“ನಾನು ಹೊರಟಿದ್ದೇನೆ” ಅಂತ ಅವಳ ಮೆಸೆಜ್ ಬಂದೊಡನೆ ತರಾತುರಿಯಲ್ಲಿ ಟವಲ್ಲು, ಅಂಡರಿವೆಯನ್ನ ಹಿಡಿದುಕೊಂಡೋಗಿ ಬಚ್ಚಲ ಬಾಗಿಲು ಜಡಿದುಕೊಂಡ. ಗಡ್ಡ ಬಿಟ್ಟುಕೊಂಡು ಹೋಗುವುದೋ, ಟ್ರಿಮ್ ಮಾಡಿಕೊಂಡು ಹೋಗುವುದೋ ಎಂಬ ಮೂರು ದಿನಗಳ ಜಿಜ್ಞಾಸೆಗೆ ಕತ್ತರಿ ಬಿದ್ದು ಅವನ ಹರಕಲು ಗಡ್ಡು ನೂರು ತುಕುಡಾಗಳಾಗಿ ಉದುರಿಕೊಂಡಿತ್ತು. ಏಳು ವರ್ಷಗಳ ನಂತರ ಅವಳು ಸಿಗುತ್ತಿರುವುದು. ಅಂದು ಹನಿಮಳೆಯೊಳಗೆ ಕಣ್ಣು ತೀಡುತ್ತಾ ಹೋದವಳ ಬೆನ್ನು ನೋಡುತ್ತಾ ನಿಂತವನು ಅಲ್ಲಿಯೇ ಸ್ತಬ್ಧವಾಗಿದ್ದ. ಕಣ್ಣೀರಿಡುತ್ತಾ ಅವಳು ಸೊರಗುಟ್ಟಿದ ಸದ್ದು ಇನ್ನೂ ಕಿವಿಯ ಗೋಡೆಗಳಿಗೆ ಗುದ್ದಿಕೊಳ್ಳುತ್ತಾ ಹೊರಬರಲಾಗದೇ […]