ಕೆಂಗುಲಾಬಿ (ಕೊನೆಯ ಭಾಗ): ಹನುಮಂತ ಹಾಲಿಗೇರಿ
ರಾಜಿಯ ದಾಂಪತ್ಯದ ಬದುಕಿನ ಬಗ್ಗೆ ಶಾರದೆಯ ಮೂಲಕ ದೀಪಾಳಿಗೂ, ದೀಪಾಳ ಮೂಲಕ ನನಗೂ ಗೊತ್ತಾಗುತ್ತಿತ್ತು. ಮದುವೆಯಾದ ಕೆಲವೇ ತಿಂಗಳುಗಳಲ್ಲಿ ಶಾರೀಯ ಮೈಯ್ಯ ಮತ್ತು ಮುಖದ ಮೇಲಿನ ಕಳೆ ಮಾಯವಾಗುತ್ತಿರುವುದು ಶಾರದೆಯ ಗಮನಕ್ಕೂ ಬಂದಿತಂತೆ. ರಾಜಿಯ ದಾಂಪತ್ಯದೊಳಗೆ ಹೊಗೆಯಾಡಲಿಕ್ಕೆ ಶುರುವಾಗಿದೆ ಎಂಬುದನ್ನು ಅವಳು ಅರಿತುಕೊಂಡಿದ್ದಳು. ಅಳಿಯ ಕೆಲಸಕ್ಕೆ ಹೋಗೋದನ್ನು ಬಿಟ್ಟು ಪೂರ್ತಿಯಾಗಿ ಕುಡಿತಕ್ಕೆ ಅಂಟಿಕೊಂಡಿದ್ದ. ಕೆಲಸಕ್ಕೆ ಹೋಗು ಅಂತ ರಾಜಿ ಗಂಡನನ್ನು ಒತ್ತಾಯಿಸಿದಾಗ ಆತ ತನ್ನೊಳಗೆ ಅಡಗಿದ್ದ ಲಾವಾರಸಾನ ಹೊರ ಉಕ್ಕಿಸಿದ್ದ. ‘ನಿಮ್ಮಮ್ಮನ್ನ ತಂದ್ಹಾಕು ಅಂತ ಹೇಳು. ಒಬ್ಬ … Read more