Facebook

Archive for 2018

ಪಂಜು ಕಾವ್ಯಧಾರೆ

ಸಹಜ-ಸುಧೆ ಸಾಗರದಾಚೆಗೆ ಏನೆಂದು ತೀರಕೇ ಅರಿವಿಲ್ಲ ಅಂಚಿನಾ ಚಿಂತೆಯ ಮಂಥನ ಬೇಕೇ? ಸಾಗರದಲೆಯಿರಲು ಒಂದೊಂದೂ ಅನನ್ಯ ಸೆರೆಯಾಗಲಿ ಕಣ್ಮನ ಅದಕೇ! ಅತಿ ಹೆಚ್ಚು! ಅತಿ ದೊಡ್ಡ! ಅತಿ ಜಾಣ! ಅತಿ ಭಾರ! ಅತಿ ಅವನತಿ ಅತೀತಗಳ ಗತಿಗಿದೆ ಕರ್ಮ ಅವಲೋಕನಗಳ ಕೊನೆ ನಿಲ್ದಾಣವಿಗೋ ಮರ್ಮ| ಜೀವ-ಜೀವವೂ ಆಗಿರೆ ಜೀವಾಳದನ್ವಯ ವ್ಯಾಖ್ಯಾನ ಚಿತ್ರಿಸುತಿದೆ ಅನುಭವದ ಅವ್ಯಯ|| ಸಾಧ್ಯತೆಯ ಸಲೀಸಿಗೆ ಸೋತರದು ಅಫಲ ಸಾಧಕದ ಸ್ಥಾಯಿಯ ಮೆಟ್ಟರೊಲೀತು ಸಫಲ| ಸಾಧು ತಾನೆಂದು ಹೊಳೆಯುತಿರೆ ಸಾರ್ಥಕತೆ ಸದ್ದು-ಸುದ್ದಿಯ ಹಂಗೇ ಸಾಧನೆಯನಳೆವ ಸಾಧನಕೆ? […]

ಹೇಳುವುದಕ್ಕೆ ಕೇಳುವುದಕ್ಕೆ ಇವರಿಗೆ ಹಕ್ಕಿದೆಯೇ?: ಗುರುಪ್ರಸಾದ ಕುರ್ತಕೋಟಿ, ಬೆಂಗಳೂರು

ಕೆಲವು ದಿನಗಳ ಹಿಂದೆ ಒಂದು ಪತ್ರಿಕೆಯಲ್ಲಿ ನಮ್ಮ ಭಾರತದ ಸಮಸ್ಯೆಗಳ ಕುರಿತು, ಎಷ್ಟೋ ವರ್ಷಗಳಿಂದ ಅಮೆರಿಕೆಯಲ್ಲಿ ನೆಲೆಸಿರುವ ಒಬ್ಬರು ಬರೆದ “ಹೇಳುವವರು ಕೇಳುವವರು ಇಲ್ಲದ ದೇಶ” ಎಂಬ ಲೇಖನ ಓದಿದೆ. ಭಾರತದ ಬಗೆಗಿನ ಅವರ ಹೊರನೋಟ ಅದಾಗಿತ್ತು. ಅವರು ಇಲ್ಲಿಗೆ ಕೆಲ ದಿನಗಳ ಮಟ್ಟಿಗೆ ಬಂದಾಗ ಆದ ಕಟು ಅನುಭವಗಳ ಕುರಿತು ಪ್ರಸ್ತಾಪಿಸಿದ್ದರು. ಟ್ಯಾಕ್ಸಿಯ ಡ್ಯಾಶ್ ಬೋರ್ಡ್ ಅಲ್ಲಿ ಇಲಿ ಬಂತಂತೆ… ಯಾವ್ದೂ ಸಿಸ್ಟಮ್ ಕೆಲಸ ಮಾಡಲ್ವಂತೆ… ಇಲ್ಲಿನ ಜನ ಏನು ಮಾಡಿದರೂ ಸುಮ್ಮನಿರುತ್ತಾರಂತೆ… ಹಾಗೆ ಹೀಗೆ, […]

ಪಾಲಿಗೆ ಬಂದದ್ದು ಪಂಚಾಮೃತ……: ನಳಿನಿ. ಟಿ. ಭೀಮಪ್ಪ.

ರಾಜುವಿಗೆ ಏನೋ ಕುತೂಹಲ. ತಾನು ಮನೆಯಲಿಲ್ಲದ ಸಮಯದಲ್ಲಿ ಅಪ್ಪ, ಅಮ್ಮ, ಅಣ್ಣ, ಅತ್ತಿಗೆ ತನ್ನ ಮದುವೆಯ ಬಗ್ಗೆ ಏನೋ ಗಂಭೀರವಾಗಿ ಚರ್ಚಿಸುತ್ತಿದ್ದುದನ್ನು ಅಣ್ಣನ ಮಕ್ಕಳು ಆಟವಾಡುತ್ತಾ ಗಮನಿಸಿ ವಿಷಯ ತಿಳಿಸಿದ್ದರು. ಮದುವೆ, ರಾಜು ಹೆಸರು ಆಗಾಗ ಹೇಳುತ್ತಿದ್ದರು ಎಂದು ಅಡ್ಡಗೋಡೆಯ ಮೇಲೆ ದೀಪವಿಟ್ಟ ಹಾಗೆ ಹೇಳಿ ಆಡಲು ಓಡಿದವು. ಆಟದ ಬಗ್ಗೆ ಲಕ್ಷ್ಯವಿದ್ದ ಮಕ್ಕಳಿಗೆ ದೊಡ್ಡವರ ಮಾತುಗಳಲ್ಲಿ ಆಸಕ್ತಿಯೇನೂ ಇರಲಿಲ್ಲ. ಸ್ವಲ್ಪ ದಿನದಲ್ಲಿ ರಾಜುವಿನ ಮದುವೆಯ ಬಗ್ಗೆ ಚರ್ಚೆ ಕಾವೇರತೊಡಗಿತ್ತು. ಮಕ್ಕಳಿಗೆ ವಿಷಯವೆಲ್ಲಾ ಸರಿಯಾಗಿ ಕೇಳಿಸಿಕೊಳ್ಳಲು ಚಾಕೊಲೇಟಿನ […]

ಅಂದಿನ ಆ ಕರಾಳ ರಾತ್ರಿ: ನಂದಾ ಹೆಗಡೆ

ಎಪ್ಪತ್ತರ ಇಳಿವಯಸ್ಸಿನಲ್ಲಿ ನಾನು ನನ್ನ ಹಿಂದಿನ ಬದುಕಿನ ಬಗ್ಗೆ ಒಂದು ಸಿಂಹಾವಲೋಕನ ಮಾಡಿದಾಗ—————– ನನ್ನ ಬದುಕು ನಾನಂದುಕೊಂಡಂತೆಯೇ ನಡೆಯಿತು. ಎಷ್ಟೋ ಜನ ಹೇಳುತ್ತಾರೆ, ಬದುಕು ನಾನಂದುಕೊಂಡಂತೆ ನಡೆಯಲೇ ಇಲ್ಲ. ನಾನಂದುಕೊಂಡಿದ್ದೇ ಒಂದು, ಬದುಕು ನಡೆದದ್ದೇ ಬೇರೆ, ನಾನೇನೇನೋ ಕನಸು ಕಂಡಿದ್ದೆ. ಆದರೆ ನನ್ನ ಯಾವ ಕನಸೂ ನನಸಾಗಲಿಲ್ಲ. . . . . . . . . ಹೀಗೇ ಏನೇನೋ . . . . . . . . . . . […]

ನಿನ್ನ ಪ್ರೀತಿಯಲ್ಲಿ ರಾಧೆಯಾಗುವ ಇರಾದೆ ನನಗಿಲ್ಲ ಗೆಳೆಯ: ಜಯಶ್ರೀ.ಜೆ. ಅಬ್ಬಿಗೇರಿ

ಸಿಕ್ಕ ಸಿಕ್ಕವರೊಂದಿಗೆ ನಾನೇ ಮುಂದಾಗಿ ಕೈ ಚಾಚಿ ಗೆಳೆತನ ಮಾಡಿಕೊಳ್ಳೋದು ಅಂದ್ರೆ ಮೊದಲಿನಿಂದಲೂ ಅದೇಕೋ ಇಷ್ಟ ನಂಗೆ. ಈ ಗೆಳೆತನದ ವಿದ್ಯೆಗೆ ನಾನೇ ಗುರುವಾಗಿ ತುಂಬಾ ಕಲಿತಿದಿನಿ. ತೊಚಿದ್ದೆನ್ನೆಲ್ಲಾ ಗೀಚಬೇಕೆನ್ನುವ ಹುಚ್ಚು ಅದ್ಯಾವಾಗ ಹಿಡಿತೋ ಎಷ್ಟು ತಲೆ ಕೆರೆದುಕೊಂಡರೂ ನೆನಪಾಗ್ತಿಲ್ಲ. ಪುಸ್ತಕಗಳ ರಾಶಿಯ ಮಧ್ಯೆ ನನ್ನನ್ನೇ ಮರೆತು ಹೋಗುವ ಖಯಾಲಿಯಂತೂ ಖಾಸಾ ಗೆಳತಿಯರಿಂದ ಹಿಡಿದು ನಿನ್ನೆ ಮೊನ್ನೆ ಕೈಕುಲುಕಿದವರಿಗೂ ಗೊತ್ತಿದೆ.ಹಟ ತೊಟ್ಟ ಹಟವಾದಿ ಹಂಗ ಓದೋದು ಬರೆಯೋದು ಅಂದ್ರ ಪಂಚಪ್ರಾಣ.ಹಂಗಂತ ಮಾತಿಗೇನೂ ಕಮ್ಮಿಯಿಲ್ಲ. ಆದರೂ ಯಾರೂ ನನಗ […]

ಮಕ್ಕಳ ಕವನಗಳು: ಡಾ.ಶಿವಕುಮಾರ ಎಸ್‌.ಮಾದಗುಂಡಿ, ವೆಂಕಟೇಶ ಚಾಗಿ, ಸಿಂಗಾರಿಪುರ ಆದಿತ್ಯಾ

ಗುಬ್ಬಿ ಮರಿ!! ಗುಬ್ಬಿ ಗುಬ್ಬಿ ಚೀಂವ್ ಚೀಂವ್ ಎನ್ನುವ ನಿನ್ನಯ ಸಪ್ತಸ್ವರ ರಾಗ ಕೇಳುತ್ತಿಲ್ಲ! ನಮ್ಮ ಬಳಿಯೇ ಸುಳಿಯ ಬಯಸುವ ಚೀಂವ್ ಚೀಂವ್ ಗುಬ್ಬಿ ನಿನ್ನ ದ್ವನಿ ಕೇಳುತ್ತಿಲ್ಲ! ಕಾಳನು ಹಾಕುತಾ ಹಿಡಿಯಲು ಬರುವೇ ನೀನೆಲ್ಲಿ ಹೋದೆ ಗುಬ್ಬಚ್ಚಿ ನಿಮ್ಮಯ ಕಲರವ ಕಾಣುತ್ತಿಲ್ಲ! ನಮ್ಮ ಮನೆಯ ಅಂಗಳದೊಳಗೆ ನಿಮ್ಮ ಸ್ನೇಹ ಬಳಗದ ಸದ್ದು ಈಗ ನಾ ನೋಡಿಲ್ಲಾ! ನಿಮ್ಮಗಳಿಗಾಗಿ ಇಂದು ಹುಡುಕಾಡುವ ಸ್ಥಿತಿ ನಮಗೆ ಬಂದಿದೆ ನಿವೆಲ್ಲಿ ಹೋದಿರಾ ಗುಬ್ಬಿಚ್ಚಿ…!! ಡಾ.ಶಿವಕುಮಾರ ಎಸ್‌.ಮಾದಗುಂಡಿ       […]

ತಂತ್ರಗಾರಿಕೆಯ ಚಕ್ರಮೇಘದಲ್ಲಿ ಮರೆಯಾದ ಜಯದ್ರತಭಾಸ್ಕರ!: ಕೆ ಟಿ ಸೋಮಶೇಖರ ಹೊಳಲ್ಕೆರೆ. 

ಮಹಾಭಾರತ ತಂತ್ರಗಳ ಆಗರ! ಶ್ರೀಕೃಷ್ಣ ತಂತ್ರಗಾರಿಕೆಯ ಅರಸ! ಪಾಂಡವರಿಂದ ಜಯಿಸಲಸದಳವಾದ ಕುರುಕ್ಷೇತ್ರ ಯುದ್ದವ, ಅತಿರಥ ಮಹಾರಥರೆನಿಸಿದ ಭೀಷ್ಮ, ದ್ರೋಣ, ಕರ್ಣ, ದುರ್ಯೋಧನ ಮೊದಲಾದವರನ್ನು ತಂತ್ರಗಾರಿಕೆಯಿಂದಲೇ ಜಯಿಸುವಂತೆ ಮಾಡಿ ವಿಜಯ ಮಾಲೆ ಪಾಂಡವರಿಗೆ ಹಾಕಿಸಿದ ಮಹಾತಂತ್ರಿ! ಇದೆಲ್ಲಾ ಧರ್ಮ ಸಂಸ್ಥಾಪನಾರ್ಥಾಯ ದುಷ್ಟ ಶಿಕ್ಷಣಾರ್ಥಾಯ ಶಿಷ್ಟ ರಕ್ಷಣಾರ್ಥಾಯ! ದ್ರೋಣ ಪರ್ವ ಆರಂಭವಾಗಿರುತ್ತದೆ. ಪಾಂಡವರು ಮತ್ತು ಕೌರವರೆಲ್ಲರಿಗೂ ಬಿಲ್ವಿದ್ಯೆಯನ್ನು ಕಲಿಸಿದ ಗುರು ದ್ರೋಣ. ಇವರು ಕುರುಕ್ಷೇತ್ರ ಯುದ್ದದ ಸಂದರ್ಭದಲ್ಲಿ ಕೌರವರ ಪಕ್ಷದಲ್ಲಿ ಇರಬೇಕಾಗುತ್ತದೆ. ಕುರುಕ್ಷೇತ್ರ ಯುದ್ಧದಲ್ಲಿ ಕೌರವರ ಸೇನಾ ನಾಯಕನಾಗಿದ್ದ ಭೀಷ್ಮರ […]

ಕಿರುಲೇಖನಗಳು: ವೇದಾವತಿ ಎಚ್.ಎಸ್.

ಚಿಕ್ಕವರಿದ್ದಾಗ ಎಲ್ಲಾ ಮಕ್ಕಳು ಸಾಮಾನ್ಯವಾಗಿ ಆಡುತ್ತಿದ್ದ ಆಟ ಕಣ್ಣಾಮುಚ್ಚಾಲೆ. ತಂಡದಲ್ಲಿ ಯಾವುದಾದರೂ ಒಂದು ಮಗು ಕಣ್ಣು ಮುಚ್ಚಿಕೊಂಡು ಹಾಡನ್ನು ಹೇಳುವುದು ಸಾಮಾನ್ಯವಾಗಿರುತ್ತದೆ.ಆ ಹಾಡು ಒಬ್ಬರ ಬಾಯಿಂದ ಇನ್ನೋಬ್ಬರ ಬಾಯಿಗೆ ಆಟದ ಮುಖಾಂತರವಾಗಿ ಬಂದಿದೆ. ಈ ಹಾಡಿನ ಒಳಾರ್ಥ ಮಾತ್ರ ಮಕ್ಕಳಿಗೆ ತಿಳಿಸಿದವರು ವಿರಳ ಎನ್ನಬಹುದು. “ಕಣ್ಣಾ ಮುಚ್ಚೇ…ಕಾಡೇ ಗೂಡೇ…ಉದ್ದಿನ ಮೂಟೆ…ಉರುಳೇ ಹೋಯ್ತು…ನಮ್ಮಯ ಹಕ್ಕಿ…ನಿಮ್ಮಯ ಹಕ್ಕಿ…ಬಿಟ್ಟೇ ಬಿಟ್ಟೆ…”ಕೊನೆಯಲ್ಲಿ “ಕೂ”ಎಂದು ಕಣ್ಣು ಮುಚ್ಚಿಕೊಂಡ ಮಗು,ಕಣ್ಣು ಬಿಟ್ಟು ಕೊಂಡು ಬೇರೆಯವರನ್ನು ಹುಡುಕಿಕೊಂಡು ಹೋಗುವುದು ಎಲ್ಲರಿಗೂ ಗೊತ್ತಿರುವ ವಿಷಯ. ಇದರ ಅರ್ಥ ಹೀಗಿದೆ, […]

ಕಿರುಲೇಖನಗಳು: ವೆಂಕಟೇಶ್ ಚಾಗಿ, ಪ್ರವೀಣ ಶೆಟ್ಟಿ, ಕುಪ್ಕೊಡು, ಕೆಂದೆಲೆ ವನಜ

ತಪ್ಪು ಮಾಡದವ್ರು ಯಾರವ್ರೆ ? ಭೂಮಿಯ ಮೇಲೆ ಜನಿಸಿದ ಪ್ರತಿಯೊಬ್ಬರೂ ಒಂದಲ್ಲಾ ಒಂದು ತಪ್ಪು ಮಾಡೇ ಮಾಡಿರ್ತಾರೆ ಅಲ್ಲವೇ? ನಾನು ತಪ್ಪೇ ಮಾಡಿಲ್ಲ ಎಂದು ಘಂಟಾಘೋಷವಾಗಿ ಹೇಳುವವರು ಯಾರಾದರೂ ಇದ್ದಾರೆಯೇ ? ಇಲ್ಲ . ತಪ್ಪು ಮಾಡುವುದು ಮಾಡುವುದು ಮನುಷ್ಯನ ಸಹಜಧರ್ಮ . ಚಿಕ್ಕ ವಯಸ್ಸಿನಲ್ಲೇ ಸಾಕಷ್ಟು ತಪ್ಪುಗಳನ್ನು ಮಾಡಿರುತ್ತೇವೆ. ಅವು ತಪ್ಪುಗಳಲ್ಲ. ಸ್ವ ಕಲಿಕೆಯ ಹಂತಗಳು. ತಪ್ಪುಗಳು ಒಂದೊಂದೇ ಕಲಿಕೆಯನ್ನು ತಿಳಿಸುತ್ತಾ ಹೋಗುತ್ತವೆ. ಮಗು ಆಟವಾಡುವಾಗ, ಮಾತನಾಡುವಾಗ, ಬರೆಯುವಾಗ ಹೀಗೆ ಹಲವಾರು ಸನ್ನಿವೇಶಗಳಲ್ಲಿ ತನಗೆ ಅರಿವಿಲ್ಲದೆ […]

ದಯೆಯೇ ಧರ್ಮದ ಮೂಲ (ಕೊನೆಯ ಭಾಗ): ಸುನಂದಾ ಎಸ್ ಭರಮನಾಯ್ಕರ

ಇಲ್ಲಿಯವರೆಗೆ ಕರುಣೆ ಇರುವುದು ಕೊಡುವುದರಲ್ಲಿ ಇಲ್ಲ:- ನಾವು ಬೇರೆಯವರಿಗೆ ತೋರಿಸುವ ಕರುಣೆ ಅವರನ್ನು ಆಶಕ್ತರನ್ನಾಗಿ, ಬಲಹೀನರನ್ನಾಗಿ ಮಾಡಬಾರದು ಅಷ್ಟೇ ಅಲ್ಲ, ನಮ್ಮ ದಯೆ ಅವರಲ್ಲಿ ದುಷ್ಟ ಆಲೋಚನೆಗಳನ್ನು ಹುಟ್ಟುಹಾಕಬಾರದು, ಹಾಗಾದಲ್ಲಿ ಅದಕ್ಕೆ ಸೂಕ್ತ ದಂಡನೆಯನ್ನು ನಾವೇ ಅನುಭವಿಸುತ್ತೇವೆ. ಅದಕ್ಕೊಂದು ಉತ್ತಮ ಉದಾಹರಣೆ ಇಲ್ಲಿದೆ. ಅರ್ಹತೆಯಿಲ್ಲದೆ ಏನನ್ನು ಪಡೆಯಬಾರದು ಹಾಗೇ ಅರ್ಹತೆಯಿಲ್ಲದವನಿಗೆ ಏನನ್ನು ಕೊಡಲೂಬಾರದು. ಸಾಧುವೊಬ್ಬ ಒಂದು ಗುಹೆಯಲ್ಲಿ ಕುಳಿತುಕೊಂಡು ಬಹಳ ಕಠಿಣವಾದ ತಪಸ್ಸನ್ನಾಚರಿಸುತ್ತಿದ್ದ ಆತ ಸಾಧನೆಯಲ್ಲಿ ಏಕಾಗ್ರತೆಯಿಂದ ತೊಡಗಿಸಿಕೊಂಡಿದ್ದನು. ಒಂದು ದಿನ ಅರಣ್ಯದಲ್ಲಿ ಬೇಟೆಯಾಡುತ್ತಾ ಬಂದ ರಾಜನೊಬ್ಬ […]