Facebook

Archive for 2014

ಗೊಂಜಾಳ ಮಾರೊ ಹುಡುಗ: ಸುಮನ್ ದೇಸಾಯಿ ಅಂಕಣ

ಎಷ್ಟೊ ವರ್ಷಗಳ ಮ್ಯಾಲೆ ಅಜ್ಜಿ ಊರಿಗೆ ಬಂದಿದ್ದೆ. ಖುಷಿ ಆಗಿತ್ತ ಆಕಿಗೆ ನನ್ನಕಿಂತಾ, ಮರಿಮೊಮ್ಮಕ್ಕಳನ್ನ ನೋಡಿ. ನನ್ನ ಮದವಿ ಆದಮ್ಯಾಲೆ ಬಂದಿದ್ದೇನ ಇಲ್ಲಾ ನಾನು. ಆಡಿಬೆಳೆದ ಊರಿನ ಮಣ್ಣಿನ ವಾಸನಿಗೆ ಮನಸು ಅರಳಿತ್ತು. ನನಗ ಅಜ್ಜಿ ಊರಾಗ ಭಾಳ ಮಂದಿ ಗೇಳತ್ಯಾರ ಇದ್ರು. ಎಷ್ಟು ನಕ್ಕು ನಲಿತಿದ್ವಿ ದಿನಾಪೂರ್ತಿ. ವಾಪಸ್ ಊರಿಗೆ ಹೋಗಬೇಕಾದ್ರ ಮುಂದಿನ ಸರತೆ ಬರೊತನಕಾ ಆಗೊವಷ್ಟು ಖುಷಿಯ ಕ್ಷಣಗಳ ನೆನಪಿನ ದೊಡ್ಡ ಗಂಟನ್ನ ಮನಸಿನ್ಯಾಗ ಹೊತಗೊಂಡ ಹೋಗ್ತಿದ್ದೆ. ಅದನ್ನೆಲ್ಲಾ ಈಗ ನೆನಪ ಮಾಡಕೊಂಡ್ರ ಎಷ್ಟ […]

ಬೇಸರಗಳೇಕೆ ಹೀಗೆ ?: ಪದ್ಮಾ ಭಟ್

                       ಬೆಳಗಾಗಿ ಏಳುವುದರೊಳಗೆ, ಹೆಸರೇ ಇಲ್ಲದ ಬೇಸರಗಳು..ಇಷ್ಟದ ಗೆಳತಿಯೇ ಫೋನ್ ಮಾಡಲಿ, ಹತ್ತಿರದವರೇ ವಿಶ್ ಮಾಡಲಿ ಪ್ರತಿಕ್ರಿಯೆ ಸರಿಯಾಗಿ ಕೊಡಲು ಮನಸ್ಸಿಲ್ಲದ ಮನಸು.. ದಿನವೇ ಬೇಸರವಾ? ಅಥವಾ ನಾನೇ ನನಗೆ ಬೇಸರವಾಗಿಬಿಟ್ಟಿದ್ದೇನಾ? ಎಂಬ ಪ್ರಶ್ನೆಗೆ ಉತ್ತರ ಹುಡುಕುವುದು ಎಲ್ಲಿ ಎಂದು ಯೋಚಿಸಬೇಕಷ್ಟೆ..ಯಾವುದೋ ಖುಷಿಯ ವಿಷಯಕ್ಕೂ ಮನಸ್ಸು ಹಗುರವಾಗದ ಸ್ಥಿತಿಯೋ, ಇಷ್ಟದ ಹಾಡಿಗೆ ಮನಸೋಲದೇ ಇರುವ ಬೇಸರವೋ ಅರಿಯದ ಸ್ಥಿತಿಗೆ ಒಂದಷ್ಟು ಬೇಡದೇ ಇರುವ […]

ಬೆಳಗಿನ ಜಾವದ ಪ್ರಾಶಸ್ತ್ಯ ಓದು, ಸಕ್ಕರೆ ನಿದ್ದೆಯ ಸೋಗಲಾಡಿತನ: ಅಮರ್ ದೀಪ್ ಪಿ. ಎಸ್.

"ಬೇಗ ಮಲಗು ಬೇಗ ಏಳು"… ನಾಳೆ ಮಾಡುವುದನ್ನು ಇಂದೇ ಮಾಡು ಇಂದು ಮಾಡುವುದನ್ನು ಈಗಲೇ ಮಾಡು" ವಿದ್ಯೆಗೆ ವಿನಯವೇ ಭೂಷಣ" "ಕೈ ಮುಗಿದು ಒಳಗೆ ಬಾ" ಈ ಎಲ್ಲಾ ಮಾತು ಗಳನ್ನು ನಮ್ಮ ಶಾಲಾ ದಿನಗಳಲ್ಲಿ ದಿನಂಪ್ರತಿ ನಾವು ಬರೆಯುತ್ತಿದ್ದ ಕಾಪಿ ರೈಟಿಂಗ್ ಗಳು, ಮತ್ತು ಎಲ್ಲ ವನ್ನೂ ಹೇಳಿದಂತೆ ಬರೆಯಲು, ಬರೆದಂತೆ ರೂಢಿಸಿಕೊಳ್ಳಲು,  ಜೀವನದಲ್ಲಿ ಅಳವಡಿಸಿಕೊಳ್ಳಲು ಮಾಸ್ತರರು ಬೋಧಿಸುತ್ತಿದ್ದ ಬಗೆ.  ಚಿಕ್ಕಂದಿನಿಂದಲೇ ಕೆಲ ತಂದೆತಾಯಿ ಶಿಸ್ತು ಬದ್ಧವಾಗಿ ಬೆಳೆಸಿ ಮಕ್ಕಳನ್ನು ಅಣಿಗೊಳಿಸಿರುತ್ತಾರೆ. ಅದೇ ರೂಢಿ ಅವರನ್ನು […]

ಸವಾಲುಗಳಿವೆ – ಪರಿಹಾರವೂ ಇದೆ: ಅಖಿಲೇಶ್ ಚಿಪ್ಪಳಿ ಅಂಕಣ

ಬೇಸಿಗೆ ಶುರುವಾಗುತ್ತಿದೆ. ಸೆಕೆ, ಬಾಯಾರಿಕೆ ಹೆಚ್ಚಾಗುತ್ತದೆ. ಸೆಕೆ ತಡೆಯಲು ಫ್ಯಾನ್ ಮತ್ತು ಏರ್‌ಕಂಡೀಷನ್‌ಗಳು ಬೇಕು. ಬಾಯಾರಿಕೆ ತಣಿಸಲು ತಂಪು ಪಾನೀಯಗಳ ಹಿಂಡು-ಹಿಂಡು ಅಂತಾರಾಷ್ಟ್ರೀಯ ಕಂಪನಿಗಳು ನಿಂತಿವೆ. ಟಿ.ವಿ.ಗಳಲ್ಲಿ ತುಂಡುಡುಗೆಯ ತರುಣಿಯರು ಮಾದಕವಾಗಿ ಓಲಾಡುತ್ತಾ ನೀವು ನಮ್ಮ ಕಂಪನಿಯ ಪಾನೀಯವನ್ನೇ ಸೇವಿಸಿ ಎಂದು ಜಬರ್‌ದಸ್ತು ಮಾಡುತ್ತಾರೆ. ಮನುಷ್ಯನ ಶಕ್ತಿಯ ಹಸಿವಿಗೆ ಇಡೀ ಭೂಮಂಡಲ ತಲ್ಲಣಿಸುತ್ತಿದೆ. ಪ್ರತ್ಯಕ್ಷವಾಗಿ-ಪರೋಕ್ಷವಾಗಿ ನೂರಾರು ಪ್ರಬೇಧಗಳು ಅಳಿವಿನಂಚಿಗೆ ಬಂದು ನಿಂತಿವೆ. ಅಮೇರಿಕಾದಲ್ಲಿ ಚಳಿಯಿಂದ ಜನ ಅತೀವ ತೊಂದರೆಗೊಳಗಾದರೆ, ಪ್ರಾಣಿ-ಪಕ್ಷಿಗಳು ಪುತು-ಪುತುನೆ ಉದುರಿ ಸಾಯುತ್ತಿವೆ. ಹವಾಮಾನ ವೈಪರೀತ್ಯವೇ […]

ಗಣತಂತ್ರ ದಿನ: ಪ್ರಶಸ್ತಿ ಪಿ.ಸಾಗರ

ಗಣತಂತ್ರ ದಿನದ ಶುಭಾಶಯಗಳು !.  ಓ. ಧನ್ಯವಾದಗಳು. ಅಂದಂಗೆ ನಂಗೆ ಗಿಫ್ಟೆಲ್ಲಿ ?  ಗಿಫ್ಟಾ? ನಿಂಗಾ? ಯಾಕೆ ? !!! ಇದೊಳ್ಳೆ ಕತೆ ಆಯ್ತು. ಹುಟ್ಟಿದಬ್ಬಕ್ಕೆ, ಮದುವೆ ವಾರ್ಷಿಕೋತ್ಸವಕ್ಕೆ, ಸ್ನೇಹಿತರ ದಿನಕ್ಕೆ, ಅಪ್ಪಂದಿರ ದಿನಕ್ಕೆ, ಮಕ್ಕಳ ದಿನಕ್ಕೆ, ಪ್ರೇಮಿಗಳ ದಿನಕ್ಕೆ ಅಂತ ವರ್ಷವೆಲ್ಲಾ ಗಿಫ್ಟ್ ಗಿಫ್ಟಂರ್ತೀಯ. ನನ್ನ ದಿನಕ್ಕೊಂದು ಗಿಫ್ಟ್ ಕೊಡಕ್ಕಾಗಲ್ವಾ ?  ಓ,ಹೌದಲ್ವಾ ? ಇಷ್ಟು ವರ್ಷ ಈ ತರ ಯೋಚ್ನೇನೆ ಮಾಡಿರ್ಲಿಲ್ಲ. ಏನು ಬೇಕು ಗಿಫ್ಟು ನಿಂಗೆ ?  ಯಾವತ್ತೂ ಅದು ಸಿಕ್ಕಿಲ್ಲ, ಇದು […]

ಹೋರಿ ತಂದ ಕಥೆ: ಅಶೋಕ್ ಕುಮಾರ್ ವಳದೂರ್ (ಅಕುವ)

  "ಸುಧೀರಣ್ಣ ತೀರಿ ಕೊಂಡ" ಅಮ್ಮನ ಫೋನ್ ಬಂದಾಗ ತುಂಬಾ ಸಂಕಟ ಪಟ್ಟಿದ್ದೆ. ಬೇಸಾಯವನ್ನು ಪ್ರೀತಿಸಿದ ವ್ಯಕ್ತಿತ್ವ ಅದು.ಬಿಸಿಲು ಮಳೆಗಳು ಎಂದೂ ಆತನನ್ನು ಮುಟ್ಟಿದ್ದಿಲ್ಲ. ಚಳಿ ತಟ್ಟಿದ್ದಿಲ್ಲ. ಅದು ಮನೆಯ ಬೇಸಾಯದ ಕೋಣಗಳೇ ಆಗಲೀ ಕಂಬಳದ ಕೋಣಗಳೇ ಆಗಲಿ ಈತನಿಗೆ ಬಗ್ಗದೆ ಇರಲಿಲ್ಲ. ಕಂಬಳದ ಕೋಣನ ಕೊಂಬು ತಲೆಯ ನೆತ್ತಿಗೆ ಇರಿದಾಗ ರಕ್ತ ಹೋದದ್ದು ತಿಳಿಯಲಿಲ್ಲ. ಲೇಪದಲ್ಲೇ ಗುಣವಾದ ಗಾಯ ಮತ್ತೆ ಒಳಗೊಳಗೆ ಇಳಿದದ್ದು ಗೊತ್ತಾಗಲಿಲ್ಲ. ಮೊದ ಮೊದಲು ತಲೆನೋವಿದ್ದ ಅವರು ಮಣಿಪಾಲ ಆಸ್ಪತ್ರೆ ಸೇರಿದಾಗ ಪರಿಸ್ಥಿತಿ […]

ಮೂವರ ಕವಿತೆಗಳು: ಪ್ರಶಾಂತ್ ಭಟ್, ಶ್ರೀಧರ ನಾಯಕ, ಅನಂತ್ ಕಳಸಾಪುರ

          ಫ಼ೇಸ್ಬುಕ್ ಕತೆಗಳಾಗಬಹುದಾದ ಸಾಲುಗಳೂ ಚುಟುಕಗಳಾಗಿ, ಎರಡು ಕಮೆಂಟು ಮೂರು ಲೈಕಿಗೆ ಕಾತರಿಸಿ, ಒಳಗೊಳಗೇ ಒರತೆ ಚಿಮ್ಮುವ ಮೊದಲೇ, ಕಾರುವ ಆತುರ; ಅಗೋ ಬಂತಲ್ಲ ನಮ್ಮನ್ನೂ ಯಾರೋ ನೋಡುವವರಿದ್ದಾರೆ, ನಮ್ಮ ಕನ್ನಡಿಯಲ್ಲಿ ಯಾರನ್ನೂ ಕಾಣದು; ವಿವಿಧ ವೇಷಗಳು, ಅವತಾರಗಳು, ಪರದೂಷಣೆಗಳು, ಬರಿದೇ ಒತ್ತುವ ಕುಟ್ಟುವ ನಕಲಿ ಕಾಳಜಿಗಳು; ಕೊನೆಗೆ ಉಳಿಯುವ ಖಾಲಿತನಕ್ಕೂ ಪೊಳ್ಳು ಸಮಾಧಾನಗಳು; ಆವಿಯಾಗಿ ಮೋಡವಾಗಿ ಘನೀರ್ಭವಿಸಿ, ಮಳೆಯಾಗಿ ಹೊಯ್ದರೇ ಓಮ್ ಶಾಂತಿಃ ಶಾಂತಿಃ ಶಾಂತಿಃ ಯಾಕೆ ಸುಮ್ಮನೇ ಸ್ಖಲನದ […]

ಗಂಡಾ ..ಅಲ್ಲಲ್ಲಾ…ಗುಂಡ-ಗುಂಡಿ: ಡಾ. ಆಜಾದ್ ಐ.ಎಸ್.

  ಗುಂಡ ಗರಂ….. “ಯಾಕೋ?!!”  ಅಂತ ಕೇಳಿದ್ದಕ್ಕೆ ಏನ್ ಹೇಳ್ದ ಗೊತ್ತಾ..?? “ಅಲ್ಲಾ ಸಾ… ಯಾವೋನು ಕಳ್ ನನ್ ಮಗ – ಎಂಡ, ಸಾರಾಯಿ ಬ್ರಾಂದಿ, ಬೀರು, ರಮ್ಮು, ಜಿನ್ನು, ಫೆನ್ನಿ, ಓಡ್ಕಾ ಎಲ್ಲಾದ್ಕೂ ಒಂದೇ ಕಲೆಕ್ಟಿವ್ ನೌನ್ “ಗುಂಡು” ಅಂತ ನಾಮಕರಣ ಮಾಡಿದ್ದು…??” ಅಬ್ಬಬಬಾ… ವ್ಯಾಕರಣದಲ್ಲಿ ತನಗೆ ಗೊತ್ತಿರೋ ಒಂದೇ ಒಂದು ಪಾರ್ಟ್ಸ್ ಅಫ್ ಸ್ಪೀಚ್ ನ ಎಷ್ಟು ಚನ್ನಾಗಿ ಉಪಯೋಗಿಸ್ದ..ಗುಂಡ…ವಾ.. ಎಂದುಕೊಂಡು… “ಅದ್ಸರಿ ..ಅದಕ್ಕೂ ನೀನು ಗರಂ ಆಗೋಕೂ ಏನಪ್ಪಾ ಸಂಬಂಧ?” ಅಂದೆ “ನಾಳೆ […]

ರೈಲಲ್ಲಿ ಕಂಡ ದೃಶ್ಯಗಳು: ಶರತ್ ಹೆಚ್.ಕೆ.

೧ ಅದು ಜನರಲ್ ಬೋಗಿ. ಭರ್ತಿಯಾಗಿದೆ. ಕುಂತವರು ಕುಂತೇ ಇದ್ದಾರೆ. ನಿಂತವರು ನಿಲ್ಲಲಾಗದೇ ಅತ್ತಿಂದಿತ್ತ ಇತ್ತಿಂದತ್ತ ತಿರುಗುತ್ತಿದ್ದಾರೆ. ಕೆಲ ಸೀಟುಗಳು ಖಾಲಿ ಇವೆ. ಆದರೆ ಯಾರೋ ಬರುವರೆಂಬ ನೆಪ ನಿಂತವರ ಸಹನೆಯ ಮಿತಿ ಪರೀಕ್ಷಿಸುತ್ತಿದೆ. ೨ ಬೋಗಿಯೊಳಗೆ ಹೈಟೆಕ್ ಯುವಕನ ಆಗಮನವಾಗಿದೆ. ರೈಲಿನೊಳಗೂ ಕೂಲಿಂಗ್ ಗ್ಲಾಸು ಹಾಕಿಕೊಂಡು ಹವಾ ಸೃಷ್ಟಿಸುವ ಮಟ್ಟಿಗೆ ಅವನು ಆಧುನಿಕ ತಿರುಕ. ಅವನ ಕೈಯಲ್ಲಿ ತಳ್ಳಿಕೊಂಡು ಹೋಗಬಹುದಾದ ಹೆಣ ಭಾರದ ಲಗೇಜ್ ಬ್ಯಾಗು. ಅಲ್ಲೊಂದು ಸೀಟು ಖಾಲಿ ಇರುವುದು ಅವನ ಕಣ್ಣಿಗೆ ಬಿದ್ದಿದೆ. […]

ಸಾಮಾನ್ಯ ಜ್ಞಾನ (ವಾರ 12): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು: ೧.    ರಾಷ್ಟ್ರೀಯ ಸ್ವಯಂಸೇವಕದಳವನ್ನು ಸ್ಥಾಪಿಸಿದವರು ಯಾರು? ೨.    ಸುಭಾಶ್ ಚಂದ್ರ ಬೋಸ್ ಆಜಾದ್ ಹಿಂದ್ ಫೌಜ್ ಸ್ಥಾಪಿಸಿದ ಸ್ಥಳ ಯಾವುದು? ೩.    ಭಾರತಕ್ಕೆ ಹೆಚ್ಚು ಮಳೆ ತರುವ ಮಾರುತ ಯಾವುದು? ೪.    ಮಿಥಿಲಾ ನಗರ ಯಾವ ರಾಜ್ಯದಲ್ಲಿದೆ? ೫.    ಕರ್ನಾಟಕದಲ್ಲಿ ಬೆಳೆಯುವ ರಾಗಿಯನ್ನು ಬೆಳೆಯುವ ಇನ್ನೊಂದು ಪ್ರಮುಖ ದೇಶ ಯಾವುದು? ೬.    ಗಡಿಯಾರದಲ್ಲಿ ಗಂಟೆ ನಿಮಿಷ, ಸೆಕೆಂಡ್ ವ್ಯವಸ್ಥೆಯನ್ನು ಜಾರಿಗೆ ತಂದವರು ಯಾರು? ೭.    ಮೌಂಟ್ ಅಬು ಗಿರಿಧಾಮ ಯಾವ ರಾಜ್ಯದಲ್ಲಿದೆ? ೮.    ಭಾರತದಲ್ಲಿ ಇಂಗ್ಲೀಷ್ […]