Facebook

Archive for 2015

Happy 50th anniversary to “ಸಂಸ್ಕಾರ” …: ಆದರ್ಶ ಬಿ. ವಶಿಷ್ಟ

ಹಿಂದಿರುಗಿ ನೋಡಿದಾಗ …  ಹೀಗೆಯೇ ಎಚ್ಚೆಸ್ವಿ ಅವರ "ಅನಾತ್ಮ ಕಥನ " ಓದುತ್ತಾ ಕುಳಿತಿದ್ದೆ. ಯಾವುದೊ ಸಣ್ಣ ಕಥೆಯ ಮಧ್ಯದಲ್ಲಿ ಅವರು ಯು. ಆರ್. ಅನಂತಮೂರ್ತಿಯವರ " ಸಂಸ್ಕಾರ " ಕಾದಂಬರಿಯ ಬಗ್ಗೆ ಉಲ್ಲೇಖಿಸಿದ್ದರು. ತಕ್ಷಣವೇ ಏನೋ ಹೊಳೆದಂತಾಗಿ ಇಂಟರ್ ನೆಟ್ನಲ್ಲಿ ಸಂಸ್ಕಾರ ಮೊದಲು ಬಿಡುಗಡೆ ಆದ ವರ್ಷ ಯಾವುದೆಂದು ಹುಡುಕಿದೆ. ವರ್ಷ ೧೯೬೫ ನೋಡಿದ ಕೂಡಲೇ ಮುಖದಲ್ಲೊಂದು ಮಂದಾಹಾಸ. ' ಅರೆ, ಸಂಸ್ಕಾರ ಮುದ್ರಣಗೊಂಡು ೫೦ ವರ್ಷ ಆಗಿಹೊಯ್ತಾ ?? ' ಎಂದುಕೊಂಡೆ. ತಕ್ಷಣವೇ ಇಂತಹದೊಂದು […]

ಹೀಗೊಂದು ಸ್ವ-ವಿಮರ್ಶೆ: ಅಭಿ ಸಾರಿಕೆ

ಬದುಕು ಸುಂದರ ಎನ್ನುವುದು ಎಷ್ಟು ನಿಜವೋ ಸಂಕೀರ್ಣ ಅನ್ನೋದು ಅಷ್ಟೆ ನಿಜ. ಕಣ್ಮುಂದಿರುವ ಭೂಮಿಯ ಬಿಟ್ಟು ಕಾಣದ ಸ್ವರ್ಗಕ್ಕೆ ಹಂಬಲಿಸೋ ಕತ್ತಲು. ನಮ್ಮನ್ನು ಪ್ರೀತಿಸುವ ಹೃದಯವ ಬಿಟ್ಟು ನಮ್ಮತ್ತ ತಿರುಗಿಯೂ ನೋಡದವರನ್ನು ತಿರು ತಿರುಗಿ ನೋಡುವ ಚಪಲ. ಬೇವು ಬೆಲ್ಲ ಕಲೆಸಿ ಬೆಲ್ಲವನ್ನು ಮಾತ್ರ ತಿನ್ನುವಂತ ರೀತಿ ಈ ಬದುಕು, ಯಾರಿಗೂ ಕಷ್ಟ ಬೇಕಿಲ್ಲ,  ಸುಖವನ್ನು ಬಯಸದವರು ಯಾರು ಇಲ್ಲ. ಬಲಪಕ್ಕದಲ್ಲಿರುವನಿಗೆ ಎರಡಂತಸ್ತಿನ ಮನೆ, ಎಡಪಕ್ಕದಲ್ಲಿರುವ ನಿಲ್ಲಲು ಸೂರಿಲ್ಲದ ಭಿಕಾರಿ, ಒಂದಸ್ತಿನ ಮನೆಯಲ್ಲಿರುವ ನಾವು ಎರಡಂತಸ್ತಿರುವನನ್ನು ನೋಡಿ […]

ಪುಟ್ಟಿ ಮತ್ತು ದೇವರು: ಅನಿತಾ ನರೇಶ್

ನಮ್ಮ ಪಕ್ಕದ ಮನೆ ಪುಟ್ಟಿಗೆ, ನಮ್ಮ ಮನೆಗೆ ಯಾವಾಗೆಂದರಾವಾಗ ಬರಲು ವೀಸಾ, ಪಾಸ್ಪೋರ್ಟ್ ಏನೂ ಬೇಡ. ಇವತ್ತು ಮಧ್ಯಾಹ್ನ ನನ್ನ ಊಟ ಆಗಿತ್ತಷ್ಟೇ. ಅವಳ ಹೆಜ್ಜೆಯ ಅಂದರೆ ಗೆಜ್ಜೆಯ ಸದ್ದು ಕೇಳಿಸಿತು.  ಒಂದು ಕೈಯಲ್ಲಿ ಕಥೆ ಪುಸ್ತಕ, ಇನ್ನೊಂದು ಕೈಯಲ್ಲಿ ಡ್ರಾಯಿಂಗ್ ಪುಸ್ತಕ ಹಿಡಿದು ‘ಅಕ್ಕಾ ಇವತ್ತು ಎರಡು ಕಥೆ, ಮೂರು ಡ್ರಾಯಿಂಗ್ ಗೊತ್ತಾಯ್ತಾ’ ಎಂದಳು. ನನ್ನದಿನ್ನೂ ಊಟದ ಪಾತ್ರೆಗಳನ್ನು ತೊಳೆಯುವ ಕೆಲಸ ಆಗಿರಲಿಲ್ಲ. ಹಾಗಾಗಿ ಅವಳನ್ನು ಅಲ್ಲೇ ಕಟ್ಟೆಯ ಮೇಲೆ ಕೂರಿಸಿ ಪಾತ್ರೆ ತೊಳೆಯಲು ಕುಳಿತೆ.  […]

ಮಂಕಿ ಬ್ಯುಸಿನೆಸ್: ಅಖಿಲೇಶ್ ಚಿಪ್ಪಳಿ

ಮಂಗಳೂರಿನ 800 ಜನ ರೈತರು ಮಂಗಗಳ ಕಾಟದಿಂದ ಬೇಸತ್ತು 2012ರಿಂದ ಬೆಳೆ ಬೆಳೆಯುವುದನ್ನೇ ನಿಲ್ಲಿಸಿದ್ದಾರೆ. ಮಂಗನ ಕಡಿತಕ್ಕೆ ಪರಿಹಾರ ನೀಡುವ ಏಕೈಕ ರಾಜ್ಯ ಉತ್ತರಾಖಂಡ. ಜಮ್ಮು ಜಿಲ್ಲೆಯಲ್ಲಿ ಪ್ರತಿವರ್ಷ 33 ಕೋಟಿ ರೂಪಾಯಿ ಮೊತ್ತದ ಬೆಳೆ ನಾಶ ಮಂಗಗಳಿಂದ. ಹಿಮಾಚಲ ಪ್ರದೇಶದಲ್ಲಿ ಪ್ರತಿವರ್ಷ ಮಂಗಗಳಿಂದ ಆಗುವ ಬೆಳೆ ಹಾನಿ ಮೊತ್ತ 500 ಕೋಟಿ ರೂಪಾಯಿಗಳು. ಮಂಗಗಳ ವಿರುದ್ಧ ಸೆಣೆಸಲು ಆಗ್ರಾ ಸಿಟಿ ಡೆವಲಪ್‍ಮೆಂಟ್ ಅಥಾರಿಟಿ ಪ್ರತಿವರ್ಷ ಖರ್ಚು ಮಾಡುವ ಹಣದ ಮೊತ್ತ 2 ಕೋಟಿ ರೂಪಾಯಿಗಳು. ದೇಶದ […]

ಬಂದ್: ಪ್ರಶಸ್ತಿ ಪಿ.

ನಾ ಸಣ್ಣಕ್ಕಿದ್ದಾಗ ಕೇಳಿದೊಂದು ಹಾಡು ನೆನಪಾಗುತ್ತಿದೆ ಯಾಕೋ. ಗಾಂಧಿ ಹೇಳಿಕೊಟ್ಟ ಪಾಠ,ಗುರುವಿಗೆ ತಿರುಮಂತ್ರ ಮಾಟ.ಸತ್ಯಾಗ್ರಹ,ಸ್ಟ್ರೈಕ್, ಸ್ಟ್ರೈಕ್, ಸ್ಟ್ರೈಕ್. ಪೆಟ್ರೋಲ್ ದರ ಹೆಚ್ಚಳವನ್ನು ವಿರೋಧಿಸಿ ಬಂಧ್, ರಸ್ತೆ ಸುರಕ್ಷಾ ಮಸೂಧೆಯನ್ನು ವಿರೋಧಿಸಿ ಬಂದ್. ಕಾವೇರಿ ನೀರು ಬಿಟ್ಟರೆಂದು ಬಂದ್, ಮಹದಾಯಿಗಾಗಿ ಬಂದ್.. ಉಫ್ ! ಹೀಗೆ ತಿಂಗಳಿಗೆರೆಡು ದಿನ ಬಂದ್ ಆಚರಿಸುತ್ತಿರೋದನ್ನ ನೋಡಿ ಕರ್ನಾಟಕವೂ ಕಮ್ಯುನಿಸ್ಟರ ನಾಡಾದ ಕೇರಳದ ಹಾದಿ ಹಿಡಿತಾ ಇದಿಯಾ ಅಂತ ಒಮ್ಮೆಮ್ಮೆ  ದಿಗಿಲಾಗುತ್ತೆ. ದಿನವೊಂದರ ಬಂದಿನಿಂದ ಕೋಟ್ಯಾಂತರ ರೂ ನಷ್ಟವಾಗುತ್ತೆ. ಬಂದ್ಗಳು ಅಸಾಂವಿಧಾನಿಕ, ಬಂದ್ಗಳ […]

ಮೂವರ ಕವನಗಳು: ಶಶೀ ತರೀಕೆರೆ, ಜಾನ್ ಸುಂಟಿಕೊಪ್ಪ, ವಲ್ಲಿ ಕ್ವಾಡ್ರಸ್

ಮರುಳನ ಸಾಲುಗಳು ನಿನ್ನ ನೆನಪಿಗಾಗಿ  ಖಾಲಿ ಬೀದಿಯಲ್ಲೂ ಕೈಬೀಸಿ ನಡೆಯೋದು  ಅದೇಷ್ಟು ಹಿತವಾದ ಸಾವು  ನಜ್ಜುಗುಜ್ಜಾದ ಈ ಬದುಕಿಗೆ.. ಬೆಳ್ಳಂಬೆಳಿಗ್ಗೆ ನಿನ್ನದೇ ತಿಳಿಯಾದ ನಿಗೂಢ ಸ್ವಪ್ನವೊಂದು ಥಟಕ್ಕನೆ ಹಾಸಿಗೆಯಿಂದೇಳಿಸುವ ಪರಿ  ಊಹಿಸು ಇನ್ನೆಷ್ಟು ದಿನ… ಚಿಟಿಕೆ ಸದ್ದಿನಷ್ಟಾದರೂ ನಗು ಉಳಿಸಿಕೊಳ್ಳದೆ  ಮುಗ್ಗರಿಸಿರುವ  ಊರುಕೇರಿಗಳ ಮೈಲಿಗಲ್ಲು ಕಟ್ಟಿಕೊಟ್ಟಿತೇ ಇನ್ನೊಂದು ಊರು… ಸುಮ್ಮನೆ ನಿನ್ನಂತೆ ಹ್ಮೂಂ  ಗುಡುವ ಹೂಬನ,ಮರಗಿಡ, ರೈಲು,ಸ್ತಬ್ಧ ಗೋಡೆಯಲ್ಲಿನ ನಿಪುಣ ಗಡಿಯಾರಗಳಿಗೆ  ಹೇಳು ಇದು ಎಷ್ಟರ ಪ್ರಾಯ .. -ಶಶೀ ತರೀಕೆರೆ         […]

ಸೂಫಿ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ತಂದೆ, ಮಗ ಹಾಗು ಕತ್ತೆ ತಂದೆ ಹಾಗು ಮಗ ತಮ್ಮ ಕತ್ತೆಯೊಂದಿಗೆ ನಡೆದುಕೊಂಡು ಮಾರುಕಟ್ಟೆಗೆ ಹೋಗುತ್ತಿದ್ದರು. ಅದೇ ದಾರಿಯಲ್ಲಿ ಹೋಗುತ್ತಿದ್ದ ಹಳ್ಳಿಯವನೊಬ್ಬ ಹೇಳಿದ, “ನೀವೆಂಥ ಮೂರ್ಖರು. ಕತ್ತೆ ಇರುವುದೇ ಸವಾರಿ ಮಾಡಲೋಸುಗವಲ್ಲವೆ?” ಇದನ್ನು ಕೇಳಿದ ತಂದೆ ಮಗನನ್ನು ಕತ್ತೆಯ ಮೇಲೆ ಕುಳ್ಳಿರಿಸಿದ. ಇಂತು ಅವರು ಪ್ರಯಾಣ ಮುಂದುವರಿಸಿದರು. ಸ್ವಲ್ಪ ಸಮಯದ ನಂತರ ಅವರು ಒಂದು ಗುಂಪಾಗಿ ಹೋಗುತ್ತಿದ್ದ ಕೆಲವರನ್ನು ಸಂಧಿಸಿದರು. ಅವರ ಪೈಕಿ ಒಬ್ಬ ಹೇಳಿದ, “ನೋಡಿ, ನೋಡಿ. ಆ ಯುವಕ ಎಷ್ಟು ಸೋಮಾರಿ! ತನ್ನ […]

ಫ್ಲಾಪಿಬಾಯ್ ಮತ್ತು ಲಗೋರಿಬಾಬಾ-5

ಕುರುಸಾಡಿ ದ್ವೀಪದಲ್ಲಿ.. ಕಳೆದ ವಾರ ಶ್ರೀಲಂಕಾದಲ್ಲಿನ ಬೆಳಕಿನ ಮರಗಳ ರಹಸ್ಯ ಬೇಧಿಸಿದ ಫ್ಲಾಪಿಬಾಯ್ ಮತ್ತು ಲಗೋರಿಬಾಬಾ ಮರಳಿ ತಮ್ಮ ಊರಿಗೆ ಬರುವಾಗ ಎರಡು ದಿನಗಳ ಮಟ್ಟಿಗೆ ರಾಮೇಶ್ವರದಲ್ಲಿಯೇ ಉಳಿಯುವ ಅನಿವಾರ್ಯತೆ ಎದುರಾಯ್ತು. ಗುಂಡ್ರುಗೋವಿ ಲಗೋರಿಬಾಬಾ ಮತ್ತು ತುಂಡೈದ ಫ್ಲಾಪಿಗೆ ಅವರು ಎಲ್ಲಿದ್ರೂ ಒಂದೇ! “ಆಯ್ತು” ಅಂತ ಇಬ್ರೂ ಅಲ್ಲಿಯೇ ಹೊಟೇಲೊಂದ್ರಲ್ಲಿ ರೂಮ್ ಮಾಡಿ ಉಳಿದುಕೊಂಡ್ರು. ಟಿವಿ, ಪೇಪರ್, ಪುಸ್ತಕ ಇತ್ಯಾದಿಗಳೆಲ್ಲಾ ಇಬ್ಬರಿಗೂ ಇರೋ ಆಸಕ್ತಿ ಅಷ್ಟಕ್ಕಷ್ಟೆ! ಲಗೋರಿಬಾಬಾಗೆ ಹೆಚ್ಚಿನ ಸಮಯ ಧ್ಯಾನ, ನಿದ್ದೆ, ಭಂಗಿ ಸೇದೋದ್ರಲ್ಲೇ ಕಳೆದೊದ್ರೆ, […]

ಮಂಗಳಗೌರಿಯೂ ಫಾರಿನ್ ಸೊಸೆಯೂ: ಪಾರ್ಥಸಾರಥಿ ಎನ್

ಗೆಳೆಯ ಶಿವರಾಜ್ ಮನೆಗೆ ಹೋಗಿ ತುಂಬಾ ದಿನಗಳೆ ಕಳೆದಿದ್ದವು. ಅವನು ಮೊದಲಾದರು ದಿನಾ ಅಂತ ನಮ್ಮ ಮನೆಗೆ ಬರುತ್ತಿದ್ದವರು ಈಗ ರಿಟೈರ್ಡ್ ಆದಮೇಲೆ ಕಾಣಿಸುತ್ತಲೇ ಇಲ್ಲ,  ’ನಾನು ರಿಟೈರ್ಡ್ ಆದ ಮೇಲೆ ತುಂಬ ಎಂಗೇಂಜ್ ಆಗಿ ಬಿಟ್ಟಿದ್ದೀನಿ ಯಾವುದಕ್ಕು ಸಮಯವಿಲ್ಲ ಅಂತ ಅವನ ಗೋಳಾಟ’  ಒಮ್ಮೆ ಮಾತನಾಡಿಸಿಯಾದರು ಬರೋಣ, ಇನ್ನು ನನ್ನ ಮುಖ ಮರೆತೀತು ಎಂದು ಬಾನುವಾರ ಅವರ ಮನೆಗೆ ಹೋದೆ. ಮುಂಬಾಗಿಲು ತೆರೆದಿತ್ತು, ಸೀದಾ ಒಳಗೆ ಹೋದೆ, ಯಾರು ಕಾಣಲಿಲ್ಲ ಅನ್ನುವಷ್ಟರಲ್ಲಿ, ರೂಮಿನಲ್ಲಿ ಸಣ್ಣ ಶಬ್ದ, […]

ಸಾಮಾನ್ಯ ಜ್ಞಾನ (ವಾರ 75): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು   1.    ಸುಕನ್ಯಾ ಸಮೃದ್ಧಿ ಯೋಜನೆ ಜಾರಿಗೆ ಬಂದ ವರ್ಷಯಾವುದು? 2.    ಇತ್ತೀಚಿಗೆ ಭಾರತ ಸರ್ಕಾರದ ಸಾಂಸ್ಕøತಿಕ ಸಲಹಾ ಮಂಡಲಿಯ ಕಾರ್ಯದರ್ಶಿಯಾಗಿ ಆಯ್ಕೆಗೊಂಡವರು ಯಾರು? 3.    ಎರಡು ಬಾರಿ ರಾಷ್ಟ್ರಪತಿಗಳ ಭಾವೈಕ್ಯತಾ ಪ್ರಸಸ್ತಿ ಪಡೆದ ಕನ್ನಡ ಚಲನಚಿತ್ರ ನಿರ್ದೇಶಕ ಯಾರು? 4.    ಅಗ್ನಿದೇವನ ಪತ್ನಿಯ ಹೆಸರೇನು? 5.    ವಿಶ್ವಸಂಸ್ಥೆಯು 2003-2012 ದಶಕವನ್ನು ಯಾವ ದಶಾಬ್ದಿ ಎಂದು ಪ್ರಕಟಿಸಿದೆ? 6.    ವಿಶ್ವದ ಅತ್ಯಂತ ಪುರಾತನ ವಿಶ್ವವಿದ್ಯಾನಿಲಯ ಆಕ್ಸ್‍ಫರ್ಡ್ ವಿಶ್ವವಿದ್ಯಾನಿಲಯದ ಮೊದಲ ಮಹಿಳಾ ಕುಲಪತಿ ಯಾರು? 7.    ‘ಕ್ಯೂ’ […]