Facebook

Archive for 2019

ಪಂಜು ಕಾವ್ಯಧಾರೆ

ಸ್ವರ್ಗ ಸೃಷ್ಟಿಯಾಗುತಿರಲು ಸುಳಿಯುತಿರುವ ಗಾಳಿ ಗಂಧ ಬಳಿಯಲಿರುವ ಯಮುನೆ ಚಂದ್ರ ಸುಳಿಯದಿರುವ ಸಖನ ನೆನೆದು ನಳಿನೆ ಕಾಯುತಿದ್ದಳು ಅಂದುಗೆ ಧನಿ ‘ಘಲ್” ಎನಲು ಎದೆಯು ಮಿಡಿದು ‘ಝಲ್” ಎನಲು ಬಂದನೇನೆ………. ಮಾಧವನು ಎಂದು ರಾಧೆ ನೊಂದಳು ಸುತ್ತಮುತ್ತ ಭೃಂಗ ಪಾನ ಹೊತ್ತಿ ಎದೆಯ ರಸದ ಗಾನ ಮೆತ್ತನೊಮ್ಮೆ ಮುಖವನೆತ್ತಿ ಮುತ್ತನೊತ್ತ ಬಾರದೇ ಹಾರುತಿತುವ ಸೆರಗ ಬಿಟ್ಟು ಜಾರುತಿರುವ ನೆರಿಗೆ ಬಿಟ್ಟು ಹಾರಿ ಬರುವ ಮುರಳಿಯಡೆಗೆ ನೀರೆ ಓಡಿ ಬಂದಳು ಬಂದ ನಲ್ಲನೊಡನೆ ಕೂಡಿ ಒಂದು ಘಳಿಗೆ ಎಲ್ಲ […]

ಮತ್ತೆ ಹೇಳಿ, ಮರು ಜೋಡಿಸಿ, ನಲಿದಾಡಿ ಅಭಿಯಾನ

ಪ್ರಥಮ್ ಬುಕ್ಸ್ ಸ್ಟೋರಿವೀವರ್ ನ (https://storyweaver.org.in)  ಮತ್ತೆ ಹೇಳಿ, ಮರು ಜೋಡಿಸಿ, ನಲಿದಾಡಿ ಅಭಿಯಾನ ವು (Retell, Remix, Rejoice) ಮಾ.20 ರಿಂದ ಶುರುವಾಗಲಿದೆ. ಈ ಮೂಲಕ ಪ್ರಥಮ್ ಬುಕ್ಸ್ ನ ವಾರ್ಷಿಕ ಕತೆ ಹೇಳುವ ಸ್ಪರ್ಧೆಗೆ ಚಾಲನೆ ಸಿಗಲಿದೆ. ಪ್ರತಿ ವರ್ಷ ಮಾ.20ಕ್ಕೆ ನಮಗಾಗಿ ಕತೆಗಳನ್ನು ಬರೆದ ಲೇಖಕರು, ಓದುಗರಿಂದ ಆಯ್ದ ಕೆಲವು ವಿಷಯಗಳ ಮೂಲ ಎಳೆಯೊಂದಿಗೆ ಕತೆಗಳನ್ನು ಬರೆಯಲು ಆಹ್ವಾನಿಸುತ್ತೇವೆ. ಈ ಎಲ್ಲಾ ವಿಷಯಗಳು ಪ್ರಥಮ್ ಬುಕ್ಸ್ ಸಂಪಾದಕೀಯ ಬಳಗದ ಆಯ್ಕೆಯೇ ಆಗಿರುತ್ತದೆ. 2019ರ ಅಭಿಯಾನದ ಮುಖ್ಯ ಉದ್ದೇಶ […]

ಮಾನಸಪುತ್ರ ನಾಟಕ ಪ್ರದರ್ಶನ

ನಾಟಕದ ಹೆಸರು : ಮಾನಸಪುತ್ರ. ಆಧಾರ : ಬೀಚಿಯವರ ‘ ನನ್ನ ಭಯಾಗ್ರಫಿ’ ಮತ್ತು ಇತರೆ ಅನುಭವಗಳು ರಚನೆ – ನಿರ್ದೇಶನ : ಬಸವರಾಜ ಎಮ್ಮಿಯವರ ಅಭಿನಯಿಸುವ ತಂಡ : ಕಲಾವಿಲಾಸಿ ದಿನಾಂಕ ಮತ್ತು ಸಮಯ : 13 ಏಪ್ರಿಲ್ 2019, ಶನಿವಾರ. ಸಂಜೆ 7.00 ಕ್ಕೆ ಸ್ಥಳ :ಸೇವಾಸದನ. 14ನೆ ಅಡ್ಡ ರಸ್ತೆ, ಮಲ್ಲೇಶ್ವರ ಬೆಂಗಳೂರು ನಾಟಕದ ಅವಧಿ : 80 ನಿಮಿಶಗಳು. ಪ್ರವೇಶ ದರ : 100/- ಹೆಚ್ಚಿನ ಮಾಹಿತಿಗೆ : 9663523904 ನಾಟಕದ […]

ಜಾಣಸುದ್ದಿ 19: ಕೊಳ್ಳೇಗಾಲ ಶರ್ಮ

ಈ ವಾರದ ಸಂಚಿಕೆಯಲ್ಲಿ ಕೊಳ್ಳೇಗಾಲ ಶರ್ಮರವರ ಧ್ವನಿಯಲ್ಲಿರುವ ಈ ಆಡೀಯೊ ಕೇಳಲು ಈ ಕೆಳಗಿನ ಕೊಂಡಿಯ ಮೇಲೆ ಕ್ಲಿಕ್ಕಿಸಿ. ಈ ಧ್ವನಿಮುದ್ರಿಕೆಯನ್ನು ಡೌನ್ ಲೋಡ್ ಮಾಡಿಕೊಳ್ಳಲು ಜಾಣ ಸುದ್ದಿ ಧ್ವನಿಮುದ್ರಿಕೆ ಲಿಂಕ್ ನ ಮೇಲೆ ಕ್ಲಿಕ್ ಮಾಡಿ ನಂತರ save as/ download ಆಪ್ಷನ್ ನಿಂದ ನಿಮ್ಮ ಮೊಬೈಲ್/ ಕಂಪ್ಯೂಟರ್ ಗೆ ಡೌನ್ ಲೋಡ್ ಮಾಡಿಕೊಳ್ಳಿ… ಇ ಮೇಲ್ ನಲ್ಲಿ ಅಥವಾ ವಾಟ್ಸ್ ಅಪ್ ನಲ್ಲಿ ಈ ಧ್ವನಿಮುದ್ರಿಕೆ ನಿಮಗೆ ಬೇಕು ಎಂದನಿಸಿದರೆ ನಿಮ್ಮ ಕೋರಿಕೆಯನ್ನು ನಮ್ಮ […]

ರೈತನ ಮಗಳ ಎಂ.ಬಿ.ಬಿ.ಎಸ್. : ಕೊಟ್ರೇಶ್ ಕೊಟ್ಟೂರು

ನಾಳೆ ಹೇಗಾದರೂ ಮಾಡಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿಯೇ ತೀರುವೆ ಎನ್ನುವ ಭರವಸೆಯಿಂದ ಜಗದೀಶ ಭಾನುವಾರ ರಾತ್ರಿ 7.00 ಗಂಟೆಗೆ ತನ್ನೆಲ್ಲಾ ಬಟ್ಟೆಯನ್ನು ಪ್ಯಾಕ್ ಮಾಡಿ ರಾತ್ರಿ 10.30 ಕ್ಕೆ ಬಸ್ ಇರುವುದು ಅದಕ್ಕೆ ಹೊರಟರಾಯಿತು ಎಂದು ಅಂದುಕೊಂಡು ತನ್ನ ಹೆಂಡತಿ ಮುಬೀನಾಗೆ ಹೇಳಿದ “ಏನೆ ನಾನು ಬೆಳಿಗ್ಗೆ ಬೆಂಗಳೂರು ಹೋಗ್ತಿದ್ದೀನಿ ಮಗಳಿಗೆ ಏನಾದ್ರೂ ಇದ್ರೆ ಕೊಡು ಅಂದ” ಅದಕ್ಕೆ ಮುಬೀನಾ “ಅಲ್ರೀ ಇಲ್ಲಿ ಉಣ್ಣಾಕ ಏನೂ ಗತಿಯಿಲ್ಲ, ಮಳೆ ನೋಡಿದ್ರ ಕಣ್ಮರೆಯಾಗ್ಯಾತಿ ಏನು ಅದ ಮನ್ಯಾಗ ಬರೀ […]

ವಿಂಡೀಸ್ ಪಾಲಿಗೆ ಒಬ್ಬನೇ ಶಿವ, ಒಬ್ಬನೇ ಚಂದ್ರ: ಆದರ್ಶ ಯು ಎಂ

ನೀವು ತೊಂಭತ್ತರ ದಶಕದಿಂದ ಕ್ರಿಕೆಟ್ ನೋಡುವವರಾಗಿದ್ದರೆ ನಿಮಗೆ ಶಿವನಾರಾಯಣ್ ಚಂದ್ರಪೌಲ್ ನೆನಪಿನಲ್ಲಿ ಇದ್ದೇ ಇರುತ್ತಾನೆ, ಹೆಚ್ಚೂ ಕಡಿಮೆ ಬೌಲರ್ ಗೆ ಅಡ್ಡವಾಗಿ ನಿಲ್ಲುವ ಆತನ ಬ್ಯಾಟಿಂಗ್ ಶೈಲಿಯನ್ನು ಮರೆಯಲಾದರೂ ಹೇಗೆ ಸಾಧ್ಯ? ಶಿವನಾರಾಯಣ್ ಚಂದ್ರಪಾಲ್ ನ ವಂಶದ ಹಿಂದಿನವರು ಜೀತ ಪದ್ಧತಿಯಿಂದ ಭಾರತದಿಂದ ವೆಸ್ಟ್ ಇಂಡೀಸ್ ಗೆ ಹೋಗಿ ನೆಲೆಸಿದರು ಅಂತ ಇತಿಹಾಸ ಹೇಳುತ್ತದೆ. ಅಂತಹ ವಂಶದ ಚಂದ್ರಪಾಲ್ ಮುಂದೆ ವೆಸ್ಟ್ ಇಂಡೀಸ್ ತಂಡದ ಆಧಾರ ಸ್ಥಂಭವಾಗಬಲ್ಲ ಅಂತ ಅಂದು ಜೀತದಾಳುಗಳಾಗಿದ್ದ ಆತನ ಪೂರ್ವಜರಿಗೆ ಗೊತ್ತಿರಲಿಲ್ಲವೇನೋ. ಚಂದ್ರ […]

ಹೀಗೊಂದು ಸಾರ್ಥಕ ಮಹಿಳಾ ದಿನಾಚರಣೆ: ಶೀಲಾ. ಶಿವಾನಂದ. ಗೌಡರ.   

ಅಂದು ಮಾರ್ಚ 8. ವಿಶ್ವ ಮಹಿಳಾ ದಿನಾಚರಣೆ. ಶಾಲೆಯಲ್ಲಿ ವಿಶ್ವ ಮಹಿಳಾ ದಿನದ  ಇತಿಹಾಸವನ್ನು,  ಮಹಿಳೆಯರ ಹಕ್ಕು, ರಕ್ಷಣೆ, ಖ್ಯಾತ ಮಹಿಳಾ ಸಾಧಕಿಯರು, ಸಾಧನೆಯ ಹಾದಿಯಲ್ಲಿ ಎದುರಾಗುವ ತೊಡಕುಗಳು, ಅವುಗಳನ್ನು ಮೆಟ್ಟಿನಿಂತು ಸಾಧನೆಯ ನಗುಚಲ್ಲುವ  ಛಾತಿಯ ಬಗ್ಗೆ ವಿದ್ಯಾರ್ಥಿಗಳಿಗೆ  ತಿಳಿಸಲು , ಅವರೊಂದಿಗೆ ಚರ್ಚಿಸಲು ತುಂಬಾ ಉತ್ಸುಕಳಾಗಿದ್ದೆ.  ಸಂಸಾರ ಮತ್ತು  ವೃತ್ತಿಗಳೆರಡನ್ನು  ಯಶಸ್ವಿಯಾಗಿ  ನಿಭಾಯಿಸುತ್ತಿರುವ ಸುಪರ್ ವುಮನ್ ಗಳ ಸಾಲಿನಲ್ಲಿ ನಾನೂ ಒಬ್ಬಳು ಎಂದು ಬೀಗುತ್ತ, ಲಗುಬಗೆಯಲ್ಲಿ ಶಾಲೆಗೆ ನಡೆದೆ. ಯಾವತ್ತೂ ಅಭ್ಯಾಸದಲ್ಲಿ, ಶಾಲೆಯ ಪ್ರತಿ ಚಟುವಟಿಕೆಗಳಲ್ಲಿ […]

ಬೆಲ್ಲದ ಬಗ್ಗೆ ಬಲ್ಲಿರೇನು?: ಎಂ.ಎಚ್.ಮೊಕಾಶಿ

ಇಂದು ಬಹುತೇಕ ಜನರ ಮನೆಯಲ್ಲಿ ಫ್ರಿಜ್ ಇರುವುದರಿಂದ ವಿವಿಧ ರೀತಿಯ ಸಾಫ್ಟ್ ಡ್ರಿಂಕ್ಸ್‍ಗಳನ್ನು ಬಳಸುತ್ತೇವೆ. ಇವುಗಳು ನಾವು ಬಿಸಿಲಿನಿಂದ ಬಂದಾಗ ನಮ್ಮ ದೇಹವನ್ನು ತಂಪಾಸುತ್ತವೆ. ಆದರೆ ಮೊದಲೆಲ್ಲ ಹಾಗಿರಲಿಲ್ಲ ಹೊರಗಿನಿಂದ ಬಿಸಿಲಿನಲ್ಲಿ ಬಂದವರಿಗೆ ಬೆಲ್ಲ ಮತ್ತು ನೀರು ಕೊಡುತ್ತಿದ್ದರು. ಏಕೆಂದರೆ ಬೆಲ್ಲದಲ್ಲಿ ಗ್ಲುಕೋಸ್, ವಿಟಮಿನ್ ಹಾಗೂ ಕ್ಯಾಲ್ಸಿಯಮ್‍ಗಳಿರುವುದರಿಂದ ಶೀಘ್ರವಾಗಿ ದಣಿವಾರಿಸಿ ಆರೋಗ್ಯವನ್ನು ಸುಧಾರಿಸುವುದೆಂದು ತಿಳಿದಿದ್ದರು. ಆದರೆ ಇಂದು ಬೆಲ್ಲ ತಿನ್ನುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಏಕೆಂದರೆ ಬಹುತೇಕ ಜನರು ಸಕ್ಕರೆಯತ್ತ ತಮ್ಮ ಅಕ್ಕರೆಯನ್ನು ತೋರಿಸುತ್ತಿದ್ದಾರೆ. ಬೆಲ್ಲ ಅಂದರೆ ಮೂಗು […]

ಗೂಡಿನಲ್ಲೊಂದು ಗೂಡು!: ಜಯಶ್ರೀ. ಜೆ. ಅಬ್ಬಿಗೇರಿ ಬೆಳಗಾವಿ 

‘ನಿರಂತರ ಸಂತೋಷವೆಂಬುದಿಲ್ಲ ಕೇವಲ ಸಂತಸದ ಕ್ಷಣಗಳಿವೆ.’ ಎನ್ನುವುದು ಬಲ್ಲವರ ಮಾತು. ಇಂಥ ಸಂತಸದ ಕ್ಷಣಗಳನ್ನು ದಕ್ಕಿಸಿಕೊಳ್ಳಲು ಸ್ವಂತದ್ದೊಂದು ಗೂಡು (ಹೋಮ್ ಸ್ವೀಟ್ ಹೋಮ್) ಕಟ್ಟಲೇಬೇಕೆಂದು ಮುಂದಾಗುತ್ತೇವೆ. ಸ್ವಂತದ್ದೊಂದು ಮನೆ ಕಟ್ಟಿಕೊಳ್ಳುವುದು ಬದುಕಿನ ಪರಮೋಚ್ಚ ಗುರಿ. ಆ ಗುರಿ ಮುಟ್ಟಲು ಬ್ಯಾಂಕ್ ಲೋನ್‍ಗೆ ಅರ್ಜಿ ಸಾಲದ್ದಕ್ಕೆ ಸಂಬಂಧಿಕರು ಸ್ನೇಹಿತರು ಪರಿಚಿತರ ಹತ್ತಿರ ಸಾಲ. ಮನೆಯಾಕೆಯ ಸಾಮಾನು ಅಡವಿಡುವುದು ಇನ್ನೂ ಏನೇನೋ ನಡೆಯುತ್ತವೆ. ಇದನ್ನೆಲ್ಲ ಅರಿತ ನಮ್ಮ ಹಿರಿಯರು ‘ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು.’ ಎಂಬ ಮಾತು […]

ಸ್ವಾರ್ಥಿಗಳಾಗಿ – ಅಗತ್ಯವಿದ್ದವರಿಗೆ ನೆರವಾಗಿ: ಎಂ.ಎನ್.ಸುಂದರ ರಾಜ್, ಶಿವಮೊಗ್ಗ

ಇದೊಂದು 100 ವರ್ಷದ ಕಥೆಯಾದರೂ, ಅದರಿಂದ ದೊರಕುವ ಪಾಠ ಇಂದಿಗೂ ಪ್ರಸ್ತುತವಾದದ್ದು. 1892ನೆಯ ಇಸವಿ., ಸ್ಥಳ ಸ್ಟಾಂಡ್ ಫೋರ್ಡ್ ವಿಶ್ವವಿದ್ಯಾನಿಲಯ. 18 ವರ್ಷದ ಯುವ ವಿದ್ಯಾರ್ಥಿಯೊಬ್ಬ ಕಾಲೇಜಿನ ಶುಲ್ಕ ಕಟ್ಟಲು ಹೆಣಗಾಡುತ್ತಿದ್ದ. ಅವನೊಬ್ಬ ಅನಾಥ, ಯಾವ ಬಂಧುಗಳೂ ಇಲ್ಲ, ಹಣ ಹೊಂದಿಸುವುದು ಹೇಗೆಂದು ಒದ್ದಾಡುತ್ತಿದ್ದ. ಆಗ ಅವನಿಗೊಂದು ಉಪಾಯ ಹೊಳೆಯಿತು. ಅವನು ಮತ್ತು ಅವನ ಗೆಳೆಯನೊಬ್ಬ ವಿಶ್ವ ವಿದ್ಯಾನಿಲಯದ ಆವರಣÀದಲ್ಲಿ ಒಂದು ಸಾಂಸ್ಕøತಿಕ ಕಾರ್ಯಕ್ರಮವನ್ನೇರ್ಪಡಿಸಿ ಹಣ ಸಂಪಾದಿಸಿ ಕಾಲೇಜಿನ ಶುಲ್ಕ ಭರ್ತಿ ಮಾಡುವುದು. ಅದಕ್ಕಾಗಿ ಅಂದಿನ ಪ್ರಸಿದ್ಧ […]