Facebook

Archive for the ‘ಸರಣಿ ಬರಹ’ Category

ಕರ್ನಾಟಕ ಪರಿಶೆ (ಭಾಗ-1): ಎಸ್. ಜಿ. ಸೀತಾರಾಮ್, ಮೈಸೂರು

ಭೂತಮೂಲಗನ್ನಡಿಯಿಂದ          ಕನ್ನಡ ಭುವನೇಶ್ವರಿಯ ಛಾಯಾವತಾರಳಾದ “ಮಾತೃ ಭೂತೇಶ್ವರಿ” ಮೈಸೂರಿನಲ್ಲಿ ಮೊನ್ನೆ ಮಹಾಲಯ ಅಮಾವಾಸ್ಯೆಯ ಡಾಕಿಣಿ ಮುಹೂರ್ತದಲ್ಲಿ (ರಾತ್ರಿ 2ರ ಸಮಯ) ವಾಯುಸಂಚಾರದಲ್ಲಿದ್ದಾಗ, ಅಲ್ಲಿ ನೂತನವಾಗಿ ಕಟ್ಟ್ಟಲಾಗಿರುವ ‘ಮಿನಿ’ ವಿಧಾನಸೌಧದ ಮೇಲಿರುವ ಮೂರು ಘೋಷಣೆಗಳನ್ನು ಕಂಡು, ಭಯಭೀತೇಶ್ವರಿ ಆದಳೆಂದೂ, ಆಕ್ಷಣವೇ ‘ಕನ್ನಡ’, ‘ಕರ್ನಾಟಕ’, ‘ರಾಜ್ಯೋತ್ಸವ’ ಇತ್ಯಾದಿ ಘನವಿಚಾರಗಳ ಹುಚ್ಚುಚ್ಚು ಆಲೋಚನೆಗಳು ಆಕೆಯ ಮನಸ್ಸಿನಲ್ಲಿ ಉಕ್ಕುಕ್ಕಿಬಂದು, ಕಡೆಗೆ ಅವಳು ಅಲ್ಲೇ ಇವೆಲ್ಲವನ್ನೂ ‘ಠೀವಿ-007’ ಮುಂದೆ ಹೃದಯಾಘಾತಪೂರ್ವಕವಾಗಿ ಕಾರಿಕೊಂಡಳೆಂದೂ ವರದಿಯಾಗಿದೆ. ಆ ವಿಪರೀತ ಆಲೋಚನೆಗಳ ಆಯ್ದ ಭಾಗಗಳನ್ನು […]

ಫ್ಲಾಪಿಬಾಯ್ ಮತ್ತು ಲಗೋರಿಬಾಬಾ 8

ಕಾಲೇಜಿನ ಉಪನ್ಯಾಸ ಫ್ಲಾಪಿಬಾಯ್ ಮತ್ತು ಲಗೋರಿಬಾಬಾ ಖ್ಯಾತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿತ್ತು. ಇವರ ಅಪರಿಮಿತ ಬುದ್ಧಿವಂತಿಕೆ, ಜ್ಞಾನಕ್ಕೆ ಮೆಚ್ಚಿದ ನಗರದ ನಾಗರಿಕರು ಬೆರೆ ಬೇರೆ ಕಡೆ ಉಪನ್ಯಾಸಕ್ಕೆ ಕರೆಯುತ್ತಿದ್ದರು. ಹೊಸ ಕೆಲಸ ಹೊಸ ಉತ್ಸಾಹ ಇಬ್ರೂ ಕರೆದಲ್ಲೆಲ್ಲಾ ಹೋಗಿ ಭಾಷಣ ಬಿಗಿದು ಸಿಳ್ಳೆ ಗಿಟ್ಟಿಸಿ ಬರುತ್ತಿದ್ದರು. ಹೀಗೆ ಒಮ್ಮೆ ಅವರಿಬ್ಬರನ್ನ ಉಪನ್ಯಾಸ ಕೊಡಲು ನಗರದ ಒಂದು ಕಾಲೇಜಿನಿಂದ ಕರೆ ಬಂತು. ಆಯ್ತು ಅಂತ ಇಬ್ರೂ ಹೊರಟ್ರು.  ಫ್ಲಾಪಿಬಾಯ್ ಇರಲಿ, ಲಗೋರಿಬಾಬಾನೆ ಆಗಿರಲಿ ಜನರನ್ನ ನೋಡಿ ಮಾತಾಡೋವಂತವ್ರು. ಮೊದಲೇ […]

ಫ್ಲಾಪಿಬಾಯ್ ಮತ್ತು ಲಗೋರಿಬಾಬಾ 7

ಪತ್ರಕರ್ತೆಯೊಂದಿಗೆ ಲಗೋರಿಬಾಬಾ ಫ್ಲಾಪಿಬಾಯ್ ಮತ್ತು ಲಗೋರಿಬಾಬಾನೊಂದಿಗೆ ಸಂದರ್ಶನ ಮಾಡಲು ಬಂದಿದ್ದ ಪತ್ರಕರ್ತೆ ವರದಾ ಫ್ಲಾಪಿಬಾಯ್‍ನೊಂದಿಗೆ ಮಾತುಕತೆ ನಡೆಸಿ ನಂತರ ಲಗೋರಿಬಾಬಾನೊಮದಿಗೆ ಚಿಟ್ ಚಾಟ್ ಮಾಡಲು ಭಲೇ ಉತ್ಸುಕಳಾಗಿದ್ದಳು. ತರುಣ ಯುವಕ ಲಗೋರಿಬಾಬಾ ನೊಡಲು ಹ್ಯಾಂಡ್‍ಸಮ್ ಆಗಿದ್ರೂ ಅಘೋರಿಯಾಗಿ ವಿಕಾರಿತರ ಇದ್ದ. ಮೊದಲ ನೋಟಕ್ಕೇ ಭಯಪಡಿಸುವಂತಿದ್ದ ಆತನ ಚಹರೆಯ ಜೊತೆಗೇ.., ಮೊದಮೊದಲಿಗೆ ಆತನ ಮಾತೂ ಹೆದರಿಕೆ ಹುಟ್ಟಿಸುವಂತಿತ್ತು. ಆದರೆ ಅಪರಿಮಿತ ಜ್ಞಾನಿಯಾದ ಲಗೋರಿಬಾಬಾನನ್ನು ಮಾತನಾಡಿಸಲೇಬೇಕೆಂದು ವರದಾ ಹಠ ಹಿಡಿದು ಅವನ ಬಳಿ ಬಂದಳು.. ಮುಂದೆ..?? ಇನ್ನೇನು..?? ಓದಿ ಗೊತ್ತಾಗತ್ತೆ..! […]

ಫ್ಲಾಪಿಬಾಯ್ ಮತ್ತು ಲಗೋರಿಬಾಬಾ 6

ಪತ್ರಕರ್ತೆಯೊಂದಿಗೆ ಫ್ಲಾಪಿಬಾಯ್ ಫ್ಲಾಪಿಬಾಯ್ ಮತ್ತು ಲಗೋರಿಬಾಬಾ ಒಂದು ಹಳ್ಳಿಯಲ್ಲಿ ಜನೋಪಕಾರಿಯಾಗಿ ಅತ್ಯುತ್ತಮ ಸಲಹೆ ನೀಡುತ್ತಾ, ಬಡ ಜನರ ಸೇವೆ ಮಾಡುತ್ತಿದ್ದರೂ- ತಮ್ಮಷ್ಟಕ್ಕೆ ತಾವು ಆಶ್ರಮ ಕಟ್ಟಿಕೊಂಡು ಒಂದೆಡೆ ಇದ್ದರು. ಇಂತಹ ಅಪರೂಪದ ಜನ ನಮ್ಮ ಸಮಾಜದಲ್ಲಿ ಪ್ರಚಾರಕ್ಕೆ ಬರುವುದು ಅಪರೂಪ. ಅದೇನು ವಿಧಿ ಲಿಖಿತವೋ, ಇವರ ಒಳ್ಳೆಯತನ ಗುರುತಿಸುವ ಶಕ್ತಿ ಸತ್ತ ಪ್ರಜೆಗಳಿಗೆ ಜಾಗೃತೆಯಾಗಿ ಸತ್ಪ್ರಜೆಯಾದರೋ ಗೊತ್ತಿಲ್ಲ. ಒಟ್ಟಿನಲ್ಲಿ ಅವರಿಗೆ ವ್ಯಾಪಕ ಪ್ರಚಾರವಂತೂ ಜನರ ಬಾಯಿಮಾತಿನಿಂದಲೇ ಹೆಚ್ಚೆಚ್ಚು ದೊರಕಿತ್ತು. ಆಗ ತಾನೆ ಕೆಲಸಕ್ಕೆ ಸೇರಿದ್ದ ಟಿವಿ ರಿಪೋರ್ಟರ್ […]

ಹೀಗೊಂದು ಸ್ವ-ವಿಮರ್ಶೆ: ಅಭಿ ಸಾರಿಕೆ

ಬದುಕು ಸುಂದರ ಎನ್ನುವುದು ಎಷ್ಟು ನಿಜವೋ ಸಂಕೀರ್ಣ ಅನ್ನೋದು ಅಷ್ಟೆ ನಿಜ. ಕಣ್ಮುಂದಿರುವ ಭೂಮಿಯ ಬಿಟ್ಟು ಕಾಣದ ಸ್ವರ್ಗಕ್ಕೆ ಹಂಬಲಿಸೋ ಕತ್ತಲು. ನಮ್ಮನ್ನು ಪ್ರೀತಿಸುವ ಹೃದಯವ ಬಿಟ್ಟು ನಮ್ಮತ್ತ ತಿರುಗಿಯೂ ನೋಡದವರನ್ನು ತಿರು ತಿರುಗಿ ನೋಡುವ ಚಪಲ. ಬೇವು ಬೆಲ್ಲ ಕಲೆಸಿ ಬೆಲ್ಲವನ್ನು ಮಾತ್ರ ತಿನ್ನುವಂತ ರೀತಿ ಈ ಬದುಕು, ಯಾರಿಗೂ ಕಷ್ಟ ಬೇಕಿಲ್ಲ,  ಸುಖವನ್ನು ಬಯಸದವರು ಯಾರು ಇಲ್ಲ. ಬಲಪಕ್ಕದಲ್ಲಿರುವನಿಗೆ ಎರಡಂತಸ್ತಿನ ಮನೆ, ಎಡಪಕ್ಕದಲ್ಲಿರುವ ನಿಲ್ಲಲು ಸೂರಿಲ್ಲದ ಭಿಕಾರಿ, ಒಂದಸ್ತಿನ ಮನೆಯಲ್ಲಿರುವ ನಾವು ಎರಡಂತಸ್ತಿರುವನನ್ನು ನೋಡಿ […]

ಫ್ಲಾಪಿಬಾಯ್ ಮತ್ತು ಲಗೋರಿಬಾಬಾ-5

ಕುರುಸಾಡಿ ದ್ವೀಪದಲ್ಲಿ.. ಕಳೆದ ವಾರ ಶ್ರೀಲಂಕಾದಲ್ಲಿನ ಬೆಳಕಿನ ಮರಗಳ ರಹಸ್ಯ ಬೇಧಿಸಿದ ಫ್ಲಾಪಿಬಾಯ್ ಮತ್ತು ಲಗೋರಿಬಾಬಾ ಮರಳಿ ತಮ್ಮ ಊರಿಗೆ ಬರುವಾಗ ಎರಡು ದಿನಗಳ ಮಟ್ಟಿಗೆ ರಾಮೇಶ್ವರದಲ್ಲಿಯೇ ಉಳಿಯುವ ಅನಿವಾರ್ಯತೆ ಎದುರಾಯ್ತು. ಗುಂಡ್ರುಗೋವಿ ಲಗೋರಿಬಾಬಾ ಮತ್ತು ತುಂಡೈದ ಫ್ಲಾಪಿಗೆ ಅವರು ಎಲ್ಲಿದ್ರೂ ಒಂದೇ! “ಆಯ್ತು” ಅಂತ ಇಬ್ರೂ ಅಲ್ಲಿಯೇ ಹೊಟೇಲೊಂದ್ರಲ್ಲಿ ರೂಮ್ ಮಾಡಿ ಉಳಿದುಕೊಂಡ್ರು. ಟಿವಿ, ಪೇಪರ್, ಪುಸ್ತಕ ಇತ್ಯಾದಿಗಳೆಲ್ಲಾ ಇಬ್ಬರಿಗೂ ಇರೋ ಆಸಕ್ತಿ ಅಷ್ಟಕ್ಕಷ್ಟೆ! ಲಗೋರಿಬಾಬಾಗೆ ಹೆಚ್ಚಿನ ಸಮಯ ಧ್ಯಾನ, ನಿದ್ದೆ, ಭಂಗಿ ಸೇದೋದ್ರಲ್ಲೇ ಕಳೆದೊದ್ರೆ, […]

ಫ್ಲಾಪಿಬಾಯ್ ಮತ್ತು ಲಗೋರಿಬಾಬಾ-4

ಬೆಳಕಿನ ಮರಗಳ ರಹಸ್ಯ     “ಲಗೋರಿಬಾಬಾ ಫ್ರೀ ಇದೀರಾ ಈ ವಾರ? ಸಾಧ್ಯವಾದ್ರೆ ನನ್ನ ಜೊತೆ ಶ್ರೀಲಂಕಾಗೆ ಬನ್ನಿ. ಒಂದು ರಹಸ್ಯದ ಬಗ್ಗೆ ಅಧ್ಯಯನ ಮಾಡಲು ಡಾ.ಕೋವೂರ್ ಜೊತೆ ಹೋಗೋಣ.” ಫ್ಲಾಪಿಬಾಯ್ ಕೇಳಿದ ಲಗೋರಿಬಾಬಾನಿಗೆ.     “ಏನು ರಹಸ್ಯ? ಡಾ. ಕೋವೂರ್ ಅಂದ್ರೆ ಯಾರು? ಸಿಲೋನ್‍ಗೆ ಅವಶ್ಯವಾಗಿ ಹೋಗೋಣ. ನಾನು ಎಲ್ಲಿಗಾದರೂ ಸೈ” ಲಗೋರಿಬಾಬಾ ಪ್ರತ್ಯುತ್ತರಿಸಿದ.     “ಶ್ರೀಲಂಕಾದ ಉತ್ತರ ಭಾಗದಲ್ಲಿ ಮನ್‍ಕುಳಮ್ ಅಂತ ಊರಿದೆ. ಆ ಊರಿನ ಕಾಡಿನ ಬೇಟೆಗೆ ಬೇರೆ ಬೇರೆ ಕಡೆಯಿಂದ […]

ಫ್ಲಾಪಿಬಾಯ್ ಮತ್ತು ಲಗೋರಿಬಾಬಾ-3: ಫ್ಲಾಪಿಬಾಯ್

ಗಣೇಶ ಬಂದ ಫ್ಲಾಪಿಬಾಯ್ ಮಾತಿಂದ ಕರೆಂಟ್ ಕಂಡುಹಿಡಿಯಬೇಕೆಂದು ಶತಾಯಗತಾಯ ಪ್ರಯೋಗನಿರತನಾಗಿದ್ದ. ಲಗೋರಿಬಾಬಾ ಎಲ್ಲಿಂದಲೋ ಒಂದಷ್ಟು ಬೂದಿ ತಂದ್ಕೊಂಡು ಮುಲ್ತಾನಿ ಮಿಟ್ಟಿ ತರಾ ಮೈಗೆಲ್ಲಾ ಹಚ್ಕೊಂಡು ಇಡೀ ಬಾಡಿನೇ ಫೇಷಿಯಲ್ ಮಾಡ್ಕೊಳ್ತಾ ಇದ್ದ. ಅದೇ ಟೈಮಿಗೆ ಬಂದ್ರು ನಾಲ್ಕಾರು ಜನರು- ಕೈಲಿ ರಶೀದಿ ಪುಸ್ತಕ ಹಿಡ್ಕಂಡು! “ಅಣಾ ಏರಿಯಾದಲ್ಲಿ ಗಣೇಶನ್ನ ಕೂರಿಸ್ತಾ ಇದೀವಿ ಚಂದಾ ಕೊಡಿ, ಏಯ್! ಫ್ಲಾಪಿ ಅಣ್ಣನ ಹೆಸ್ರಲ್ಲಿ ಬರ್ಕೊಳೋ ಎರಡು ಸಾವಿರ” ತಮ್ಮವರತ್ರಾನೆ ಹೇಳಿ ಬರ್ಕೊಳೊಕೆ ಅಣಿಯಾದ ಗಣೇಶ ಕೂರಿಸೋ ಕಬಳೇಶ. “ತಡ್ರಪಾ, ನನ್ನತ್ರ […]

ಫ್ಲಾಪಿ ಬಾಯ್ ಮತ್ತು ಲಗೋರಿಬಾಬಾ-2: ಫ್ಲಾಪಿ ಬಾಯ್

ಅರ್ಥವಾಗುವವರಿಗೆ ಮಾತ್ರ! ಎಲ್ಲರಿಗಲ್ಲ.. ಅಡಿಗೆ ಮನೆಯಲ್ಲಿ ಫ್ಲಾಪಿಬಾಯ್ ಅಡಿಗೆ ಮನೆಯಲ್ಲಿ ಹೊಸರುಚಿ ಕಂಡು ಹಿಡಿಯಲು ಪ್ರಯೋಗ ನಿರತನಾಗಿದ್ದ. ಲಗೋರಿಬಾಬಾ ಚುಟ್ಟಾ ಹೊಡಿತಾ ಇವ ಮಾಡೋದನ್ನ ನೋಡ್ತಾ ಇದ್ದ. ಆಗ ಫ್ಲಾಪಿಬಾಯ್ “ಬಾಬಾ ಲೈಫಲ್ಲಿ ಹೆಂಗಿರ್ಬೇಕು ಅಂತಾನೇ ಗೊತ್ತಾಗ್ತಿಲ್ಲ ನಂಗೆ! ಹಂಗಿದ್ರೆ ಹಿಂಗಿರು ಅಂತಾರೆ, ಹಿಂಗಿದ್ರೆ ಹಂಗಿರು ಅಂತಾರೆ! ಏನ್ ಮಾಡೋದಂತಾನೇ ತಿಳಿತಿಲ್ಲ ಥತ್!!” ಅಂದ ನಿರಾಸಕ್ತಿಯಿಂದ. “ಸಿಂಪಲ್ಲು ಕಣೋ, ಅದೇನು? ಅಂದ ಲಗೋರಿಬಾಬಾ ಕೈತೋರಿಸ್ತಾ. “ಕ್ಯಾರೆಟ್ಟು” ಅಂದ ಫ್ಲಾಪಿಬಾಯ್.  “ಮತ್ತೆ ಅದು?”- “ಅಷ್ಟೂ ಗೊತ್ತಿಲ್ವಾ ಮೊಟ್ಟೆ, ಎಗ್ […]

ಫ್ಲಾಪಿ ಬಾಯ್ ಮತ್ತು ಲಗೋರಿಬಾಬಾ-1: ಫ್ಲಾಪಿ ಬಾಯ್

ಅರ್ಥವಾಗುವವರಿಗೆ ಮಾತ್ರ! ಎಲ್ಲರಿಗಲ್ಲ.. ಬ್ಯಾಂಕ್ ಅಕೌಂಟು ಫ್ಲಾಪಿ ಬಾಯ್ ಕೆರೆಬದಿ ಕುಂತು ಆಕಾಶದಲ್ಲಿ ಹಾರೋ ಕಾಗೆ ನೋಡ್ತಾ ಇದ್ದ. ಅದೇ ಟೇಮಿಗೆ ನಮ್ ಲಗೋರಿಬಾಬಾ ಕೆರೆ ಕಡೆ ಕೆಲ್ಸ ಮುಗಿಸ್ಕಂಡ್ ಬಂದ. “ಏನ್ಲಾ ಮಾಡ್ತಿದ್ದಿ ಪ್ಲಾಪಿ? ತಂತ್ರಜ್ಞಾನಿ ಬ್ರಹ್ಮಚಾರಿ ಅಂತ ಊರಲ್ಲೆಲ್ಲಾ ಹೇಳ್ಕಂಡ್ ತಿರುಗ್ತಿ ಇತ್ತೀಚೆಗೆ ಏನೂ ಕಂಡು ಹಿಡಿದಿಲ್ವಾ?” ಅಂತ ಕೇಳ್ದ. ಪಾಪ ನಮ್ ಫ್ಲಾಪಿ ಬಾಯ್ ಗೆ ಲಗೋರಿಬಾಬಾನ ನೋಡ್ತಾ ಇದ್ದಂಗೆ ದುಃಖ ಕಿತ್ಗಂಡ್ ಕಿತ್ಗಂಡ್ ಬಂತು. ಅಳುಅಳುತ್ತಾ ಅಂದ, “ಲಗೋರಿಬಾಬಾ, ಲೈಫಲ್ಲಿ ತುಂಬಾ […]