Facebook

Archive for 2017

ತಾಯಿಯ ಆಶ್ರು ಒರೆಸಿದ ಪದ್ಮಶ್ರೀ ಪುರಸ್ಕೃತ ಮಲ್ಲೇಶಂ: ಉದಯ ಪುರಾಣಿಕ

ಭಾರತ ಜ್ಯೋತಿ ಲೇಖನ ಸರಣಿ : ತೆಲಂಗಾನಾದ ಚಿಂತಕಿಂಡಿ ಮಲ್ಲೇಶಂ, ಹುಟ್ಟಿದ್ದು ತೆಲಂಗಾನಾ ರಾಜ್ಯದಲ್ಲಿರುವ ಪುಟ್ಟ ಹಳ್ಳಿ ಶಾರ್ಜಿಪೇಟೆಯ ಬಡ ನೇಕಾರ ಕುಟುಂಬವೊಂದರಲ್ಲಿ. ಕುಟುಂಬದ ಆರ್ಥಿಕ ಸಂಕಷ್ಟದಿಂದಾಗಿ, ಶಾಲೆಯಲ್ಲಿ 6ನೆ ತರಗತಿ ಓದುವಾಗಲೇ ತನ್ನ ವಿದ್ಯಾಭ್ಯಾಸ ನಿಲ್ಲಿಸಿದ್ದರು. ಆದರೆ ಅವರು ಮಾಡಿರುವ ಸಾಧನೆಗಾಗಿ ದೊರೆತಿರುವ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಗೌರವಗಳನ್ನು ಒಮ್ಮೆ ನೋಡಿ. ಇವರು, ವರ್ಷ 2009ರಲ್ಲಿ ಭಾರತದ ರಾಷ್ಟ್ರಪತಿಗಳಿಂದ ಗೌರವ ಪುರಸ್ಕಾರ, ವರ್ಷ 2016ರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಂದ ಅಮೇಜಿಂಗ್ ಇಂಡಿಯನ್ ಗೌರವ ಪ್ರಶಸ್ತಿ, […]

ಪಂಜು ಕಾವ್ಯಧಾರೆ

ಕರೆದೊಡನೆ ಬಂದುದ ಕಂಡು ಯಾಮಾರಿದೆಯಾ.. ನಾ ಕಂದಮ್ಮನಲ್ಲ ಕಣ್ಣ ದಿಟ್ಟಿಸಿ ನೋಡು ಕ್ರೂರ ದೈತ್ಯನು ನಾನು ಎಷ್ಟೋ ತ್ವಚೆಯ ಸೀಳಿ ಹಸಿ ರಕುತವ ಕುಡಿದ ಹಲ್ಲಿನ ಮಸಿ ಕಂಡು ಕರಳು ನಡುಗುತಿದೆಯಾ… ಕಂದನೆಂದ್ ಯಾಮಾರಿದೆಯಾ..! ಅಂದೊಮ್ಮೆ ನೆನಪಿದೆಯಾ ಕತ್ತನು ಮುತ್ತಿಡಲು ಬಂದದು ಸರಸವಲ್ಲವದು ನೆತ್ತರಾಸೆ ತುಟಿಯ ತಾಕಲು ಉಸಿರ ಸೋಕುತ ಪಕ್ಕ ಸುಳಿದದು ರಕುತದಾಸೆ ನಂಬಿ ಕೆಟ್ಟೆ ನೀ ಪಾಪದ್ಹೆಣ್ಣೆ ಓಡಿ ಹೋದರೂ ಬಿಡೆನು ನಾನು ಶರಣು ಎಂದರೆ ಬಿಡುವೆನೇನು..? ಚೂಪು ಕಂಗಳ ನೋಟಗಾತಿ ಹಾಗೆ ನೋಡದಿರು […]

ಅವಸ್ಥೆ!: ಎಸ್.ಜಿ.ಶಿವಶಂಕರ್

`ನೆನ್ನೆ ರಾತ್ರಿ ದಾವಣಗೆರೆಯವರು  ಫೋನು ಮಾಡಿದ್ದರು..ಶಾಲಿನಿಯನ್ನು ಹುಡುಗ ಒಪ್ಪಿದ್ದಾನಂತೆ..ಆದ್ರೆ ಹುಡುಗ ಕಾರು ತಗೋಬೇಕಂತೆ, ಆರು ಲಕ್ಷ ವರದಕ್ಷಿಣೆ ಕೇಳ್ತಿದ್ದಾರೆ..ನೀನು ಹೂ ಅಂದರೆ..ನಿಮ್ಮಪ್ಪ ಫೋನು ಮಾಡಿ ಮಾತುಕತೆಗೆ ಕರೀಬೇಕೂಂತಿದ್ದಾರೆ…! ತಿಂಡಿಯ ತಟ್ಟೆ ಟೇಬಲ್ಲಿನ ಮೇಲಿಡುತ್ತಾ ತನ್ನ ತಾಯಿ ಹೇಳಿದಾಗ ರಾಜೀವನಿಗೆ ತನ್ನ ಶರೀರದ ಆ ಜಾಗ ನೆನಪಾಯಿತು. ಹೌದು ಸ್ನಾನ ಮಾಡುವಾಗ ನೋಡಿಕೊಂಡೆನಲ್ಲ..! ಅದರ ನೆನಪಿಂದ ಅವನಿಗೆ ವಿಚಿತ್ರವಾದ ಸಂಕಟವಾಯಿತು. ಆಹಾರ ಗಂಟಲಲ್ಲಿ ಇಳಿಯಲಿಲ್ಲ. ಕಿಟಿಕಿಯಿಂದಾಚೆ ನೋಡಿದ ಇನ್ನೂ ಕತ್ತಲಿತ್ತು. ಗಡಿಯಾರ ಆರೂವರೆಯನ್ನು ತೋರಿಸುತ್ತಿತ್ತು. `ಥೂ..ದರಿದ್ರದ ಟೈಮು! ಇದು […]

ಒಲ್ಲದ ಮನಸ್ಸಿನ ಮಾನಸ: ಗಿರಿಜಾ ಜ್ಞಾನಸುಂದರ್

ಮರದ ಮೇಲೆ ಹಸಿರೆಲೆ ನೋಡಿದಾಗ ಏನೋ ಒಂಥರಾ ಹೊಸತನ, ಮನಸ್ಸಲ್ಲಿ ಮಲ್ಲಿಗೆ ಹೂವಿನ ಪರಿಮಳ ಮತ್ತು ಏನೋ ಹೇಳಲಾಗದ ಸಡಗರ ಮತ್ತು ಸಂಕೋಚದ ಅನುಭವ.ತನ್ನ ಮದುವೆಯ ದಿನಗಳ ನೆನಪು ತರುವ ಪರಿಮಳ. ಆದರೆ ಇತ್ತೀಚಿಗೆ ಬರುಬರುತ್ತಾ ಆ ಭಾವನೆಗಳು ಎಲ್ಲೋ ಕಾಣೆಯಾಗುತ್ತಿರೋ ಹಾಗಿದೆ. ಹೊಸತನದ ಬದಲು ಭಾರವಾಗುತ್ತಿರುವ ಭಾವನೆಗಳು.. ಹೀಗೆ ಯೋಚಿಸುತ್ತಿರುವಾಗಲೇ ಕಣ್ಣಂಚಿನಲ್ಲಿ ಹನಿ …. "ಕುಕ್ಕರ್ ಎಷ್ಟ್ ಸಲ ವಿಸಿಲ್ ಆಯಿತು.. ಅಡುಗೆ ಮನೆಲ್ಲಿ ಯಾರು ಇಲ್ವಾ? ಏನ್ ರೋಗ ಬಂದಿದೆ ಮಾನಸಂಗೆ?"  ಅಂತ ಅತ್ತೆ […]

ತಳಿರು-ತಿಲ್ಲಾನ: ಅನುರಾಧ ಪಿ. ಸಾಮಗ

“ನೋಡಮ್ಮಾ ಆ ಕರು ಅಷ್ಟು ಹೊತ್ತಿಂದ ಅಲ್ಲಿ ಅಂಬೇ ಅಂತ ಕರೆಯುತ್ತಾ ಇತ್ತು. ನಾನು ಗಿಡಕ್ಕೆ ನೀರು ಹಾಕಲಿಕ್ಕೆ ಹೊರಗೆ ಹೋಗಿದ್ದೆನಲ್ಲಾ, ಬಡಬಡಾಂತ ನಮ್ಮ ಗೇಟಿನ ಹತ್ತಿರ ಬಂತು, “ಏನೂ ಇಲ್ಲ ಮುದ್ದೂ” ಅಂದೆ, ತನ್ನಷ್ಟಕ್ಕೆ  ಹೋಯ್ತು. ಎಷ್ಟು ಅರ್ಥ ಆಗುತ್ತೆ ನೋಡಮ್ಮಾ. ಅದೇ ಆ ಕೆಂಪು ಕಣ್ಣಿನ  ದನ ಬಂದಿದ್ದರೆ ಮೊಂಡಾಟ ಮಾಡಿಕೊಂಡು ಇನ್ನೂ ಇಲ್ಲೇ ನಿಂತಿರುತ್ತಿತ್ತು ಅಲ್ವಾ?” ಅಂದಳು ಮಗಳು. ಹೌದಲ್ಲವೇ ಅನ್ನಿಸಿತು.  ನಮ್ಮ ಏರಿಯಾದಲ್ಲಿ ಒಂದಷ್ಟು ದನ ಕಟ್ಟಿಕೊಂಡು ಹಾಲು ಪೂರೈಸುವವನೊಬ್ಬನಿದ್ದಾನೆ. ಪ್ರತಿದಿನ […]

ಪರಿವರ್ತನೆಗೆ ದಾರಿ ಯಾವುದಾದರೇನು?: ನಾಗರೇಖಾ ಪಿ. ಗಾಂವಕರ

                  ಹೊಸ ಸುತ್ತೋಲೆಯಂತೆ ಪದವಿ-ಪೂರ್ವ ಹಂತಕ್ಕೂ ಪ್ರಾರ್ಥನೆಯನ್ನು ಕಡ್ಡಾಯಗೊಳಿಸಿ ಇಲಾಖೆ ಆದೇಶ ಹೊರಡಿಸಿದ್ದು ಪಡ್ಡೆ ಹುಡುಗರಿಗೆ ಕೊಂಚವೂ ಇಷ್ಟವಿಲ್ಲ. ಆಗಾಗ ಆ ಬಗ್ಗೆ ತಕರಾರು ಮಾಡುವ ಗುಂಪು ಇದ್ದೆ ಇತ್ತು. ಆದರೂ ಪ್ರಾಚಾರ್ಯರು ಅದಕ್ಕೆಲ್ಲ ಅವಕಾಶ ಕೊಡದೆ ಕಡ್ಡಾಯ ಎಂದು ನೋಟೀಸು ತೆಗೆದು ಒತ್ತಡ ಹೇರಿದ್ದರು. ಹಾಗಾಗಿ  ವಿದ್ಯಾರ್ಥಿಗಳು ಪ್ರಾರ್ಥನೆಗೆ ಹಾಜರಾಗುವುದು ಅನಿವಾರ್ಯವಾಗಿತ್ತು. ವಾಣಿಜ್ಯ ವಿಭಾಗದ ಆ ತರಗತಿಯಲ್ಲಿ ಇರುವುದು ಬರೀಯ ಇಪ್ಪತೆಂಟು ವಿದ್ಯಾರ್ಥಿಗಳು ಮಾತ್ರ. […]

ಮನದಭಾವುಕತೆಗೊಂದು ದಿಕ್ಕು ತೋರಿಸಿದವಳಿಗೆ: ದೊರೇಶ

           ಆಸೆ ಹುಡುಗನ ಪತ್ರವಿದು. ಅತಿರೇಕ ಅಂದುಕೊಳ್ಳಬೇಡ . ತಿರುಗಿ ಬೀಳುವ ಮನಸ್ಸಿಗೆ ತುಂಬಾ ದಿನ ಸಮಾಧಾನ ಹೇಳಲಾರೆ. ಮನಸ್ಸಿನದು ಒಂದೇ ಹಠ, ತನಗೆಎಲ್ಲವೂ ಬೇಕು. ಎಷ್ಟುಸಲ ತಿಳಿ ಹೇಳಿದರೂ ಕೇಳಲೊಲ್ಲದು. ನಾನು ವಿಹ್ವಲನಾಗಿ ಹೋಗಿದ್ದೇನೆ. ಕಣ್ಣಂಚಿನಲ್ಲಿ ನೆನಪಿನ ನೀರು. ಎಲ್ಲವನ್ನೂ ಹೇಳಬೇಕು ಅಂದುಕೊಂಡಿದ್ದೆ. ನನ್ನ ಮಾತು ನಿರುಪಯಕ್ತವೆನಿಸುವುದು ನಿನ್ನ ಕಣ್ಣುಗಳ ನವಿಲ ನರ್ತನ ಕಂಡಾಗ. ನಿನಗೆ ಗೊತ್ತು! ಸುಮ್ಮನೆ ಕಾಲಕಳೆಯಲೆಂದು ಸಮುದ್ರದ ದಡದಲ್ಲಿ ನಿಂತವ ನಾನು. ಅಂದು ಅಂಬೆಗಾಲಿಟ್ಟುಕೊಂಡು ಮಗುವಿನಂತೆ […]

ಗ್ರೇಟ್ ಬ್ಯಾರಿಯರ್ ಎಂಬ ಹವಳ ಸಮೂಹದ ಅವಸಾನ: ಅಖಿಲೇಶ್ ಚಿಪ್ಪಳಿ

ಬೆಂಗಳೂರಿನ ಹೊರವಲಯದಲ್ಲಿ ಮಾನವನ ದೌರ್ಜನ್ಯಕ್ಕೆ ತುತ್ತಾಗಿ ಕಾಲುಮುರಿದುಕೊಂಡು ಜೀವನ್ಮರಣಗಳ ನಡುವೆ ಒದ್ದಾಡುತ್ತಿರುವ ಸಿದ್ಧ ಎಂಬ ಹೆಸರಿನ ನಡುಹರಯದ ಆನೆಯನ್ನು ಕಡೆಗೂ ಜನರ ಒತ್ತಾಯಕ್ಕೆ ಮಣಿದು ಇಲಾಖೆ ಚಿಕಿತ್ಸೆ ನೀಡಲು ಪ್ರಾರಂಭಿಸಿದ ಹೊತ್ತಿನಲ್ಲೆ, ಏನೇ ಆದರೂ 800 ಚಿಲ್ಲರೆ ಮರಗಳನ್ನು ಕಡಿದು ಉಕ್ಕಿನ ಸೇತುವೆ ನಿರ್ಮಾಣ ಮಾಡಿಯೇ ಸಿದ್ಧ ಎಂದು ಹಠ ಹಿಡಿದು ಸರ್ಕಾರ ಗಟ್ಟಿ ನಿಲುವು ತಳೆದ ಹೊತ್ತಿನಲ್ಲೇ, ಜನರ ಅಭಿಪ್ರಾಯವನ್ನು ಕಡೆಗಣಿಸಿ ಯಾವುದೇ ಯೋಜನೆಯನ್ನು ಅದರಲ್ಲೂ ಉಕ್ಕಿನ ಸೇತುವೆಯನ್ನು ನಿರ್ಮಾಣ ಮಾಡಲು ಬಿಡುವುದಿಲ್ಲವೆಂದು ಪಟ್ಟು ಹಿಡಿದ […]

‘ಬುದ್ಧ ಹೇಳಿದ ಕಥೆ’ ನಾಟಕ ಪ್ರಯೋಗ : ಹಿಪ್ಪರಗಿ ಸಿದ್ಧರಾಮ

ಮಕ್ಕಳ ಲೋಕದ ಒಗ್ಗಟ್ಟಿನ ಸೂತ್ರ ಹೇಳುವ ‘ಬುದ್ಧ ಹೇಳಿದ ಕಥೆ’ ನಾಟಕ ಪ್ರಯೋಗ.  ಮಗು ಮನಸ್ಸಿನ ಧಾರವಾಡದ ಉದಯೋನ್ಮುಖ ಹವ್ಯಾಸಿ ರಂಗನಟಿ ಶ್ರೀಮತಿ ಗಿರಿಜಾ ಹಿರೇಮಠ ಅವರು ಬಹು ಆಸಕ್ತಿ-ಶ್ರಮವಹಿಸಿ ಎಸ್.ಮಾಲತಿ ವಿರಚಿತ ‘ಬುದ್ಧ ಹೇಳಿದ ಕಥೆ’ ನಾಟಕವನ್ನು ಇತ್ತೀಚೆಗೆ (ಡಿ.27) ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಮಕ್ಕಳ ಮಂಟಪದ ಆಶ್ರಯದಲ್ಲಿ ಸಾಧನಕೇರಿಯ ಆಲೂರ ವೆಂಕಟರಾವ್ ಪದವಿ ಪೂರ್ವ ಮಹಾವಿದ್ಯಾಲಯದ ಮಕ್ಕಳು ಮುದ್ದು-ಮುದ್ದಾಗಿ ಅಭಿನಯಿಸಿ ನೆರದ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು. ಹಲವಾರು ಶಾಲಾ-ಕಾಲೇಜುಗಳ ಮಕ್ಕಳು ಕೇವಲ ಶಾಲಾ […]

ಮೋದಿಯ ಹಾದಿ: ಕೆ ಟಿ ಸೋಮಶೇಖರ ಹೊಳಲ್ಕೆರೆ.

  ದೇಶವನ್ನು ಆಳುವವರ ಉದ್ದೇಶ ದೇಶದ ನೆಮ್ಮದಿ. ದೇಶವನ್ನು ಕಾಡುವ ಸಮಸ್ಯೆಗಳನ್ನು ಗುರುತಿಸಿ, ಹೋಗಲಾಡಿಸುವ ಮಾರ್ಗಗಳನ್ನು ತಿಳಿದು, ಅದಕ್ಕೆ  ಶಾಶ್ವತ ಯೋಜನೆಗಳನ್ನು ರೂಪಿಸಿ, ನಿಗಧಿತ ಸಮಯದೊಳಗೆ ಅವುಗಳನ್ನು ಪರಿಹರಿಸುವುದು ಉತ್ತಮ ಆಡಳಿತಗಳ ಲಕ್ಷಣ. ಆಗ ಸರ್ಕಾರಗಳ ಹೊರೆ  ಕಡಿಮೆಯಾಗಿ, ಹೆಸರು ಜಾಸ್ತಿಯಾಗಿ, ಜನಕ್ಕೆ ನೆಮ್ಮದಿ ಲಭಿಸೀತು. ಭಾರತ ವಿಜ್ಙಾನ, ತಂತ್ರಜ್ಙಾನ,  ಬಾಹ್ಯಾಕಾಶ … ಗಳಲ್ಲಿ ರಭಸವಾಗಿ ಮುನ್ನುಗ್ಗುತ್ತಿದೆ. ಸರ್ವತೋಮುಖ ಅಭಿವೃದ್ದಿಗೆ  ಅನೇಕ ಸಮಸ್ಯೆಗಳು ಅಡ್ಡಿಯಾಗಿವೆ. ಆ ಸಮಸ್ಯೆಗಳಲ್ಲಿ ಎರಡು ವಿಧ. ಆಂತರಿಕ ಮತ್ತು ಬಾಹ್ಯ ಸಮಸ್ಯೆಗಳು.  ಬಡತನ, […]