ಪಂಜು ಕಾವ್ಯಧಾರೆ

ನನ್ನಲ್ಲಿಷ್ಟು ಕನಸುಗಳಿವೆಮಾರಾಟಕ್ಕಲ್ಲ,ಎಲ್ಲರೆದೆಯ ಬರಡು ಭೂಮಿಯಲ್ಲಿಹೂಳುತ್ತೇನೆ,ಹೊಸ ನಾಳೆಗಳನ್ನೇ ಚಿಗುರಿಸುತ್ತೇನೆ ! ನನ್ನೀ ಕನಸುಗಳು-ಬುದ್ದನ ನಗೆಯ ನೆರಳಲ್ಲಿಬೆಳೆದು ಬಂದಂತಹವು,ಊರಾಚೆಯ ಒಲೆಯ – ಊರೊಳಗೆನೆಮ್ಮದಿಯ ನಗೆ ಬೀರುವಕನಸು ಕಾಣುತ್ತದೆ, ನನ್ನೀ ಕನಸು ! ಮೈಲು ದೂರದಲ್ಲಿಯ ಬೆಟ್ಟದ ಮ್ಯಾಲಿನದೇವದಾಸಿಯೂ ಅಂಗಲಾಚುತ್ತಾಳೆ-ನನ್ನೀ ಕನಸುಗಳಿಗಾಗಿ !ಮುಟ್ಟಾದ ಪುಟ್ಟ ತಂಗಿಯತುಂಬಿ ನಿಂತ ಕಣ್ಣಾಲೆಯೂ ಕೈಚಾಚಿದೆ-ನನ್ನ ಕನಸುಗಳತ್ತ ! ಸುಸ್ತಾಗಿದ್ದ ‘ಗಸ್ತಿ’ಯೂ ಗಸ್ತು ತಿರುಗಲು-ಅಣಿಯಾಗುತಿದ್ದಾನೆ , ಮತ್ತೇನಂಬಿಕೆಯಿದೆ ನನ್ನೀ ಕನಸುಗಳಲ್ಲಿ,ಅಪ್ಪ ಮುಟ್ಟಿದ ನೀರು ಮೈಲಿಗೆಯೆಂದದೊರೆಗಳಿಂದುಕನಸುಗಳ ಕಂಡು – ದಡಬಡಿಸುತ್ತಿದ್ದಾರೆ ! ಇಂದು ಬದುಕಿದ್ದರೆ -ನನ್ನಅಂಬೇಡ್ಕರ್ ?ನನ್ನೀ ಕನಸುಗಳ … Read more

ಸಾಲ: ಅನಂತ ರಮೇಶ್

1 ಹದಿನೈದು ವರ್ಷಗಳಿಂದ ಅಭ್ಯಾಸವಾಗಿ ಹೋಗಿದೆ. ಲತಾಳ ಅದೇ ವ್ಯಂಗ್ಯದ ಮಾತು. “ಸಾಹೇಬರ ಸವಾರಿ ಈವತ್ತು ಯಾವ ಕಡೆಗೆ?”. ನಾನು ಉತ್ತರಿಸುವ ಗೊಡವೆಗೆ ಹೋಗುವುದಿಲ್ಲ. ತಿಂಡಿಯೊಟ್ಟಿಗೆ ಕಾಫಿ ಲೋಟ ಟೇಬಲ್‌ಮೇಲೆ ಬಡಿಯುತ್ತಾಳೆ. ಸಾವಕಾಶ ತಿಂದು ಹೊರಡುತ್ತೇನೆ. ಆ ಸಮಯ ಮೀರುವುದಿಲ್ಲ. ಈಗ ಬೆಳಗಿನ 9:30. ಸಾಮಾನ್ಯವಾಗಿ ಎಲ್ಲರೂ ಆಫೀಸಿಗೆ ಹೊರಡುವ ಸಮಯ! ಹೊರಗೆ ರಸ್ತೆಯಲ್ಲಿ ನಡೆಯುವಾಗ, ಲತಾಳ ಬಗೆಗೆ ಕನಿಕರ ಅನ್ನಿಸುತ್ತೆ. ಅವಳಾದರೂ ಏನು ಮಾಡಿಯಾಳು? ನನಗಂತೂ ತಿಂಗಳಿಗೊಮ್ಮೆ ಸಂಬಳ ತರುವ ಕೆಲಸವಿಲ್ಲ. ಯಾವುದಾದರೂ ಮನೆ ಬಾಡಿಗೆ, … Read more

ಇಳಾ: ಗಿರಿಜಾ ಜ್ಞಾನಸುಂದರ್‌

“ಪಿಂಕಿ, ಬಬ್ಲೂ ಬನ್ನಿ ಮನೆಗೆ… ತುಂಬ ಹೊತ್ತಾಗಿದೆ.. ಆಶಾ ಆಂಟಿ ಮನೆಗೆ ಬಂದ್ರೆ ನಿಮಗೆ ಏನು ಬೇಡ” ಅಂತ ತಮ್ಮ ಮಕ್ಕಳನ್ನು ಕರೆದುಕೊಂಡು ಹೋದಳು ಪಿಂಕು ಬಬ್ಲೂ ಅಮ್ಮ. ಆಗಲೇ ರಾತ್ರಿ ಎಂಟು ಗಂಟೆ ಆಗಿದೆ… ಇನ್ನೊಂದು ಹತ್ತು ನಿಮಿಷಕ್ಕೆ ಇನ್ನು ಆಶಾ ಆಂಟಿ ಮನೆಯಲ್ಲಿ ಉಳಿದುಕೊಂಡಿದ್ದ ೫- ೬ ಮಕ್ಕಳನ್ನೆಲ್ಲ ಅವರವರ ಮನೆಯವರು ಕರೆದುಕೊಂಡು ಹೋದರು. ಆಶಾ ಎಲ್ಲ ಮಕ್ಕಳು ಹೋದಮೇಲೆ ಸಪ್ಪೆ ಮುಖ ಹಾಕಿಕೊಂಡು ಕುಳಿತಿದ್ದಳು. ಮನೆಯೆಲ್ಲ ಚಾಕಲೇಟ್ ಪೇಪರ್ಸ್, ತಿಂಡಿ ತಿನಿಸುಗಳನ್ನು ಚೆಲ್ಲಿ … Read more

ಮರೆಯಲಾಗದ ಮದುವೆ (ಕೊನೆಯ ಭಾಗ): ನಾರಾಯಣ ಎಮ್ ಎಸ್

ಅಯ್ಯರೊಂದಿಗೆ ಮಾತಾಡಿದ್ದು ಎಲ್ಲರಿಗೂ ಸಮಾಧಾನ ತಂದಿತ್ತು. ತನಿಯಾವರ್ತನದ ನಂತರ ಸಿಂಧು ಭೈರವಿ, ತಿಲಂಗ್ ಮತ್ತು ಶಿವರಂಜನಿಯಲ್ಲಿ ಹಾಡಿದ ದೇವರನಾಮಗಳು ಮುದ ಕೊಟ್ಟವು. ಕಛೇರಿ ಕೊನೆಯ ಭಾಗ ತಲುಪಿದ್ದರಿಂದ ಮೈಕು ಹಿಡಿದ ಮೋಹನ ವೇದಿಕೆ ಹತ್ತಿದ. ನೇದನೂರಿಯವರಿಂದ ಪ್ರಾರಂಭಿಸಿ, ಒಬ್ಬೊಬ್ಬರಾಗಿ ಪಿಟೀಲು, ಮೃದಂಗ, ಖಂಜಿರ ಮತ್ತು ತಂಬೂರಿಯಲ್ಲಿ ಸಾಥ್ ನೀಡಿದ ಪ್ರತಿಯೊಬ್ಬ ಕಲಾವಿದರ ಬಗ್ಗೆಯೂ ಒಂದೆರಡು ಒಳ್ಳೆಯ ಮಾತನಾಡಿ ಧನ್ಯವಾದ ಅರ್ಪಿಸಿದ. ಒಬ್ಬೊಬ್ಬರಿಗೂ ಧನ್ಯವಾದ ಹೇಳಿದ ಬೆನ್ನಲ್ಲೇ ಕ್ರಮವಾಗಿ ಆಯಾ ಕಲಾವಿದರಿಗೆ ಕೃಷ್ಣಯ್ಯರ್ ಖುದ್ದು ತಮ್ಮ ಹಸ್ತದಿಂದ ಸೂಕ್ತ … Read more

ಹಾರುವ ಹಂಸೆಯ ಕಾವ್ಯಗುಣ: ವಿನಯಚಂದ್ರ

“ಹಾರುವ ಹಂಸೆ” ಇತ್ತೀಚಿನ ದಿನಗಳಲ್ಲಿ ನಾನು ಓದಿ ಮೆಚ್ಚಿದ, ಇತ್ತೀಚಿನ ತಲೆಮಾರಿನವರು ರಚಿಸಿದ ಕೃತಿಗಳಲ್ಲಿ ಬಹಳ ಉತ್ತಮವಾದ ಕೃತಿ ಎಂದು ನಿಸ್ಸಂಶಯವಾಗಿ ಹೇಳಿಬಿಡಬಹುದು. ಇದು ಚಾಮರಾಜನಗರದ ಆರ್ ದಿಲೀಪ್ ಕುಮಾರ್ ರವರ ಕವಿತೆಗಳ ಸಂಕಲನ. ಗಂಭೀರವಾದ ಸಾಹಿತ್ಯ ವಿದ್ಯಾರ್ಥಿಯೊಬ್ಬ ತನ್ನ ಅಧ್ಯಯನದ ಆಧಾರದ ಮೇಲೆ, ಉತ್ತಮ ಕಾವ್ಯಗಳಲ್ಲಿ ಇರಬಹುದಾದ ಲಕ್ಷಣಗಳನ್ನು ಗುರುತು ಹಾಕಿಕೊಂಡು, ಅದಕ್ಕೆ ನಿಷ್ಠನಾಗಿ ಕಾವ್ಯ ರಚನೆ ಮಾಡಿದರೆ ಕವಿತೆಗಳು ಹೇಗೆ ಮೂಡಬಹುದೋ, ಕ್ವಚಿತ್ತಾಗಿ ಹಾಗೆಯೇ ಮೂಡಿವೆ ದಿಲೀಪರ ಕವಿತೆಗಳು. ಕಾವ್ಯದಲ್ಲಿ ಮುಖ್ಯವಾಗಿ ವಸ್ತು ವಿಷಯ, … Read more

ಡಿಸೆಂಬರ್ ಎಂದರೆ ಪ್ರವಾಸಗಳ ನೆನಪು..: ವಿನಾಯಕ ಅರಳಸುರಳಿ

ಶಾಲಾ ಪ್ರವಾಸವೆನ್ನುವುದು ಬದುಕಿನ ಮತ್ತೆಲ್ಲ ಪ್ರವಾಸಗಳನ್ನೂ ಮೀರಿಸುವಂಥಹಾ ಸವಿನೆನಪು. ಅರ್ಧವಾರ್ಷಿಕ ಪರೀಕ್ಷೆಗಳೆಲ್ಲಾ ಮುಗಿದು ಛಳಿಗಾಲದ ಪ್ರವೇಶವಾಗುವ ಹೊತ್ತಿಗೆ ಶೈಕ್ಷಣಿಕ ಪ್ರವಾಸದ ಘೋಷಣೆಯನ್ನು ಸ್ವತಃ ಹೆಡ್ ಮಾಷ್ಟರೇ ಮಾಡುತ್ತಿದ್ದರು. ಬರುವ ಆಸೆ ಎಲ್ಲರಲ್ಲೂ ಇರುತ್ತಿತ್ತಾದರೂ ನೂರಿನ್ನೂರು ರೂಪಾಯಿಗಳ ಪ್ರವಾಸ ಶುಲ್ಕವನ್ನು ಹೊಂದಿಸುವುದು ಎಲ್ಲರಿಗೂ ಸಾಧ್ಯವಿರುವ ವಿಷಯವಾಗಿರಲಿಲ್ಲ. ಕೆಲವರಿಗೆ ಸುಲಭವಾಗಿ ಸಿಗುತ್ತಿದ್ದ ಈ ಹಣ ಇನ್ನು ಕೆಲವರಿಗೆ ಅಪ್ಪ-ಅಮ್ಮನಿಂದ ಬೆನ್ನಿನ ಮೇಲೆ ನಾಲ್ಕು ಗುದ್ದಿಸಿಕೊಂಡ ಬಳಿಕವೇ ಸಿಗುತ್ತಿತ್ತು. ಇನ್ನೂ ಕೆಲವರು ತಾವು ಅಲ್ಲಿಲ್ಲಿ ಅಡಿಕೆ ಸುಲಿದು, ಗೇರುಬೀಜ ಹೆಕ್ಕಿ ಸಂಪಾದಿಸಿದ್ದ … Read more

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 55 & 56): ಎಂ. ಜವರಾಜ್

-೫೫-ಓಟಾಗಿ ಎಂಟೊಂಬತ್ದಿನ ಆಗಿತ್ತುಇವತ್ತು ಎಣ್ಕ ಅದನಾಳಿದ್ದು ಕಳ್ದು ಆಚ ನಾಳನೀಲವ್ವೋರ್ ತಿಥಿ ಅದ ಈ ಅಯ್ನೋರು ಆಳ್ಗಳ್ ಬುಟ್ಕಂಡುಸುಣ್ಣನುವ ಗೋಪಿ ಬಣ್ಣನುವಮನಗ್ವಾಡ್ಗ ತುಂಬುಸ್ತಿದ್ರು ಈಗ ಈ ದೊಡ್ಡವ್ವ ಬುಟ್ರ ಯಾರಿದ್ದರು..ಈ ಅಯ್ನೋರ್ಗ ಈ ದೊಡ್ಡವ್ವನೇ ಗತ್ಯಾದ್ಲುಈ ದೊಡ್ಡವ್ವ ಹೇಳ್ದಾಗೇ ಕೇಳ್ಬೇಕುಈ ದೊಡ್ಡವ್ವನ ಮಾತ್ನಂತೆಸತ್ತೋದ ನೀಲವ್ವೋರ ಅವ್ವ ಅಪ್ಪಬಂದುಮಗಳ ನೆನ್ಕಂಡು ಮನ ಕೆಲ್ಸ ಮಾಡ್ತಿದ್ರು ಈಗ ಈ ಅಯ್ನೋರು ದೊಡ್ಡವ್ವನ್ಗ ಹೇಳಿತಾಲ್ಲೊಕ್ಕಚೇರಿ ಕಡ ನಡುದ್ರುಹಿಂಗ ತಾಲ್ಲೊಕ್ಕಚೇರಿ ಕಡ ನಡ್ದಾಗಆ ಆಳು ದಾರಿಲಿ ಸಿಕ್ಕಿಗುಸುಗುಸು ಮಾತಾಡ್ತ ನಡ್ದಹಂಗೆ ಇನ್ನಿಬ್ರು ಬಂದ್ರುತಾಲ್ಲೊಕ್ಕಚೇರಿ … Read more

ಬೆರಗೊಂದು ಕೊರಗಾಗಿ ಕಾಡಿದಾಗ…. : ಸುಂದರಿ ಡಿ.

ತನ್ನ ಪಾಡಿಗೆ ತಾನು ಹಾಡಿಕೊಂಡು, ಹನಿಗಳ ಚುಮುಕಿಸಿ, ಬಳುಕುತ ಬಿಸಿಲ ನೇರ ಕೋಲುಗಳ ಸ್ಪರ್ಶದಿಂದಲೇ ಮತ್ತಷ್ಟು ಹೊಳಪಿನಿಂದ ತನ್ನಾಳದ ಮರಳನೂ ಚಿನ್ನದಂತೆ ಹೊಳೆಯಿಸುತ, ಜುಳು-ಜುಳು ನಾದದೊಂದಿಗೇ ಹರಿಯುತಿದ್ದ ನೀರ ಬದಿಯಲಿ ತನ್ನ ಸೊಬಗತೋರುತ, ನೀರ ಸೊಬಗನೂ ಹೆಚ್ಚಿಸಲೆಂಬಂತೆ ಅದರ ಸತ್ವವನೇ ಹೀರಿ ನಿಜವಾದ ಹಸಿರೆಂದರೆ ಇದೇ ಎಂಬಂತೆ ಬೆಳೆದು ನಿಂತಿದ್ದ ಗಿಡಗೆಂಟೆಗಳು, ಅವುಗಳಲ್ಲಿ ಬೆಟ್ಟದ ಹೂವಿನಂತೆ ಇತರರನು ತಮ್ಮತ್ತ ಸೆಳೆವ ಯಾವ ಗೋಜಿಗೂ ಹೋಗದೆ ಬೇಲಿಯ ಹೂವೆಂದೇ ಕರೆಸಿಕೊಂಡರೂ ಸಹಜ ಸೌಂದರ್ಯದ ಕಾರಣವೊಂದರಿಂದಲೇ ತಮ್ಮತ್ತ ತಿರುಗಿ ನೋಡುವಂತೆ … Read more

“ಮಕ್ಕಳ ಸಾಹಿತ್ಯ ಸಂಪಾದಕತ್ವ ಕೃತಿ”ಯ ಲೋಕಾರ್ಪಣಾ ಕಾರ್ಯಕ್ರಮ

ಸಾಹಿತ್ಯಾಸಕ್ತರೇ,ಸಹೃದಯೀ ಕವಿಮನಸ್ಸುಗಳೇ,ಫೆಬ್ರವರಿಯಲ್ಲಿ ನಮ್ಮ ಸಂಸ್ಥೆಯ ಕಡೆಯಿಂದ “ಮಕ್ಕಳ ಸಾಹಿತ್ಯ ಸಂಪಾದಕತ್ವ ಕೃತಿ”ಯ ಲೋಕಾರ್ಪಣಾ ಕಾರ್ಯಕ್ರಮ ನಡೆಯಲಿದೆ. 🎉 ಆಸಕ್ತರು ನಿಮ್ಮ ಸ್ವರಚಿತ ಕುತೂಹಲ ಭರಿತ ನೀತಿಕಥೆ ಮತ್ತು ಮಕ್ಕಳಿಗೆ ಸುಲಲಿತವಾಗಿ ಹಾಡಲು ಬರುವಂತಹ ಮಕ್ಕಳ ಪದ್ಯವನ್ನು ಕಳುಹಿಸಿಕೊಡಬೇಕಾಗಿ ಕೋರಿಕೆ. ವಿದ್ಯಾರ್ಥಿಗಳು ಕೂಡ ಭಾಗವಹಿಸಬಹುದು. ನಿಮ್ಮ ಗುರುತಿನ ಚೀಟಿ ಅಗತ್ಯವಾಗಿ ಲಗತ್ತಿಸಿದರೆ ದತ್ತ ಮೊತ್ತದಲ್ಲಿ ಕಡಿತಗೊಳಿಸಲಾಗುವುದು. ÷ ಮಕ್ಕಳ ಪದ್ಯ (೧ ಪುಟ)÷ ಕಥನ-ಕವನವಾದರೆ ( ೧-೨ ಪುಟಗಳು)÷ ಮಕ್ಕಳ ನೀತಿಕಥೆ ( ೨-೩ ಪುಟಗಳು ) ಅಲ್ಲದೇ … Read more