ ಸಾಲಿನಲ್ಲಿ ನಿಂತಿದ್ದರು. ಯುವಪ್ರೇಮಿಗಳೆಲ್ಲಾ ಬಹುಷ: ಫೇಸ್‍ಬುಕ್ ಅಥವಾ ವ್ಯಾಟ್ಸಪ್‍ಗಳಲ್ಲೇ ಸಂದೇಶ ರವಾನಿಸುತ್ತಲೇ ದಿನವನ್ನು ಕಳೆದರೇನೋ? ಪ್ರೇಮಿಗಳ ದಿನಾಚರಣೆ ವಿರುದ್ಧ ಮಾರಲ್ ಪೋಲೀಸ್‍ಗಿರಿ ಮಾಡಿದ್ದು ವರದಿಯಾಗಲಿಲ್ಲ. ಜನದಟ್ಟಣೆ ಹೆಚ್ಚು ಇರುವಲ್ಲಿ ಕೊಳಕೂ ಹೆಚ್ಚಿರುತ್ತದೆ. ಮಾರಿಜಾತ್ರೆಯಲ್ಲಿ ಜನಸಂದಣಿ ಹೆಚ್ಚು ಇರುವುದರಿಂದ ತ್ಯಾಜ್ಯಗಳ ಬಳಕೆಯೂ ಹೆಚ್ಚಿರುತ್ತದೆ ಹಾಗೂ ಅದರ ವಿಲೇವಾರಿ ಸಮರ್ಪಕವಾಗಿ ಆಗುವುದಿಲ್ಲ. ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಕಾಣಬಹುದು. ತ್ಯಾಜ್ಯ ವಿಲೇವಾರಿ ಮಾಡುವುದು ಸ್ಥಳೀಯ … Read more

 ಹಬ್ಬಗಳ ಆಚರಣೆ – ಆರೋಗ್ಯ: ಕೆ ಟಿ ಸೋಮಶೇಖರ ಹೊಳಲ್ಕೆರೆ.

ನಮ್ಮ ಪೂರ್ವಜರು ಪುರಾತನ ಕಾಲದಿಂದಲೂ ಹಬ್ಬ ಹರಿದಿನಗಳ ಆಚರಣೆಗೆ ತಂದಿರುವುದು ಬಹಳ ಔಚಿತ್ಯಪೂರ್ಣವೂ, ಆರೋಗ್ಯಪೂರ್ಣವೂ ಆಗಿದೆ. ಜತೆಗೆ ಆಚರಣೆ ವಿಧಾನಗಳು, ರೀತಿ ನೀತಿಗಳು ಅಷ್ಟೇ ಮಹತ್ವ ಪಡೆದಿವೆ. ಈ ದೃಷ್ಟಿಯಿಂದ ನಮ್ಮ ಪೂರ್ವಜರ ಮೆಚ್ಚಬೇಕಾದದ್ದೇ! ಅವು ನಮ್ಮ ಧರ್ಮ, ಸಂಸ್ಕೃತಿ, ಪರಂಪರೆ ಭಾಗವಾಗಿವೆ! ಹಬ್ಬಗಳ ನೆಪದಲ್ಲಿಯಾದರೂ ಆಗಾಗ ಮನೆ ಧೂಳು ತೆಗೆದು, ಸುಣ್ಣ, ಬಣ್ಣ ಬಳಿಸಿ ಶುಚಿಗೊಳಿಸುತ್ತೇವೆ. ಇದರಿಂದ ಕ್ರಿಮಿ, ಕೀಟಗಳು, ರೋಗಾಣುಗಳು ನಾಶವಾಗುತ್ತವೆ. ಇದರಿಂದ ರೋಗಗಳು ಹರಡದಂತೆ, ಅವು ಬರದನ್ನು ತಡೆಗಟ್ಟಿದಂತೆ ಆಗುತ್ತದೆ. ಮನೆ ಸ್ವಚ್ಛ … Read more

“ಮರೆಯಾದ ಜೀವಾ”: ಪಿ ಕೆ…? ನವಲಗುಂದ

ಹಂಗೆ ಸುಮ್ಮನೆ ಕೆಲಸವಿರಲಿಲ್ಲ ಹರಟೆ ಹೊಡೆಯುತ್ತಾ ಕುಂತಿದ್ದೆ ಆ ಕಡೆ ನನ್ನ ಆತ್ಮೀಯ ಮಿತ್ರನ ಕರೆ ಬಂತು. ಆ ಕಡೆಯಿಂದ ಎಲ್ಲಿದ್ದೀಯಾ?  ನಾನು. ಮಾರ್ಕೆಟ್ ನಲ್ಲಿ .  ಹಾಗಾದರೆ ಸರ್ಕಾರಿ ಆಸ್ಪತ್ರೆಗೆ ಬಾ. ಯಾಕೋ.? ಬಾರೋ ಮಾರಾಯ ಆಯ್ತು ಬಂದೆ. ಗೆಳೆಯನ ಬೈಕು ತೆಗೆದುಕೊಂಡು ಹೊರಟೆ ಆದರೆ ಮನಸ್ಸುನಲ್ಲಿ ಏನೋ ತಳಮಳ ಏನಾಗಿರಬೇಕು? ಅನ್ನುವ ವಿಚಾರದಲ್ಲಿಯೇ ಆಸ್ಪತ್ರೆ ಹತ್ತಿರವೇ ಬಂದೆ  ಗೆಳೆಯ ಮುಖದಲ್ಲಿ ಕೊಂಚು ನೋವು ಕೊಂಚು ಸಂತಸ . ಇತ್ತ ತಂದೆಯಾಗುವ ಸಂತಸ ಒಂದಾದರೆ ಇತ್ತ … Read more