ಕಪ್ಪು ಮಣ್ಣಿನಲಿ ಹೂತಿಟ್ಟ ಕರುಣೆ: ಸಚೇತನ
ಬಂದೂಕಿನಿಂದ ಹೊರಟ ಕಾಡತೂಸು ಕೊಲ್ಲುವದು ಕೇವಲ ಗುರಿಯಾಗಿ ನಿಂತ ಮನುಷ್ಯನನ್ನು ಮಾತ್ರವಲ್ಲ, ಒಂದು ಜನಾಂಗದ ಬದುಕನ್ನು. ಸತ್ತವರು ಬೂದಿಯಾದರು ಬದುಕಿ ಉಳಿದವರು ಸತ್ತವರ ಪ್ರೇತಗಳಾಗುವರು. ಹಿಂಸೆ ಕೋಣೆಯೊಳಗೆ ಕಿಟಕಿಗಳಿಲ್ಲ, ಒಳ ಹೊಕ್ಕರೆ ಹೊರಬರಲು ಬಾಗಿಲುಗಳಿಲ್ಲ. "ನಿನ್ನ ಬಂದೂಕುಗಳನ್ನು ಗೌರವಿಸು, ಇವತ್ತಿನಿಂದ ಅವು ನಿನ್ನ ತಂದೆ ತಾಯಿ. " ಆಟದ ಬಂದೂಕಿನಲ್ಲಿ, ಆಟದ ವಯಸ್ಸಿನಲ್ಲಿನ ಮಕ್ಕಳನ್ನುದ್ದೇಶಿಸಿ ಹೇಳಲಾಗುತ್ತಿದೆ. ಆಫ್ರಿಕಾದ ಯಾವುದೋ ಮೂಲೆಯ ಹಳ್ಳಿಯೊಂದರ ಪುಟ್ಟ ಜೀವಗಳು ಥರಗುಟ್ಟುತ್ತ ಈ ಮಾತನ್ನು ಕೇಳುತ್ತಿವೆ. ಎದುರಿಗೆ ನಿಂತ, ಬಂದೂಕು ಹಿಡಿದ ವ್ಯಕ್ತಿಗಳ … Read more