ಅವಲಕ್ಕಿ ಎಂಬ ಮಹಾ ಪುರಾಣ: ಡಾ. ವೃಂದಾ ಸಂಗಮ್
ಅವಲಕ್ಕಿಗೆ ಒಂದು ಪುರಾಣ ಅದ. ಅದು ಭವಿಷ್ಯೋತ್ತರ ಪುರಾಣದೊಳಗ ಬರತದ. ನಾವೆಲ್ಲ, ಅವಲಕ್ಕಿ ಪವಲಕ್ಕಿ ಕಾಂಚಣ ಮಿಣಮಿಣ ಎಂಬ ಹಾಡನ್ನ ಮಕ್ಕಳಿದ್ದಾಗಲೇ ಹಾಡತಿದ್ವಿ. ಈಗೀಗ, ಅದಕ್ಕೂ ರಾಮಾಯಣಕ್ಕೂ ನಂಟು ಜೋಡಿಸಿದ್ದೂ ಕೇಳತೇವಿ. ಆದರ, ಅವಲಕ್ಕಿ ಪ್ರಾಚೀನತೆ ಬರೋದು ಮಹಾಭಾರತದಾಗ. ಮತ್ತ ಮುಂದ ಭಾಗವತ ಪುರಾಣದಾಗ, ಅಲ್ಲದ ಹರಿವಂಶದಾಗ. ಊಟಂದ್ರ ಊಟ ಅಲ್ಲ, ತಿಂಡಿ ಅಂದ್ರ ತಿಂಡಿ ಅಲ್ಲ, ಊಟನೂ ಹೌದು, ತಿಂಡಿನೂ ಹೌದು, ಬಹುರೂಪಿ, ನಾನ್ಯಾರು. ಅಂತ ಯಾರರೇ ಕೇಳಿದರ ಅದು ಅವಲಕ್ಕಿ ಅಂತ ಎಲ್ಲಾರಿಗೂ ಗೊತ್ತು. … Read more