ಚಕ್ರ: ಡಾ. ಗವಿಸ್ವಾಮಿ
''ತಾಯವ್ವಾ'' ''ಇನ್ನೂ ಆಗಿಲ್ಲ ಕ ನಿಂಗಿ .. ತಿರ್ಗಾಡ್ಕಂಡ್ ಬಾ ಹೋಗು'' ''ಆಗಿದ್ದದೇನೋ ಅಂದ್ಕಂಡು ಕೇಳ್ದಿ ಕನ್ನೆವ್ವಾ … ಇಲ್ಲೇ ಕೂತಿರ್ತಿನಿ ತಕ್ಕಳಿ'' ಒಳಗೆ ಪೇಪರ್ ಒದುತ್ತಾ ಕೂತಿದ್ದವನು ನಿಂಗಿಯ ಸದ್ದು ಕೇಳಿ ಆಚೆ ಬಂದೆ. ಆವತ್ತು ಗೌರಿ ಹಬ್ಬ. ಹಬ್ಬಹರಿದಿನಗಳಂದು ಹೊಲಗೇರಿಯ ನಿಂಗಿ ನಮ್ಮ ಕೇರಿಯ ಮನೆಗಳಿಗೆ ಬಂದು ಊಟ ತಿಂಡಿ ಹಾಕಿಸಿಕೊಂಡು ಹೋಗುವುದು ಮಾಮೂಲು. ಆವತ್ತು ಎಂದಿನಂತೆ ಅದೇ ಹಳೆಯ ಬಿದಿರಿನ ಪುಟ್ಟಿಯೊಂದಿಗೆ ಪಡಸಾಲೆಯ ಕೆಳಗಿನ ಮೆಟ್ಟಿಲುಗಳ ಮೇಲೆ ಕೂತಿದ್ದಳು. ಚಪ್ಪಲಿಗಳನ್ನು ಅಡ್ಡಾದಿಡ್ಡಿಯಾಗಿ ಬಿಟ್ಟಿದ್ದರಿಂದ … Read more