ಒಮ್ಮೊಮ್ಮೆ.. ಜಾಗೃತಾವಸ್ಥೆಯೊಂದು ರಾಜ್ಯ, ನಂಬಿಕೆಯ ನಿರಂಕುಶಪ್ರಭುತ್ವ. ಅನಭಿಷಿಕ್ತ ದೊರೆ, ಸರಾಗ ಆಳ್ವಿಕೆ. ಎಲ್ಲೋ ಒಮ್ಮೊಮ್ಮೆ ಪರಿಸ್ಥಿತಿ ದಂಗೇಳುತ್ತವೆ, ಪಟ್ಟ ಅಲ್ಲಾಡುತದೆ, ಕಿರೀಟವುರುಳಿ ಮೀಸೆ ಮಣ್ಣುಮುಕ್ಕಾಗಿ…. ಹೊರಗಿಷ್ಟೆಲ್ಲ ಆದರೂ ಒಳಸುಳಿಯಲೆಲ್ಲೋ ಅದೇ ರಾಜನುಳಿಯುತಾನೆ, ಅಹಿತಕಾಲದ ಹೆಜ್ಜೆಗೆ ಯತ್ನದ ಗೆಜ್ಜೆ ತೊಡಿಸುತಲೇ ಸಕಾಲ ಪ್ರಕಟನಾಗುತ್ತಾನೆ. ಸ್ವಪ್ನಸಾಮ್ರಾಜ್ಯದಲೆಲ್ಲ ಬುಡಮೇಲು ತಟ್ಟೆಯ ಕಾಳು ಬಿಟ್ಟು ಭ್ರಮನಿರಸನದ ಗೊಬ್ಬರಗುಂಡಿಯಲಿ ಅಪನಂಬಿಕೆಯ ಹುಳಕೆ ಕೆದಕುವ ಕೋಳಿಕನಸ ರಾಜ್ಯಭಾರ. ಒಮ್ಮೊಮ್ಮೆ ಸಂತೃಪ್ತ, ಒಮ್ಮೊಮ್ಮೆ ಅಲ್ಲ. ಭಯಸಂಶಯ ಕೆಡುಕೆದುರು ನೋಡುತಾವೆ ಚಂದ್ರನೂ ಸೂರ್ಯನಂತುರಿಯುತಾ, ತಾರೆಸಾಲು ಮಿಂಚೆರಗಿದಂತೆರಗುತಾ, […]