ಪಂಜು ಕಾವ್ಯಧಾರೆ

ಪಳೆಯುಳಿಕೆಗಳು ಅದೆಷ್ಟು ಕಾಲ ಕಣಿವೆಗಳಲಿನಿಶ್ಯಬ್ದವಾಗಿ ಬಿದ್ದಿವೆ ಅಸ್ಥಿಗಳು ಗತಕಾಲದ ರೋಚಕತೆಗೆ ಸಾಕ್ಷಿಯಾಗಿತಮ್ಮ ಇರುವಿಕೆಯ ಸ್ಪಷ್ಟ ಪಡಿಸಲು ಬದ್ದವಾಗಿಕಾದು ಕೂತಿವೆ ಪಳೆಯುಳಿಕೆಗಳಾಗಿ ಚರ್ಮ ಮಾಂಸ ಮಜ್ಜೆಗಳಿಲ್ಲಜೀವ ಆತ್ಮದ ಜೊತೆ ತಮಗಿಲ್ಲಆದರೂ ಇತಿಹಾಸವಾಗುವ ಆಸೆ ತೀರಿಲ್ಲ ಎಂದೋ ಯಾರೋ ಬರಬಹುದೆಂದುಹೊರಗೆಳೆದು ಪರಿಶೀಲಿಸಿ ದಾಖಲಿಸಬಹುದೆಂದುನಮ್ಮ ಕಥೆಗೂ ಜೀವ ತರಬಹುದೆಂದು ಆಸ್ತಿಗಳ ಆಸೆಗಷ್ಟೆ ಅಲ್ಲದೇಅಸ್ಥಿಗೂ ಬೆಲೆ‌ ಇರಬಹುದೆಂದುಸರಿದು ಹೋದ ತಮ್ಮನ್ನುಸಮಾಜದೆದುರು ತರಬಹುದೆಂದು ಆ ಕಲ್ಲು, ಬಂಡೆ, ಕೋಟೆ, ಅರಮನೆಯಂತೆಜೊತೆಗೆ ಸಿಕ್ಕ ನಿಧಿಗಳಂತೆ, ಬಳಸಿ ಎಸೆದ ಆಭರಣದಂತೆಹಿಂದೆ ಕೇಳಿದ ಪುರಾಣಗಳಂತೆ ತಮಗೂ ಬೆಲೆಯು ಸಿಗಬಹುದೆಂದುತಮ್ಮ … Read more

ಪ್ರಾಣಿ ಪಕ್ಷಿಗಳಲ್ಲಿ ಸಂವಹನ: ಡಾ. ಯುವರಾಜ ಹೆಗಡೆ

ಆಧುನೀಕರಣದ ಕಪಿಮುಷ್ಠಿಗೆ ಸಿಕ್ಕು ನಲುಗಿದ ಪಶ್ಚಿಮ ಘಟ್ಟದ ಹೆಬ್ಬಾಗಿಲಿಗೆ ರಸ್ತೆ ಅಗಲೀಕರಣವೆಂಬ ನೆಪವೊಡ್ಡಿ ಟಿಂಬರ್ ಲಾಬಿಯವರು ಲಗ್ಗೆ ಇಟ್ಟಿದ್ದರು. ರಸ್ತೆಯ ಇಕ್ಕೆಲಗಳಲ್ಲಿಯ ಬೃಹದಾಕಾರದ ಮರಗಳು ನೆಲಕ್ಕುರುಳುತ್ತಾ ಇರುವಾಗ ಒಂದೂವರೆ ಶತಮಾನದಷ್ಟು ಹಳೆಯ ಮಾಮರದ ಸರದಿ ಬಂದೇ ಬಿಟ್ಟಿತು. ಮರದ ಬುಡಕ್ಕೆ ಮರ ಕಡಿಯುವ ಯಂತ್ರವನನ್ನಿಟ್ಟು ಗಿರ ಗಿರನೆ ಶಬ್ಧ ಮಾಡುತ್ತಿದ್ದಂತೆ ಮರದ ಪೊಟರೆಯಿಂದ ಹೊರಬಂದು ಗಿಳಿಗಳೆರಡು ಕಿಟಾರನೆ ಕೂಗುತ್ತಾ ಸಂಕಟಪಡುತ್ತಿದ್ದವು. ಕೆಲವೇ ನಿಮಿಷದಲ್ಲಿ ಮಾವಿನ ಮರ ದರೆಗುರುಳುತ್ತಿದ್ದಂತೆ ಪೊಟರೆಯಲ್ಲಿದ್ದ ಇನ್ನು ಪುಕ್ಕವೂ ಹುಟ್ಟದ 3 ಗಿಣಿ ಮರಿಗಳು … Read more

ಅರೆಹೊಟ್ಟೆಯಲ್ಲಿ ಬಳಲಿದ ಸಮಾರಂಭದ ಅತಿಥಿ: ಮಹಾಬಲ ಕೆ ಎನ್‌

ಸ್ನೇಹದ ದಾಕ್ಷಿಣ್ಯಕ್ಕೆ ಸಿಕ್ಕಿಬಿದ್ದು ಆಗಾಗ್ಗೆ(ವರ್ಷಕ್ಕೊಮ್ಮೆ ಅನ್ನಿ. ಮೈಸೂರಿನಲ್ಲಿ ದಿನಪೂರ್ತಿ ನಡೆಯುವ ಕಾರ್ಯಕ್ರಮವೊಂದಕ್ಕೆ ಬಹುತೇಕ ವೇದಿಕೆಯಲ್ಲಿ ಕುಳಿತ (ಮೂಕ)ಪ್ರೇಕ್ಷಕನಾಗಿ ಭಾಗವಹಿಸುವ ದೌರ್ಭಾಗ್ಯ ನನ್ನ ಪಾಲಿಗೆ ಬಿಟ್ಟೆನೆಂದರೂ ಬಿಡದೀ ಮಾಯೆ ಎನ್ನುವಂತೆ ಮೆಟ್ಟಿಕೊಂಡು ಬಂದಿದೆ. ಹತ್ತು ಗಂಟೆಗೆ ಆರಂಭವಾಗಿ ಒಮ್ಮೊಮ್ಮೆ ಸಾಯಂಕಾಲ ಏಳರವರೆಗೆ ನಡೆಯುವ ಸಾಹಿತ್ಯಕ, ಸಾಮಾಜಿಕ, ಸಾಸ್ಕೃತಿಕ ಮತ್ತು ವೈದ್ಯಕೀಯ(ಏಕೆಂದರೆ ನೇತ್ರ ವಾಗ್ದಾನ ಕಾರ್ಯಕ್ರಮವನ್ನೂ ಹಮ್ಮಿಕೊಂಡಿರುತ್ತಾರೆ) ಕಲಾಪ ಹೊಂದಿರುವ ವ್ಯಾಪಕ ಯೋಜನೆಯ ಕಾರ್ಯಕ್ರಮವಿದು. ಬೆಳಿಗ್ಗೆ ಸಭಾಕಲಾಪ ಉದ್ಘಾಟನೆ. ದೀಪ ಹಚ್ಚುವ ಕಾರ್ಯಕ್ರಮದಲ್ಲಿ ಗಣ್ಯರ ಕೈಯಿಂದ ಕೈಗೆ ರಿಲೇ ರೇಸಿನ … Read more

ರಾಜು ಸನದಿ ಅವರ “ದುಗುಡದ ಕುಂಡ”: ಅಶ್ಫಾಕ್ ಪೀರಜಾದೆ.

ಯುವ ಕವಿ “ರಾಜು ಸನದಿ” ತಮ್ಮ ಚೊಚ್ಚಿಲ ಕವಿತಾ ಗುಚ್ಚ “ದುಗುಡದ ಕುಂಡ” ತುಂಬ ಪ್ರೀತಿಯಿಂದ ಕಳಿಸಿಕೊಟ್ಟು ದಿನಗಳೇ ಕಳೆದವು. ಕನ್ನಡ ಪುಸ್ತಕ ಪ್ರಾಧಿಕಾರದಿಂದ ಧನ ಸಹಾಯ ಪಡೆದುಕೊಂಡು ಪ್ರಕಟವಾಗಿರುವ ಈ ಪುಸ್ತಕವನ್ನು ಕೆಲಸದ ಒತ್ತಡದಲ್ಲಿ ಓದಿ ಪ್ರತಿಕ್ರಿಯಿಸಲು ಆಗಿರಲಿಲ್ಲ. ಕೆಲಸದ ನಡುವೆಯೇ ಒಂದಿಷ್ಟು ಬಿಡುವು ಮಾಡಿಕೊಂಡು ದುಗುಡದ ಕುಂಡ ಕೈಗೆತ್ತಿಕೊಂಡು ಈಗಷ್ಟೇ ಕೆಂಡದ ಕಾವು ಅನುಭವಿಸಿದ್ದೇನೆ. ಇಲ್ಲಿ ದಾಖಲಾದ ಪ್ರತಿ ಪದವೂ ಕಿಡಿಗಳಾಗಿ, ಪದಗಳು ಕೆಂಡದುಂಡೆಗಳಾಗಿ, ಮತ್ತು ಕವಿತೆಗಳು ಜ್ವಾಲಾಮುಖಿಯಾಗಿ ಹೊರಹೊಮ್ಮಿವೆ ಎಂದು ಹೇಳಬಹುದು. ಉತ್ತಮವಾದ … Read more

ಪ್ರಭಾವತಿ ದೇಸಾಯಿಯವರ ಗಜಲ್‌ ಸಂಕಲನ “ಭಾವಗಂಧಿ”: ಶಿವಕುಮಾರ ಮೋ ಕರನಂದಿ

ಕೃತಿ: ಭಾವಗಂಧಿ (ಗಜಲ್ ಸಂಕಲನ)ಲೇಖಕಿ: ಶ್ರೀಮತಿ ಪ್ರಭಾವತಿ ದೇಸಾಯಿಪ್ರಕಾಶನ: ಗಗನ ಪ್ರಕಾಶನ ವಿಜಯಪುರ ಸುಕೋಮಲವಾದ ಭಾವನೆಗಳ ಅಭಿವ್ಯಕ್ತಿಯೇ ‘ಗಜಲ್’ ಅರಬ್ಬಿ ಭಾಷೆಯ ಕಾವ್ಯರೂಪವಾದ ಇದು ಉರ್ದುವಿನಲ್ಲಿ ಅತ್ಯಂತ ಜನಪ್ರಿಯವಾದ ಕಾವ್ಯಪ್ರಕಾರವಿದು. ಉರ್ದುವಿನಲ್ಲಿ ಗಜಲ್ ಗೆ ಕಾವ್ಯರಾಣಿ ಎಂದು ಕರೆಯುತ್ತಾರೆ. ಕನ್ನಡ ಮಣ್ಣಿನೊಂದಿಗೆ ಬೆರೆತು ಸಮೃದ್ಧವಾಗಿ ಬೆಳೆಯುತ್ತಿರುವ ಗಜಲ್ ಕಾವ್ಯ ಪ್ರಕಾರವೂ ಹೈದ್ರಾಬಾದ್ ಕರ್ನಾಟಕದ ಶಾಂತರಸರಿಂದ ಕನ್ನಡಕ್ಕೆ ಪರಿಚಿತವಾಯಿತು, ಶಾಂತರರಸರು, ಎಚ್ ಎಸ್ ಮುಕ್ತಾಯಕ್ಕ, ಬಸವರಾಜ ಸಬರದ, ದಸ್ತಗಿರಸಾಬ್ ದಿನ್ನಿ, ಕಾಶಿನಾಥ ಅಂಬಲಿಗೆ, ಅಲ್ಲಾಗಿರಿರಾಜ್, ಗಿರೀಶ್ ಜಕಾಪುರೆ, ದೊಡ್ಡಕಲ್ಲಹಳ್ಳಿ … Read more

ರಾಷ್ಟ್ರೀಯ ಯುವ ದಿನ ಸ್ವಾಮಿ ವಿವೇಕಾನಂದರ ಜನ್ಮದಿನ: ಡಾ. ಅವರೆಕಾಡು ವಿಜಯ ಕುಮಾರ್

ಸ್ವಾಮಿ ವಿವೇಕಾನಂದರು 1863 ಜನವರಿ 12 ರಂದು ಕಲ್ಕತ್ತಾ ನಗರದಲ್ಲಿ ಜನಿಸಿದರು. ನರೇಂದ್ರನಾಥ ದತ್ತ ಎಂಬುದು ಇವರ ಹುಟ್ಟಿದ ಹೆಸರು. ಕಾಲಕ್ರಮೇಣ ಅದು ಬದಲಾಗಿ ವಿವೇಕನಂದವಾಯಿತು. ತಂದೆ ವಿಶ್ವನಾಥ ದತ್ತ ಇವರು ಕಲ್ಕತ್ತದ ಉಚ್ಚನ್ಯಾಯಾಲಯದಲ್ಲಿ ಅಟಾರ್ನಿಯಾಗಿ ಸೇವೆಸಲ್ಲಿಸುತ್ತಿದ್ದರು. ತಾಯಿ ಭುವನೇಶ್ವರಿ ದೇವಿ. ಅಜ್ಜ ದುರ್ಗಾ ಚರಣ್ ದತ್ತ, ಇವರು ಸಂಸ್ಕೃತ ಮತ್ತು ಪರ್ಷಿಯನ್ ಭಾಷೆಯ ಸಾಹಿತಿಯಾಗಿದ್ದರು. ತನ್ನ 25ನೇ ವಯಸ್ಸಿನಲ್ಲಿ ಸನ್ಯಾಸತ್ವವನ್ನು ಸ್ವೀಕರಿಸಿದರು. ಕೊಲ್ಕತ್ತ ನಗರದ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದರು ತಮ್ಮ ಶಿಕ್ಷಣವನ್ನು ಪಡೆದರು. 1884 … Read more

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 59 & 60): ಎಂ. ಜವರಾಜ್

-೫೯-ರಾತ್ರ ಹತ್ತಾಗಿತ್ತೇನೋಊರಲ್ಲಿ ಎದ್ದಿರ ಗಲಾಟಿಈ ಅಯ್ನೋರ್ ಗಮನುಕ್ಕ ಬಂತು ಈ ಗಲಾಟಿ ಯಾಕ ಅನ್ತಅಯ್ನೋರ್ ತಲ ಕೊರಿತಿತ್ತೇನಾಅಸ್ಟೊತ್ಗ ಕುಲೊಸ್ತರು ಬಂದ್ರುಈ ಅಯ್ನೋರು ಜಗುಲಿ ಅಂಚ್ಗ ಕುಂತಿದ್ರು ‘ಅಯ್ನೋಅ ನೀವು ಚೇರ್ಮನ್ ಆದ್ರಿಆದ್ರ ಊರ್ಲಿ ಪುಂಡೈಕ ಹೆಚ್ಚವಊರ್ಲಿ ಚನೈನಬ್ಬ ಮಾಡ್ದಾಗಇದ್ದ ಒಗ್ಗಟ್ಟು ಹೊಂದಾವಣಿಈಗ ಕಾಣ್ದುಒಂದಲ್ಲ ಒಂದು ಗಲಾಟಿಕುಲ ಸೇರ್ಸಿಏನಾರ ಬಿಗಿ ಭದ್ರ ಮಾಡ್ಬೇಕಲ್ಲಾ..’ಅನ್ತ ಕುಲೊಸ್ತರು ವರದಿ ಒಪ್ಸುದ್ರು ಈ ಅಯ್ನೋರು‘ಸುಮ್ ಸುಮ್ನೆ ಈ ಗಲಾಟಿ ಯಾಕ..ಏನನ್ತ ಕುಲ ಮಾಡ್ದರಿಯಾರ್ ಮ್ಯಾಲ ಅನ್ತ ಹೇಳ್ದರಿ’ ಅನ್ತ ಕೇಳುದ್ರು ‘ಅಯ್ನೋರಾ ಕಾಲುನ್ … Read more

ಮೈತ್ರಿ ಪ್ರಕಾಶನವು ಏರ್ಪಡಿಸಿರುವ ಮೈತ್ರಿಪುಸ್ತಕ-2021 ಸ್ಫರ್ಧೆ

ಎಲ್ಲರಿಗೂ ಹೊಸವರ್ಷದ ಶುಭಾಷಯಗಳು.ಮೈತ್ರಿಪುಸ್ತಕ -2021 ಬಹುಮಾನಕ್ಕಾಗಿ ಹಸ್ತಪ್ರತಿಗಳನ್ನು ಆಹ್ವಾನಿಸುತ್ತಿದ್ದೇವೆ.ಆಸಕ್ತರು ತಮ್ಮ 10 ಕತೆಗಳನ್ನು ಕೆಳಕಂಡ ವಿಳಾಸಕ್ಕೆ ಕಳಿಸಿಕೊಡಬೇಕು.ಆಯ್ಕೆಯಾದ ಹಸ್ತಪ್ರತಿಗೆ 7000 ಬಹುಮಾನ, ಫಲಕ ಹಾಗೂ ಪುಸ್ತಕ ಪ್ರಕಟಿಸಲಾಗುತ್ತದೆ. ಈ ಕೆಳಗಿನ ಆಂಶಗಳನ್ನು ಗಮನಿಸಿ.1) ಇದುವರೆಗೂ ಒಂದೂ ಕತಾಸಂಕಲನ ಪ್ರಕಟಿಸದ ಕತೆಗಾರರಿಗೆ ಈ ಸ್ಫರ್ಧೆಯಲ್ಲಿ ಭಾಗವಹಿಸುವ ಅವಕಾಶವಿದೆ. ಸಾಹಿತ್ಯದ ಇತರೇ ಪ್ರಕಾರಗಳಲ್ಲಿಒಂದೆರಡು ಪುಸ್ತಕ ಪ್ರಕಟವಾಗಿದವರೂ ಸ್ಫರ್ಧೆಯಲ್ಲಿ ಭಾಗವಹಿಸಬಹುದು.2) ಕತೆಗಳನ್ನು ಕಡ್ಡಾಯವಾಗಿ ನುಡಿ./ಯುನಿಕೋಡ ಮೂಲಕ ಟಂಕಿಸಿ ಪ್ರಿಂಟರೂಪದಲ್ಲಿ ಕಳಿಸಬೇಕು. ಇಮೇಲ ಮೂಲಕ ಕಳಿಸಿದ ಕತೆಗಳನ್ನು ಸ್ವೀಕರಿಸುವುದಿಲ್ಲ.3) ಹಸ್ತಪ್ರತಿಯಲ್ಲಿ ಎಲ್ಲಿಯೂ ಲೇಖಕರ … Read more