Facebook

Archive for 2017

ಫೇಸ್ ಬುಕ್ ಗೆಳೆಯರಿಗೊಂದು ಪತ್ರ: ನಟರಾಜು ಎಸ್. ಎಂ.

ಹಾಯ್ ಫ್ರೆಂಡ್ಸ್, ಹೇಗಿದ್ದೀರ? ಎಷ್ಟೊಂದು ದಿನಗಳೇ ಆಗಿಹೋಯಿತು ನಿಮ್ಮೊಡನೆ ಸರಿಯಾಗಿ ಮಾತನಾಡಿ. ಒಂದಷ್ಟು ವರುಷಗಳ ಹಿಂದೆ ಹೀಗೆ ಸುಮ್ಮನೆ ಕಣ್ಣಿಗೆ ಬಿದ್ದ ಫೇಸ್ಬುಕ್ ನಲ್ಲಿ ಅಪರಿಚಿತರಾಗಿದ್ದ ನಾವು ಪರಿಚಿತರಾಗುತ್ತ ಹೋದ್ವಿ. ಈ ಪರಿಚಯಗಳಿಗೆ ಈಗ ವರುಷಗಳ ಸಂಭ್ರಮ. ಮೊನ್ನೆ ಮೊನ್ನೆ ಫೇಸ್ ಬುಕ್ ನಮ್ಮ ಗೆಳೆತನಗಳನ್ನು ಪುಟ್ಟ ವಿಡಿಯೋ ರೂಪದಲ್ಲಿ ಸಮ್ಮರಿ ಮಾಡಿ ನಮ್ಮ ಮುಂದಿಟ್ಟಿದೆ. ಈ ತರಹದ ವಿಡಿಯೋವನ್ನು ಫೇಸ್ಬುಕ್ ನೀಡುತ್ತಿರುವುದು ಇದು ಮೊದಲಲ್ಲ. ಆದರೂ ಯಾಕೋ ಈ ವಿಡಿಯೋಗಳು ವಿಶೇಷ ಅನಿಸುತ್ತಿದೆ. ಯಾಕೆಂದರೆ ಈ […]

ಪಂಜು ಕಾವ್ಯಧಾರೆ

 ತಂಪ ಸೂಸುವ ತುಂಟ‌ ಚಂದ್ರಮ, ಚದುರಿ ಹೋದನು ಚಹರೆ ಮರೆತು.. ಚಿಲುಮೆ ಒಲುಮೆಯ ಗಾಳಿ ಬೀಸಿ, ಚಂದ್ರ ವಾಚುತ ನಕ್ಕನು..! ಅಬಲೆ ಮಣಿ ನಿನ್ನ ನೋಟಕೆ , ರಸಿಕನಾದೆನು ಭಯವ ಮರೆತು.. ಕನಸ‌ಕಂಡೆನು ಇಂದು ನಾನು, ಹೊಸಲೋಕಕೆ ಪಯಣ ಕಲಿತು..! ಅರಿಯಲಾಗದ ಅರಿವಿನನುಭವ, ಅರಿತೆ ನಾನು ಒಲವಿನಿಂದ.. ಅಮಲು ನೀಡುವ ದಿವ್ಯ‌ಔಷಧಿ.. ಪ್ರೀತಿ ಎನ್ನುವುದ..! ಹರಿದು ಹೋಗದ ಜಾಲವಿದು, ಕರಗಿ ಹೋಗದ ಅರಗಿದು.. ಹರಿದು ಕರಗಿ ಹೋಯಿತೆಂದರೆ, ಹ್ರದಯ ಉರಿಯದೆ ಇರುವುದೇ?!! **** ಪ್ರತಿಫಲಿಸುವ ಹ್ರದಯದ, ಮಿಡಿತವ […]

ಕೋಸಿನ ಪಲ್ಯ: ಸಹನಾ ಪ್ರಸಾದ್

ಕಳೆದ ೪-೫ ದಿನಗಳಿಂದ ಕುಸುಮಳ ಮನಸ್ಸು ಕುದಿಯಲು ಶುರುವಾಗಿದೆ. ಪ್ರತಿ ವರುಷ ಸುಮಾರು ಈ ಹೊತ್ತಿಗೆ ಅವಳ ಮನಸ್ಸು ಬಾಂಡಲೆಯಲ್ಲಿ ಕುದಿಯುತಿರುವ ಎಣ್ಣೆಯಂತಾಗುತ್ತದೆ. ಕೊತ ಕೊತ ಕುದಿವ ಮನಸ್ಸಿನಲ್ಲಿ ಅನೇಕನೇಕ ಭಾವನೆಗಳು. ಸುಮಾರು ಒಂದು ವಾರದ ನಂತರ " ಆ ದಿನ" ಬಂದಾಗ ಮನಸ್ಸಿನಲ್ಲಿರುವ ಭಾವನೆಗಳೆಲ್ಲಾ ಸಿಡಿದು ಮನೆಯವರಿಗೆಲ್ಲಾ ಎರಚುವುದು ಅಥವಾ ಮೂಕ ಕಣ್ಣೆರಿನಲ್ಲಿ ಕೊನೆಗಾಣುವುದು. ಮಾರನೆಯ ದಿನದಿಂದ ಮಾಮೂಲು ದಿನಚರಿ ಶುರು. ಒಂದೆರಡು ದಿನ ನೋವು ಮನಸ್ಸನ್ನು ಕಾಡುತ್ತಿದ್ದರೂ ಹಿಂದಿನ ವಾರದಷ್ಟಿಲ್ಲ. ತನ್ನ ಮದುವೆಯ ದಿನ, […]

ನಿಯತ್ತು…: ದುರ್ಗಾ ಪ್ರಸಾದ್

ಮೂರು ದಿನವಾದರೂ ಒತ್ತರಿಸಿ ಬರುತ್ತಿದ್ದ ಸೊಸೆ ಮಾಡಿದ ಅವಮಾನದ ದೃಶ್ಯಗಳನ್ನು ರಂಗಪ್ಪನಿಗೆ ಸಹಿಸಲಾಗುತ್ತಿರಲಿಲ್ಲ. ಬೆಳ್ಳಂಬೆಳಗ್ಗೆಯೇ ಊರಿನಿಂದ ಬಂದ ಮಗಳನ್ನು ನಿಂದಿಸಿರುತ್ತಿರುವ ಸೊಸೆಯನ್ನು ಕಂಡು ರಂಗಪ್ಪನಿಗೆ ಸುಮ್ಮನಿರಲಾಗಲಿಲ್ಲ. ಯಾಕಮ್ಮ ಹಾಗೆಲ್ಲ ಮಾತಾಡುತ್ತಿಯಾ ಎಂದು ಕೇಳಿದಾಕ್ಷಣ ಮಾವನ ಕೊರಳಪಟ್ಟಿ ಹಿಡಿದು ಮತ್ತೊಂದು ಕೈಯಲ್ಲಿ ಚಪ್ಪಲಿ ಹಿಡಿದು ನಿಂತ ಸೊಸೆಯನ್ನು ಹಿಗ್ಗಾ ಮುಗ್ಗಾ ತಳಿಸಿಬಿಡಬೇಕು ಎಂದೆನಿಸಿದರೂ ಉಸಿರು ಗಟ್ಟಿ ಮಾಡಿಕೊಂಡು ಸುಮ್ಮನಾಗಿದ್ದರು. ತಂದೆಯನ್ನು ಕೊರಳಪಟ್ಟಿ ಹಿಡಿದರೂ ಏನೊಂದು ಮಾತಾಡದೆ ಒಳನಡೆದ ಮಗನನ್ನು ಕಂಡು ರೇಜಿಗೆ ಹುಟ್ಟಿತು. ಊರಮಂದಿಯೆಲ್ಲಾ ಮನೆಯ ಮುಂದೆ ನೋಡುತ್ತಾ […]

ಅಪ್ಪ: ರಾಜುಗೌಡ ನಾಗಮಂಗಲ

ಅಪ್ಪಂದಿರ ದಿನ ಮುಗಿದೇ ಹೋಯ್ತು. ಇನ್ನೂ ಮುಂದಿನ ವರ್ಷವೇ ಅಪ್ಪನನ್ನ ಹಗಲಿಂದ ಇರುಳಿಬ್ಬಾಗವಾಗುವವರೆಗೂ ತಮ್ತಮ್ಮ ಹೆಗಲಿಗೆ ಕಟ್ಟಿಕೊಂಡು ಹೊಗಳುವುದು, ಹಾಡುವುದು ಕವಿತೆ ಬರೆಯುವುದು ಅಲ್ಲೋ ಇಲ್ಲೋ ಓದಿದ ಆದರ್ಶ ಅಪ್ಪಂದಿರ ಬಗ್ಗೆ ಬರೆಯುವುದು ಎಲ್ಲವೂ ಒಂದಷ್ಟು ಈ ವರ್ಷ ಮುಗಿಯಿತು. ಬರೆಯುವುದೇನು ತಪ್ಪಿಲ್ಲ ಓದಿದವ ತನ್ನ ನೆನಪುಗಳನ್ನು ಮೆಲುಕು ಹಾಕುತ್ತಾನೆ, ಅಷ್ಟಕ್ಕೂ ಅಪ್ಪನೆಂದರೆ ದ್ವೇಷವೇನು ಇಲ್ಲಾ. ಜಗತ್ತಿಗೆ ನನ್ನಪ್ಪನನ್ನ ತೋರಿಸುವ ಉಮೇದುವಾರಿಕೇನು ಇಲ್ಲಾ, ನನಗಂತೂ ಅಪ್ಪನೆಂದರೆ ಚಿಪ್ಪೊಡೆಯದ ಮುತ್ತು, ನಾನಾಗ ಚಿಗುರುಗಣ್ಣಿನ ಹುಡುಗ. ಎಸ್. ಎಸ್. ಎಲ್ಸಿ […]

ಬೋನ್ಸಾಯಿ ಗಿಡದಂತೆ ಅರಳುವ ನರಳುವ ಸ್ತ್ರೀ ಬದುಕು: ನಾಗರೇಖಾ ಗಾಂವಕರ

ತೆಲಗಿನ ಪ್ರಸಿದ್ಧ ಲೇಖಕಿ ಅಬ್ಬೂರಿ ಛಾಯಾದೇವಿಯ ಒಂದು ಸಣ್ಣಕಥೆ “ಬೊನ್ಸಾಯಿ ಬ್ರತುಕು” ಅಂದರೆ ಬೋನ್ಸಾಯಿ ಬದುಕು. ಬೊನ್ಸಾಯಿ ಕಲೆಯನ್ನೆ ಆಧಾರವಾಗಿಟ್ಟುಕೊಂಡು ಸ್ತ್ರೀ ಬದುಕಿನ ಸುತ್ತ ಅದರ ಸೂಕ್ಷ್ಮ ಎಳೆಗಳ ಇತಿಮಿತಿಗಳ ಜಾಲಾಡಿದ ಸುಂದರ ಕಥಾನಕ. ಬೋನ್ಸಾಯಿ ಒಂದು ಜಪಾನೀ ಕಲೆ. ಅಗಾಧ ಬೆಳೆಯುವ ಮರಗಳನ್ನು ಕುಂಡಗಳಲ್ಲಿ ಮನೆಯೊಳಗಡೆ ಕೂಡ ಬೆಳೆಸುವಂತಹ ವಿಶಿಷ್ಟ ವಿಧಾನ. ಗಿಡದ ಬೆಳವಣಿಗೆಯನ್ನು ಕುಂಠಿತಗೊಳಿಸುವ, ಅದರ ವಿಸ್ತಾರಕ್ಕೆ ವೈಶಾಲ್ಯಕ್ಕೆ ಇತಿಮಿತಿಗಳ ಹೇರಿ, ಸಂಕುಚಿತಗೊಳಿಸುವ ಸುಂದರ ಕುತಂತ್ರದ ಕಲಾತ್ಮಕ ವಿಧಾನ. ಮರದ ಅಪಾರ ಸಾಮಥ್ರ್ಯ, ವಿಶಾಲತೆಗಳೆಲ್ಲ ಮೊಟಕುಗೊಂಡು […]

ಮಂಗಳನ ಅಂಗಳದಲ್ಲಿ! (ಕೊನೆಯ ಭಾಗ): ಎಸ್.ಜಿ.ಶಿವಶಂಕರ್

  ಇಲ್ಲಿಯವರೆಗೆ "ರುಚಿಕಾ, ಮಗಳೆ ಮದುವೆಯ ನಂತರ ಗಂಡನ ಮನೆಗೆ ಹೋಗುವಾಗ ಹೇಳಬೇಕಾದ ವಿದಾಯವನ್ನು ಈಗಲೇ ಹೇಳಬೇಕಾದ ಪರಿಸ್ಥಿತಿ ಒದಗಿ ಬಂದಿದೆ. ನನ್ನ ಕಣ್ಣಾಲಿಗಳು ತುಂಬಿವೆ. ಮಾತು ಹೊರಡದಾಗಿದೆ. ಆದರೂ ಮತ್ತೆ ನಿನ್ನೊಂದಿಗೆ ಮಾತಾಡುವ ಸಂದರ್ಭ ಬರಲಾರದು. ಅದಕ್ಕೇ ತಾಯಿಯಾಗಿ ಕೆಲವು ಮಾತುಗಳನ್ನು ಹೇಳಲು ಬಯಸುತ್ತೇನೆ. ನೀನು ಕೊನೆಗೆ ತಲುಪಲಿರುವ ಜಾಗ ಹೇಗಿದೆಯೋ? ಅಲ್ಲಿ ನಮ್ಮಂತ ಜೀವಿಗಳಿರುವರೋ ಗೊತ್ತಿಲ್ಲ. ನಿನ್ನ ಜೊತೆಯಲ್ಲಿ ಬರುತ್ತಿರುವ ಸೃಜನ್ ನನ್ನ ಗೆಳತಿಯ ಮಗ. ನಿನಗೆ ಅನುರೂಪನಾದ ವರನಾಗಬಲ್ಲ. ಅವನನ್ನು ಒಪ್ಪುವುದು, ಬಿಡುವುದೂ […]

ಹಿಮಾಲಯವೆಂಬ ಸ್ವರ್ಗ (ಭಾಗ 4): ವೃಂದಾ ಸಂಗಮ್

ಇಲ್ಲಿಯವರೆಗೆ ನಾವು ಮೊದಲು ಹೋದದ್ದು ಥಾಯ್ಲ್ಯಾಂಡ್ ದೇಶದ ಚೈತ್ಯಕ್ಕೆ. ಇದು ಥಾಯಿ ಶೈಲಿಯ ಕಟ್ಟಡವಾಗಿದ್ದು ಸುಮಾರು ದೊಡ್ಡದಾಗಿದೆ. ಇದನ್ನು ಕಟ್ಟಿ 4೦ ವರ್ಷಗಳಾಗಿದ್ದವು (1998 ರಲ್ಲಿ). ಬುದ್ಧನ ಪ್ರತಿಮೆ ನಾಲ್ಕುವರೆ ಟನ್ ಭಾರದ ಅಷ್ಟಧಾತು ಎಂಬ ಸಾಮಗ್ರಿಯಿಂದ ಮಾಡಲ್ಪಟ್ಟಿದೆಯಂತೆ. ಚಿನ್ನದ ಪಾಲೀಶ್ ಹಾಕಿರುವ ಈ ಪ್ರತಿಮೆಯ ವೆಚ್ಚ ಹದಿನಾರು ಲಕ್ಷ ರುಪಾಯಿಗಳಾಗಿದ್ದವಂತೆ. ಪ್ರತಿಮೆಯನ್ನು ಇಲ್ಲಿಯ ರೀತಿಯಂತೆ ಒಂದು ಗಾಜಿನ ಪೆಟ್ಟಿಗೆಯಲ್ಲಿರಿಸಲಾಗಿದೆ. ಚೈತ್ಯವು ಬಹಳ ಸುಂದರವಾಗಿದೆ – ಗೋಡೆಗಳು, ನೆಲ, ಮೇಲಿನ ಛಾವಣಿ ಎಲ್ಲ ಸುಂದರವಾದ ರಂಗು-ರಂಗಾದ ಕೆತ್ತನೆ/ಚಿತ್ರಕಲೆಗಳಿಂದ […]

ಕುರುಂಜಿಮಲೆ ಹೋಂಸ್ಟೇ: ಜಾನ್ ಸುಂಟಿಕೊಪ್ಪ.

ಬಿದ್ದಪ್ಪ ಗೈಡ್ ಆದದ್ದೇನೂ ದೊಡ್ಡ ವಿಷಯವಾಗಿರಲಿಲ್ಲ. ಕುರುಂಜಿಮಲೆ ಹೋಂಸ್ಟೇ ಮಾಲಿಕ ಗಣಪತಿಯೂ ಅವನ ಹೆಂಡತಿ ದೇವಕ್ಕಿಯೂ, ಮತ್ತೆ ಆ ಬಡಕಲು ಲೈನ್‍ಮನೆಯಲ್ಲಿದ್ದ ನಾಲ್ಕು ಸಂಸಾರಗಳು ಅವರಷ್ಟಕ್ಕೇ ದಿನ ದೂಡುವುದು ಇದ್ದೇಇತ್ತು. ಕ್ಯಾಟರ್ ಬಿಲ್ಲೋ, ಸಾಹುಕಾರನ      ಕೋವಿಯೋ ಹಿಡಿದು ಆ ತಡಿಯಂಡಮೋಳು, ಮಾಪಿಳೆಕುಂದು, ಕರಡಿಮಲೆ ಎಂದೆಲ್ಲಾ ಇರೋಬರೋ ಬೆಟ್ಟ-ಕಾಡೊಳಗೆ ನುಗ್ಗಿ ಮೊಲವೋ, ಕಬ್ಬೆಕ್ಕೋ, ಕಾಡುಹಂದಿಯೋ, ಕೋಳಿಯೋ ಏನಾದರೂ ಹೊಡೆದು ತರುತ್ತಿದ್ದ ಬಿದ್ದಪ್ಪ ಆ ಗಣಪತಿ ಸಾಹುಕಾರನ ಮನೆ ಜಗಲಿಯಲ್ಲಿ ಬೇಟೆ ಹಾಕಿ ಕಾಲಿಗೆ ಹತ್ತಿದ ಜಿಗಣೆಗಳನ್ನು ಒಂದೊಂದಾಗಿ ಕಿತ್ತು […]

ವಿದ್ಯಾರ್ಥಿಗಳ ಪಾಲಿನ ಅಚ್ಚುಮೆಚ್ಚಿನ ಶಿಕ್ಷಕ- ತಹಶೀಲ್ದಾರ: ದಾವಲಸಾಬ ತಾಳಿಕೋಟಿ

(ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಸಂಭ್ರಮ ಈ ನಿಮಿತ್ತ ಲೇಖನ)  ಶಿಕ್ಷಕ ವೃತ್ತಿಯಂದರೇ ಎಲ್ಲಕ್ಕಿಂತಲೂ ಸರ್ವಶ್ರೇಷ್ಟವಾದ ಕಾಯಕವಾಗಿದೆ. ಶಿಕ್ಷಕ ತನ್ನಲ್ಲೇ ಜ್ಞಾನವನ್ನು ವಿದ್ಯಾರ್ಥಿಗಳಿಗೆ ಧಾರೆಯರೇದು ಉತ್ತಮ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ಶಿಕ್ಷಕನ ಪಾತ್ರ ಬಹುಮುಖ್ಯವಾದದ್ದು. ಇಂತಹ ಶ್ರೇಷ್ಠ ವೃತ್ತಿಗೆ ಬರಬೇಕಾದರೇ ಪೂರ್ವಿಕರ ಆರ್ಶಿವಾದ ಇರಬೇಕು ಎನ್ನುತ್ತಾರೆ. ಮುಂದೆ ಗುರಿ ಇರಬೇಕು ಹಿಂದೆ ಗುರುವಿರಬೇಕು ಗುರುವಿಲ್ಲದೇ ಎನ್ನುವಂತೆ  ಇಲ್ಲೋಬ್ಬ ಶಿಕ್ಷಕ ತನ್ನ ಕಾಯಕ ನಿಷ್ಠೆಯಿಂದಲೇ ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕನಾಗಿ, ಜಿಲ್ಲಾ ಉತ್ತಮ ಶಿಕ್ಷಕನಾಗಿ, ಸಹ ಶಿಕ್ಷಕರಾಗಿದ್ದುಕೊಂಡೆ ಶಾಲೆಯ […]