Facebook

Archive for 2014

ಅಪರಿಚಿತರು ಪರಿಚಿತರಾದಾಗ: ನಟರಾಜು ಎಸ್.ಎಂ.

ಜಲ್ಪಾಯ್ಗುರಿಯಲ್ಲಿ ರಾಜ್ ಗಂಜ್ ಎಂಬ ಬ್ಲಾಕ್ ಇದೆ. ಬ್ಲಾಕ್ ಎಂದರೆ ನಮ್ಮ ಕಡೆಯ ತಾಲ್ಲೂಕು. ಆ ಬ್ಲಾಕು ಒಂದು ಕಡೆ ಬಾಂಗ್ಲಾ ದೇಶಕ್ಕೆ ಅಂಟಿಕೊಂಡಿದೆ. ಅಂದರೆ ಬಾಂಗ್ಲಾ ದೇಶದ ಬಾರ್ಡರ್ ಈ ಬ್ಲಾಕ್ ನಲ್ಲಿದೆ. ಆ ಬ್ಲಾಕಿನ ಬಾರ್ಡರ್ ನಲ್ಲಿರುವ ಒಂದು ಊರಿನಲ್ಲಿ ಒಮ್ಮೆ ಜಾಂಡೀಸ್ ಕೇಸ್ ಗಳು ಪತ್ತೆಯಾಗಿದ್ದವು. ಅದರ ಇನ್ ವೆಸ್ಟಿಗೇಷನ್ ಗೆ ಅಂತ ಹೋಗಿದ್ದೆ. ನನ್ನ ಜೊತೆ ನಮ್ಮ ಸರ್, ಒಂದಿಬ್ಬರು ಆಫೀಸ್ ಸ್ಟಾಫ್, ವಾಟರ್ ಟೆಸ್ಟಿಂಗ್ ಲ್ಯಾಬೋರೇಟರಿಯಿಂದ ಬಂದಿದ್ದ ಟೆಕ್ನಿಷಿಯನ್ ಮತ್ತು […]

“ಚೇತನ” ಎಂದಾದರೂ “ವಿಕಲ”ವಾಗಲು ಸಾಧ್ಯವೇ?: ಅಮರ್ ದೀಪ್ ಪಿ.ಎಸ್.

ದೇಹದಲ್ಲಿ ಮನುಷ್ಯನಿಗೆ ಯಾವುದಾದ್ರೂ  ಅಂಗ ಊನತೆ ಇದ್ರೆ ಅದಕ್ಕೆ ಅಂಗವೈಕಲ್ಯ ಅಂತ ಲೋಕ ರೂಢಿಯಾಗಿ ಕರೆದು ಬಿಟ್ಟರು.  ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ನಮ್ಮ ಬರಹಗಾರರು ಅಂಗವೈಕಲ್ಯ ಪದವನ್ನು ಬದಲಾಯಿಸಿ "ವಿಕಲಚೇತನ"ಎಂದು ಕರೆದರು.  ಆಂಗ್ಲದಲ್ಲಿ "physically handicapped" ಅನ್ನುವ ಪದವನ್ನು ಯಥಾವತ್ತಾಗಿ  ಕನ್ನಡೀಕರಿಸಿರಬಹುದು.  ಅದನ್ನೇ ಅಂಥಹವರನ್ನು ನಿಂದಿಸದ ರೀತಿ ಯಲ್ಲಾಗಲಿ ಪ್ರೋತ್ಸಾಹಿಸುವ ರೀತಿಯಲ್ಲಾಗಲಿ  "physically challenged" ಅಂತ ಕರೀಬೇಕು ಅಂತೇನೋ ಆಯಿತು. ಇರಲಿ  ನನ್ನ ಪ್ರಶ್ನೆ ಇರುವುದು  ಈಗ ಈ ಅಂಗ ಊನತೆ ಇರುವ ಜನರನ್ನು […]

ಹ್ಹೋ.. ಏನು ..?: ಅನಿತಾ ನರೇಶ್ ಮಂಚಿ

ನಾಯಿ ಬೊಗಳುವ ಸದ್ದಿಗೆ ಒಬ್ಬೊಬ್ಬರಾಗಿ ಹೊರ ನಡೆದ ನಮ್ಮ ಮನೆಯ ಸದಸ್ಯರು ಯಾರೊಂದಿಗೋ ಏನು ? ಏನು? ಎಂದು ವಿಚಾರಿಸುತ್ತಿರುವುದು ಕೇಳಿಸಿತು. ಮಧ್ಯಾಹ್ನದ ಊಟದ ಸಿದ್ದತೆಯಲ್ಲಿದ್ದ ನಾನು ಯಾರಿರಬಹುದು ಎಂಬ ಕುತೂಹಲದಲ್ಲಿ ಹೊರಗೆ ದೃಷ್ಟಿ ಹಾಯಿಸಿದೆ. ಅರ್ರೇ .. ನಮ್ಮ ಪ್ರೀತಿಯ ಗೌರತ್ತೆ.. ಅದೂ ಕೊಡಗಿನ  ಕಾವೇರಿಯ ಉಗಮಸ್ಥಾನದಿಂದ  ಮೊದಲ ಬಾರಿಗೆ ನಮ್ಮನೆಗೆ ಬರುತ್ತಾ ಇರುವುದು. ನಾವೆಲ್ಲಾ ಅವರ ಮನೆಗೆ ಹೋಗಿ ದಿನಗಟ್ಟಲೆ ಟೆಂಟ್ ಊರುತ್ತಿದ್ದೆವು. ಸ್ವಲ್ಪವೂ ಬೇಸರಿಸಿಕೊಳ್ಳದೇ ಉಪಚಾರ ಮಾಡಿ ಅಕ್ಕರೆಯಿಂದ ನೋಡಿಕೊಳ್ಳುತ್ತಿದ್ದರು.  ಅಲ್ಲಿಂದ ಮರಳುವಾಗ […]

ಪಕ್ಷಿ ವೀಕ್ಷಣೆಗೊಂದು ದಿನ: ಡಾ. ಅಶೋಕ್ ಕೆ. ಆರ್.

ಇತ್ತೀಚಿನ ದಿನಗಳಲ್ಲಿ ವಾರಾಂತ್ಯದ ಪ್ರವಾಸವೆಂದರೆ ದೂರವೂ ಅಲ್ಲದ ತುಂಬಾ ಹತ್ತಿರವೂ ಅಲ್ಲದ ಉತ್ತಮ ಹೋಟೆಲ್ಲಿಗೋ, ಸಕಲ ಐಷಾರಾಮಿ ಸೌಲಭ್ಯಗಳಿರುವ ರೆಸಾರ್ಟಿಗೋ ಹೋಗಿ ವಾರಪೂರ್ತಿ ಮನೆ ಆಫೀಸಿನಲ್ಲಿ ಮಾಡಿದ್ದನ್ನು ವಾರಾಂತ್ಯದಲ್ಲಿ ಹೊಸ ಜಾಗದಲ್ಲಿ ಮಾಡುವುದಷ್ಟೇ ಆಗಿಹೋಗಿದೆ. ಪ್ರಕೃತಿ ಸೌಂದರ್ಯ ಸವಿಯಲು ಹೋಗುವವರ ಸಂಖೈಯೂ ಹೆಚ್ಚುತ್ತಿದೆಯಾದರೂ ಬಹಳಷ್ಟು ಮಂದಿ ನಿರ್ಮಲ ಸ್ಥಳಗಳನ್ನು ಮಲಿನಗೊಳಿಸಿ ಹಿಂದಿರುಗುತ್ತಾರೆ. ಇಂತಹವರ ಕಾರಣದಿಂದಾಗಿ ಹೆಚ್ಚು ಪ್ರಸಿದ್ಧವಲ್ಲದ ತಾಣಗಳ ಕುರಿತು ಮಾಹಿತಿ ಒದಗಿಸುವುದಕ್ಕೆ ಕೊಂಚ ಹಿಂಜರಿಕೆ ಇರುವುದು ಸುಳ್ಳಲ್ಲ. ಪಕ್ಷಿ ವೀಕ್ಷಕರಿಗೆ, ಛಾಯಾಗೃಹಕರಿಗೆ ಕೊಕ್ಕರೆ ಬೆಳ್ಳೂರು ಚಿರಪರಿಚಿತ. […]

ಮೇ ೨೨ ಹಾಗೂ ಜೂನ್ ೫ ರ ನಡುವೆ: ಅಖಿಲೇಶ್ ಚಿಪ್ಪಳಿ

ಮೇ ೨೨ ಜೀವಿ ವೈವಿಧ್ಯ ದಿನ. ಮೇ ತಿಂಗಳು ಕಳೆದ ನಂತರ ಜೂನ್ ಮೊದಲ ವಾರದಲ್ಲೇ ಅಂದರೆ ಜೂನ್ ೫ ರಂದು ವಿಶ್ವ ಪರಿಸರ ದಿನಾಚರಣೆ. ಈ ಪರಿಸರದಲ್ಲಿ ಎನೆಲ್ಲಾ ವೈವಿಧ್ಯಗಳಿವೆ ಎಂಬುದನ್ನು ಸಂಪೂರ್ಣವಾಗಿ ಅರಿಯಲು ಇನ್ನೂ ಸಾಧ್ಯವಾಗಿಲ್ಲ. ಪ್ರತಿವರ್ಷ ಹೊಸ ಸಸ್ಯವೈವಿಧ್ಯ ಹಾಗೂ ಜೀವಿಗಳು ಪತ್ತೆಯಾಗುತ್ತಿರುತ್ತವೆ. ನಿಸರ್ಗ ಅದ್ಯಾವುದೋ ಲೆಕ್ಕಾಚಾರ ಹಾಕಿಯೇ ಜೀವಿಗಳನ್ನು ಸೃಷ್ಟಿ ಮಾಡುತ್ತಿರುತ್ತದೆ. ನಮ್ಮ ಗ್ರಹಿಕೆ ಬರುವ ಮೊದಲೇ ಹಲವು ಜೀವಿಗಳು ನಾಮಾವಶೇಷವಾಗುತ್ತವೆ. ಪ್ರಕೃತಿಯ ಅಗಾಧ ಅಚ್ಚರಿಗಳ ಎದುರು ನಾವು ಹುಲುಮಾವನರಷ್ಟೆ ಸೈ. […]

ಮೈ ಕ್ರೇಝಿ ಲೈಫ್ ಸ್ಟಿಲ್ ಗೋಸ್ ಆನ್..!!: ಸಚಿನ್ ಎಂ. ಆರ್.

ಫ್ಲಾಶ್ ಬ್ಯಾಕ್ ೧ (ಬ್ಲಾಕ್ ಅಂಡ್ ವೈಟ್ ಶೇಡ್):  ಅದು ೨೦೦೫ರ ಇಸವಿ. ಗುಳಿ ಬಿದ್ದ ಕಣ್ಣುಗಳ ಸಾಧಾರಣ ಎತ್ತರದ ತೆಳ್ಳನೆಯ ಬಿಳಿ ಹುಡುಗ ಶಾಲಾ ಗೇಟಿಂದ ಹೊರಬಿದ್ದ. ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶದ ಚೀಟಿ ಕೈಲಿತ್ತು. ೮೪% ಮಾರ್ಕ್‌ಸ್ ಬಂದಿತ್ತು. ಒಂದು ಪರ್ಸಂಟ್ ಇಂದ ಡಿಸ್ಟಿಂಕ್ಷನ್ ಮಿಸ್ಸು. ಛೇ.. ಹಳಹಳಿಸಿದ ಆತ..!  ಕಾಲೇಜು ಮೆಟ್ಟಿಲು ಹತ್ತುವ ಹೊತ್ತು. ಅಪ್ಪ ಕೇಳಿದ್ರು ನಿನ್ನ ಮುಂದಿನ ಗುರಿ ಏನೊ? ಅವನುತ್ತರ ಗೊತ್ತಿಲ್ಲಪ್ಪ..,  ಆದ್ರೆ ನಾನು ಸೈಕಿಯಾಟಿಸ್ಟ್ ಆಗ್ತೀನಿ, ಎಲ್ರ ಬುಲ್ಡೆ […]

ಕಥಾಕಾಲ: ಪ್ರಶಸ್ತಿ ಪಿ.

ಎಲೆಕ್ಷನ್ನಾದ ಮೇಲೆ ಆಗೊಮ್ಮೆ ಈಗೊಮ್ಮೆಯಾದರೂ ಬರುತ್ತಿದ್ದ ಮಳೆಯ ಸುಳಿವೂ ಇಲ್ಲದೇ ಅದೆಷ್ಟೋ ದಿನಗಳಾಗಿ , ತನ್ನನ್ನು ತಾನೇ ಸುಟ್ಟುಕೊಳ್ಳುವಂತಿದ್ದ ಬಿರುಬೇಸಿಗೆ. ಈ ಸುಡುಬೇಸಿಗೆಯಲ್ಲಿ ಕೂತ ಕುರ್ಚಿಯೂ ಕೊಂಚ ಹೊತ್ತಲ್ಲೇ ಕೆಂಡದಂತೆನಿಸಿದರೆ ಆಶ್ಚರ್ಯರ್ಯವೇನಿಲ್ಲ. ಸ್ವಂತಕ್ಕೇ ಸಮಯವಿಲ್ಲದೀ ಸಮಯದಲ್ಲೊಬ್ಬರ ಹುಡುಕಾಟ ನಡೆದಿದೆ. ಅವ್ರೇ ಕತೆಗಾರ ಕಟ್ಟಪ್ಪ. ಈ ಕಟ್ಟಪ್ಪರಿಗೆ ಕತೆ ಬರೆಯೋದು ಅಂದ್ರೆ ಅದೊಂದು ತಪಸ್ಸು. ಯಾರೋ ಕೇಳಿದ್ರು ಅಂತ, ಏನೋ ನೋಡಿದ್ರು ಅಂತ ತಕ್ಷಣಕ್ಕೆಲ್ಲಾ ಏನೇನೋ ಎಳೆಹೊಡೆದು ಅದು ಕತೆಯಾಗೋದಲ್ಲ.ಈ ತತ್ ಕ್ಷಣದ ಕತೆ ಮತ್ತು ಮೂಡಿದ್ದಾಗ, ಬಿಡುವಿದ್ದಾಗೆಲ್ಲಾ ಒಂದೊಂದು […]

ನಾನು ಏಕೆ, ಏಕೆ ಹೀಗೆ…?!!!: ಭರತೇಶ ಅಲಸಂಡೆಮಜಲು

                      ಮಾನವ ಜಗದ ಒಂದು ಹಗಳಿರುಳ ಜೀವನದಲ್ಲಿ ಅನೇಕ ಅನುಭವಗಳನ್ನು ಪಡೆಯುತ್ತಾನೆ. ಕೆಲವು ಒಳ್ಳೆಯ ಅನುಭವಗಳಾದರೆ, ಕೆಲವು ಕೆಟ್ಟ ಅನುಭವಗಳು. ಹಲವು ಸಲ ಅನುಮಾನ, ಅವಮಾನಗಳೇ ಅನುಭವವಾಗಿ ರೂಪಾಂತರವಾಗುತ್ತದೆ. ಕತ್ತಲ ಜೀವದ ಹೃದಯ ಕವಾಟಕ್ಕೆ ಇವುಗಳೇ ದಾರಿದೀಪವಾಗುತ್ತದೆ. ಜಗದಲ್ಲಿ ಉಚಿತವಾಗಿ ದೊರೆಯುವುದೆಂದರೆ ಅದು ಉಚಿತ ಸಲಹೆಗಳು, ಪರಪದೇಶಗಳು, ಹಿತೋಪದೇಶಗಳು ಎಲ್ಲರ ಮನದಲ್ಲೂ ಮನೆಯಲ್ಲೂ ಹರಿದಾಡುತ್ತವೆ, ಕೆಲವು ಮತ್ತೆ ಮತ್ತೆ ಪೀಡಿಸುತ್ತವೆ, ಮಾನಸವನ್ನು ಕಾಡುತ್ತವೆ, […]

ಆಡಿಯೋ ಸಹಿತ ಪಂಜು ಕಾವ್ಯಧಾರೆ

ಅಮ್ಮ ನಾನು ಕೈಚಾಚಿ ಹನಿಗಳ  ಸ್ಪರ್ಶಿಸಲು  ಇಬ್ಬನಿಯ ಹೊತ್ತ ಚಳಿಗಾಳಿ ಮೈಯ ಅಪ್ಪಲು ನೆಲ ತುಂಬಿ ನಿಂತ ನೀರು ಪಾದಗಳ ಮುತ್ತಿಡಲು ನೀನು ನೆನಪಾಗುತ್ತೀಯ ಅಮ್ಮ ಒದ್ದೆಯಾದ ಮೈ ಒರೆಸಿದಂತೆ ಕೆಸರಾದ ಕಾಲ ನೇವರಿಸಿ  ತೊಳೆದಂತೆ ಅನ್ನಿಸಿಬಿಡುವುದು  ಪ್ರತೀಬಾರಿ ಮಳೆಬರಲು -ಅಕ್ಷಯ ಕಾಂತಬೈಲು                     ನಾ ನಿನ್ನ ಮರೆತು, ತೊರೆಯ ಹೊರಟರೆ ತಾಯಿ  ತನ್ನ ಮಗುವನ್ನು ತೊರೆದಂತೆ  ಮರ ತನ್ನ ಬೇರನ್ನು ತಾನೇ  ಕಡಿದುಕೊಂಡಂತೆ, […]

ಮಾತು ಮುಕ್ಕಿದ ಮೌನ: ನಳಿನಾ ಡಿ.

  ಗೆಳತಿಯರು ಕಳೆದುಹೋಗುತ್ತಾರಾ?  ಆದರೆ ಗೆಳತಿಯರನ್ನು ಜತನದಿಂದ ಸಂಪಾದಿಸುವುದು ಹೇಗೆ?  ಇದು ನಾನು, ನಿನ್ನ ಏಕೈಕ ಗೆಳೆಯ ಎಂದು ಎದೆಯುಬ್ಬಿಸಿ ಹೇಳಿದಾಗಲೆಲ್ಲಾ ನನ್ನ ಸ್ನೇಹದ ಸವಿಯರಿತ ಅವಳ ಮನಸ್ಸು ಉಬ್ಬುವುದು, ಮತ್ತೆ ಜಗತ್ತಿನ ಅತ್ಯಂತ ಸುಖವಾದ ಗೆಳತಿ ನಾನೇ ಕಣೋ, ಅದು ನಿನ್ನಿಂದಾನೇ ಅಂತ ಅವಳ ಸಂಭ್ರಮಿಸಿ ಭತ್ತದ ಹೊಲಗಳ ಹಸಿರು ಬಯಲಿನಲ್ಲಿ ಕೂಗಿದಾಗ, ನನ್ನ ಮನಸ್ಸಿನೊಂದಿಗೆ ದೇಹವೂ ಊರಾಚೆಯಲ್ಲಿ ಗೋಚರಿಸುವ ಗುಡ್ಡದ ಮೇಲೇನೇ ಕೂತುಬಿಟ್ಟಿರತ್ತೆ.  ನನ್ನಷ್ಟು ಎತ್ತರ ಯಾರೂ ಇಲ್ಲ ಎಂಬ ಕೋಡು.    ಐದಾರನೇ […]