Facebook

Archive for 2015

ಸಮಾಜವಾದಿ ಕ್ಯೂಬಾದ ವೈದ್ಯಕೀಯ ಕ್ರಾಂತಿ; ಜಗತ್ತಿಗೇ ಮಾದರಿ: ಜೈಕುಮಾರ್ ಹೆಚ್.ಎಸ್.

ಬೆಂಗಳೂರಿನಷ್ಟು ಜನಸಂಖ್ಯೆ ಹೊಂದಿರುವ ಪುಟ್ಟ ದೇಶ ಕ್ಯೂಬಾ ವೈದ್ಯಕೀಯ ರಂಗದಲ್ಲಿ ಮಾಡುತ್ತಿರುವ ಹೊಸ ಆವಿಷ್ಕಾರಗಳು ಮತ್ತು ಅದರ ವಿಶಿಷ್ಟ ಆರೋಗ್ಯ ವ್ಯವಸ್ಥೆಯ ಕಾರ್ಯಕ್ಷಮತೆ ಪ್ರತಿದಿನ ಸುದ್ದಿಯಲ್ಲಿವೆ. ಅಲ್ಲಿಯ ಜನರ ಜೀವಿತಾವಧಿ ಸುಮಾರು 78 ವರ್ಷ ಮತ್ತು ಅಲ್ಲಿನ ಹಲವು ಆರೋಗ್ಯ ಸೂಚ್ಯಂಕಗಳು ಅಭಿವೃದ್ಧಿ ಹೊಂದಿದ ದೇಶಗಳ ಮಟ್ಟದಲ್ಲಿದೆ. ಭೂಕಂಪ, ಚಂಡಮಾರುತ, ಇತ್ಯಾದಿ ವಿಪತ್ತಿನ ಕಾಲದಲ್ಲಿಯಂತೂ ವಿಶ್ವದಾದ್ಯಂತ ಕ್ಯೂಬಾದ ವೈದ್ಯರು ತಮ್ಮ ಅನುಪಮ ಸೇವೆಯಿಂದ ಮೇಲ್ಪಂಕ್ತಿಯಲ್ಲಿದ್ದಾರೆ. ಮಿಷನ್ ಐ ಹೆಸರಿನ ಕಾರ್ಯಕ್ರಮದಡಿ ಇತರೆ ದೇಶಗಳಲ್ಲಿ ಸುಮಾರು 35 ಲಕ್ಷ […]

ಸೋಮರಸಕ್ಕೆ ರಾಜಮಾರ್ಗ- ೨: ಆದರ್ಶ ಸದಾನ೦ದ ಅರ್ಕಸಾಲಿ

  ಸರ್ಕಾರಿ ಮದ್ಯದಂಗಡಿಯಿ೦ದ ಕೈಯಲ್ಲಿ ಬಾಟಲಿ ಹಿಡಿದುಕೊಂಡು ಹೊರಬಿದ್ದಾಗ ಮಳೆರಾಯ ಕರುಣೆತೋರುತ್ತಾ ತನ್ನ ವಿರಾಟರೂಪದಿ೦ದ ಸೌಮ್ಯರೂಪಧಾರಿಯಾಗಿದ್ದ. ಕೆಲವರು ತಮ್ಮ ಬಾಟಲಿಗಳನ್ನು ರದ್ದಿಪೇಪರನಲ್ಲಿ ಸುತ್ತಿದ್ದರೆ, ಕೆಲವರು ತಮ್ಮ ಟವೇಲ್ ನಲ್ಲಿ ಬಚ್ಚಿಟ್ಟಿದ್ದರು, ಇವರಡೂ ದೊರಕದ ಹಲವರು, ತ೦ತಮ್ಮ ಲು೦ಗಿಗಳಲ್ಲಿ ಆಶ್ರಯ ಕೊಟ್ಟು ಸ್ಮಗ್ಲರ್ ಗಳ ತರ ಹೊರಹೋಗುತ್ತಿದ್ದರು. ಸುಮ್ಮನೆ ಕೈಯಲ್ಲಿ ಹಿಡಿದುಕೊ೦ಡು ಹೋಗಿದ್ದರೆ ಅಷ್ಟೇನೂ ಸ೦ಶಯ ಬರುತ್ತಿರಲಿಲ್ಲವೇನೋ , ಆದರೆ ಬಾಟಲಿಗಳಿಗೆ ನೋಡುಗರ ದೃಷ್ಟಿ ತಾಕಬಾರೆನ್ನುವ ನೈತಿಕ ಹೊಣೆಗಾರಿಕೆಯೋ ಇಲ್ಲಾ ಸಮಾಜದಲ್ಲಿ ತಮ್ಮ ಇಮೇಜ್ ಗೆ ಮಡಿವಂತಿಕೆ ಮನಸ್ಥಿತಿಯಿರುವವರ […]

ವಾಸ್ತವಕ್ಕೆ ಮುಖಮಾಡದ ಸಾವುಗಳು: ರಾಘವೇಂದ್ರ ತೆಕ್ಕಾರ್

ಕಳೆದೆರಡು ವಾರದ ಎರಡು ದಿನಗಳಲ್ಲಿ ಎರಡು ಡೆತ್ ನೋಟ್ಗಳನ್ನು ನೋಡಿದೆ of course ಸಾವನ್ನು ಕೂಡ. ವಯಸ್ಸು ಆಜುಬಾಜು 24 ರಿಂದ 28ರ ಮಂದಿ. ಮಹಿಳೆ ಒಳಗೊಂಡಂತೆ ಮತ್ತೋರ್ವ. ಇಬ್ಬರು ವಿವಾಹಿತರು. 2ರಿಂದ 3 ವರುಷದ ದಾಂಪತ್ಯ ಜೀವನ ಇವರುಗಳದ್ದು. ನಾವೆಲ್ಲರೂ ಪ್ರೇಮಿಗಳು ಸಂಗಾತಿಗಳಾಗಲು ಸಾದ್ಯವಿಲ್ಲ ಮನೆಯವರು ಒಪ್ಪಲ್ಲ ಜಾತಿ ಸಮಸ್ಯೆ ಇತ್ಯಾದಿ ಇತ್ಯಾದಿ ಗಳಿಂದಾಗಿ ಆತ್ಮಹತ್ಯೆಗೆ ಶರಣಾಗುವದನ್ನು ಕೇಳಿಯೆ ಇರುತ್ತೇವೆ. ಆದರೆ ಇವಕ್ಕೆ ಹೊರತಾದದ್ದು ಮೇಲೆ ತಿಳಿಸಿದ ಎರಡು ಸಾವುಗಳು.ಕಾರಣ ಕೌಟುಂಬಿಕ ಕಲಹ, ಜೀವನದಲ್ಲಿ ಜಿಗುಪ್ಸೆ. […]

ನಾನು ಮತ್ತು ಅವನು……: ಚೈತ್ರಾ ಎಸ್.ಪಿ.

ಬದುಕಿನಲ್ಲಿ ಎಲ್ಲವನ್ನು ಸೀರಿಯಸ್ ಆಗಿ ತಗೋಳೋ ನಾನು ಕೆಲವೊಂದು ಸೀರಿಯಸ್ ವಿಚಾರಗಳನ್ನ ತಮಾಷೆಯಾಗಿ ತಗೊಂಡು ನನ್ನನ್ನ ಅದ್ಯಾವುದೋ ಲೋಕಕ್ಕೆ ಲಾಕ್ ಮಾಡ್ಕೊಂಡಿದ್ದೀನಿ ಅನ್ನಿಸ್ತಾ ಇದೆ. ಬೇಡವೆಂದರೂ ಮತ್ತೆ ಹಚ್ಚಿಕೊಂಡೆ. ಪ್ರೀತಿಯೆಂಬ ಮಾಯೆಯೊ, ಸಂತೋಷವೋ ಅಲ್ಲ ಕೊರಗೋ !! ಯಾವುದೋ ಒಂದು ಭಾವಕ್ಕೆ ಮಣಿದೆ. ಪ್ರೀತಿಸಿದೆ, ಮುದ್ದಿಸಿದೆ, ಗೋಳಾಡಿದೆ, ಕಣ್ಣೀರಾದೆ.  ನನ್ನೆಲ್ಲ ಹುಚ್ಚಾಟಗಳನ್ನು ತಿದ್ದಿ ಬುದ್ದಿ ಹೇಳಿ ಒಂದು ರೂಪ ಕೊಟ್ಟು, ಪ್ರೀತಿಯ ಧಾರೆಯೆರೆದು ನನ್ನನ್ನು ಧಾರೆಯೆರೆಸಿಕೊಳ್ಳಲಾರೆನೆಂಬ ದುಃಖದ ಕೂಪಕ್ಕೆ ತನ್ನನ್ನು ತಾನೇ ತಳ್ಳಿಕೊಂಡ ಆ ಜೀವಕ್ಕೆ ನಾ […]

ನಾನೋದಿದ ಹೊತ್ತುಗೆ ಪೆರುವಿನ ಪವಿತ್ರ ಕಣಿವೆಯಲ್ಲಿ: ಪ್ರಶಸ್ತಿ

ಬೇಸಿಗೆರಜೆ ಮತ್ತು ಚಳಿಗಾಲದ ರಜೆ ಬಂತು ಅಂದ್ರೆ ಎಲ್ಲಿಲ್ಲದ ಖುಷಿ ನಂಗೆ. ಅಜ್ಜಿ ಮನೆ, ದೊಡ್ಡಪ್ಪನ ಮನೆ ಅಂತ ಒಂದು ಕಡೆ ಇಂದ ಹೊರಟ್ರೆ ಅಲ್ಲಿಂದ ಹತ್ತಿರ ಇರ್ತಿದ್ದ ಮತ್ತೊಂದು ಮಾವನ ಮನೆ, ಅಲ್ಲಿಂದ ಮತ್ತೊಂದು ಚಿಕ್ಕಪ್ಪನ ಮನೆ ಅಂತ ಸುಮಾರಷ್ಟು ಕಡೆ ತಿರುಗಿ ರಜಾ ಮುಗಿಯೋ ಹೊತ್ತಿಗೆ ಮನೆ ತಲುಪುತ್ತಿದ್ದೆ. ದಿನಾ ಮನೆಗೆ ಫೋನ್ ಮಾಡಿ ಎಲ್ಲಿದ್ದೀನಿ ಅಂತ ಹೇಳ್ಬೋಕು ಅನ್ನೋದನ್ನ ಬಿಟ್ರೆ ಬೇರ್ಯಾವ ನಿರ್ಬಂಧಗಳೂ ಇಲ್ಲದ ಸ್ವಚ್ಛಂದ ಹಕ್ಕಿಯ ಭಾವವಿರುತ್ತಿದ್ದ ದಿನಗಳವು. ಮನೆ ಬಿಟ್ಟು […]

ಮೂವರ ಕವನಗಳು: ಕು.ಸ.ಮಧುಸೂದನ್, ಶ್ರೀಮಂತ್.ಎಮ್.ವೈ, ವೆಂಕಟೇಶ ನಾಯಕ್, ಮಂಗಳೂರು

ಇವತ್ತಿನ ಕವಿತೆಗಳು. 1. ಇವತ್ತಿನ ರಾತ್ರಿ ಮುಗಿದು ಹೋಗೋದ್ರೊಳಗೆ ಚುಕ್ಕಿಗಳೆಲ್ಲ ಲೆಕ್ಕ ಚುಕ್ತಾ ಮಾಡಿ ಪುಸ್ತಕ ಮುಚ್ಚೋದ್ರೊಳಗೆ ಚಂದ್ರ ಪಾಳಿ ಮುಗಿಸಿ  ಖೋಲಿ ಸೇರೋದ್ರೊಳಗೆ ಬಿಲ ಬಿಟ್ಟ ಹಾವು ಇಲಿ ಬಲಿ ನುಂಗಿ ನೊಣೆದು ತೇಗೋದ್ರೊಳಗೆ ಗಿಡುಗನಂತವನು ಗಿಣಿಯಂತೋಳ ಜೊತೆ ಸುರತ ನಡೆಸಿ ಸ್ಖಲಿಸಿ ಬಿಡೋದ್ರೊಳಗೆ ಸೂರ್ಯ ಅನ್ನೋ ಮೂಧೇವಿ ಬೆಳೆಗ್ಗೆ ಬಂದು  ಬ್ಯಾಟರಿ ಹಾಕಿ ಬೆಳಕ ಹರಿಸೋದ್ರೊಳಗೆ ತಿಕ ಸುಟ್ಟ ಬೆಕ್ಕು ಮುಂಜಾನೆ ಮಿಯಾಂವ್ ಅಂತ ಹಿಮ್ಮಡಿ ನೆಕ್ಕೋದ್ರೊಳಗೆ ಹೀಗೇ ಸುಮ್ಮ ಸುಮ್ಮನೇ ಸತ್ತು ಹೋಗಿಬಿಡಬೇಕು […]

ಕಾಡು (ವ) ದಿಟ್ಟೆಯರು!!: ಅಖಿಲೇಶ್ ಚಿಪ್ಪಳಿ

ಲೋಕಾಯುಕ್ತ ಕಚೇರಿಯಲ್ಲೇ ಲಂಚಾವತಾರ. ರೈತರ ಸರಣಿ ಆತ್ಮಹತ್ಯೆಗಳು. ರೈತನ ಪಾಲಿಗೆ ಕಬ್ಬಿನ ಬೆಳೆ ಕಬ್ಬಿಣದ ಶೂಲವಾಗಿ ಪರಿಣಮಿಸಿದ್ದು, ತನ್ಮಧ್ಯೆ ಮಳೆ ಕೊರತೆಯಿಂದ ಉಂಟಾಗಬಹುದಾದ ಬರಗಾಲದ ಛಾಯೆ. ಕ್ರಿಕೇಟ್ ಆಟಕ್ಕೆ ಸಂಬಂಧಿಸಿದಂತೆ ಲಲಿತ್ ಮೋದಿಯ ವೀಸಾಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವೆ ಮತ್ತು ರಾಜಾಸ್ಥಾನದ ಮಹಿಳಾ ಮುಖ್ಯಮಂತ್ರಿಯ ಮೇಲೆ ಬಂದ ಗಂಭೀರ ಆರೋಪ. ವ್ಯಾಪಂ ಹಗರಣದ ಸರಣಿ ಸಾವುಗಳು. ಒಟ್ಟಾರೆ ಋಣಾತ್ಮಕ ಅಂಶಗಳೇ ಹೆಚ್ಚು. ಈ ಮಧ್ಯದಲ್ಲೂ ಅನೇಕ ಮಹಿಳೆಯರು ಭೂಆರೋಗ್ಯದ ಕುರಿತು ಚಿಂತಿಸಿ, ತಮ್ಮದೇ ಆದ ಕೊಡುಗೆಯನ್ನು ನೀಡುತ್ತಿದ್ದಾರೆ. […]

ಋಣಮುಕ್ತವಲ್ಲದ ಬದುಕು ನಮ್ಮದು: ಗಾಯತ್ರಿ ಬಡಿಗೇರ

                  ತಂದೆ ತಾಯಿ ನಾವ ಹುಟ್ಟಿದಮ್ಯಾಗ ತುಸು ಖರ್ಚು ಮಾಡಿ ಹೆಸರಿಟ್ಟಿರಂಗಿಲ್ರಿ. ಹುಟ್ಟಿದ ಜಾತಕ ತಗಸಿ ಅದು ಇದು ಅಂತಾ ಪಾಪಾ ಬಾಳ ತಿರಗ್ಯಾಡಿ ಬಂಗಾರದಂಗ ಹೆಸರ ಇಟ್ಟಿರತಾರ.. ನಾವ ದೀಡ ಪಂಡಿತ್ರ ಅದೀವಿ ಅಲ್ಲ. ‘ಅಂದ ಅನಸ್ಕೊದ ಚಂದಗೇಡಿಂತ’ ಹಂಗ ಎತ್ತಾಗರ ಪತ್ತಾಗರ ಅರ್ಧಂಬರ್ಧಾ ಹೆಸರ ಕರಕೋತ ನಾಯಿ, ನರಿ, ಹಂದಿ, ಮಗಾ, ಮಚ್ಚಾ, ಮಾಮಾ, ಮಾಮಿ ಅದು ಇದು ಸುಡಾಗಾಡ ಸಂತಿ ವಟ್ಟ […]

ಸೂಫಿ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಕಪ್ಪೆಗಳು ಕಪ್ಪೆಗಳ ಗುಂಪೊಂದು ಕಾಡಿನ ಮೂಲಕ ಎಲ್ಲಿಗೋ ಪಯಣಿಸುತ್ತಿದ್ದಾಗ ಅವುಗಳ ಪೈಕಿ ಎರಡು ಕಪ್ಪೆಗಳು ಒಂದು ಆಳವಾದ ಗುಂಡಿಯೊಳಕ್ಕೆ ಬಿದ್ದವು. ಉಳಿದ ಕಪ್ಪೆಗಳು ಗುಂಡಿಯ ಮೇಲೆ ಸುತ್ತಲೂ ನಿಂತು ಗುಂಡಿ ಎಷ್ಟು ಆಳವಿದೆ ಎಂಬುದನ್ನು ಅಂದಾಜಿಸಿದವು. ತದನಂತರ ಗುಂಡಿಯೊಳಕ್ಕೆ ಬಿದ್ದ ದುರದೃಷ್ಟವಂತ ಕಪ್ಪೆಗಳಿಗೆ ಅವು ಎಂದೆಂದಿಗೂ ಹೊರಬರಲು ಸಾಧ್ಯವಾಗುವುದಿಲ್ಲ ಎಂಬುದಾಗಿ ಹೇಳಿದವು. ಆ ಎರಡು ಕಪ್ಪೆಗಳು ಈ ಹೇಳಿಕೆಯನ್ನು ನಿರ್ಲಕ್ಷಿಸಿ ಗುಂಡಿಯಿಂದ ಹೊರಕ್ಕೆ ಹಾರಲು ಪ್ರಯತ್ನಿಸತೊಡಗಿದವು.   ಆ ಗುಂಡಿಯೊಳಗೇ ಸಾಯುವುದು ಖಚಿತವಾದ್ದರಿಂದ ವೃಥಾ ಶ್ರಮ […]

ಹೆಸರಿಲ್ಲ: ಸಖ್ಯಮೇಧ (ವಿಶ್ವನಾಥ ಗಾಂವ್ಕರ್)

ಸಾಲು ಅಡಿಕೆ ಮರಗಳು ಮುರಿದು ಬೀಳುತ್ತವೇನೋ ಎಂಬಂತೆ ತೂಗುತ್ತಿದ್ದವು  ಬೀಸುಗಾಳಿಗೆ… ಹುಚ್ಚುಗಾಳಿಯು ತರಗೆಲೆಗಳನ್ನು ಧೂಳನ್ನು ಹೊತ್ತು ತರುತ್ತಿತ್ತು… ತೋಟದಾಚೆ ಬಹುದೂರ ಕಾಣುವ ಬೆಟ್ಟದಲ್ಲಿ ಮಳೆ ಸುರಿಯುವುದು ಅಸ್ಪಷ್ಟವಾಗಿ ಕಾಣುತ್ತಿತ್ತು… ಇನ್ನೇನು ಇಲ್ಲೂ ಮಳೆಯಾಗುತ್ತದೆ.. ತಂಪು ಗಾಳಿ ಬೀಸತೊಡಗಿದೆ.. ಮೋಡ ಕವಿದ ಮಲೆನಾಡ ಕತ್ತಲು… ಅವಳೂ ಮಳೆಗಾಗಿಯೇ ಕಾದಿದ್ದಾಳೆ… ಮಳೆಗಾಗಿ ಎನ್ನುವುದಕ್ಕಿಂತ ಮಳೆಯೊಡನೇ ಒತ್ತಿ ಬರುವ ಅವನ ನೆನಪುಗಳಿಗಾಗಿ…ಕಳೆದ ಮಳೆಗಾಲದಲ್ಲಿ ಅವನ ಜೊತೆಯಾಗಿ ಸವಿದ ಮಲೆನಾಡ ಮಳೆಯ ಸವಿನೆನಪು ಮಾತ್ರ ಅವಳ ಪಾಲಿಗೆ ಉಳಿದಿರುವುದು.. ಅವಳ ಹಾಗೂ ಅವನ ಅಭಿರುಚಿಗಳಲ್ಲಿ […]