ಅಬ್ಬಾ, ೪ ತಿಂಗಳು!! ಇಷ್ಟು ಸಮಯ ಒಟ್ಟಿಗೆ ಮನೆಯಲ್ಲಿ ಇದ್ದದ್ದು ನೆನಪಿಲ್ಲ. ಮೊದಲ ಸಲ ಮಾರ್ಚ್ ೨೪ರಿಂದ ಎಲ್ಲಾ ಲಾಕ್ ಎಂದು ಘೋಷಿಸಿದಾಗ ಮೊದಲು ಅನಿಸಿದ್ದು ” ಅಯ್ಯೊ, ಕೆಲಸದವಳು ಇಲ್ಲವಲ್ಲ, ಹೇಗೆ ನಿಭಾಯಿಸುವುದು” ಎಂದು. ಎಲ್ಲರೂ ಕೋವಿಡ್, ಕೋವಿಡ್ ಎಂದು ಕೂಗಾಡುತ್ತಿದ್ದರೂ ಅಷ್ಟೇನು ಭಯವಿರಲಿಲ್ಲ. ಶಾಲಾ, ಕಾಲೇಜು ರಜೆ ಎಂದಾಗ ಮನಸ್ಸು ಸ್ವಲ್ಪ ಸೀರಿಯಸ್ ಆಗಿದ್ದು ನಿಜ. ಬೆಳಗ್ಗೆ ಎದ್ದ ತಕ್ಷಣ ಶುರುವಾದ ಕೆಲಸಗಳು ಮುಗಿಯುತ್ತಲೇ ಇಲ್ಲ, ಪಾತ್ರೆಗಳು ಸಿಂಕ್ ಅಲ್ಲಿ ಕರಗುತ್ತಲೇ ಇಲ್ಲ! ಮನೆಯ […]
ಸಹನಾ ಪ್ರಸಾದ್ ಅಂಕಣ
ಗುಂಪುಗಳಲ್ಲಿ “ಗುಂಪುಗಾರಿಕೆ”: ಸಹನಾ ಪ್ರಸಾದ್
ಯಾವ ಗುಂಪುಗಳ ಬಗ್ಗೆ ಮಾತನಾಡುತ್ತಿದ್ದೇನೆ, ಅಂದಿರಾ? ನಮ್ಮ ದೇಶದಲ್ಲಿ ಹೇರಳವಾಗಿ ಸಿಗುವ ಜಾತಿ, ಮತ, ಭಾಷೆ, ಜನಾಂಗ, ವ್ಯಕ್ತಿಗಳ ಪರ, ವಿರೋಧಗಳ ಗುಂಪಲ್ಲ, ಮಾರ್ರೆ. ನಾ ಹೇಳ್ತಾ ಇರೋದು ಈ ಮುಖಪುಟ, ವಾಟ್ಸಾಪ್, ಇನ್ಸ್ಟಾ, ಟೆಲಿಗ್ರಾಮ್ ಇತ್ಯಾದಿಗಳಲ್ಲಿ ಕಾಣ ಸಿಗುವ ” ಗ್ರೂಪ್” ಗಳು. ಊಟ, ಸೀರೆ, ಸಾಹಿತ್ಯ, ಅಡುಗೆ, ಭಾಷೆ, ಪಂಗಡ… ಯಾವುದು ಬೇಕು ಹೇಳಿ? ಎಲ್ಲ ರೀತಿಯ ಗುಂಪುಗಳೂ ನಿಮಗೆ ಕಾಣ ಸಿಗುತ್ತವೆ. ಗಣತಿಯ ಪ್ರಕಾರ ೬೨೦ಮಿಲ್ಲಿಯನ್ ಗ್ರೂಪುಗಳು ಇವೆಯಂತೆ ಬರೀ ಮುಖಪುಟದಲ್ಲಿ! ಇವುಗಳ […]
ವಿದಾಯ- ಸಾಧ್ಯವೇ?: ಸಹನಾ ಪ್ರಸಾದ್
ಕಳೆದ ವಾರದಲ್ಲಿ ಚಿಕ್ಕ ವಯಸ್ಸಿನ ವ್ಯಕ್ತಿಗಳ ಸಾವು ನಮ್ಮನ್ನು ನೋಯಿಸಿದೆ. ವಯಸ್ಸಾದವರು ಹೋದರೆ ಮನಸ್ಸಿಗೆ ದುಃಖವಾದರೂ ಸಮಾಧಾನ ಮಾಡಿಕೊಳ್ಳಬಹುದು ” ಹೋಗಲಿ ಬಿಡು, ಬದುಕು ಕಂಡಿದ್ದರು, ಅದರ ಸಿಹಿ, ಕಹಿ ಉಂಡಿದ್ದರು. ಅವರ ಆಯುಸ್ಸು ಮುಗಿದಿತ್ತು. ಭಗವಂತ ಕರೆದುಕೊಂಡ” ಎಂದು. ಚಿಕ್ಕವರಾದರೆ ಮುಮ್ಮಲ ಮರುಗುವುದನ್ನು ಬಿಟ್ಟು ಬೇರೆನೂ ಮಾಡಲಾಗುವುದಿಲ್ಲ. ವಿದಾಯ ಹೇಳುವುದು ಕಷ್ಟ ಎಂಬುದರಲ್ಲಿ ದೂಸರಾ ಮಾತಿಲ್ಲ. ಅತ್ಯಂತ ಕಷ್ಟಕರವಾದ ಪದಗಳಲ್ಲಿ ಮೊದಲ ಬಾರಿಗೆ “ಹಲ್ಲೊ” ಎನ್ನುವುದು, ಕೊನೆಯ ಬಾರಿಗೆ ” ಬೈ” ಎನ್ನುವುದು ಎನಲಾಗಿದೆ. ಹಲ್ಲೊ […]
ವಿಷಾದ- ೩: ಸಹನಾ ಪ್ರಸಾದ್
ಚಿಕ್ಕವರಾದಾಗ ನಮ್ಮ ವಿಷಾದಗಳು ಕಡಿಮೆ. ಸಹಜವಾಗಿ. ಇನ್ನು ಬದುಕು ಬಹಳಷ್ಟು ಇದೆ, ಆದ ತಪ್ಪುಗಳನ್ನು ತಿದ್ದಿಕೊಳ್ಳುವ ಅವಕಾಶಗಳಿವೆ, ಮುಂದೆ ನಮ್ಮ ಕನಸುಗಳನ್ನು ಸಾಕಾರಗೊಳಿಸಲು ಬಹಳಷ್ಟು ಅವಕಾಶಗಳಿವೆ ಎಂದಾಗ ಮನಸ್ಸು ವಿಷಾದದೆಡೆ ಜಾರುವುದಿಲ್ಲ. ಹಾ, ಕೆಲವೊಮ್ಮೆ ನಮ್ಮ ವೃತ್ತಿಯಲ್ಲಿ ಅಥವಾ ನಮ್ಮ ವೈಯಕ್ತಿಕ ಜೀವನದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಜೀವನವಿಡೀ ನಮ್ಮನ್ನು ವಿಷಾದಕ್ಕೆ ದೂಡಬಲ್ಲದು. ಪೂರ್ತಿ ಅಳಿಸಲಾಗದಿದ್ದರೂ ಕಡಿಮೆ ಮಾಡಿಕೊಳ್ಳುವುದಕ್ಕೆ ತಜ್ಞರು ಕೆಲವು ಸಲಹೆಗಳು ನೀಡುತ್ತಾರೆ. “ಆಲಿಸ್ ಇನ್ ವಂಡರ್ಲ್ಯಾಂಡ್” ಎಲ್ಲರೂ ಚಿಕ್ಕ ವಯಸ್ಸಿನಲ್ಲಿ ಖಂಡಿತ ಓದಿರುತ್ತೀವಿ. “ಎಲ್ಲಿಗೆ ಹೋಗಬೇಕು, […]
ಲಾಕ್ಡೌನ್, ಬೇರೆಬೇರೆ ದೃಷ್ಟಿಕೋನಗಳಿಂದ: ಸಹನಾ ಪ್ರಸಾದ್
ಸೀನ್ ೧: ಸೀತೆ: ಏನ್ರೀ ಇದು, ಎಷ್ಟು ಸಲ ಹೇಳಬೇಕು ನಿಮಗೆ. ಒದ್ದೆ ಟವೆಲು ಮಂಚದ ಮೇಲೆ ಹಾಕಬೇಡಿ ಅಂತ. ಒಗೆಯೊ ಬಟ್ಟೆ ವಾಶಿಂಗ್ ಮಶೀನಿಗೆ ಹಾಕಿ, ನೆಲದ ಮೇಲೆ ಬಿಸಾಡಬೇಡಿ. ಅಬ್ಬಾ, ಹೇಳಿ ಹೇಳಿ ಸುಸ್ತಾಯ್ತು! ರವಿ: ಅಯ್ಯೊ, ಹೋಗೆ. ಮದುವೆ ಆಗಿ ೧೫ ವರುಷ ಆದ್ರೂ ಅದೇ ರಾಗ ಹಾಡ್ತೀಯಲ್ಲ. ಹೊಸದೇನೂ ಸಿಗಲಿಲ್ಲವಾ? ಸೀ: ಅಲ್ಲ ರೀ, ಇಷ್ಟು ವರುಷ ಆದ್ರೂ ನೀವು ಬದಲಾಗಿಲ್ಲವಲ್ಲ. ಅದೇ ತಪ್ಪುಗಳು ಮಾಡ್ತಾ ಇದ್ರೆ ನಾ ಅದನ್ನೇ ಹೇಳಬೇಕಾಗುತ್ತೆ […]
ವಿಷಾದ-೨: ಬದುಕಿನ ಕನಸುಗಳಲ್ಲಿ ವಿಷಾದ: ಸಹನಾ ಪ್ರಸಾದ್
ಕಳೆದ ಲೇಖನದಲ್ಲಿ ವಿಷಾದ, ರಿಗ್ರೆಟ್ ಮ್ಯಾಟ್ರಿಕ್ಸ್ ಬಗ್ಗೆ ಚರ್ಚೆ ನಡೆಯಿತು. ಅಲ್ಲಿ ನಮ್ಮ ಸಂಬಂಧಗಳಲ್ಲಿ ವಿಷಾದದ ಕುರಿತು ಮಾತಾಯಿತು. ಸಂಬಂಧಗಳು ಬೇರೆಯವರ ಮೇಲೆ ಸಾಕಷ್ಟು ನಿರ್ಭರವಾಗಿರುತ್ತೆ. ನಾವು ಸರಿ ಇದ್ದರೂ ಅವರಿರದೆ ಇರಬಹುದು. ಇಲ್ಲಾ, ಇಬ್ಬರೂ ಸರಿ ಇಲ್ಲದಿರಬಹುದು. ಅಥವಾ ಇಬ್ಬರೂ ಸರಿ ಇದ್ದರೂ ಪರಿಸ್ಥಿತಿ, ಸುತ್ತಮುತ್ತಲಿನ ಜನ ಸರಿ ಇಲ್ಲದಿರಬಹುದು. ಹೀಗೆ ಬಹಳಷ್ಟು ನಮ್ಮ ನಿಯಂತ್ರಣಕ್ಕೆ ಮೀರಿದ ಅಂಶಗಳು ಇದ್ದಾಗ ವಿಷಾದ ಹುಟ್ಟುವ ಸಾಧ್ಯತೆ ಹೆಚ್ಚು. ವೈಯಕ್ತಿಕ ಜೀವನಕ್ಕೆ ಬಂದಾಗ ವಿಷಾದ ಉಂಟು ಮಾಡುವ ಪರಿಸ್ಥಿತಿಗೆ […]
ವಿಷಾದ-೧ (ಸಂಬಂಧಗಳಲ್ಲಿ): ಸಹನಾ ಪ್ರಸಾದ್
ಮ್ಯಾನೇಜುಮೆಂಟಿನಲ್ಲಿ “ಅಪರೇಷನ್ಸ್ ರಿಸರ್ಚ್” ಎಂಬ ವಿಷಯವುಂಟು. ಮೂಲತಃ ಅದು ಗಣಿತ ಹಾಗೂ ಸಂಖ್ಯಾಶಾಸ್ತ್ರದಲ್ಲಿ ಒಂದು ವಿಭಾಗ. ಇರುವ ಸಮಯ, ಸಾಮಾಗ್ರಿ, ಸಂಪನ್ಮೂಲಗಳು ಅತ್ಯುತ್ತಮವಾಗಿ ಬಳಸಿಕೊಳ್ಳುವುದು ಹೇಗೆ? ಎಂಬುದು ಇದರ ತಿರುಳು. ಇದರಲ್ಲಿರುವ ಬಹಳಷ್ಟು ತತ್ವಗಳನ್ನು ನಾವು ನಿಜ ಜೀವನದಲ್ಲಿ ಅಳವಡಿಸಿಕೊಂಡರೆ ನಮ್ಮ ಬದುಕು ಗಮನಾರ್ಹವಾಗಿ ಸುಧಾರಿಸುತ್ತದೆ. ಇದನ್ನು ಅಳವಡಿಸಿಕೊಳ್ಳಲು ನಾವು ಗಣಿತ ಮತ್ತಿತರ ವಿಷಯಗಳಲ್ಲಿ ನಿಪುಣರಾಗಬೇಕೆಂದಿಲ್ಲ. ಸಾಮಾನ್ಯ ಮಟ್ಟದಲ್ಲಿ ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಲು ಸ್ವಲ್ಪ ವಿವೇಚನೆ, ಯೋಚನೆ, ವಿವೇಕ ಇರಬೇಕು ಅಷ್ಟೆ! ಇವತ್ತಿನ ಲೇಖನದ ವಿಷಯ ” […]
ಕರೋನ ಕರೋನ- ಮನೆಯಲ್ಲಿ ಇರೋಣ!: ಸಹನಾ ಪ್ರಸಾದ್
ಮಾಸ್ಕ್ ಗಳನ್ನು ಕರೊನ, ಕರೊನ ಅಂತ ಮಾರುತ್ತಿದ್ದ ವೀಡಿಯೊ ಎಲ್ಲರೂ ನೋಡಿದ್ದಾರೆ. ಕರೊನ ವಿರುದ್ಧ ಹೋರಾಡಲು ಬೇಕಾದ ಅವುಗಳನ್ನೇ ಕರೊನ ಎಂದು ಕರೆದು ಒಂದು ತಮಾಷೆಯ ನೋಟವಾಗಿಸಿದ ಅವನ ಮನಸ್ಸಲ್ಲಿ ಏನಿತ್ತೋ? ” ಅಬ್ಬಾ, ಈ ಮಕ್ಕಳಿಗೆ ರಜೆ ಕೊಟ್ಟುಬಿಟ್ಟರಲ್ಲಾ, ಇನ್ನು ೩ ತಿಂಗಳು ಇವರನ್ನು ಹಿಡಿದಿಟ್ಟುಕೊಳ್ಳುವುದು ಹೇಗಪ್ಪಾ? ಮ್ಯೂಸಿಕ್ ಕ್ಲಾಸ್ ಇಲ್ಲ, ಸ್ವಿಮ್ಮಿಂಗ್ ತರಗತಿಗಳಿಲ್ಲ, ಸಮ್ಮರ್ ಕ್ಯಾಂಪುಗಳು ರದ್ದು. ನೆನೆಸಿಕೊಂಡರೆ ಭಯ ಆಗುತ್ತೆ” ಇದು ಬಹಳಷ್ಟು ತಾಯಂದಿರ ಅಳುಕು. ಹೌದು. ಮಕ್ಕಳನ್ನು ಹಿಡಿದಿಟ್ಟುಕೊಳ್ಳುವುದು ಬಲು ಕಷ್ಟ. […]
ಶಾಲು, ಮಾಲು, ಕೆಲಸ, ಆರಾಮು!!: ಸಹನಾ ಪ್ರಸಾದ್
“ಕೆಲಸ, ಕೆಲಸ, ಕೆಲಸ, ಬರೀ ಇದೇ ಆಗೋಯ್ತಲ್ಲ ನಿಂದು” ಶಾಲುಗೆ ಮಾಲು ಬೈಯುತ್ತ ಇದ್ದಿದ್ದು ಪಕ್ಕದ ರೂಮಿನಲ್ಲಿದ್ದ ನನಗೆ ಸ್ಪಷ್ಟವಾಗಿ ಕೇಳುತ್ತಿತ್ತು. “ಇರೋದು ಒಂದು ಜೀವನ, ಎಂಜಾಯ್ ಮಾಡೋದು ಕಲಿತುಕೊ. ರಜೆ ತೊಗೋ, ಮಜಾ ಮಾಡು. ಅದು ಬಿಟ್ಟು…” ಅವಳ ವಾಕ್ ಪ್ರವಾಹ ನಡೀತಾನೆ ಇತ್ತು. ಇವಳು ಮಾತ್ರ ಮೌನ. ಮಧ್ಯಾಹ್ನ ಲಂಚ್ ಗೆ ಶಾಲು ಸಿಕ್ಕಿದಾಗ ಅವಳ ಮುಖದಲ್ಲಿ ಯಾವ ಆತಂಕವೂ ಕಂಡು ಬರಲಿಲ್ಲ. ಹಾಯಾಗಿ ತಂದಿದ್ದ ಊಟ ಮುಗಿಸಿ ಕಾಫಿ ಕುಡೀತಾ ಕುಳಿತ್ತಿದ್ದವಳನ್ನು ನೋಡಿ […]
ಸ್ನೇಹಿತೆ….ಪತ್ನಿ…ಗೆಳತಿ…ಮಡದಿ..: ಸಹನಾ ಪ್ರಸಾದ್
ಶೀರ್ಷಿಕೆ ವಿಚಿತ್ರವಾಗಿದೆ ಅಂದಿರಲ್ಲಾ? ಹೌದು, ಗೆಳತಿಯೊಬ್ಬಳು ಮಡದಿಯಾದ ಮೇಲೂ ಮತ್ತೆ ಸ್ನೇಹಿತೆಯಾಗಬಲ್ಲಳೇ? ಈಗಿನ ಯುವ ಪೀಡಿಗೆಯಲ್ಲಿ ಗಂಡ ಹೆಂಡಿರ ನಡುವೆ ಸಾಕಷ್ಟು ಸ್ನೇಹವಿರುತ್ತದೆ. ನಾ ಇತ್ತೀಚಿಗೆ ಕಂಡಿರುವ ಚಿಕ್ಕ ವಯಸ್ಸಿನ ದಂಪತಿಗಳಲ್ಲಿ, ನಮ್ಮ ಜ಼ಮಾನದಲ್ಲಿ ಇದ್ದ ಕೆಲವು ಸಂಗತಿಗಳು ಕಾಣಸಿಗುವುದಿಲ್ಲ. ಅದೂ ನಗರಗಳಲ್ಲಿ. ಗಂಡನನ್ನು ” ನೀವು” ಅನ್ನುವುದು ಈ ಕಾಲದಲ್ಲಿ ಅಪರೂಪ. ಕೆಲಸಗಳನ್ನು ಇಬ್ಬರೂ ಸರಿ ಸಮಾನವಾಗಿ ಹಂಚಿಕೊಂಡು ಮಾಡುವುದೂ ಕೂಡ ಕಾಣಸಿಗುತ್ತದೆ. ಇಬ್ಬರೂ ಕೆಲಸಕ್ಕೆ ಹೋಗುವಾಗ ಇದು ಅತ್ಯಗತ್ಯ ಕೂಡ. ನಮ್ಮ ಕಾಲದ ” […]
ಮುಗಿಯಿತೇ ಜವಾಬ್ದಾರಿ??: ಸಹನಾ ಪ್ರಸಾದ್
ಅಯ್ಯೋ, ನಿಮಗೇನ್ರೀ, ಮಗಳ ಮದುವೆ ಆಯ್ತು, ಮಗ ಕೈಗೆ ಬಂದ. ಇನ್ನು ನಿಮ್ಗೆ ಯೋಚನೆ ಇಲ್ಲ. ಆರಾಮವಾಗಿ ಓಡಾಡಿಕೊಂಡಿರಬಹುದು. ಅಸೂಯೆ, ಮೆಚ್ಚುಗೆ ತುಂಬಿದ ಈ ತರಹದ ಮಾತುಗಳು ನನಗೆ, ಮಗಳ ಮದುವೆ ಮಾಡಿ ನಾ ಅತ್ತೆಯಾದ ಮೇಲೆ ಮಾಮೂಲಾಗಿಬಿಟ್ಟಿದೆ. ಹೌದಲ್ವಾ, ಜನ ಸಾಮಾನ್ಯರ ಕನಸಿನ ಪ್ರಕಾರ ಬದುಕು ಸಾಗಿದಾಗ ಜನ ಯೋಚಿಸೋದು ಸರೀನೆ. ಆದರೆ ಇಷ್ಟಕ್ಕೆ ಹೆಣ್ಣುಮಕ್ಕಳ ಜವಾಬ್ದಾರಿ ಮುಗಿಯುತ್ತವೆಯೇ? ಹೆಣ್ಣು ಮಕ್ಕಳಿರಲಿ, ಗಂಡು ಮಕ್ಕಳಿಗೂ ಜವಾಬ್ದಾರಿ ಅನ್ನುವುದು ಮುಗೀತು, ಇನ್ನು ಮುಂದೆ ನಿರಾಳ ಅನ್ನುವುದು ಬಹಳ […]
ಸಾವು ಮತ್ತು ನಾವು: ಸಹನಾ ಪ್ರಸಾದ್
“ಅಯ್ಯೋ, ಪದ್ದಮ್ಮ ಹೋಗಿಬಿಟ್ರು ಕಣ್ರೀ, ರಾತ್ರಿ ಮಲಗಿದವರು ಬೆಳಗ್ಗೆ ಏಳಲೇ ಇಲ್ಲವಂತೆ. ಪಾಪ “ ಒಬ್ಬಾಕೆಯ ಉವಾಚ. ಮತ್ತೊಬ್ಬರದು ಜೋಡಣೆ. “ಸುಖವಾದ ಸಾವು, ಬಿಡ್ರೀ. ಎಷ್ಟು ಜನಕ್ಕೆ ಲಭ್ಯ, ಹೇಳಿ? ಒಂದು ದಿನ ನರಳಲಿಲ್ಲ, ಹಾಸಿಗೆ ಹಿಡಿಯಲಿಲ್ಲ. ಒಬ್ಬರ ಕೈಲಿ ಸೇವೆ ಮಾಡಿಸಿಕೊಳ್ಳಲಿಲ್ಲ. ಹೀಗೆ ಅಚಾನಕವಾಗಿ ಹೋಗೋದು ಪುಣ್ಯ ಅಲ್ಲದಿದ್ರೆ ಮತ್ತೇನು?” ಮಾತು ಒಬ್ಬರಿಂದ ಒಬ್ಬರಿಗೆ ದಾಟಿ ಅನೇಕ ಭಾವಗಳನ್ನು ತೋರಿ ಎಲ್ಲೋ ಒಂದು ಕಡೆ “ ಹೋಗಲಿ ಬಿಡಿ, ಅವರು ಪಡೆದುಕೊಂಡು ಬಂದಿದ್ದಷ್ಟೇ, ಭೂಮಿಯ ಋಣ […]
ಹೆಣ್ಣು ಮತ್ತು ಭಯ: ಸಹನಾ ಪ್ರಸಾದ್
ನಮ್ಮ ಜಮಾನಾದಲ್ಲಿ…ತಡೆಯಿರಿ, ನಾನು ಇನ್ನು ಬದುಕಿರುವುದರಿಂದ, ಇದೂ ನನ್ನ ಜಮಾನ! ಆಯ್ತು, ನಾ ೨೦ರ ಹೊಸಿಲಲ್ಲಿ ಇರುವಾಗ ಅಂದರೆ ೧೯೮೦ ರಲ್ಲಿ. ದೆಹಲಿಯಲ್ಲಿ ಅಪ್ಪನ ಕೆಲಸದ ನಿಮಿತ್ತ ವಾಸ. ಹೇಳಿ ಕೇಳಿ ನಾನು ಚಿಕ್ಕ, ತೀರ ಆಧುನಿಕವೂ ಅಲ್ಲದೆ, ತೀರ ಸಾಂಪ್ರದಾಯಿಕವೂ ಅಲ್ಲದ ಸಂಸಾರಕ್ಕೆ ಸೇರಿದವಳು. ದೆಹಲಿಯ ವಾತಾವರಣ, ಜನ, ಭಾಷೆ ನೋಡಿ ನಡುಗಿ ಹೋಗಿದ್ದಂತೂ ನಿಜ. ಎಲ್ಲದಕ್ಕಿಂತ ಆಘಾತ ಆಗಿದ್ದು ದೆಹಲಿಯ ಜನ. ಉತ್ತರದ ಅನೇಕ ರಾಜ್ಯಗಳಿಂದ ವಲಸೆ ಬಂದವರು ಇಲ್ಲಿ ಜಾಸ್ತಿ ಸಂಖ್ಯೆಯಲ್ಲಿ ಇದ್ದಿದ್ದರಿಂದ […]
ಎತ್ತ ಸಾಗುತ್ತಿದ್ದೇವೆ ನಾವು?: ಸಹನಾ ಪ್ರಸಾದ್
ಪ್ರತಿದಿನ ದೃಶ್ಯ ಮಾಧ್ಯಮಗಳಲ್ಲಿ, ಪತ್ರಿಕೆಗಳಲ್ಲಿ, ಜನರ ನುಡಿಗಳಲ್ಲಿ, ಹೆಂಗಸರ ಮೇಲೆ ದೌರ್ಜನ್ಯ, ಮಾನಭಂಗ ಇತ್ಯಾದಿಗಳ ಸುದ್ದಿ ಸರ್ವೇಸಾಮಾನ್ಯವಾಗಿಬಿಟ್ಟಿದೆ. ಸಮೀಕ್ಷೆಗಳ ಪ್ರಕಾರ, ನಮ್ಮ ಮೆದುಳು ಕೆಲವು ಶಬ್ಢಗಳು, ವಿಷಯಗಳನ್ನು ತಕ್ಷಣ ಗುರುತಿಸುತ್ತಂತೆ. ಆದುದರಿಂದಲೇ ಕೆಲವು ಮಾಧ್ಯಮಗಳಲ್ಲಿ ಸುದ್ದಿಗಳನ್ನು ಅತ್ಯಂತ ಆಸಕ್ತಿಯಿಂದ(!!) ರೋಚಕವಾಗಿ ಚಿತ್ರಿಸುತ್ತಾರೆ. ಅದರಲ್ಲಿ ಅವರ ಕಾಳಜಿ, ಕಳಕಳಿಗಿಂತ ಸುದ್ದಿಯನ್ನು ಜನರ ಮನಸ್ಸಿಗೆ ಹೊಡೆಯುವಂತೆ ಸೃಷ್ಟಿಸುವುದೇ ಉದ್ದೇಶ. ದೌರ್ಜನ್ಯದ ಘಟನೆಗಳು ನಡೆದಾಗ ನಮ್ಮ ಮನ ರೊಚ್ಚಿಗೇಳಬೇಕು, ಕಷ್ಟಪಡಬೇಕು. ಆಗ ಉಂಟಾದ ಹಿಂಸೆಯಿಂದ ನಮ್ಮ ಮನಸ್ಸಲ್ಲಿ ಒಂದು ನಿಲುಮೆ ಜನ್ಮತಾಳಬೇಕು. […]
ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ಎದುರಿಸುವುದು ಒಂದು ಕಲೆ!: ಸಹನಾ ಪ್ರಸಾದ್
” ಯಾಕ್ರೀ ಜಾನಕಿ, ಎಫ್ ಬಿ ಯಲ್ಲಿ ಕಾಣುತ್ತಾನೇ ಇಲ್ಲ, ಈಚೀಚಿಗೆ. ನಿಮ್ಮ ನಿಲುಮೆಗಳು, ಪಟಗಳು ಇಲ್ಲದೆ ಫ಼ೇಸ್ಬುಕ್ಕು ಸೊರಗಿದೆಯಲ್ಲಾ!” ನನ್ನ ಮಾಮೂಲಿ ಹಾಸ್ಯದ ಧಾಟಿಯಲ್ಲಿ ಕಾಲೆಳೆದಾಗ ಜಾನಕಿಯ ಪ್ರತಿಕ್ರಿಯೆ ಅನಿರೀಕ್ಷಿತವಾಗಿತ್ತು. ” ಈ ಮುಖಪುಟ ಒಂದೇ ಸಾಕು, ನಮ್ಮ ಮನಸ್ಸಿನ ನೆಮ್ಮದಿ ಹಾಳು ಮಾಡಕ್ಕೆ ಇಲ್ಲಿ ಜನರು ಬಹಳ ಭಯಂಕರ. ನನ್ನ ಮುಂದೆ ಒಂದು ರೀತಿ, ಬೆನ್ನ ಹಿಂದೆ ಮತ್ತೊಂದೇ ತರಹ. ಅಲ್ಲಿ ಕಾಮೆಂಟ್ ಹಾಕುವುದು ಬೇರೆ, ಇನ್ಬಾಕ್ಸಲ್ಲಿ ಬರೀ ದೂಷಣೆ, ಜಾನಕಿ ಹಾಗೆ, ಅವಳ […]
ಕಷ್ಟಕರವಾದ ಸಂಬಂಧಗಳು- ಏನು ಮಾಡುವುದು?: ಸಹನಾ ಪ್ರಸಾದ್
“ಅಯ್ಯೊ, ಇನ್ನೂ ಈ ಕೆಲಸದವಳ ಜತೆ ಹೆಣಗಾಡ್ತಾ ಇದೀಯ? ಇಷ್ಟು ಒದ್ದಾಡುತ್ತಾ ಇರೊ ಬದಲು ಬಿಡಿಸಿ ಬೇರೆಯವರನ್ನು ಇಟ್ಟುಕೊಳ್ಳಬಾರದಾ?” ಗೆಳತಿಯನ್ನು ತರಾಟೆಗೆ ತೆಗೆದುಕೊಂಡೆ. ಬಂದರೂ ನೂರು ಕುಂಟು ನೆಪ ತೆಗೆದು ಅರ್ಧಂಬರ್ಧ ಕೆಲಸ ಮಾಡಿ ಓಡಿಹೋಗುವುದು, ಸಣ್ಣಪುಟ್ಟ ಕಳ್ಳತನಗಳು, ಆಗಾಗ್ಗೆ ದುಡ್ಡು ಕೇಳುವುದು…ಇವಳ ಗುಣಗಾನ ಕೇಳಿ ನನಗೂ ತಲೆ ಚಿಟ್ಟು ಹಿಡಿದಿತ್ತು. ಈಗ ಸುಮಾರು ದಿನಗಳ ನಂತರ ಇವಳ ಮನೆಗೆ ಭೇಟಿ ಇತ್ತರೆ, ಮತ್ತೆ ಈ ಹೆಂಗಸು ಕಸ ಪರಿಕೆ ಹಿಡಿದಿದ್ದಾಳೆ. “ಏನಮ್ಮಾ, ನಿನ್ನ ಚಾಳಿ ಏನಾದರೂ […]