Breakup ಆದಮೇಲೆ ಹುಡುಗರು: ಪ್ರಮೋದ ಶೇಖರ

ಹುಡುಗರು ಪ್ರೀತಿಯಲ್ಲಿ ಹುಚ್ಚರಂತೆ Behave ಮಾಡ್ತಾರೆ. ತುಂಬಾ ಜಾಸ್ತಿ ಪ್ರೀತಿಯಲ್ಲಿ ಮುಳುಗಿರುವ ಹುಡುಗರದಂತೂ ಬೇರೆನೇ ಲೋಕ. ಅವರ ನಡೆನುಡಿ ಅದರಲ್ಲೇನೂ ಮಜಾ ಇರುತ್ತದೆ. ಮುಖದಲ್ಲಿ ಸುಮ್ಮನೆ ನಗು ಮುಡುವುದು, ಚಿಕ್ಕ ವಿಷಯಗಳಿಗೇಲ್ಲ ಸಿಟ್ಟು ಮಾಡಿಕೊಳ್ಳೋದು, ಗಾಳಿಯಲ್ಲಿ ಚಿತ್ತಾರ ಬಿಡಿಸುವುದು ಅದರ ದೈನಂದಿನ ಕಾರ್ಯವಾಗಿರುತ್ತದೆ. ಕೆಲವರಿಗೆ ಒಳ್ಳೆಯ ಗುಣಗಳುಳ್ಳ ಹುಡುಗಿಯರು ಸಿಗುತ್ತಾರೆ, ಕೆಲವರಿಗೆ ಮುಗ್ಧ ಮನಸ್ಸಿನ ಹುಡುಗಿಯರು ಸಿಗುತ್ತಾರೆ, ಮತ್ತೆ ಕೆಲ ಹುಡುಗರಿಗೆ ಹಠ ಸಾಧಿಸುವ ಹುಡುಗಿಯರು ಗಂಟ್ಟು ಬೀಳುತ್ತಾರೆ. ಬೇರೆಬೇರೆ ಹುಡುಗಿರ ವಿಚಾರಗಳು Different ಆಗಿರುತ್ತವೆ, ಅವರು ಯೋಚಿಸೋ ರೀತಿ ಕೂಡಾ ಬೇರೆಯಾಗಿರುತ್ತದೆ.

ಎಲ್ಲಾ ಪ್ರೇಮ ಕಥೆಗಳು ಅಷ್ಟು Easy ಯಾಗಿ success ಪಡೆಯಲ್ಲ, ನಿಜವಾದ ಪ್ರೀತಿ ಇದ್ದಲ್ಲಿ ಜಗಳ ಸಹಜವಾಗಿಯೇ ಶುರುವಾಗುತ್ತದೆ. ಪ್ರೀತಿ ಮಾಡೋ ಪ್ರತಿ ಹುಡುಗ ಅಥವಾ ಹುಡುಗಿಯರು, ತಮ್ಮನ್ನು ಪ್ರೀತಿಸುವ ಜೀವ ತಮ್ಮನ್ನು ಮಾತ್ರ ಪ್ರೀತಿಸಬೇಕು ಎಂದು ಬಯಸುತ್ತದೆ. ಆದರೆ Indifference in thinking ಯಿಂದಾಗಿ ಅವರ ಮಧ್ಯೆವಿರುವ ಕೋಳಿಜಗಳು ಗಾಢವಾಗಲು ಎಡೆಮಾಡಿಕೊಡುತ್ತದೆ. ಪ್ರತಿದಿನ ಅವಳು ತನ್ನ ಹುಡುಗನನ್ನು ಬೈಯುವುದು, ಯಾಕೆ ಅವನು ಹೀಗೆ ಮಾಡ್ತಾನೆ, ಪದೇ ಪದೇ ಜಗಳ ಒಂದೇ ವಿಷಯದ ಸುತ್ತ ತಿರುಗಾಡುತಿರುತ್ತದೆ. ಇದರಿಂದಾಗಿ ಇಬ್ಬರು ತುಂಬಾ Frustration ಗೆ ಗುರಿಯಾಗುತ್ತಾರೆ. ದಿನಗಳು ಸಾಗಿದಂತೆ ಈ Frustration ಅನ್ನೋದು Irritation ಯಾಗಿ ಪರಿವರ್ತನೆಗೊಂಡು ಕೋಪಕ್ಕೆ ತುತ್ತಾಗುವ ಹುಡುಗರು ತಮ್ಮ ಹುಡುಗಿಯರ ಮೇಲೆ ನನ್ನ ಎಲ್ಲಾ ಕೆಟ್ಟ ಕೆಲಸಕ್ಕೆ ನಿನೇ ಕಾರಣ ಎಂದು Blame ಮಾಡೋದಕ್ಕೆ ಪ್ರಾರಂಭಿಸುತ್ತಾರೆ.

ಹುಡುಗರು ಬೇಕು ಅಂತ ಯಾವುದು ಮಾಡಲ್ಲ,  Situation drives him to do it. ಪ್ರೀತಿಯಲ್ಲಿರುವ ಕೆಲ ಹುಡುಗರಿಗೆ ಕೋಪ Control ಆಗಲ್ಲ, ಅವರಿಗೆ ವಿಪರೀತವಾದ ಕೋಪ ಉಂಟು ಮಾಡುವ ಹುಡುಗಿಯರ ಆ ಚುಚ್ಚು ಮಾತುಗಳು, ಮನಸ್ಸಿಗೆ ಘಾಸಿಗೊಳಿಸುವ Doubts, ಹುಡುಗರನ್ನು ಹುಚ್ಚರ ಹಾಗೆ ವರ್ತಿಸಲು ಪ್ರಚೋದಿಸುತ್ತವೆ. ಕೆಲವರು ಅವರು ಪ್ರೀತಿಸಿದ ಹುಡುಗಿಯನ್ನು ಹೊಡೆಯುವುದು, ಅವಳು ಪ್ರೀತಿ ಪೂರಕವಾಗಿ ಕೊಟ್ಟ Gifts, ಬೇಕು ಅಂತಾನೇ ಅವಳ ಕಣ್ಣಮುಂದೆ ಹಾಳುಮಾಡುತ್ತಾರೆ. ಕೆಲವರ ಪ್ರೀತಿ ಹೇಗಿರುತ್ತೆಂದರೆ: ಆ Frustrationಯಿಂದಾದ ಕೋಪ ಅವಳ ಮೇಲೆ ಆಗಲಿ ಅಥವಾ ಅವಳ Gifts ಮೇಲೆ ತೋರಿಸದೆ, ತಮ್ಮ ಮೇಲೆ ತೋರಿಸಿಕೊಳ್ಳುತ್ತಾರೆ, ಗಾಯ ಮಾಡಿಕೊಳ್ಳುವುದು, ತಮ್ಮ ವಸ್ತುಗಳನ್ನು ತಾವೆ ಹಾಳುಮಾಡುವುದು i.e. ಕೈಯಲ್ಲಿಯ Mobile ಒಡೆಯುವುದು ಅಥವಾ Laptop ಕೆಳಗೆ ಹಾಕೋದು, "ಮಂಗನ ಕೈಯಲ್ಲಿ ಮಾಣಿಕ್ಯ" ಕೊಟ್ಟಂತೆ ಆಡುತ್ತಾರೆ. ಈ ರೀತಿಯ ನಡತೆಯಿಂದಾಗಿ ಹುಡುಗಿಯರು ತುಂಬಾ ನೊಂದುಕೊಳ್ಳುತ್ತಾರೆ. ಅವಳಿಗೆ ಸಹನೆಗೆ ಮೀರಿದ ಅನುಮಾನ ಶುರುವಾಗುತ್ತದೆ. ಅವನಿಗೂ ನೆಮ್ಮದಿಯಿಲ್ಲದೆ, ಹೆಚ್ಚು ಕೋಪ, ಅಸಮಾಧಾನದಿಂದಾಗಿ ಅವಳಿಂದ ದೂರವಿರಲು ಕಾರಣಗಳನ್ನು ಹುಡುಕುತ್ತಾನೆ.

ಇಂತಹ ಅಹಿತಕರ ಸಂದರ್ಭಗಳಲ್ಲಿ ಹುಡುಗಿಯರ ಮನಸ್ಸು ಬಯಸುವುದು ಕಾಳಜಿ ತೋರಿಸುವ, ಪ್ರೀತಿಯಿಂದ ನೋಡಿಕೊಳ್ಳುವ ಹುಡುಗ, ಆದರೆ ಅವನು ಮೊದಲು ಪ್ರೀತಿಸಿದ ಹುಡುಗಿ ಈಗ ಅವಳಿಲ್ಲವೆಂದು, ಅವಳೊಂದು Doubt box, ಬರೀ Questions ಕೇಳೋ ಹುಡುಗಿ ಎನ್ನುವ ಬೇಜಾರು ಅವನದಾಗಿರುತ್ತದೆ. ಅದಕ್ಕೆ ಹುಡುಗರು Breakup ಮಾಡಿಕೊಳ್ಳಲು Think ಮಾಡ್ತಾರೆ. ಯಾವ ವಿಷಯ, ಸಂದರ್ಭ ಅಥವಾ ಮಾತನ್ನು ಅರ್ಥ ಮಾಡಿಕೊಳ್ಳದ ಹುಡುಗಿ, ತನ್ನ ನೋವಿಗೂ ಸ್ಪಂದಿಸದ ಹುಡುಗಿ, ಅವಳ ಊಹೆಯನ್ನೇ ಸರಿ ಎಂದು ಸಾಧಿಸುತ್ತಾಳೆ. ಈ Irritating ಹುಡುಗಿಯನ್ನು ನಾನ್ ಯಾಕೆ ಇಷ್ಟ ಪಟ್ಟೆ ಅಂತಾ, ತಮ್ಮನ್ನು ತಾವೇ ಬೈದುಕೊಳ್ಳತ್ತಾರೆ.

ಹುಡುಗಿಯರು ಪ್ರೀತಿಯಲಿ ಎಲ್ಲಗಿಂತ ಜಾಸ್ತಿ Importance ಕೊಡುವುದು ತನ್ನ ಪ್ರಿಯನಿಗೆ ಮಾತ್ರ. ಆದರೆ Indifference in thinkingಯಿಂದಾಗಿ ಅವಳ ಈ Important ವ್ಯಕ್ತಿ, ಅವಳು ಕೇಳಿದ Silly doubtಗಳಿಂದಾಗಿ, ಕ್ಷುಲ್ಲಕ ಜಗಳಗಳಿಂದಾಗಿ, ಯಾವುದಕ್ಕೂ ಸರಿ ಎಂದು ಹೇಳದ ಕಾರಣಗಳಿಂದ, ಯಾವ ಹುಡುಗನಲ್ಲಿ ಅತಿಯಾಗಿ ಇಷ್ಟವಾಗಿರುವ ವ್ಯಕ್ತಿತ್ವ Change ಆಗಿ ಬಿಡುತ್ತದೆ. ಅವಳು ತನ್ನ ಪ್ರಿಯ ಹೀಗೆ ವರ್ತಿಸುವದನ್ನು ಕಂಡು ಹಿಂಸೆಗೊಳಾಗುತ್ತಾಳೆ. ಇಬ್ಬರು ಒಬ್ಬರನ್ನೊಬ್ಬರು ನೋಡುವುದಕ್ಕಾಗದೆ Break up ಮಾಡಿಕೊಳ್ಳತ್ತಾರೆ.

Breakup ಆದಮೇಲೆ ಹುಡುಗರು ಸ್ವಲ್ಪ Relax ಆಗಿರುತ್ತಾರೆ. ಆ Doubt box, ಬರೀ Questions ಕೇಳೋ ಹುಡುಗಿಯಿಂದ ದೂರಾದ ಸಮಾಧನವಿರುತ್ತದೆ. ಕೆಲಹುಡುಗರಿಗೆ  Negative energy ಯಿಂದ ದೂರವಿದ್ದರೆ ಸಾಕೆಂದು ತಿಳಿದಿರುತ್ತಾರೆ. ಅವಳಿಂದ ದೂರವಿದ್ದಷ್ಟು ಶಾಂತಿಯಿದೆ ಅಂತ ಅಂದುಕೊಳ್ಳುತ್ತಾರೆ. Friends ಮುಂದೆ ಅವಳ ಬಗ್ಗೆ ದೂರಿಡುತ್ತಾರೆ,  ಈಗ ನೆಮ್ಮದಿಯಿದೆ ಅಂತೇಲ್ಲ ಹೇಳುತ್ತಾರೆ. ಅವರಿವರ ಬುದ್ಧಿ ಮಾತುಗಳು ಅವನ ಮೇಲೆ ಏನು ಪರಿಣಾಮ ಬೀರಲ್ಲ. "ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡಂತೆ" ಖುಷಿಯಿಂದ ಬಿಗುತ್ತಾನೆ.

ಕೆಲವು ದಿನಗಳಾದ ಮೇಲೆ ರಾತ್ರಿ ಮಲಗುವ ಮುನ್ನ, ಒಂಟಿಯಾಗಿರುವ ಘಳಿಗೆಯಲ್ಲಿ ವಿಪರೀತವಾದ ಅಸಮಾಧಾನ, ಏನೂ ಕಳೆದುಕೊಂಡಂತೆ, ದೇಹದ ಅವಿಭಾಜ್ಯ ಅಂಗ ಒಂದು ಮಾಯವಾದಂತೆ ಭಾಸವಾಗುತ್ತದೆ.ಅವಳಿಲ್ಲದ ಈ ಕ್ಷಣಗಳು, ಪ್ರೀತಿ ಬಯಸುವ ಹೃದಯ, ಅವಳೆಡೆಗೆ ಸೆಳೆಯುವ ಈ ನೋವು, ಕೂತಲ್ಲಿ ಕೂರಕ್ಕಾಗದೆ, ಮನಸ್ಸು ತವಕದಿಂದಾಗಿ ಜೋರಾಗಿ ಬಡಿತಕ್ಕೆ ಗೊಳಾಗುತ್ತದೆ. ಅವಳ ದನಿ ಕೇಳುವ ಹಂಬಲ ಮುಗಿಲು ಮುಟ್ಟುತ್ತದೆ. ಅವಳ ಜೊತೆಯಾಡಿದ ಸವಿಯಾದ ಮಾತುಗಳು, ಅವಳ ಜೊತೆಯಲ್ಲಿದ್ದ ಜಾಗ, ಪ್ರತಿಯೊಂದು ಸವಿನೆನಪುಗಳು ಕಣ್ಣಮುಂದೆ ಒಂದು Cinema ದಂತೆ ಮೂಡಿ ಬರುತ್ತದೆ. ಮತ್ತೆ ಅವಳೊಂದಿಗೆ ಆ ಕ್ಷಣದಲ್ಲಿಗೆ ಹೋಗುವ ಹಂಬಲ ಹೆಚ್ಚಾಗುತ್ತದೆ. ಅವಳ ಉಲ್ಲಸವನ್ನುಂಟು ಮಾಡುವ ಶ್ರೀಗಂಧದ ಪರಿಮಳದಂತಹ ಜೊತೆಯನ್ನೆ ಆಶಿಸುತ್ತದೆ. ನಗುವಿನಿಂದ ನೋವು ಮರೆಸುವ ಅವಳ ಪ್ರೀತಿಗೆ, ಮನವು ಕಗ್ಗತ್ತಲಲ್ಲಿ ಬೆಳಕಿನ ಕಿರಣಗಳನ್ನು ಹುಡುಕುವ ಕಣ್ಣಂತೆ ಅವಳನ್ನೇ ಹುಡುಕುತ್ತದೆ.

"ಕಣ್ಣಿಂದ ಕಂಬನಿಯನ್ನು ಕರೆದೊಯ್ಯುವೆನು,
ಕಣ್ಣಮುಚ್ಚುವ ಅರೆಘಳಿಗೆಯಲಿ,
ಮರಳಿ ಕೊಡುವೆಯಾ ನೀ, ಮರೆಯಲಾಗದೆ,
ಕಣ್ಮುಂದೆ ಇರುವ ಕಣ್ಮಣಿಗಳಂತಹ ದಿನಗಳನು."

ತಾನು ಮಾಡಿದ ತಪ್ಪು ಆ ಹುಡುಗನಿಗೆ ಅರಿವಾಗಿ ಅವಳ ಪ್ರೀತಿಯೆಡೆಗೆ ಮೋರೆ ಹೋಗುತ್ತಾನೆ. ತಪ್ಪೊ ಸರಿಯೋ ಅವಳಲ್ಲಿ ಕ್ಷಮೆ ಕೇಳಿ ಮತ್ತೆ ಅವಳ ಪ್ರೀತಿ ಪಡೆಯ ಬೇಕೆಂಬ ಮಹದಾಸೆ ಈ ಹುಡುಗದು.


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x