ಪಂಜು-ವಿಶೇಷ

unsung hero: ವಿಶ್ವಾಸ್ ವಾಜಪೇಯಿ

vishwas-vajapeyi

ಅಪ್ಪ, ತಂದೆ, ಬಾಬಾ.. ಈ ಎರಡಕ್ಷರದ ಮಹತ್ವ. ಈ ಸಂಬಂಧದ ಅರ್ಥ ತಿಳಿದುಕೊಳ್ಳೋದು ಎಷ್ಟೋ ಜನರಿಂದ ಬಹುಷಃ ಆಗಂಗೇ ಇಲ್ಲಾ.. ಅಂಥವರಾಗ ನಾನೂ ಒಬ್ಬ ಎಷ್ಟಾದ್ರೂ ಹಿರಿ ಮಗ ನೋಡ್ರಿ, ಅವ್ವನ ಮ್ಯಾಲೇ ಪ್ರೀತಿ ಜಾಸ್ತಿ ಎಲ್ಲಾರೂ ಅಂತಾರ ತಾಯಿಯಾದಮೇಲೆ ಹೆಣ್ಣೆಗೆ ಎರಡನೇ ಜೀವ ಸಿಗ್ತದ ಅಂತ, ಮತ್ತ ಅಪ್ಪಗ? ಅವನ ಬಗ್ಗೆ ಯಾರೂ ಜಾಸ್ತೀ ಮಾತಾಡಲೇ ಇಲ್ಲ ಯಾಕಂದ್ರ ಅವರ ಜೀವನದಾಗ ಅಪ್ಪನ ‘ರೋಲ್’ ಯಾವತ್ತೂ, ಯಾರಿಗೂ ಕ್ಲಿಯರ್ ಆಗ್ಲೇ ಇಲ್ಲ ಎಲ್ಲರ ಜೀವನದ ಕಥಿಯೊಳಗೂ ಅವ ಒಬ್ಬ unsung hero ಆಗೇ ಉಳಿದುಬಿಟ್ಟ.

ಅವನ ಪ್ರೀತಿಯನ್ನ, ಕಷ್ಟವನ್ನ ತೋರಸ್ಲಿಕ್ಕೆ ಆಗ್ದನ, ಅವನ ಮನಸಿನ ಗೋಂದಲ – ಒತ್ತಡವನ್ನ ಮುಚ್ಛಿಟ್ಟು, ಮಕ್ಕಳನ್ನ ಒಳ್ಳೇ ರೀತಿನ್ಯಾಗ ಬೆಳಸಬೇಕು ಅನ್ನೋ ಒಂದೇ ಒಂದು ತವಕ. ಹೆಂಡತಿ-ಮಕ್ಕಳಿಗೆ ಒಳ್ಳೇ ಭವಿಷ್ಯ ಕೋಡಬೇಕು ಅನ್ನೋ. ಎಂದಿಗೂ ಮುಗೀಯದೇ ಇರೋ ಅವನ ಚಿಂತಿ.. ಇದೆಲ್ಲಾ ನಮ್ಮ ಎಲ್ಲರ ಕಣ್ಣಿಗೆ ಕಂಡರೂ ಅದನ್ನ ನಾವು ಅವನ ‘ಡ್ಯೂಟಿ’ ಅಂತ ಹೇಳಿ ಸುಮ್ಮನಾಗಿಬಿಡ್ತೀವಿ.

ಶ್ರೀ ಗೋಪಾಲ ವಾಜಪೇಯಿ, ಇಲ್ಲಿರೋ ಎಷ್ಡೋ ಮಂದಿಗೆ ಅಣ್ಣ, ಕಾಕಾ, ಮಾಮಾ, ಸರ್ ಆಗಿ, ಗೆಳೆಯನಾಗಿ ಮತ್ತ ಎಲ್ಲರ ಜತಗೂ ಅಷ್ಡೇ ಸಲಿಗೆಯಿಂದ, ಅಷ್ಡೇ ಪ್ರೀತಿಯಂದ ಮಾತಾಡಿದ ವ್ಯಕ್ತಿ. ಅವರ ಜೀವನ ಎಷ್ಡು ಕಷ್ಡದಿಂದ ಕೂಡಿತ್ತೂ ಅನ್ನೋದು ಇಲ್ಲಿರೋ ಎಷ್ಡೋ ಜನರಿಗೆ ಗೊತ್ತದ. ಆದ್ರ ಅದನ್ನ ಅಗ್ದೀ ಹತ್ತಿರದಿಂದ ನೋಡಿದವರೋಳಗ ನಾನೂ ಒಬ್ಬ. ಅವರ ಜೀವನದಿಂದ ಎಷ್ಟೋ ಪಾಠ ಕಲತಾವರೋಳಗ ನಾನೂ ಒಬ್ಬ.

ಗೋಪಾಲ ವಾಜಪೇಯಿ
ಗೋಪಾಲ ವಾಜಪೇಯಿ

ನಿನ್ನ ಸುಖಾನ ಹಂಚು, ದುಃಖ ಅಲ್ಲ ಇದು ಎಲ್ಲಾರೂ ಹೇಳೋ ಮಾತು ಆದ್ರ ಇದನ್ನ ಅವರು ಹೇಳದನ ನನಗ ಅದರ ಸಾಕ್ಷಾತ್ಯಾರ ಮಾಡಿಸಿದ್ರು. ಅವರನ್ನ ನೋಡಿಯೇ ನನ್ನ ಜೀವನದಲ್ಲಿ ಎಷ್ಟೋ ಪಾಠಗಳನ್ನ ಕಲ್ತೇನಿ. ಕಲ್ಕೋತನ ಇರ್ತೀನಿ.

ಎಲ್ಲೋ ಒಂದು ಕಾರ್ಯಕ್ರಮಕ್ಕ ಹೋದಾಗ, ಹಿರಿಯರ ಜೊತೆ ಪರಿಚಯ ಮಾಡಿಕೊಡೋವಾಗ – ಇವು ಗೋಪಾಲ ವಾಜಪೇಯಿಯವರ ಮಗ ಆಂದಾಕ್ಷಣ ಸಿಗೋ ಗೌರವ, ಓ ಹೌದಾ, ಅವರು ನನ್ನ ಜೀವದ ಗೆಳೆಯ, ಅವರು ನನ್ನ ಗುರುಗಳು, ನಾನು ಅವರ ಫ್ಯಾನ್ ಅಂತ ಬರೋ ಮಾತುಗಳು, ನಮ್ಮ ಫ್ರೆಂಡ್ಸ್ ಸರ್ಕಲ್ ನ್ಯಾಗ ನನ್ನ ಪರಿಚಯ ಮಾಡೋವಾಗ ನಾನು ಗೋಪಾಲ ವಾಜಪೇಯಿಯವರ ಮಗ ಅನ್ನೋ ಹೆಮ್ಮ, ಅದರಿಂದ ನನಗ ಸಿಗೋ ಪ್ರೀತಿ ನಾನು ಹೇಳಿಕೋಳ್ಳಲಿಕ್ಕೆ ಆಗದಿರೋ ಅಷ್ಟು ಖಷಿ ಕೋಡ್ತದ ಎಲರೂ ತಮ್ಮ ವೃತ್ತಿಯೋಳಗ God Father ಹುಡುಕ್ತಾರ, ಆದ್ರ ನನಗ ಅದರ ಅವಶ್ಯಕತಿನ ಬೀಳಲಿಲ್ಲ. ಅಪ್ಪನ ಹೆಸರ ಸಾಕಾಗಿತ್ತು.

ಎಷ್ಟೋ ಜನ ಅವರ ಬಗ್ಗೆ, ಅವರ ಸಾಹಿತ್ಯದ ಬಗ್ಗೆ ಬರೆದು ಕೊಂಡಾಡಿದರು. ಇದೆಲ್ಲಾ ಓದಿದಾಗ ಅವರು ಪಂಡಿತರೇನೋ ಅಂತ ಆನ್ನಸ್ತದ ಹಂಗ ಅಂದಕೊಂಡಾಗ ಆದರ ಜೊತಿ ಒಂದು ಗದೀ ಮಾತೂ ನೆನಪಾಗತದ. ಪಂಡಿತ ಪುತ್ರ ಪರಮ ಶುಂಟ. ನಮ್ಮ ತಂದೆಯವರಿಂದ ನಾನು ಕಲಿಯೋದು ಭಾಳ ಇತ್ತೇನೋ… ಆದ್ರ ನಾನು ಪ್ರಯತ್ನಾನ ಪಡ್ಲಿಲ್ಲೇನೋ ಅಂತ ಅನಸ್ತದ.

ನನಗ ಅವರಹಂಗ ಬರೀಲಿಕ್ಕೆ ಬರಂಗಿಲ್ಲಾ, ಅವರಹಂಗ ಮಾತಾಡ್ಲಿಕ್ಕೂ ಬರಂಗಿಲ್ಲಾ, ಅವರ ಬಗ್ಗೆ ಹೇಳಬೇಕಂದ್ರ ಶಬ್ದಗಳಲ್ಲಿ ವರ್ಣೆಸಲಾಗದ ಸಂಬಂಧ ನನ್ನ ಜೀವನದಾಗ ಅವರ ಪ್ರಭಾವ ಯಾವತ್ತಿಗೂ ಇರ್ತದ… ನನ್ನೊಳಗ ಅವರು ಯಾವತ್ತೂ ಇರ್ತಾರ.

ಅಪ್ಪನ ಪ್ರೀತಿ ಕಣ್ಣಿಗೆ ಕಣಂಗಿಲ್ಲ ಆದ್ರೆ ಬಹುಷಃ ಅವರು ನಮ್ಮನ್ನ ನಮ್ಮ ತಾಯಿಗಿಂತ ಹೆಚ್ಚು ಪ್ರೀತಿಸ್ತಾರ. ಅವರು ಅಂದುಕೊಂಡ್ಲಂಗ ಬದಕ್ಲಿಕ್ಕೆ ಪ್ರಯತ್ನ ಪಡತೀನಿ.
 


 

ಕನ್ನಡದ ಬರಹಗಳನ್ನು ಹಂಚಿ ಹರಡಿ

5 thoughts on “unsung hero: ವಿಶ್ವಾಸ್ ವಾಜಪೇಯಿ

  1. ವಿಶ್ವಾಸ್

    ನಿನ್ನ ತಂದೆಯ ಬಗ್ಗೆ ಬಹಳ ಚೆನ್ನಾಗಿ ‌ ಬರೆದಿರುವೆ. ಭೇಷ್ ನೀನು ಖಂಡಿತ  ಪಂಡಿತ ಪುತ್ರ,ಆದರೆ ಶುಂಠಿ ಅಲ್ಲ. ಬರವಣಿಗೆ ಮುಂದುವರೆಸು, ವಾಜಪೇಯಿ ಆಶೀರ್ವಾದ ಇದೆ.

Leave a Reply

Your email address will not be published. Required fields are marked *