Facebook

Archive for 2013

ಯಾರ ಜೊತೆ ಯಾವಾಗ ಎಲ್ಲಿ ಎಷ್ಟು ಕುಡೀಬೇಕು ಅಥವಾ ಕುಡಿಯಬಾರದು ಎನ್ನುವುದು ತಿಳಿದರೆ: ನಟರಾಜು ಎಸ್ ಎಂ

ಸಾವಿರದ ಒಂಬೈನೂರ ತೊಂಬತ್ತೊಂಬತ್ತರಲ್ಲಿ ಬೆಂಗಳೂರಿಗೆ ಕಾಲಿಟ್ಟ ಹೊಸತು. ನಮ್ಮೂರಿನ ಒಂದಷ್ಟು ಗೆಳೆಯರು ಎಂ.ಜಿ. ರೋಡಿನ ಹತ್ತಿರವಿರುವ ಹಾಸ್ಟೆಲ್ ನಲ್ಲಿದ್ದರು. ಆ ಗೆಳೆಯರಲ್ಲಿ ಒಂದಷ್ಟು ಜನ ಹಾಸ್ಟೆಲ್ ಗೆ ಸೇರಿದ್ದು ಡಿಗ್ರಿ ಓದಲಿಕ್ಕಾದರೂ ಹೊಟ್ಟೆಪಾಡಿಗಾಗಿ ಪಾರ್ಟ್ ಟೈಮ್ ಕೆಲಸಗಳನ್ನು ಮಾಡುತ್ತಿದ್ದರು. ಊರಿನಿಂದ ಯಾರಾದರು ಹುಡುಗರು ಸ್ಕೂಲನ್ನೋ ಕಾಲೇಜನ್ನೋ ಅರ್ಧಕ್ಕೆ ಬಿಟ್ಟು ಹೊಟ್ಟೆಪಾಡಿಗಾಗಿ ಬೆಂಗಳೂರಿಗೆ ಬಂದರೆ ಅವರು ಮೊದಲು ಬಂದಿಳಿಯುತ್ತಿದ್ದ ಜಾಗ ಅದೇ ಆ ಎಂ.ಜಿ. ರೋಡಿನ ಹಾಸ್ಟೆಲ್ ಆಗಿತ್ತು. ಹಾಗೆ ಬಂದಿಳಿದ ಹುಡುಗರಿಗೆ ಊಟ ತಿಂಡಿ ಮಲಗಲಿಕ್ಕೆ ಜಾಗವನ್ನು […]

ನಗೀ ನವಿಲು ಆಡುತ್ತಿತ್ತ: ರೇಷ್ಮಾ ಎ.ಎಸ್.

ಕೊಪ್ಪದಿಂದ ಬಾಳೆಹೊನ್ನೂರಿಗೆ ಜಯಪುರದ ಮೇಲಿನ ಮಾರ್ಗವಲ್ಲದೇ ಇನ್ನೊಂದು ಮಾರ್ಗವೂ ಇದೆ. ಅದು ಮೇಲ್ಪಾಲು ರಸ್ತೆ. ಇದು ಎರೆಡು ಕಿ.ಮೀ. ಕಡಿಮೆ ಇದ್ದು ಟಿಕೆಟ್ ದರ ಒಂದು ರೂ. ಕಡಿಮೆ ಇದ್ದರೂ ಜಯಪುರ ರಸ್ತೆ ಬಿಟ್ಟು ಈ ರಸ್ತೆಯಲ್ಲಿ ಪಯಣಿಸುವವರು ಕಡಿಮೆ. ಬೇರೆ ಬಸ್ ಸಿಗದಿದ್ದಾಗ, ಇಲ್ಲವೇ ಈ ಮಾರ್ಗದಲ್ಲಿಯೇ ಮನೆಗಳಿದ್ದವರು, ಈ ಮಾರ್ಗದಲ್ಲಿರುವ ಊರುಗಳಿಗೆ ಹೋಗಬೇಕಾದವರು ಮಾತ್ರ ಇತ್ತ ಕಡೆ ಪಯಣಿಸುತ್ತಾರೆ. ಕಾರಣ ತುಂಬ ಹಾಳಾದ ರಸ್ತೆ. ಆಮೆ ನಡಿಗೆಯಲ್ಲಿ ತಿರುವು ರಸ್ತೆಯಲ್ಲಿ ಸಾಗುತ್ತಾ ಮಧ್ಯ ಮಧ್ಯ […]

ಭೂತಪ್ಪನ ಲೇವಾದೇವಿ: ಅಖಿಲೇಶ್ ಚಿಪ್ಪಳಿ ಅಂಕಣ

ಸಾಗರದಿಂದ ವರದಾಮೂಲಕ್ಕೆ ಹೋಗುವ ದಾರಿಯಲ್ಲಿ ಮಧ್ಯೆ ಓತಿಗೋಡು-ಶೆಡ್ತಿಕೆರೆ ಹೋಗುವ ಒಂದು ದಾರಿಯಿದೆ. ಇಷ್ಟು ವರ್ಷ ಮಣ್ಣು ದಾರಿಯಾಗಿತ್ತು, ಅಭಿವೃದ್ಧಿಯಾಗಿ ಅಲ್ಲಿ ಈಗ ಕಿತ್ತುಹೋದ ಟಾರು ರಸ್ತೆಯ ಅವಶೇಷಗಳನ್ನು ಕಾಣಬಹುದು. ಅಲ್ಲಿದ್ದ ಸುಮಾರು ಮುನ್ನೂರು ಎಕರೆಯಷ್ಟು ಜಾಗಕ್ಕೆ ಧೂಪದ ಸಾಲು ಎನ್ನುವ ಹೆಸರಿದೆ. ನೈಸರ್ಗಿಕವಾಗಿ ವಿಂಗಡನೆಗೊಂಡ ಸಾಲುಧೂಪದ ಮರಗಳು ಎಣಿಕೆಗೆ ನಿಲುಕದಷ್ಟು ಇದ್ದವು. ಈಗೊಂದು ೨೦ ವರ್ಷಗಳ ಹಿಂದೆ ಸರ್ಕಾರದವರು ಪೇಪರ್ ಮಿಲ್‌ಗಳಿಗೆ ಸರಬರಾಜು ಮಾಡಲು ದಟ್ಟವಾದ ನಿತ್ಯಹರಿದ್ವರಣ ಮರಗಳ ನೈಸರ್ಗಿಕ ತೋಪನ್ನು ಹಿಟಾಚಿ-ಬುಲ್ಡೋಜರ್ ಹಚ್ಚಿ ನೆಲಸಮ ಮಾಡಿ […]

ಬಾಲ ಕಾರ್ಮಿಕ: ಫ್ಲಾಪೀಬಾಯ್

ಅಣ್ಣಾ, ಅಣ್ಣಾ ಏನಾದ್ರೂ ಕೊಡಣ್ಣಾ.. ಅಂತ ದೈನ್ಯತೆಯ ದ್ವನಿಯೊಂದು ಅವನ ಹಿಂದಿನಿಂದ ಕೇಳಿ ಬಂತು. ಹಿಂತಿರುಗಿ ನೋಡಿದಾಗ ಕಾಣಿಸಿದ್ದು, ಎಣ್ಣೆಯೇ ಕಾಣದಿದ್ದ ಕೆದರಿದ ಕೂದಲು, ಕಳೆಗುಂದಿದ್ದ ಬೆಂಗಳೂರಿನ ಡಾಂಬರು ರಸ್ತೆಯಂತಾಗಿದ್ದ ಕಣ್ಣು, ಹೊರಗೆ ಮಾಸಿದ ಹರಕಲು ಬಟೆ, ಬಟ್ಟೆಯೊಳಗೆ ಹೊರಗಿಂದಲೇ ಗೋಚರಿಸುವ ಹಸಿದ ಹೊಟ್ಟೆ. ಆ ಹೊಟ್ಟೆಯ ಒಡೆಯ ಸುಮಾರು ೧೦-೧೧ ಪ್ರಾಯದ ಒಬ್ಬ ಹುಡುಗ. ಅವನನ್ನು ನೋಡುತ್ತಲೇ ಈತ ತನ್ನ ಫ್ಲಾಶ್‌ಬ್ಯಾಕ್‌ಗೆ ಜಾರಿದ..! ಬಹಳ ವರ್ಷಗಳ ಹಿಂದೆ ಈತ ಕೊಳ್ಳೆಗಾಲದಿಂದ ಬೆಂಗಳೂರಿಗೆ ಬಂದಾಗ ಈತನಿಗೂ ಹತ್ತು […]

ಆ ಕಾಲಾ ಹಂಗ ರೀ.. ಈ ಕಾಲಾ ಹಿಂಗ ರೀ.. ಯಾವ ಕಾಲಾ ಛಂದ ರೀ…..?: ಸುಮನ್ ದೇಸಾಯಿ

ಮನ್ನೆ ಮಧ್ಯಾನ್ಹಾ ಆಫೀಸನ್ಯಾಗ ಹಿಂಗ ಸುಮ್ನ ಕೂತಿದ್ವಿ. ಅಂಥಾದ್ದೇನು ಕೆಲಸಾ ಇದ್ದಿದ್ದಿಲ್ಲಾ. ನಮ್ಮ ಜೋಡಿ ಕೆಲಸಾ ಮಾಡೊ ಹುಡಗಿ ಸವಿತಾ ಇಂಟರನೇಟ್ ನ್ಯಾಗ ಇ-ಪೇಪರ ಓದ್ಲಿಕತ್ತಿದ್ಲು. ಹಂಗ ಓದಕೊತ, ” ಮೆಡಮ್ಮ ರಿ ಬಂಗಾರದ ರೇಟ್ ಮೂವತ್ತೆರಡು ಸಾವಿರದಾ ಐದುನೂರಾ ಚಿಲ್ಲರ ಆಗೇತಂತ  ನೋಡ್ರಿ. ಹಿಂಗಾದ್ರ ಎನ ಬಂಗಾರದ ಸಾಮಾನ ಮಾಡಿಸ್ಕೊಳ್ಳಾಕ ಆಕ್ಕೇತರಿ. ಹಿಂದಕಿನ ಮಂದಿ ತಲ್ಯಾಗ ಬಂಗಾರದ ಹೂವಿನ ಚಕ್ಕರ  ಮತ್ತ ಭಂಗಾರದ ಕ್ಯಾದಗಿ, ಹೆರಳಮಾಲಿ ಮಾಡಿಸಿಕೊಂಡ ಹಾಕ್ಕೊತ್ತಿದ್ರಂತ ರಿ, ಈಗ ನಮಗ ಲಗೂಮಾಡಿ ಕಿವ್ಯಾಗ […]

“ಪುನರ್ಜನ್ಮ” ದ ಕಥೆಯ ಸಿನೆಮಾ ಮತ್ತು ಅಪಘಾತ: ಅಮರ್ ದೀಪ್ ಪಿ. ಎಸ್.

            ಮದುವೆಯನ್ನೂ ಸಹ ಲಘು ದುಃಖ ಬಲು ಹರ್ಷದಿಂದ “ಅಪಘಾತ ” ವೆಂದು ಬಣ್ಣಿಸುವವರೂ ಇದ್ದಾರೆ.. ಆದರೆ, ನಿಜವಾದ ಅಪಘಾತಗಳನ್ನು ಕಣ್ಣಾರೆ ಕಂಡಿದ್ದೇ ಆದಲ್ಲಿ ಅಥವಾ ಅನುಭವಿಸಿದಲ್ಲಿ ಈ ಮಾತನ್ನು ನಾನಾದರೂ ಹಿಂತೆಗೆದುಕೊಳ್ಳುತ್ತೇನೆ.  ನನಗೆ ನೆನಪಿದ್ದಂತೆ ನಾನು ಕನಿಷ್ಠ ಮೂರರಿಂದ ನಾಲ್ಕು ಬಾರಿ ಅಪಘಾತವನ್ನು ಸ್ವತಃ ಅನುಭವಿಸಿದ್ದೇನೆ.. ಮತ್ತು ಕಣ್ಣಾರೆ ನೋಡಿದ್ದಂತೂ ಹಲವು… ಅದಿನ್ನು ಓದು “ಸುತ್ತುತ್ತಿದ್ದ ” ಕಾಲ.. ಮತ್ತು ಸಹಜವಾಗಿ ದುಡುಕು ಹಾಗೂ ಹುಡುಗು ಬುದ್ಧಿ. ಹದಿನಾರರಿಂದ […]

ಇಟ್ಸ್ ಅ ವಂಡರ್ಫುಲ್ ಲೈಫ್: ವಾಸುಕಿ ರಾಘವನ್ ಅಂಕಣ

ನನ್ನ ಕಲ್ಪನಾಲೋಕದಲ್ಲಿ ಹಬ್ಬಗಳಿಗೂ ಚಲನಚಿತ್ರಗಳಿಗೂ ಬಿಡಿಸಲಾಗದ ನಂಟಿದೆ. ಯುಗಾದಿ ಹಬ್ಬದ ದಿನ ಚಿತ್ರಮಂಜರಿಯಲ್ಲಿ ತಪ್ಪದೇ ಪ್ರತಿ ವರ್ಷ ಬರುತ್ತಿದ್ದ ಲೀಲಾವತಿ ಅಭಿನಯದ “ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ” ಹಾಡು ನೆನಪಿಗೆ ಬರುತ್ತದೆ. ಗಣಪತಿ ಹಬ್ಬ ಅಂದಾಕ್ಷಣ ಚಿತ್ರಹಾರ್ ನ “ದೇವಾದಿ ದೇವಾ ಗಣಪತಿ ದೇವ” ಹಾಡು ಜ್ಞಾಪಕಕ್ಕೆ ಬರುತ್ತದೆ. ಕ್ರಿಸ್ಮಸ್ ಬಂತೆಂದರೆ ಬಿಟ್ಟೂಬಿಡದೆ ಕಾಡುವ ಚಿತ್ರ “ಇಟ್ಸ್ ಅ ವಂಡರ್ಫುಲ್ ಲೈಫ್”! ಇದು 1946ರಲ್ಲಿ ಫ್ರಾಂಕ್ ಕ್ಯಾಪ್ರ ನಿರ್ದೇಶನದಲ್ಲಿ ಮೂಡಿಬಂದ ಚಿತ್ರ. ದೇವರಿಗೆ ನೂರಾರು ಜನರಿಂದ […]

ಮೂವರ ಕವಿತೆಗಳು: ಸಚಿನ್ ನಾಯ್ಕ್, ಪ್ರಶಾಂತ್ ಭಟ್, ಅನಂತ್ ಕಳಸಾಪುರ

ಕತ್ತಲೆಯೊಳಗೆ… ಕಾದು ನಿಂತಿದ್ದಾಳೆ ಆಕೆ ಇಳಿ ಸಂಜೆ ಜಾರಿ ಕತ್ತಲೆ ಕವಿಯುವ ಹೊತ್ತಲ್ಲಿ., ಬರಲೇಬೇಕು ಯಾರಾದರೂ ಸರಿ ತುಟಿಯ ಬಣ್ಣ ಕರಗುವುದರೊಳಗೆ, ಮುಡಿಯ ಮಲ್ಲಿಗೆ ಬಾಡುವುದರೊಳಗೆ…. ಖಂಡಿತವಾಗಿಯೂ ಅವನು ಅಪರಿಚಿತ; ಪರಿಚಯದ ಹಂಗೇಕೆ ವ್ಯವಹಾರದಲ್ಲಿ..!? ಅವನ ಹಿಂದೆಯೇ? ಹೊರಟವಳಿಗೆ ಭರವಸೆಗಳೇನಿರಲಿಲ್ಲ..! ಕತ್ತಲ ಕೋಣೆಯಲ್ಲಿ ಇದ್ದರೇನು ಬಟ್ಟೆ ಇರದಿದ್ದರೇನು…!? ಅವನ ಬಿಚ್ಚುವ ಹಂಬಲವಾದರೂ ಇಡೇರಲಿ… ಅವಳ ಮುಷ್ಠಿಯಲ್ಲಿ ಒಡಳಾಳದ ನೋವೆಲ್ಲಾ ಹಿಂಡಿ ಹಿಪ್ಪೆಯಾಗುವಷ್ಟು ಬಿಗಿತ…! ಹಾಸಿದ ಸೆರಗಿನಲ್ಲಿ ಒಂದಿಷ್ಟು ಪುಡಿಗಾಸು ಸಂತೃಪ್ತಿಯ ಆಧಾರದ ಮೇಲೇನೋ ಎಂಬಂತಿದೆ…!! ಹಣೆಯ ಬೊಟ್ಟು […]

ಸ್ನೇಹ ಭಾಂದವ್ಯ (ಭಾಗ 11): ನಾಗರತ್ನಾ ಗೋವಿಂದನ್ನವರ

            ಇಲ್ಲಿಯವರೆಗೆ ಪತ್ರ ಓದಿದ ಸುಧಾಳಿಗೆ ತುಂಬಾ ಸಂತೋಷವಾಯಿತು. ಅವಳು ಕಲಾಕೃತಿಯನ್ನು ಕೈಗೆ ತಗೊಂಡು ನೋಡಿದಳು. ಆಗ ಚಂದ್ರು ಏನಕ್ಕಾ ನೀನು ಎಷ್ಟೊಂದು ಒಳ್ಳೆ ಉಡುಗೊರೆಗಳು ಬಂದಿವೆ ಅದು ಬಿಟ್ಟು ನೀನು ಕಡಿಮೆ ಬೆಲೆಯ ಆ ಕಲಾಕೃತಿಯನ್ನು ಹಿಡಿದಿದೆಯಲ್ಲ ಎಂದ. ಚಂದ್ರು ಹಾಗೆಲ್ಲ ಅನಬಾರದು. ಉಡುಗೊರೆಗಳಿಗೆಲ್ಲಾ ಹಾಗೆಲ್ಲ ಬೆಲೆ ಕಟ್ಟಬಾರದು. ಇಷ್ಟೆಲ್ಲಾ ಉಡುಗೊರೆಗಳಲ್ಲಿ ಈ ಉಡುಗೊರೆ ತುಂಬಾ ಅಮೂಲ್ಯವಾದದ್ದು ಗೊತ್ತಾ ಇದರಲ್ಲಿ ತಾಯಿ ಮಗುವಿನ ಬಂಧ ಎಂತದು ಅನ್ನೊದು ಗೊತ್ತಾಗತ್ತೆ. […]

ಜಾದವ್ ಪಯೆಂಗ್ ಒಂಟಿಯಾಗಿ ಬೆಳೆಸಿದ ೧೩೬೦ ಎಕೆರೆ ಕಾಡು: ಮಂಜು ಅರ್ಕಾವತಿ

            ಜಾದವ್ ಪಯೆಂಗ್ ಒಂಟಿಯಾಗಿ ಬೆಳೆಸಿದ ೧೩೬೦ ಎಕೆರೆ ಕಾಡುಸುಮಾರು ಸಲ ನಾವೇ ಅಂದುಕೊಳ್ತಾ ಇರ್‍ತೀವಿ ನಾನು ಒಬ್ನೆ / ಒಬ್ಳೆ ನಾನೇನು ಮಾಡೋಕು ಆಗಲ್ಲ ಅಂತ. ಆದ್ರೆ ದೊಡ್ಡ ಪ್ರವಾಹ ಶುರುವಾಗೋದು ಮೊದಲ ಹನಿಯಿಂದಲೇ, ದೂರದ ಪ್ರಯಾಣ ಶುರುವಾಗೋದು ಮೊದಲ ಹೆಜ್ಜೆಯಿಂದಲೇ, ಹೀಗೆ ದೊಡ್ಡ, ದೊಡ್ಡದು ಅಂತ ನಾವೇ ಏನೆ ಅಂದು ಕೊಂಡ್ರು ಅದಕ್ಕೆ ಮೂಲ ಒಂದೇ ಒಂದು ಎಂಬುದೇ ಆಗಿರುತ್ತೆ. ಹೀಗೆ ಎಲೆಮರೆಯ ಕಾಯಿಗಳಂತೆ ನಮ್ಮ ನಡುವೆ […]