Facebook

Archive for 2017

ಪಂಜು ಕಾವ್ಯಧಾರೆ

ಪಯಣದಂತ್ಯದೊಳಗೆ !!! ಅಕಸ್ಮಾತ್ತಾಗಿ ನಾನೂ ಏರಿ ಬಿಟ್ಟೆ ಈ ಬಸ್ಸು ಅಯ್ಯೋ.. ಎಷ್ಟು ರಶ್ಶು! ಮೊದಲೆ ಇಷ್ಟೊಂದು ಜನ ತುಂಬಿ ತುಳುಕುತ್ತಾ ಇದ್ದಾರೆ ..!! ಇಳಿಯೋಣವೇ …?? ಇದೇನಿದು.? ಹೆದ್ದಾರಿಯಲಿ ಓಟ ಶುರುವಾಗಿ ಬಿಟ್ಟಿದೆ ಬರೀ ಕತ್ತಲು ಬೆಳಕುಗಳಷ್ಟೆ…. ಯಾವುದೇ ಪರಿಧಿ ಗೋಚರಿಸುತ್ತಿಲ್ಲ ಆದರೂ ನಡುವೆ ಗೋಡೆಯಿದೆಯಂತೆ.! ಮಿಸುಕಾಡಿ ,ತಡಕಾಡಿ  ಸರಿಸಿ ,ತುಳಿದು ಮುಂದೆ ಬಂದೆ… ಹ ಹ್ಹ ಹ…ಇಲ್ಲಿಯೂ ಸೀಟುಗಳ ಮೀಸಲಾತಿ ..ಆದರೆ ಕುಳಿತುಕೊಂಡವರು ಯಾರ್ಯಾರೊ..!!!? ಆದರೂ ಈ ರಶ್ಶಲ್ಲಿ ಏನೋ ಸುಖವಿದೆ ,ಮನಕಾನಂದವಿದೆ ಉಪ್ಪಿನಕಾಯಂತೆ […]

ಆಯಾಮಗಳು: ಗಿರಿಜಾ ಜ್ಞಾನಸುಂದರ್

ಬೆಳಿಗ್ಗೆ ಸ್ನಾನ ಮುಗಿಸಿ ಬಂದ ಕುಮುದ ಪೂಜೆ ಮಾಡುತ್ತಿದ್ದಳು. ತನ್ನ ಮದುವೆಯ ಮೂರನೇ ವಾರ್ಷಿಕೋತ್ಸವವಾಗಿದ್ದರಿಂದ ಸ್ವಲ್ಪ ವಿಶೇಷವಾದ ಪೂಜೆ ನಡೆಯುತ್ತಿತ್ತು. ಆದ್ರರೇ ಮನಸ್ಸಿನಲ್ಲಿ ಇನ್ನು ಅಡಿಗೆಮನೆಯ ಕೆಲಸ ಮುಗಿಸಿಲ್ಲವಲ್ಲ ಅನ್ನೋ ಯೋಚನೆ ಇತ್ತು. ಚಪಾತಿ ಹಿಟ್ಟು ಕಲಸಿಟ್ಟಿದ್ದೇನೆ. ತರಕಾರಿ ಪಲ್ಯ ಹಾಗು ಚಟ್ನಿ ಮಾಡಿದ್ದಾಗಿದೆ. ಗಂಡನಿಗೆ ಡಬ್ಬಿಗೆ ಹಾಕಿಕೊಡುವ ಕೆಲಸ ತನ್ನದಾದ್ದರಿಂದ, ಮನಸ್ಸು ಪೂಜೆಯಲ್ಲಿ ಪೂರ್ತಿ ಇರಲಿಲ್ಲ. ಜೊತೆಯಲ್ಲಿ ಮಗು ಎದ್ದರೆ ಹೇಗೆ ಸಂಭಾಳಿಸುವುದು ಅನ್ನೋ ಯೋಚನೆ ಬೇರೆ. ಹಾಗಾಗಿ ಪೂಜೆ ಹೆಂಗೋ ಹಂಗೆ ಮಾಡಿ ಸಮಾಧಾನ […]

ಮುಟ್ಟು ಮುಟ್ಟಬೇಡಿ: ಪ್ರೇಮಾ ಟಿ ಎಮ್ ಆರ್

ಚಿನಕುರುಳಿಯಂತೆ ಕಚಗುಳಿಯಿಡುವ ಮುಗ್ಧ ಸ್ನೇಹದ  ಹುಡುಗಿ ಅಕ್ಷತಾ ಕೃಷ್ಣಮೂರ್ತಿ ಕಳಿಸಿದ ಹೊಸ ಕವನ ಸಂಕಲನ 'ಕೋಳ್ಗಂಬ' ಕೈಯಲ್ಲಿ ಹಿಡಿದು ಕಿಟಕಿಯಲ್ಲಿ ತೂರಿಬರುವ ಮಳೆಹನಿಗಳಿಗೆ ಮುಖವೊಡ್ಡಿ ಕೂತಿದ್ದೆ. ಬಾಲ್ಯದ ಗೆಳತಿ ಸುಮಾ ಕರೆಮಾಡಿದಳು. ಕುಶಲೋಪರಿಯ ಸಾಂಪ್ರದಾಯಿಕತೆಯನ್ನೂ ಮರೆತು ನೇರವಾಗಿ ವಿಷಯಕ್ಕೆ ಬಂದಳು. ಮೀಡಿಯಾಗಳಲ್ಲೆಲ್ಲ ಮುಟ್ಟಿಗುಡುವ ಸೆನಿಟರಿ ಪ್ಯಾಡ್ ಗಳ ಮೇಲೆ ಹೇರಿದ ಜಿ ಎಸ್ ಟಿ ಯ ಕುರಿತು ಪರ ವೈರುಧ್ಯ ಅಭಿಪ್ರಾಯಗಳು ವ್ಯಕ್ತವಾಗ್ತಾ ಇದ್ಯಲ್ಲೇ ಅಂದ್ಲು. ಹೂಂ ಅಂದೆ. ಅವಳು ಮುಂದೇನೂ ಮಾತನಾಡದೇ ಮೌನ ಸಾಧಿಸಿದಳು. ಏನಿದೆ […]

ಕನಕದಾಸರ ಕೀರ್ತನೆಗಳಲ್ಲಿ ಭಕ್ತಿ ವೈವಿಧ್ಯತೆ: ವೈ.ಬಿ.ಕಡಕೋಳ

ಶ್ರೀ ಕನಕದಾಸರು (1509-1609) ಕರ್ನಾಟಕದಲ್ಲಿ ಜನಪ್ರೀಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರು ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು ಮತ್ತು ಪುರಂದರದಾಸರೊಂದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ದಾಂತಗಳಿಗೆ ಕಾಣಿಕೆಯಿತ್ತವರು, ಕನಕದಾಸರು ಮತ್ತು  ಪುರಂದರದಾಸರನ್ನು ಕರ್ನಾಟಕ ಕೀರ್ತನ ಸಾಹಿತ್ಯದ ಅಶ್ವಿನಿ ದೇವತೆಗಳೆಂದು ಬಣ್ಣಿಸಲಾಗಿದೆ. ಕನಕದಾಸರು ಹಾವೇರಿ ಜಿಲ್ಲೆಯ ಬಾಡ ಎಂಬ ಗ್ರಾಮದಲ್ಲಿ 1509 ರಲ್ಲಿ  ಬೀರಪ್ಪ ಮತ್ತು ಬಚ್ಚಮ್ಮ ಎಂಬ ಕುರುಬ ಜಾತಿಗೆ ಸೇರಿದ ದಂಪತಿಗಳ ಮಗನಾಗಿ ಜನಿಸಿದರು. ಕನಕದಾಸರ ಮೂಲ ಹೆಸು ತಿಮ್ಮಪ್ಪ. ತಣದೆ-ತಾಯಿ ತಿರುಪತಿ ತಿಮ್ಮಪ್ಪನಿಗೆ […]

ಸುಸಂಸ್ಕೃತ ಭಾರತ ಮತ್ತು ಹೆಣ್ಣು ಭ್ರೂಣ ಹತ್ಯೆ: ನಾಗರೇಖಾ ಗಾಂವಕರ

“ಅವ್ವಾ, ನಾ ನಿನ್ನ ಮಗಳು ದೇಹದ ಮುಗುಳು, ನಿನ್ನ ಕನಸಿನ ಅರಳವ್ವಾ ನಾ ಬರಿ ಭ್ರೂಣವಲ್ಲ. ನನ್ನ ಹಡೆದವ್ವ  ನಿನ್ನ ಮೈ ಗಂಧದಿಂದ ಕಿತ್ತುಕೊಂಡರೆ ನಾ ಸತ್ತೆನವ್ವಾ ಚೆಲ್ಲಬೇಕೆ ಉಡಿಯ ಮುತ್ತು ನಾ ಬರಿ ಭ್ರೂಣವಲ್ಲ ಕೇಳವ್ವ ಕಂಡಿಲ್ಲ ನಾನಿನ್ನೂ ಬದುಕಿನಾಗಸದ ನೀಲ ಪಚ್ಚೆಯಂಥ ನೆಲ, ಗಾಳಿಯ ಮೃದು ಸ್ಪರ್ಶ ನಾ ಬರಿ ಭ್ರೂಣವಲ್ಲ. ” ಇದು ಹೆಣ್ಣು ಭ್ರೂಣವೊಂದು ತನ್ನ ಒಡಲಲ್ಲಿ ಹೊತ್ತ ತಾಯಿಯೊಂದಿಗೆ ನಡೆಸುವ ಸಂವಾದ. ಖ್ಯಾತ ಕವಯತ್ರಿ ಮಾಲತಿ ಪಟ್ಟಣ ಶೆಟ್ಟಿಯವರ “ಅವ್ವಾ […]

ಮೆರಾ ಕುಚ್ ಸಾಮಾನ್ ತುಮ್ಹಾರೇ ಪಾಸ್ ಪಡಾ ಹೈ: ಅನುರಾಧ ಪಿ. ಸಾಮಗ

ನಿನ್ನೂರಿಂದ ನನ್ನೂರ ನಡುವೆ ಹೊತ್ತಿಗೆ ಅವನೂರಲೆರಡು ಹೆಜ್ಜೆಯೂರುವ ಮನಸಾದಾಗ ಮುಸ್ಸಂಜೆಯಿನ್ನೂ ಹುಟ್ಟುತ್ತಿತ್ತು. ಹಸಿರುದಿಬ್ಬ ಬಳಸಿ ಮೇಲೇರುತಿದ್ದ ಕೆಮ್ಮಣ್ಣ ಸಣ್ಣ ಕಾಲ್ದಾರಿಯೊಂದು ಹೊಂಬಣ್ಣದಲಿ ಮುಳುಗೆದ್ದು ಥೇಟ್ ಅವನ ಮುಳುಮುಳು ನಗುವಲಿ ಮಿಂದ ಪರಮದ ಚರಮಕೊಯ್ಯುವ ಕಾಲದೊಂದು ಮಾಯಕದ ತುಂಡಿನಂತೆ ಕಾಣಿಸುತಿತ್ತು.ಆವರೆಗೆ ಪಚ್ಚೆಯೆಂಬುದು ಗೊತ್ತಿತ್ತು; ಸುಮ್ಮನೆ ತೃಪ್ತಿಯುತ್ತುಂಗದಲಿ ಮೈ ಚಾಚಿದವಳ ಹಾಗಿನ, ಎಂಥವರನ್ನೂ ಸೆಳೆದು ಆಮಿಷವೊಡ್ಡುವ ಸುಖದ ಹಸಿಚಿತ್ರದ ಹಾಗಿನ ಅಚ್ಚಪಚ್ಚೆ ಅಲ್ಲೇ ಹಾದಿಯಿಕ್ಕೆಲದಲ್ಲಿ ಕಂಡದ್ದು. ಹೇಳಿಕೇಳಿ ಬೆಟ್ಟಕಣಿವೆಗಳ ಊರದು, ಅದೇ ಹಾದಿ ತುದಿಯಲಿದ್ದಿರಬಹದಾದ ಗುಡಿಯ ಗಂಟೆ ನುಡಿಯುತಿತ್ತು.  ಸಾವದೇವನಿಗೊಂದು […]

ಮರದ ಆಸರೆ ಬಯಸಿದ ಬಳ್ಳಿ: ನಾಗಭೂಷಣ ಬಿ ಕೆ, ಚಂದ್ರಶೇಖರಪುರ

ನಯನಮನೋಹರಿಯಾದ ಅವಳ ಅಂದ ಚಂದ ನೋಡಿದರೆ ನೋಡುತಲೇ ಇರಬೇಕು ಎನ್ನುವಷ್ಟು ಆಕರ್ಷಕ ಮೊಗದವಳು. ತಲೆಯ ಮದ್ಯಕ್ಕೆ ಬೈತಲೆ ತೆಗೆದ ಮಾರುದ್ದ ಜಡೆಯವಳು.ಕತ್ತು ಆಡಿಸುತ್ತ ಮುತ್ತಿನಂತ ಮಾತುಗಳ ಹಾಡುತಿದ್ದರೆ ಕಿವಿಯ ಓಲೆಗಳು ನರ್ತಿಸುತಲಿರುತ್ತವೆ. ಆ ನರ್ತನ ಕಾಣಲು ನಿಜಕ್ಕೂ ಕಣ್ಗಳ ಪುಣ್ಯವೆ ಸರಿ. ಕಪ್ಪು ಕಾಡಿಗೆ ಬಳಿದ ಆ ಕಣ್ಣುಗಳ ನೋಟದಲ್ಲೂ ಒಂದು ಆಕರ್ಷಣೆ. ನಕ್ಕರೆ ನಾಜೂಕು ಕೆನ್ನೆಯ ಮೇಲೆ ಗುಳಿಯೊಂದು ಮೂಡಿ ಅವಳ ಅಂದವನು ಹೆಚ್ಚಿಸಿ ಎತ್ತಿ ತೋರಿತಲಿತ್ತು. ಒಟ್ಟಾರೆಯಾಗಿ ಹೇಳುವುದಾದರೆ ಹೊಳೆವ ಹುಣ್ಣಿಮೆಯ ಪೂರ್ಣಚಂದಿರನಂತೆ ಇರುತಿತ್ತು […]

ಹಿಮಾಲಯವೆಂಬ ಸ್ವರ್ಗ (ಭಾಗ 7): ವೃಂದಾ ಸಂಗಮ್

ಇಲ್ಲಿಯವರೆಗೆ  ಬದರೀಕ್ಷೇತ್ರವು ಉತ್ತರ ಪ್ರದೇಶದ (ಈಗ ಉತ್ತರಾಂಚಲ್) ಚಮೋಲಿ ಜಿಲ್ಲೆಯ ಗಡ್‌ವಾಲ್ ಪ್ರದೇಶದಲ್ಲಿ ಅಲಕ್‌ನಂದಾ ನದಿಯ ತೀರದಲ್ಲಿದೆ. ಈ ಕ್ಷೇತ್ರವು ಸಮುದ್ರ ಮಟ್ಟಕ್ಕಿಂತ ಸುಮಾರು 103೦೦ ಅಡಿ ಎತ್ತರದಲ್ಲಿದ್ದು, ಊರು ಹಾಗೂ ದೇವಾಲಯದವರೆಗೂ ವಾಹನ ಚಲಿಸುವ ರಸ್ತೆಯಿದೆ. ನರ ಮತ್ತು ನಾರಾಯಣ ಎಂಬ ಎರಡು ಪರ್ವತಗಳು ಈ ಕಣಿವೆ ಪ್ರದೇಶದ ಕಾವಲುಗಾರರಂತೆ ನಿಂತಿವೆ. ಹಿನ್ನೆಲೆಯಲ್ಲಿ 215೦೦ ಅಡಿ ಎತ್ತರದ ಘನ ಗಾಂಭೀರ್ಯ ನೀಲಕಂಠ ಪರ್ವತ ತನ್ನ ತಲೆ ಮೋಡಗಳಲ್ಲಿ ಮುಚ್ಚಿಕೊಂಡು ನಿಂತಿದೆ. ದೇವಾಲಯದ ಮುಂದೆ ಕೊರೆಯುವ ಅಲಕ್‌ನಂದ […]

ಬಂಡಾಯದ ಪ್ರತಿಬಿಂಬದಂತಿರುವ “ಶಬರಿಯರು” ಕೃತಿ: ದಂಡಿನಶಿವರ ಮಂಜುನಾಥ್

ಕವಿ, ಕಥೆಗಾರ, ನಾಟಕಕಾರ ಹಡವನಹಳ್ಳಿ ವೀರಣ್ಣಗೌಡರು ಈಗಾಗಲೇ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಪ್ರತಿಭಾನ್ವಿತರು. ಇವರ ಹೊಸಸೃಷ್ಟಿ ‘ಶಬರಿಯರು’ ಕವನ ಸಂಕಲನದ ಬಗ್ಗೆ ಹೇಳಬೇಕೆಂದರೆ ಇಲ್ಲಿನ ಕವಿತೆಗಳಲ್ಲಿ ಕವಿಯು ವರ್ತಮಾನದ ಜಟಿಲತೆಗಳನ್ನು ಅಭಿವ್ಯಕ್ತಪಡಿಸಿದ್ದಾರೆ. ಸಾಲುಗಳು ಸರಳವಾಗಿದ್ದರೂ ಕವಿತೆಗಳು ಹತ್ತು ಹಲವು ಭಾವಗಳನ್ನ ಧ್ವನಿಸುತ್ತವೆ. ಸಂಕಲನದಲ್ಲಿರುವ ಕವಿತೆ, ಕಥನಕಾವ್ಯ ಮತ್ತು ವಚನ ಪ್ರಾಕಾರಗಳಲ್ಲಿ ಒಂದು ವಿಭಿನ್ನತೆಯನ್ನು ಗುರುತಿಸಬಹುದಾಗಿದೆ.   ‘ಶಬರಿಯರು’ ಸಂಕಲನದಲ್ಲಿರುವ ಕೆಲವು ಕವಿತೆಗಳು ಸಾಮಾಜಿಕ ನ್ಯಾಯದ ಹಕ್ಕೊತ್ತಾಯದ ಜೊತೆಗೆ ದಲಿತ-ಬಂಡಾಯದ ಪ್ರತಿಬಿಂಬಗಳಂತೆ ಗೋಚರಿಸುತ್ತವೆ. ಬುದ್ದ, ಬಸವ, ಗಾಂಧಿ, ಅಂಬೇಡ್ಕರ್ […]

ಮೇರು ವಿಮರ್ಶಕ- ರಾಷ್ಟ್ರಕವಿ ಕುವೆಂಪು ಮತ್ತು ಅವರ ವಿಮರ್ಶಾ ವೈಶಿಷ್ಟ್ಯತೆ: ಡಾ. ಹನಿಯೂರು ಚಂದ್ರೇಗೌಡ

ರಾಷ್ಟ್ರಕವಿ ಕುವೆಂಪು ಅವರ ವ್ಯಕ್ತಿತ್ವದಲ್ಲಿ ಭಾರತೀಯ ಸಂಸ್ಕøತಿಯ ಬಗ್ಗೆ ಅಭಿಮಾನ, ಅಧ್ಯಾತ್ಮ ಜ್ಯೋತಿಯ ವಿಷಯದಲ್ಲಿ ಅಚಲಶ್ರದ್ಧೆ, ವಿಭೂತಿಪೂಜೆಯಲ್ಲಿ ನಿಷ್ಠೆ, ಸಾಹಿತ್ಯದ ಪರಮಪ್ರಯೋಜನದಲ್ಲಿ ಪೂರ್ಣವಿಶ್ವಾಸ, ಪ್ರಕೃತಿಯ ಬಹುಮುಖ ವಿನ್ಯಾಸದಲ್ಲಿ ಒಂದು ಆತ್ಮೀಯತೆ, ಭವ್ಯತೆಯ ಅನುಭವದಲ್ಲಿ ಭಕ್ತಿ, ಜೀವನದಲ್ಲಿ ಧರ್ಮದ ಮೂಲಭೂತ ಅಗತ್ಯವನ್ನು ಒಪ್ಪುವ ಮನೋಧರ್ಮ, ಜನತೆಯ ಉದ್ಧಾರಕ್ಕಾಗಿ ಹಂಬಲಿಸುವ ಚೇತನ, ಆತ್ಮಸಾಕ್ಷಾತ್ಕಾರದ ಲಕ್ಷ್ಯ-ಇವೆಲ್ಲವೂ ಒಂದು ಸುಂದರ ಪಾಕದಲ್ಲಿ ಸಮರಸವಾಗಿ ಏಕತ್ರಗೊಂಡಿವೆ. ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ, ಟ್ಯಾಗೋರ್, ಶ್ರೀಅರವಿಂದ, ರಮಣಮಹರ್ಷಿ, ಗಾಂಧೀಜಿ-ಇನ್ನಿತರೆ ಭಾರತೀಯ ಮಹಾತ್ಮರ ವಿಚಾರಗಳಿಂದ ಭಾವಿತವೂ ಪ್ರಭಾವಿತವೂ […]