ಆಕೆಯ ಮುಖದಲ್ಲಿದ್ದ ಸಂಭ್ರಮ ಮನಸಲಿಲ್ಲ. ಮನಸಿನ ವೇದನೆಯ ಕಹಿ ಘಟನೆಗಳ ಅರಿಯುವರಾರಿಲ್ಲ, ದಾರಿಯುದ್ದಕ್ಕೂ ಮುಳ್ಳುಗಳ ರಾಶಿ, ಹತ್ತಿರ ಹೋದಷ್ಟು ಸಂಬಂಧಗಳು ದೂರ. ಆದರೆ ಆಕೆಯ ಮುಖದಲ್ಲಿ ಇದ್ಯಾವುದರ ಪರಿವಿಲ್ಲದಂತೆ ನರ್ತಿಸುವ ಪಂಚೇಂದ್ರಿಯಗಳು, ಮನಸ್ಸಿನ ನೋವು ಮನಸಿರುವವರಿಗೆ ಮಾತ್ರ ತಿಳಿಯುವುದು. ಒಂಟಿಯಾದಷ್ಟು ಕಷ್ಟ-ನೋವುಗಳ ಸುರಿಮಳೆ ಗುಡುಗು-ಮಿಂಚಂತೆ ಆಗಾಗ ಬಂದು ಹೋಗುತ್ತಿವೆ. ಜೀವ ಕಳೆದುಕೊಳ್ಳಲು ಮುಂದಾಗದ ಮನಸ್ಸು, ಜೀವನ ಸಾಗಿಸಲು ಸಂಬಂಧವಿದ್ದರೂ ಇಲ್ಲದಂತಾದ ಸಂಸಾರ. ಬದುಕಿನ ಜಂಜಾಟಗಳ ಸುಳಿಯಲ್ಲಿ ಸಿಕ್ಕು ಬಲಿಯಾಗುತ್ತಿರುವ ಆಕೆಯ ನೋವುಗಳನ್ನು ಅರಿಯುವರಾರು. ಸದಾ ಏನನ್ನೋ ಕಳೆದುಕೊಂಡಂತೆ […]