ವಿಜ್ಞಾನ-ಪರಿಸರ

ಮಾರ್ಚ್ ತಿಂಗಳು, ವಿಶ್ವ ಅರಣ್ಯ ಮತ್ತು ಜಲ ದಿನ: ಅಖಿಲೇಶ್ ಚಿಪ್ಪಳಿ

ಮಾರ್ಚ್ ತಿಂಗಳೆಂದರೆ ಹಣಕಾಸಿನ ವರ್ಷ ಮುಗಿಯುವ ತಿಂಗಳು. ಭೂಮಿಯ ಮೇಲೆ ಬದುಕುವ ಎಲ್ಲಾ ಜನರು ಹಣದ ಮೇಲೆ ಅವಲಂಬಿತರಾಗಿದ್ದಾರೆ. ಯಾವ ಬ್ಯಾಂಕಿಗೆ ಹೋದರು ಎಲ್ಲರೂ ಬ್ಯುಸಿ ಮತ್ತು ಬಿಸಿ. ಲೆಕ್ಕಪರಿಶೋಧಕರಿಗೆ ಕೈತುಂಬಾ ಕೆಲಸ. ಸರ್ಕಾರದ ಛಪ್ಪನ್ನಾರು ಇಲಾಖೆಗಳು ಮಾರ್ಚ್ ಕೊನೆಯ ಹಂತದಲ್ಲಿ ಬ್ಯುಸಿ ತನ್ಮಧ್ಯೆ ಚುನಾವಣೆಯ ಕಾವು ವಾತಾವರಣದ ಕಾವು ಸೇರಿ ಜನಜೀವನ ಅಸ್ತ್ಯವಸ್ತವಾಗಿದೆ. ಮಾರ್ಚ್ ತಿಂಗಳಲ್ಲೇ ಕುಡಿಯುವ ನೀರಿನ ಸಮಸ್ಯೆ ದುತ್ತೆಂದು ಉದ್ಬವಿಸಿದೆ. ಮಾರ್ಚ್ ತಿಂಗಳ 21ನೇ ತಾರೀಖು ವಿಶ್ವ ಅರಣ್ಯ ದಿನ. ಈ ತಿಂಗಳಲ್ಲಿ […]

ವಿಜ್ಞಾನ-ಪರಿಸರ

ನರಭಕ್ಷಕ ವ್ಯಾಘ್ರ ವರ್ಸಸ್ ವ್ಯಾಘ್ರಭಕ್ಷಕ ನರ: ಅಖಿಲೇಶ್ ಚಿಪ್ಪಳಿ ಅಂಕಣ

ದಿನಾಂಕ:02/12/2013ರ ಒಂದು ರಾಜ್ಯಮಟ್ಟದ ಕನ್ನಡ ದಿನಪತ್ರಿಕೆ ಮುಖಪುಟದಲ್ಲಿ “ನರಭಕ್ಷಕ ವ್ಯಾಘ್ರಕ್ಕೆ ಗುಂಡಿಕ್ಕಿ: ಉಲ್ಲಾಸ ಕಾರಂತ” ಹೇಳಿಕೆಯಿತ್ತು. ವನ್ಯಜೀವಿ ಮತ್ತು ಹುಲಿಸಂರಕ್ಷಣೆಯ ಕ್ಷೇತ್ರದಲ್ಲಿ ಉಲ್ಲಾಸರದ್ದು ದೊಡ್ಡ ಹೆಸರು. ಕಡಲತೀರದ ಭಾರ್ಗವ ದಿ.ಶಿವರಾಮ ಕಾರಂತರ ಪುತ್ರರೂ ಆದ ಉಲ್ಲಾಸ ಕಾರಂತರ ಈ ಹೇಳಿಕೆ ಒಂದು ಕ್ಷಣ ದಿಗ್ಭ್ರಮೆ ಮೂಡಿಸಿತು. ಗಾಯಗೊಂಡ ಅಥವಾ ವಯಸ್ಸಾದ ಹುಲಿಗಳು ಸಾಮಾನ್ಯವಾಗಿ ನರಭಕ್ಷರವಾಗಿ ರೂಪುಗೊಳ್ಳುವುದು ಸಹಜ. ಇಡೀ ಘಟನೆಯನ್ನು ಮಾನವ ಹಕ್ಕು ಮತ್ತು ಪ್ರಾಣಿಗಳ ಹಕ್ಕು ಎಂಬಡಿಯಲ್ಲಿ ನೋಡಿದಾಗ, ಕಾರಂತರ ಗುಂಡಿಕ್ಕಿ ಹೇಳಿಕೆ ಮಾನವ ಪಕ್ಷಪಾತಿಯಾಗಿ […]

ವಿಜ್ಞಾನ-ಪರಿಸರ

ಕಂಬಳಿಹುಳದ ಕತೆ: ಅಖಿಲೇಶ್ ಚಿಪ್ಪಳಿ ಅಂಕಣ

  ಚಿಕ್ಕವನಿದ್ದಾಗ ಎಂದು ಹೇಳಬಹುದು. ಹಲವು ಘಟನೆಗಳು ಕಾಲಾನುಕ್ರಮದಲ್ಲಿ ಮರೆತು ಹೋಗುತ್ತವೆ. ಕೆಲವು ಘಟನೆಗಳು ಮರೆತು ಬಿಡಬೇಕೆಂದರು ಮರೆಯಲಾಗುವುದಿಲ್ಲ. ನಮ್ಮದು ಆವಾಗ ಜೋಡು ಕುಟುಂಬ. ೧೮ ಅಂಕಣದ ಸೋಗೆ ಮನೆಯಲ್ಲಿ ಎಲ್ಲಾ ಒಟ್ಟು ಸೇರಿ ಹತ್ತಾರು ತಿನ್ನುವ ಬಾಯಿಗಳು. ಪ್ರತಿವರ್ಷ ಇಡೀ ಮನೆಯ ಸೋಗೆಯನ್ನು ಬದಲಾಯಿಸಿ ಹೊಸದನ್ನು ಹೊದಿಸಬೇಕು. ಅದೊಂದು ವಾರದ ಕಾರ್ಯಕ್ರಮ. ಹತ್ತಾರು ಆಳು-ಕಾಳುಗಳು ಅವರಿಗೆ ಊಟ-ತಿಂಡಿ, ಬೆಲ್ಲದ ಕಾಫಿ ಇತ್ಯಾದಿಗಳು. ಅದಿರಲಿ ಈಗ ಹೇಳ ಹೊರಟಿರುವ ಕತೆಗೆ ಹಿಂದಿನ ವಾಕ್ಯಗಳು ಪೂರಕವಷ್ಟೆ. ವರ್ಷದಲ್ಲೊಂದು ಬಾರಿ […]

ವಿಜ್ಞಾನ-ಪರಿಸರ

ಆಲ್ ನ್ಯಾಚುರಲ್ ಎಂಬ ಮರಾಮೋಸ:ಅಖಿಲೇಶ್ ಚಿಪ್ಪಳಿ ಅಂಕಣ

  ಮನುಷ್ಯನ ಬುದ್ಧಿ ಒಂದೊಂದು ಬಾರಿ ಪೂರ್ವಜನುಮದ ಸ್ಮರಣೆಗೆ ಹೋಗುತ್ತದೆ. ಕೋತಿ ಬುದ್ಧಿ. ಮೊನ್ನೆ ನಮ್ಮ ಹಿರಿಯ ಸ್ನೇಹಿತರೊಬ್ಬರು ಬೆಂಗಳೂರಿಗೆ ಹೋಗಿದ್ದರು. ಈಶಾನ್ಯ ಭಾಗದಿಂದ ಬಂದ ಒಂದಿಷ್ಟು ಜನ ಬಿದಿರಿನಿಂದ ಮಾಡಿದ ಅಲಂಕಾರಿಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದರು. ಇದೇನು ಹೊಸ ವಿಷಯವಲ್ಲ. ಗುಡಿ ಕೈಗಾರಿಕೆಗಳಲ್ಲಿ ತಯಾರಿಸಿದ ವಸ್ತುಗಳನ್ನು ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲೂ ಮಾರಾಟ ಮಾಡುತ್ತಾರೆ. ರಸ್ತೆ ಬದಿಗಳಲ್ಲಿ ಗಿಡಮೂಲಿಕೆ ಔಷಧಗಳನ್ನು ಮೈಕಿನಲ್ಲಿ ಕೂಗುತ್ತಾ ಮಾರಾಟ ಮಾಡುವ ಜನ ಆಗಾಗ ಕಾಣ ಸಿಗುತ್ತಾರೆ. ಇವರು ಕೊಡುವ ಮೂಲಿಕೆಗಳಿಂದ ಎಲ್ಲಾ […]

ವಿಜ್ಞಾನ-ಪರಿಸರ

ಬಾಲ್ಯ ವಿವಾಹವೆಂಬ ಪಿಡುಗು:ಅಖಿಲೇಶ್ ಚಿಪ್ಪಳಿ ಅಂಕಣ

 [ನವಂಬರ್ ೧೪ ಮಕ್ಕಳ ದಿನಾಚರಣೆ. ಸ್ವತಂತ್ರ ಲಭಿಸಿ ೬೬ ವರ್ಷಗಳು ಸಂದರೂ ಭಾರತದಲ್ಲಿ ಹಾಗೂ ವಿಶ್ವದಲ್ಲಿ ಅವಧಿಪೂರ್ವ ವಿವಾಹಗಳು ನಡೆಯುತ್ತವೆ. ಮಕ್ಕಳನ್ನು ಮಧುಮಕ್ಕಳನ್ನಾಗಿ ಮಾಡಿ ಅವರ ಜೀವನವನ್ನು ದುರ್ಭರ ಮಾಡುವ ಪದ್ಧತಿಯಿದೆ. ಸರ್ವರಿಗೂ ಸಮಾನ ಶಿಕ್ಷಣ ಲಭಿಸಿದಾಗ ಈ ಅನಿಷ್ಟ ಪದ್ಧತಿ ನಿಲ್ಲಬಹುದು ಎಂಬ ಆಶಾಭಾವನೆಯೊಂದಿಗೆ ಮಕ್ಕಳ ದಿನಾಚರಣೆ ನಿಮಿತ್ತ ಈ ಲೇಖನ]       ಬಾಲ್ಯ ಎಂಬುದು ಪ್ರತಿಯೊಬ್ಬರ ಜೀವನದಲ್ಲಿ ಅತ್ಯಂತ ಸುಂದರವಾದ, ಮಧುರವಾದ ಕ್ಷಣಗಳು. ಬಾಲ್ಯವೆಂಬುದು ಪ್ರಕೃತಿಯ ಪ್ರತಿಯೊಂದನ್ನು ಅಚ್ಚರಿಯಿಂದ ಗಮನಿಸುವ ಹಂತ, […]

ಪಂಜು-ವಿಶೇಷ

ನಂಬಿಕೆ, ಮೂಢನಂಬಿಕೆ: ಅಖಿಲೇಶ್ ಚಿಪ್ಪಳಿ ಅಂಕಣ

ಹೊಸದಾಗಿ ಮದುವೆಯಾಗಿದ್ದ ದಂಪತಿಗಳು ಸಿನಿಮಾ ನೋಡಲು ಹೋಗಿದ್ದರು. ಅದೇನಾಯಿತೋ ಗೊತ್ತಿಲ್ಲ ಹೆಂಡತಿಗೆ ವಿಪರೀತ ತಲೆನೋವು ಶುರುವಾಯಿತು. ಗಂಡನಿಗೆ ಏನು ಮಾಡುವುದು ತಲೆ ಓಡಲಿಲ್ಲ. ಅಷ್ಟರಲ್ಲಿ ಪರಿಚಿತ ಡಾಕ್ಟರು ಅದೇ ಸಿನೆಮಾ ನೋಡಲು ಬಂದ್ದಿದ್ದರು. ಗಂಡ ಹೋಗಿ ಸಂಕೋಚದಿಂದ ಡಾಕ್ಟರಲ್ಲಿ ಅವಲತ್ತುಕೊಂಡ. ಡಾಕ್ಟರ್ ಬುದ್ಧಿವಂತನಿದ್ದ, ಥಿಯೇಟರ್‌ನ ಒಳಗಡೆ ಕತ್ತಲಿತ್ತು, ಗಂಡನಿಗೆ ಗೊತ್ತಾಗದ ಹಾಗೆ ತನ್ನದೆ ಕೋಟಿನ ಒಂದು ಗುಂಡಿಯನ್ನು ಕಿತ್ತು, ಈ ಮಾತ್ರೆಯನ್ನು ಬಾಯಲಿಟ್ಟುಕೊಳ್ಳಲು ಸಲಹೆ ಮಾಡಿದರು. ಹತ್ತು ನಿಮಿಷದಲ್ಲಿ ತಲೆನೋವು ಮಾಯ. ಗಂಡ-ಹೆಂಡತಿ ಸಿನಿಮಾವನ್ನು ಎಂಜಾಯ್ ಮಾಡಿದರು […]