Facebook

Archive for 2020

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 35 & 36): ಎಂ. ಜವರಾಜ್

-೩೫- ‘ದೊಡ್ಡವ್ವವ್..’ ಎದುರು ಮನ ಪಡ್ಸಾಲ್ಲಿ ಕುಂತು ಎಲ ಅಡ್ಕ ಹಾಕತ ಅಯ್ನೋರ್ ದನಿ. ಆ ದನಿಗ, ‘ಕುಸೈ ಒಳ್ಳಿ ಕೆಲ್ಸ ಮಾಡ್ದ ಬುಡು ಊರು ಸುಮ್ನಿದ್ದಾ.. ಈ ವಯ್ಸಲಿ ಇದ್ಯಾನ ಹಿಂಗಾ.. ನೀಲ ಒಳ್ಳೋಳೆ ಆದ್ರ ಹಣಬರ ಇರ್ಬೇಕಲ್ಲ ಬುಡು ಈಗೇನ ಶಂಕ್ರಿಲ್ವ.. ಸಾಕು ಬುಡು ಹೆಂಗು ಅವ್ನುಗು ಗಂಡಾಗದ ವಂಶ ಹೆಸರೇಳಕಾದ್ರು ಆಯ್ತಲ್ಲ ಬುಡು’ ‘ದೊಡ್ಡವ್ವವ್ ಸುಮ್ನಿದ್ದಯ.. ಕುಲ್ಗೆಟ್ಟವೆಲ್ಲ ನನ್ ವಂಶನಾ..’ ‘ಮೊಗ ಅವ ಕುಲ್ಗೆಟ್ಟ ಹೆಣ್ಣೇ ಇರಬೋದು ನಿನ್ ರಕ್ತ ಕುಲ್ಗೆಟ್ಟೊಗಿದ್ದಾ.. ಶಂಕ್ರನ್ […]

ಪಂಜು ಕಾವ್ಯಧಾರೆ

ಅಂತ್ಯವೆಲ್ಲಿ? ತೋಳ ತೆಕ್ಕೆಯಲಿಲ್ಲದ ಕಾಣದ ನೋಟ ಆದರೂ ಹಠ ಬಿಡದ ಭಯಂಕರ ಸಾವು-ನೋವು ಮಂದಗತಿಯಲಿ ಹೊಗೆ ಉರಿಯುತ್ತಿದೆ ಬೆಂಕಿ ಅಡಗಿದೆ ಗಾಳಿ ಸೋಕಿ ಸೋಂಕು ಎನಿಸಿಕೊಂಡಿದೆ ಮನೆಯಲ್ಲಿ ಬೀಗ ಜಡಿದಿದ್ದಾರೆ ನೆರೆಯವರು ಗುಸುಗುಸು ಸನಿಹವಂತೂ ಸುಳಿಯೋದೆ ಇಲ್ಲ ಯಾರೂ …ಬೆಳಕು, ಗಾಳಿ, ಕತ್ತಲು ಬಂಧುಗಳಿಲ್ಲ, ಹೆಂಗಳೆಯರು ಎಲ್ಲೋ ತಾಯ್ಮನೆ ನೆನೆಸುತ್ತಿದ್ದಾರೆ ಆದರೆ ಬರಲೊಲ್ಲದ ಸಮಯ ಬೇಲಿ ಹಾಕಿದ್ದಾರೆ ಸರ್ಕಾರದವರು ನಮ್ಮ ಒಳಿತಿಗೆ ಅಲ್ಲವೇ? ಮನೆಯ ಬಾಗಿಲ ದಾರಂದರ ಪಟ್ಟಿಯೊಳಗೆ ಹಸಿ ಬಟ್ಟೆಯ ಸುಳಿವಿಲ್ಲ ರಂಗೋಲಿ, ಒಲೆಗೆ ಬೆಂಕಿ […]

ಕಬಡೀ… ಕಬಡೀ… whatever!: ಗುರುಪ್ರಸಾದ ಕುರ್ತಕೋಟಿ

ಮಕ್ಕಳು ಎಲ್ಲಿದ್ದರೂ ಮಕ್ಕಳೇ. ಅದರೂ NRI ಮಕ್ಕಳು ವಿಭಿನ್ನ ಅಂತ ನನಗೆ ಅನಿಸುತ್ತಿದ್ದುದು ಅವರ ಮಾತಾಡುವ ಶೈಲಿಯಲ್ಲಿ. ಅದೊಂಥರ ಅರಗಿಸಿಕೊಳ್ಳಲಾಗದ ವಿಷಯ ನನಗೆ. ವಿಶೇಷವಾಗಿ ಅವರು ಮಾತಾಡುವ american accent ನನ್ನಲ್ಲಿ ಆ ಭಾವನೆ ಹುಟ್ಟಿಸುತ್ತಿತ್ತು. ಮಕ್ಕಳು ಎಲ್ಲಿ ಬೆಳೆಯುತ್ತಾರೋ ಅಲ್ಲಿನ ಭಾಷೆ ಸಂಸ್ಕೃತಿಗಳಿಗೆ ಒಗ್ಗಿಕೊಳ್ಳುತ್ತಾರೆ. ಅದು ಅವರ ತಪ್ಪಲ್ಲ. ಹೊಸದಾಗಿ ಅಮೆರಿಕೆಯಲ್ಲಿ ಹೋಗಿ ಅಲ್ಲಿದ್ದ ಮಕ್ಕಳ ಕುರಿತು ಹಾಗೆ ಯೋಚಿಸಿದ್ದು ನನ್ನ ತಪ್ಪು. ಕ್ರಮೇಣ ಅವರ ಮಾತುಗಳು ನನಗೆ ಒಂತರಹದ ಮಜಾ ಕೊಡುತ್ತಿದ್ದವು. ನನ್ನ ಮಗಳೂ […]

ಬ್ಯಾಚುಲರ್ ಬದುಕಿನ ಬಾನ್ಗಡಿಗಳು…: ವಿನಾಯಕ ಅರಳಸುರಳಿ

ಅದೊಂದು ಅಮಾಯಕ ಟೆರಾಸ್. ಮೂರನೇ ಫ್ಲೋರಿನ ತುತ್ತತುದಿಯಲ್ಲಿ ನಿಶ್ಯಬ್ದವಾಗಿ ಮಲಗಿದೆ. ಸಮಯ ರಾತ್ರಿ ಹನ್ನೆರೆಡೂವರೆ. ಕೆಳಗಡೆ ಬೀದಿಯಲ್ಲಿ ಅಂಡಲೆಯುತ್ತಿರುವ ನಾಯಿಗಳಿಗೂ ಆಕಳಿಕೆ ಶುರುವಾಗಿದೆ. “ನೋಡ್ತಿರು…ದೊಡ್ಡ ಸಾಧನೆ ಮಾಡಿ ನಾನೇನು ಅಂತ ತೋರಿಸ್ತೀನಿ ಅವಳಿಗೆ!” ಅರ್ಧ ಕೆಜಿ ಅಳು, ಎರೆಡು ಕ್ವಿಂಟಾಲ್ ಹತಾಶೆ, ಎರೆಡು ಡಜನ್ ರೊಚ್ಚು, ಐದೂವರೆ ಕ್ವಾಟರ್ ನಶೆ ಹಾಗೂ ಸಾವಿರಾರು ಗ್ಯಾಲನ್ ದುಃಖ… ಇವೆಲ್ಲ ಒಟ್ಟಾಗಿ ಬೆರೆತ ಧ್ವನಿಯೊಂದು ಹಾಗಂತ ಅಬ್ಬರಿಸುತ್ತದೆ. “ಹೂ ಮಚ್ಚೀ.. ನೀನೇನಾದ್ರೂ ಅಚೀವ್ಮೆಂಟ್ ಮಾಡ್ಲೇಬೇಕು. ನಿನ್ನ ಬಿಟ್ಟೋಗಿದ್ದು ಎಷ್ಟು ದೊಡ್ಡ […]

ಕೊರೋನಾ ಕಾಲದಲ್ಲಿ ಹೆಣ್ಣುಮಕ್ಕಳ ಕೌಟುಂಬಿಕ ಸಮಸ್ಯೆಗಳು: ತೇಜಾವತಿ ಹುಳಿಯಾರು

ಹಿಂದೆಂದೂ ಕಾಣದೊಂದು ಸೂಕ್ಷ್ಮ ಅಣುಜೀವಿ ಇಂದು ವಿಶ್ವದೆಲ್ಲೆಡೆ ಹರಡಿ ತನ್ನ ಕಬಂಧಬಾಹುವನ್ನು ವಿಸ್ತರಿಸಿಕೊಂಡು ದಿನದಿಂದ ದಿನಕ್ಕೆ ದ್ವಿಗುಣಗೊಳ್ಳುತ್ತ ಇಡೀ ಮನುಕುಲವನ್ನೇ ತಲ್ಲಣವನ್ನುಂಟುಮಾಡಿದೆ. ವಿಜ್ಞಾನ – ತಂತ್ರಜ್ಞಾನಕ್ಕೇ ಸವಾಲೊಡ್ಡಿರುವ ಪರಿಸ್ಥಿತಿ ನಮ್ಮ ಕಣ್ಣೆದುರೇ ಇದೆ. ಎಲ್ಲರ ನಿದಿರೆಯಲ್ಲೂ ಸಿಂಹಸ್ವಪ್ನವಾಗಿರುವ ಕೊರೋನಾ ಮಹಾಮಾರಿಯಾಗಿ ತನ್ನ ಅಟ್ಟಹಾಸವನ್ನು ಮರೆಯುತ್ತಾ ಪ್ರಕೃತಿಯ ಮುಂದೆ ಎಲ್ಲವೂ ಶೂನ್ಯವೆಂಬ ನೀತಿಯನ್ನು ನೆನಪಿಸಿದೆ. ಒಂದೆಡೆ ರೋಗದ ಹರಡುವಿಕೆ ದಿನದಿಂದ ದಿನಕ್ಕೆ ದ್ವಿಗುಣವಾಗುತ್ತ ತನ್ನ ವೇಗದ ತೀವ್ರತೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದರೆ ಮತ್ತೊಂದೆಡೆ ಹೇಗೋ ಜೀವನ ಸಾಗಿಸುತ್ತಿದ್ದ ಹಲವಾರು ಕುಟುಂಬಗಳ ಪರಿಸ್ಥಿತಿ […]

ಕುಡಿತದ ದಾಸರೇ ನಿಮಗಾಗಿ: ಪ್ರೇಮ್

ಕುಡಿತದ ದುಷ್ಪರಿಣಾಮವನ್ನು ನಾನು ಹಲವು ಕುಟುಂಬಗಳ, ಸಂಬಂಧಿಕರನ್ನು ನೋಡಿ ಕಣ್ಣಾರೆ ಕಂಡವಳು. ಅದೇ ಬೇಸರದಲ್ಲಿ, ಒಟ್ಟಿಗೆ ಭಯ, ಗಾಬರಿ, ಹತಾಶೆ, ನೋವು, ಬೇಸರ, ಕೊಳಕು, ನರಕ ಎಲ್ಲಾ ಭಾವಗಳೂ ಮನದಲ್ಲಿ ಒತ್ತರಿಸಿ ಬರುವುವು. ಯಾರೇ ಆಗಲಿ ಯಾವುದಕ್ಕೂ ದಾಸರಾಗಬಾರದು. ನಮ್ಮ ಮನಸ್ಸು, ನಮ್ಮ ಕೆಲಸ, ನಮ್ಮ ಭಾವನೆಗಳು ನಮ್ಮ ಹಿಡಿತದಲ್ಲಿ ಇರಬೇಕು. ಕುಡಿತ ಸುಳ್ಳನ್ನು ಪ್ರೋತ್ಸಾಹಿಸುತ್ತದೆ. ಯಾಕೋ ಆ ಸುಳ್ಳು ತುಂಬಾ ನೋವು ಕೊಡುತ್ತದೆ. ಹಲವಾರು ಬಾರಿ ಜೀವನದಲ್ಲಿ ಸುಳ್ಳುಗಳಿಂದ ಹತಾಶಳಾಗಿರುವೆವು ನಾವು. ಅದು ಮತ್ತೆ ಜೀವನದಲ್ಲಿ […]

ಮರೆಯಲಾಗದ ಮದುವೆ (ಭಾಗ 5): ನಾರಾಯಣ ಎಮ್ ಎಸ್

ಇಲ್ಲಿಯವರೆಗೆ -೪- ದಿನಕಳೆದಂತೆ ಕಾವಶ್ಶೇರಿಯ ದನದಕೊಟ್ಟಿಗೆಯಲ್ಲಾದ ಮುಖಭಂಗದ ನೆನೆಪು ಮಾಸಿದಂತಾಗಿ ಕೊನೆಗೆ ಗುರುತುಸಿಕ್ಕದಂತೆ ಅಯ್ಯರ್ ಮನದಾಳದಲ್ಲೆಲ್ಲೋ ಹೂತುಹೋಗಿತ್ತು. ಹೆಚ್ಚೂಕಮ್ಮಿ ವರುಷ ಎರಡು ವರುಷಕ್ಕೊಂದರಂತೆ ಅಯ್ಯರ್ ಒಬ್ಬೊಬ್ಬರೇ ಹೆಣ್ಣುಮಕ್ಕಳ ಮದುವೆ ಮಾಡಿಮುಗಿಸಿದರು. ಅವುಗಳ ಪೈಕಿ ಯಾವುದಾದರೊಂದು ಮದುವೆಗೆ ಮುಕ್ತಾ ಬಂದಿದ್ದರೆ ಮಾಸಿದ ನೆನಪು ಮತ್ತೆ ಹಸಿರಾಗುತ್ತಿತ್ತೇನೋ! ಆದರೆ ಹೈದ್ರಾಬಾದಿನ ಬ್ಯಾಂಕಿನಲ್ಲಿ ಗುಮಾಸ್ತರಾಗಿದ್ದ ಮುರಳೀಧರರಿಗೆ ಉದ್ಯೋಗದಲ್ಲಿ ಭಡ್ತಿ ದೊರೆತಂತೆಲ್ಲಾ ಮೂರುನಾಲ್ಕು ವರ್ಷಗಳಿಗೊಮ್ಮೆ ಬಾಂಬೆ, ಡೆಲ್ಲಿ, ಕಲ್ಕತ್ತಾ, ಎಂದು ವರ್ಗವಾಗುತ್ತಲೇ ಇತ್ತು. ಅಲ್ಲದೇ ಉದ್ಯೋಗನಿಮಿತ್ತ ಕಾಲಿಗೆಚಕ್ರಕಟ್ಟಿಕೊಂಡಂತೆ ಸುತ್ತುತ್ತಿದ್ದ ಅವರಿಗೆ ಮದುವೆ ಮುಂಜಿಗಳೆಂದು […]

ಸಂವೇದನಾಶೀಲ ಯುವ ಕವಿ ಕಾಜೂರು ಸತೀಶ್: ಕಾವ್ಯ ಎಸ್

ನಾನು ಇಂದು ಪರಿಚಯಿಸುತ್ತಿರುವುದು, ನಮ್ಮ ನಿಮ್ಮೆಲ್ಲರೊಂದಿಗೆ ಸಾಮಾನ್ಯರಂತಿರುವ, ಭಿನ್ನತೆಯಲ್ಲಿ ವಿಭಿನ್ನತೆ ಮೆರೆಯುವ ಕೊಡಗಿನ ಪ್ರತಿಭಾನ್ವಿತ., ಸಂವೇದನಾಶೀಲ ಯುವ ಕವಿ.. ಶಿಕ್ಷಕ.. ಅನುವಾದಕ.. ಸಾಹಿತಿ.. ಚಿಂತಕ ಕಾಜೂರು ಸತೀಶ್ ರವರ ಬಗ್ಗೆ. ಶ್ರೀ. ನಾರಾಯಣ್ ಮತ್ತು ಶ್ರೀಮತಿ. ವಿಶಾಲಾಕ್ಷಿ ಯವರ ಪ್ರೀತಿಯ ಪುತ್ರ K. N. ಸತೀಶ್. ಇವರ ವಾಸ್ತವ್ಯ ಸೋಮವಾರಪೇಟೆ ತಾಲೋಕಿನ ಕಾಜೂರು ಗ್ರಾಮ. ಸತೀಶ್ ರವರ ಕವಿತೆಗಳನ್ನು ಜೀರ್ಣಿಸಿಕೊಳ್ಳಲು ಎರೆಡೆರೆಡು ಬಾರಿಯಾದರೂ ಓದುವ ನಾನು ಅವರ ಕವಿತೆಗಳ ಬಗ್ಗೆ ಏನು ಹೇಳಲು ಸಾಧ್ಯ..? ಎಂಬ ಪ್ರಶ್ನೆ […]