ಪೋಲಿಸ್ ಡಿಟೆಕ್ಟಿವ್ ಸೊಮರ್ಸೆಟ್ ಇನ್ನೊಂದು ವಾರದಲ್ಲಿ ನಿವೃತ್ತನಾಗಲಿದ್ದಾನೆ. ಅವನಿಗೆ ಆ ಊರು, ಆ ಕೆಲಸ ಸಾಕುಸಾಕಾಗಿಹೋಗಿದೆ. ಅವನ ಜಾಗಕ್ಕೆ ವರ್ಗಾವಣೆಯಾಗಿ ಬರುವ ಮಿಲ್ಸ್ ಅನ್ನುವ ಬಿಸಿರಕ್ತದ ಯುವಕನ ಜೊತೆ ಒಂದು ವಾರದ ಮಟ್ಟಿಗೆ ಕೆಲಸ ಮಾಡಬೇಕಾಗಿದೆ. ತದ್ವಿರುದ್ಧ ವ್ಯಕ್ತಿತ್ವದ ಇವರಿಬ್ಬರಿಗೂ ತಿಕ್ಕಾಟ ಶುರುವಾಗುತ್ತದೆ. ಅದೇ ವೇಳೆಯಲ್ಲಿ ಆ ಊರಿನಲ್ಲಿ ಒಂದು ಭೀಕರ ಕೊಲೆಯಾಗುತ್ತದೆ. ಅನುಭವೀ ಸೊಮರ್ಸೆಟ್ ಈ ಕೊಲೆ ಯಾರೋ ಆತುರದಲ್ಲಿ ಮಾಡಿದ್ದಲ್ಲ ಅಂತ ವಾದಿಸುತ್ತಾನೆ, ಆದರೆ ಮಿಲ್ಸ್ ಅವನ ಮಾತನ್ನು ಒಪ್ಪುವುದಿಲ್ಲ. ಅಷ್ಟರಲ್ಲೇ ಇನ್ನೊಂದು ಭಯಾನಕ […]
Tag: ವಾಸುಕಿ ರಾಘವನ್
ಚೈನಾಟೌನ್: ವಾಸುಕಿ ರಾಘವನ್ ಅಂಕಣ
ನಿಜವಾಗಿಯೂ ಒಂದು “ಸಸ್ಪೆನ್ಸ್” ಚಿತ್ರ ಗ್ರೇಟ್ ಅನ್ನಿಸಿಕೊಳ್ಳುವುದು ಯಾವುದರಿಂದ? ಅಂತ್ಯವನ್ನು ನಾವು ಊಹಿಸಲು ಆಗದಿರುವುದೇ ಅತೀ ದೊಡ್ಡ ಮಾನದಂಡವಾ? ಅಥವಾ ಚಿತ್ರದುದ್ದಕ್ಕೂ ಹೆಚ್ಚು ಹೆಚ್ಚು ತಿರುವುಗಳಿದ್ದು ನಮ್ಮನ್ನು ಥ್ರಿಲ್ ಮಾಡಿತ್ತು ಅನ್ನುವುದರ ಮೇಲೆ ನಿರ್ಧಾರವಾಗಿದೆಯಾ? ಹೀಗೇ ಅಂತ ನಿಖರವಾಗಿ ಹೇಳಲು ಆಗುವುದಿಲ್ಲ. ಸುಳಿವುಗಳು ಹೆಚ್ಚಿದ್ದರೆ ನಾವು ಪರಿಹಾರವನ್ನು ಕಂಡುಹಿಡಿದ ಸಂತೃಪ್ತಿ ಸಿಗುವುದಿಲ್ಲ, ಕಮ್ಮಿ ಇದ್ದರೆ ಚಿತ್ರದೊಂದಿಗೆ ಬಂಧ ಬೆಸೆಯುವುದಿಲ್ಲ. ಈ ಸಂತುಲನವನ್ನು ಕಾಪಾಡಿಕೊಳ್ಳುವುದು ಬಹಳ ಕಷ್ಟದ ಕೆಲಸ. ನನ್ನ ಪ್ರಕಾರ ಒಂದು ಅತ್ಯುತ್ತಮ “ಸಸ್ಪೆನ್ಸ್” ಚಿತ್ರ ಎರಡನೆಯ […]
ಸಿಂಗಿನ್ ಇನ್ ದ ರೈನ್:ವಾಸುಕಿ ರಾಘವನ್ ಅಂಕಣ
ಜಾಗತಿಕ ಸಿನಿಮಾಗಳಲ್ಲಿ “ಮ್ಯೂಸಿಕಲ್” ಅನ್ನುವ ಪ್ರತ್ಯೇಕ ಪ್ರಕಾರವುಂಟು. ಅದರ ವಿಶೇಷವೆಂದರೆ ಚಿತ್ರಗಳಲ್ಲಿ ಹೆಚ್ಚಾಗಿ ಹಾಡು-ಕುಣಿತದ ಬಳಕೆ. ಹಲವು ಬಾರಿ ಈ ಹಾಡುಗಳು ಪಾತ್ರಗಳನ್ನು ಪರಿಚಯಿಸಲೋ ಅಥವಾ ಕಥೆಯನ್ನು ಮುಂದುವರಿಸಲೋ ಸಹಾಯ ಮಾಡಿದರೆ, ಕೆಲವು ಸಲ ಕಥೆಗೆ ಸಂಬಂಧವಿರದಿದ್ದರೂ ಬರೀ ರಂಜನೆಯ ದೃಷ್ಟಿಯಿಂದ ಇರುತ್ತದೆ. ಭಾರತೀಯ ಚಿತ್ರಗಳನ್ನು ನೋಡಿ ಬೆಳೆದಿರುವವರಿಗೆ ಇದೂ ಒಂದು ಚಿತ್ರಪ್ರಕಾರವೇ ಅಂತ ತಮಾಷೆಯಾಗಿ ಕಾಣಬಹುದು. ನಮ್ಮ ಸಿನಿಮಾಗಳಲ್ಲಿ ಹಾಡು-ಕುಣಿತ ಅಷ್ಟೊಂದು ಅವಿಭಾಜ್ಯ ಅಂಗಗಳಾಗಿವೆ. ಅವಿಲ್ಲದೆಯೂ ಚಿತ್ರಗಳನ್ನು ಮಾಡಬಹುದು ಅನ್ನುವ ಆಲೋಚನೆಗಳೂ ಕೂಡ ಇತ್ತೀಚಿನವರೆಗೆ ಅಪರೂಪವಾಗಿದ್ದವು. […]
ಮುಂಗಾರು ಮಳೆ ಮತ್ತು ಗಾಳಿಪಟ:ವಾಸುಕಿ ರಾಘವನ್ ಅಂಕಣ
ಯೋಗರಾಜ್ ಭಟ್ಟರ ಚಿತ್ರಗಳ ಬಗೆಗಿನ ಚರ್ಚೆಗಳು ಯಾವಾಗಲೂ ಸ್ವಾರಸ್ಯಕರವಾಗಿರುತ್ತವೆ. “ಭಟ್ರು ಏನ್ ಸೂಪರ್ ಆಗಿ ಹಾಡುಗಳನ್ನ ಡೈಲಾಗುಗಳನ್ನ ಬರೀತಾರೆ ಗುರೂ, ಸಕ್ಕತ್ತು ತಮಾಷೆಯಾಗಿ ಇರುತ್ತಪ್ಪಾ” ಅನ್ನುವುದರಿಂದ ಹಿಡಿದು “ಭಟ್ರು ಪಿಚ್ಚರಲ್ಲಿ ಅದೇ ಬೇಜವಾಬ್ದಾರಿ ಉಡಾಫೆ ಹೀರೋ, ಸುಮ್ನೆ ಉದ್ದುದ್ದ ಡೈಲಾಗ್ ಹೊಡ್ಕೊಂಡು ಅಲೀತಾ ಇರ್ತಾರಪ್ಪ ಅಷ್ಟೇ, ಛೇ ಅವ್ರು ಬೇರೆ ಥರ ಯಾವುದಾದರೂ ಫಿಲಂ ಮಾಡ್ಬೇಕಪ್ಪಾ” ಅನ್ನುವವರೆಗೂ ಅಭಿಪ್ರಾಯಗಳು ಕೇಳಿಬರುತ್ತವೆ! “ಭಟ್ಟರ ಬೆಸ್ಟ್ ಫಿಲಂ ಯಾವುದು?” […]