Facebook

Archive for 2013

ಸ್ನೇಹ ಭಾಂದವ್ಯ (ಭಾಗ 1): ನಾಗರತ್ನಾ ಗೋವಿಂದನ್ನವರ

           ಶಿವಮೊಗ್ಗ ಜಿಲ್ಲೆಯಲ್ಲಿರುವ ಅಗಸವಳ್ಳಿ ಇದೊಂದು ಪ್ರಕೃತಿಯ ಮಧ್ಯ ಇರುವ ಸುಂದರವಾದ ಹಳ್ಳಿ. ಈ ಹಳ್ಳಿಯಲ್ಲಿ ಮಧ್ಯಮ ಕುಟುಂಬದಲ್ಲಿ ಜನಿಸಿರುವ ಇಬ್ಬರು ಹುಡುಗಿಯರ ಕತೆ ಇದು. ಮೊಬೈಲ್ ಬಳಕೆ ಇನ್ನು ಆರಂಭವಾಗಿರದ ಸಮಯವದು.      ಹಾಳಾದ ಕರೆಂಟು ಯಾವಾಗಂದ್ರೆ ಆವಾಗ ಕೈಕೊಟ್ಟು ಬಿಡುತ್ತದೆ ಎಂದು ಅಡುಗೆ ಮನೆಯಲ್ಲಿದ್ದ ರಾಧಮ್ಮ ಗೊಣಗುತ್ತಿದ್ದಳು. ಹಾಲಿನಲ್ಲಿ ಕುಳಿತಿದ್ದ ಶಿವಾನಂದನಿಗೆ ಇದು ಕಿರಿಕಿರಿ ಎನಿಸಿತು. ಏನೇ ನಿನ್ನದು ಬೇಗ ದೀಪಾ ಹಚ್ಚಬಾರದೇನೆ ಎಂದು ಹೆಂಡತಿಗೆ ಹೇಳಿದ. […]

ವನ್ಯಾಪಘಾತಗಳು ಮತ್ತು ಪರಿಹಾರ: ಅಖಿಲೇಶ್ ಚಿಪ್ಪಳಿ ಅಂಕಣ

ಮೊನ್ನೆ ಕೇರಳದ ಮುಖ್ಯಮಂತ್ರಿ ಚಾಂಡಿ ಬಂದು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಒಂದು ಮನವಿಯನ್ನು ಸಲ್ಲಿಸಿದರು. ಕರ್ನಾಟಕ-ಕೇರಳದ ಮಧ್ಯೆ ಸಂರಕ್ಷಿತ ವನ್ಯಪ್ರದೇಶದಲ್ಲಿ ಹಾದು ಹೋಗುವ ಹೈವೇಯಲ್ಲಿ ರಾತ್ರಿ ವೇಳೆಯಲ್ಲಿ ವಾಹನ ಸಂಚಾರಕ್ಕೆ ಅನುಮತಿ ನೀಡಬೇಕು ಎಂಬುದು ಮನವಿಯ ಸಾರಾಂಶ. ಕರ್ನಾಟಕದ ಮುಖ್ಯಮಂತ್ರಿಗಳು ಸಧ್ಯಕ್ಕೆ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ ಎಂದು ಪತ್ರಿಕೆಗಳಲ್ಲಿ ವರದಿಯಾಗಿದೆ. ಕರ್ನಾಟಕದ ಮುಖ್ಯಮಂತ್ರಿಗಳ ಈ ನಿಲುವು ಸಂತೋಷದ ವಿಚಾರವೇ ಸೈ. ಜನಸಂಖ್ಯೆ ಬೆಳೆದ ಹಾಗೆ ಪಟ್ಟಣಗಳು ನಗರಗಳಾಗುತ್ತವೆ. ಹಳ್ಳಿಗಳು ಪೇಟೆಯ ಸ್ವರೂಪ […]

ತಾನೊಂದು ಬಗೆದರೆ: ಮಮತಾ ಕೀಲಾರ್

ರಾಜೇಶನದು ಸುಂದರ ದಾಂಪತ್ಯ.ಮನ ಮೆಚಿದ್ದ ಮಡದಿ ಸ್ವಾತಿ. ಒಳ್ಳೆಯ ಉದ್ಯೋಗದಿಂದಾಗಿ ಕೈತುಂಬಾ ಸಂಬಳ, ಕಾರು ಬಂಗಲೆ ಎಲ್ಲ ಇದ್ದ ಶ್ರೀಮಂತ ಜೀವನ. ಕೊರತೆಯೊಂದೆ ಮದುವೆಯಾಗಿ ಹತ್ತು ವರುಷ ಕಳೆದರೂ ಅವರ ಹೆಸರು ಹೇಳೋ ವಂಶದ ಕುಡಿ ಮೂಡದಿರುವದು. ಸ್ವಾತಿಗಾದರೋ ಮಕ್ಕಳುಎಂದರೆ ಪಂಚಪ್ರಾಣ. ದಿನಾಲೂ ಸಾಯಂಕಾಲ ತಮ್ಮ ಮನೆಯಿದಿರು ಇರುವ ಉದ್ಯಾನದಲ್ಲಿ ಆಡುವ ಮಕ್ಕಳನ್ನು ಕಿಟಕಿಯಿಂದ ಗಂಟೆಗಟ್ಟಲೇ ನೋಡುತ್ತಾ ಮೈಮರೆಯುತ್ತಿದ್ದಳು. ಆದರೂ ರಾಜೇಶನ ಮನಸ್ಸಿಗೆ ಬೇಸರವಾಗಬಾರದೆಂದು ತನ್ನ ನೋವನ್ನು ಅಡಗಿಸಿ ಸತ್ತ ನಗುವಿಗೆ ಜೀವತುಂಬೊ ಪ್ರಯತ್ನ ಮಾಡುತ್ತಿದ್ದಳು. ಮಡದಿಯನ್ನು […]

ಘಾತ: ಬೆಳ್ಳಾಲ ಗೋಪಿನಾಥ ರಾವ್

  ತಲೆ ಎತ್ತಿ ನೋಡಿದರು ಮೇಜರ್ ಮತ್ತೊಮ್ಮೆ ಸರಿ ಪಡಿಸಿಕೊಳ್ಳುತ್ತಾ ಕನ್ನಡಕದೊಳಗಿಂದ ಮಿಲಿಂಡ್ ನನ್ನು.   ಏನ್ ಸಾರ್ ಅರ್ಜೆಂಟ್ ಆಗಿ ಬರ ಹೇಳಿದಿರಿ, ವಿಷಯ ಸೀರಿಯಸ್ ಎಂತ ಗೊತ್ತಾಯ್ತು.   ನಿನ್ನೆ ಒಂದು ಪೈಲ್ ಕಳಿಸಿದ್ದೆ ಸಿಕ್ಕಿತಾ,   "ಹೌದು ಮಂಜು ಕೊಟ್ಟ ಸಂಜೆ, ಅದನ್ನು ಓದಿದೆ, . ಅದು ನಿಮ್ಮ ಕಾಲೊನಿಯ ಮುನ್ನೂರು ಭವನಗಳ ಸಮುಚ್ಚಯ ( ಫ್ಲಾಟ್ ಗಳ) ವಾರ್ಷಿಕ ದುರಸ್ತಿ ಮತ್ತು ಸುಣ್ಣ ಬಣ್ಣಗಳ ಕಾರ್ಯಗಳ ಹತ್ತು ಲಕ್ಷದ ಕಾಂಟ್ರಾಕ್ಟ್ ಎಗ್ರಿಮೆಂಟ್ […]

ಮೂವರ ಕವಿತೆಗಳು: ಮಂಜುನಾಥ್ ಪಿ., ವಿಶ್ವನಾಥ್ ಎಂ., ಅನುಪಮಾ ಎಸ್. ಗೌಡ.

          ಹರಿಯುವ ನದಿ ಅದೆಲ್ಲೋ ಉಗಮ ಮೈದುಂಬಿಕೊಳ್ಳುತ್ತ  ಕೈ-ಕಾಲು ಮೂಡಿಸಿಕೊಳ್ಳುತ್ತ  ಸಾಗುವ ದಾರಿಯನ್ನು ಮಾಡಿಕೊಳ್ಳುತ್ತ ಸುಗಮ  ಹಠಕ್ಕೆ ಬಿದ್ದು ಅನುಸಂಧಾನವೊಂದನ್ನು ಉಳಿಸಿಕೊಳ್ಳುವಂತೆ….   ಸವೆಸುವ ದಾರಿ ಶಿಶುವಿನ ಹಾಡೆ? ಸಹಿಸಬೇಕು ಮಧ್ಯೆ ಮತ್ತೆ ಹಾಕಿದರೆ ಕಟ್ಟೆಯ ತಡೆಗೋಡೆ? ಆದರೂ ಹರಿಯಬೇಕೆನ್ನುವ ಧಾವಂತ ನಿರಂತರ ಒಳಗೊಳಗೆ ಅದುವೆ ಆದ್ಯಂತ….   ಕಟ್ಟೆಯಲ್ಲಾದರೂ ಎಷ್ಟೆಂದು ಇರಬಹುದು ಒಂದಿಲ್ಲ ಒಂದು ದಿನ ತುಂಬಿ ಧುಮ್ಮಿಕ್ಕಲೇಬೇಕು ನಿಧಾನಕ್ಕಾದರೂ ಗೋಡೆ ಒಡೆದಾದರೂ…   ಸತ್ಯ ಯಾವತ್ತೂ ಹೀಗೆಯಲ್ಲವೆ?!  ’ಸ್ಥಾವರ’ಕ್ಕೆ […]

ಕೆಂಗುಲಾಬಿ (ಭಾಗ 15): ಹನುಮಂತ ಹಾಲಿಗೇರಿ

  (ಇಲ್ಲಿಯವರೆಗೆ)   ಇಳಿಸಂಜೆಯ ಹೊತ್ತು ನಾನು ಮತ್ತು ದೀಪಾ ಮೆಜೆಸ್ಟಿಕ್ ಹತ್ತಿರಕ್ಕೆ ಬಂದಿದ್ದೆವು. ಶಾರಿ ಇಲ್ಲಾದರೂ ಸಿಗಬಹುದೆ ಎಂಬ ದೂರದ ನಿರೀಕ್ಷೆಯೊಂದಿಗೆ. ಅಲ್ಲೆಲ್ಲ ಅಸಂಖ್ಯಾತ ದಂಧೆಯ ಮಹಿಳೆಯರು. ಯಾರೋ ದೀಪಾಳ ಹೆಸರು ಹಿಡಿದು ಕೂಗಿದಂತಾಯಿತು. ಹಿಂದೆ ತಿರುಗಿ ನೋಡಿದರೆ ಬಾಯ್ತುಂಬ ನಗುತ್ತಾ ಒಬ್ಬಾಕೆ ಹತ್ತಿರ ಬಂದು ದೀಪಾಳ ಮುಂದೆ ಬಂದು ನಿಂತಳು. ದೀಪಾ ಕೂಡ ಅವಳನ್ನು ಮೀರಿಸುವಂತೆ ನಕ್ಕು ಆತ್ಮೀಯತೆಯಿಂದ ಅವಳ ಕೈ ಹಿಡಿದುಕೊಂಡಳು. ‘ಇವಳು ಮಂಜುಳಾ ಅಂತ. ನಮ್ಮ ಸಂಸ್ಥೆಯಿಂದ ಆರೋಗ್ಯ ಕುರಿತು ತರಬೇತಿ […]

ಕಿಂಗ್ ಆಫ್ ಕಾಮಿಡಿ: ವಾಸುಕಿ ರಾಘವನ್ ಅಂಕಣ

ಅದ್ಭುತ ನಟರೇ ಹಂಗೆ. ತುಂಬಾ ಸಾಮಾನ್ಯವಾದ ಸಿನಿಮಾದಲ್ಲಿ ಕೂಡ ತಮ್ಮ ಛಾಪನ್ನು ಮೂಡಿಸುತ್ತಾರೆ. ಸಾಧಾರಣತೆಯ ಮಧ್ಯೆಯೂ ತಮ್ಮ ಉತ್ಕೃಷ್ಟತೆಯಿಂದ ಎದ್ದು ಕಾಣುತ್ತಾರೆ. ರಾಬರ್ಟ್ ಡಿನಿರೋ ಅಂತಹ ಒಬ್ಬ ಅಪ್ರತಿಮ ಕಲಾವಿದ. “ಕಿಂಗ್ ಆಫ್ ಕಾಮಿಡಿ” ನನ್ನ ಪ್ರಕಾರ ಹೇಳಿಕೊಳ್ಳುವಂತಹ ಚಿತ್ರ ಅಲ್ಲದಿದ್ದರೂ, ಕೇವಲ ಡಿನಿರೋ ನಟನೆಯನ್ನು ಸವಿಯಲು ನಾನು ಎಷ್ಟೋ ಬಾರಿ ಈ ಚಿತ್ರವನ್ನು ನೋಡಿದ್ದೀನಿ. 1983ರಲ್ಲಿ ಬಿಡುಗಡೆಯಾದ ಮಾರ್ಟಿನ್ ಸ್ಕಾರ್ಸೆಸೆ ನಿರ್ದೇಶನದ ಚಿತ್ರ “ಕಿಂಗ್ ಆಫ್ ಕಾಮಿಡಿ”. ಅಭಿಮಾನಿಗಳ ಮನಸ್ಥಿತಿ, ಅವರ ಹುಚ್ಚು, ಅವರ ಅತಿರೇಕಗಳ […]

ನೆನಪಿನಾಳದಿಂದ (ವಿಷ್ಣು ಸಂದರ್ಶನ): ಗುಂಡೇನಹಟ್ಟಿ ಮಧುಕರ್ ಕುಲಕರ್ಣಿ

ವಿಷ್ಣುವರ್ಧನ ಅವರೊಂದಿಗೆ ನಡೆಸಿದ ಸಂದರ್ಶನ ಸುಮಾರು ಹತ್ತು ವರ್ಷಗಳ ಹಿಂದಿನದ್ದು. ನಾನು ಅವರೊಂದಿಗೆ ಮಾತನಾಡಬೇಕೆಂದು ಕುಳಿತಿದ್ದಾಗ ಅವರು ಸಂಪೂರ್ಣವಾಗಿ ಆಧ್ಯತ್ಮಿಕದತ್ತ ವಾಲಿದ್ದು ಅವರ ಮಾತುಗಳಿಂದ ಗೊತ್ತಾಗುತ್ತಿತ್ತು. ಪ್ರತಿಯೊಂದು ವಿಷಯದ ಬಗ್ಗೆ ಹೇಳುವಾಗಲೂ ಪರಮಾತ್ಮನ ಆಶಿರ್ವಾದ ಇದ್ದರೆ ಆಗುತ್ತದೆ. ಎಲ್ಲವೂ ಅವನದ್ದು ನನ್ನೇನೂ ಇಲ್ಲ ಎಂದು ಆಕಾಶದೆಡೆ ಕೈ ಮಾಡಿ ತೋರಿಸುತ್ತಿದ್ದರು. ಸರಳಜೀವಿ ಸ್ನೇಹ ಜೀವಿ ಎಂಬುದು ಅವರೊಂದಿಗೆ ನಾನು ಮಾತನಾಡಿದ ಮಾತುಕತೆಯಿಂದಾಗಿ ನನ್ನ ಮನಸ್ಸಿಗೆನ್ನಿಸಿತು.  ನನ್ನೊಂದಿಗೆ ಫೋಟೋ ತೆಗೆದುಕೊಳ್ಳಲು ಬಂದಿದ್ದ ಕ್ಯಾಮರಾಮನ್ ನಿಜವಾಗಿಯೂ ಕ್ಯಾಮರಾಮನ್ ಆಗಿರಲಿಲ್ಲ. ಯಾವುದೋ […]

ದಾಸಶ್ರೇಷ್ಠ ಪುರಂದರದಾಸರು: ರಶ್ಮಿ ಕುಲಕರ್ಣಿ

ದಾಸ ಸಾಹಿತ್ಯವು ಕನ್ನಡ ಸಾಹಿತ್ಯದಲ್ಲಿ ತನ್ನದೇ ಆದ ಸ್ಥಾನಮಾನವನ್ನು ಹೊಂದಿರುವುದು 12ನೇ ಶತಮಾನದಿಂದ 19ನೇ ಶತಮಾನದವರೆಗೆ ಅನೇಕ ದಾಸರು ಪದಗಳನ್ನು ರಚಿಸಿದ್ದಾರೆ. ವಿಜಯದಾಸರು,ಗೋಪಾಲದಾಸರು,ಜಗನ್ನಾಥದಾಸರು,ಕನಕದಾಸರು,ಹೀಗೆ ಇನ್ನೂ ಅನೇಕ ದಾಸರು ದೇವರನ್ನು ಸ್ತುತಿಸುತ್ತ ಕೊಂಡಾಡುತ್ತ ಹಲವಾರು ಪದಗಳನ್ನು ರಚಿಸಿದ್ದಾರೆ. ಇವರಲ್ಲಿ ಪುರಂದರದಾಸರು ಶ್ರೇಷ್ಠರೆನಿಸಿಕೊಂಡಿದ್ದಾರೆ. "ದಾಸರೆಂದರೆ ಪುರಂದರದಾಸರಯ್ಯಾ…….."ಎಂದು ಸ್ವತಃ ಗುರು ವ್ಯಾಸರಾಯರಿಂದಲೇ ಕೊಡಾಡಿಸಿಕೊಂಡ ಹಿರಿಮೆ ಇವರದು.  ದೇವತೆಗಳಲ್ಲಿ ಸಂಗೀತ ವಿಶಾರದ ನಾರದ ಮಹರ್ಷಿಗಳ ಅವತಾರವೇ ಪುರಂದರದಾಸರೆಂಬ ಪ್ರತೀತಿಯೂ ಇದೆ. ಶಾಲಿವಾಹನ ಶೆಕೆ 1858 ರಲ್ಲಿ ಮಹಾರಾಷ್ಟ್ರದ ಪಂಡರಪುರದ ಹತ್ತಿರದ ಗ್ರಾಮವೊಂದರಲ್ಲಿ ಬ್ರಾಹ್ಮಣ […]

ಅನಿರೀಕ್ಷಿತ: ಪ್ರಶಸ್ತಿ ಅಂಕಣ

ನಗರದ ದೊಡ್ಡ ಆಸ್ಪತ್ರೆ ಎಂದೇ ಖ್ಯಾತ ಜಗರಾಂ ಆಸ್ಪತ್ರೆಯ ಡಾ|| ಜಗರಾಂಗೆ ರಾತ್ರಿ ನಿದ್ದೆಯಲ್ಲೆಲ್ಲಾ ಏನೋ ಕಸಿವಿಸಿ. ನಿದ್ದೆಯಲ್ಲೆಲ್ಲಾ ಮೈಮೇಲೆ ಬಿದ್ದಂತೆ ಬಂದು ಕಾಡಿದ ದುಸ್ವಪ್ನಗಳಿಂದ ನಾಳೆ ಏನೋ ಗಂಡಾಂತರ ಕಾದಿದೆ ಎಂದೇ ಅಂಜಿಕೆ ಶುರುವಾಯ್ತು. Dreams are modified versions of memory ಎನ್ನುತ್ತಾರೆ. ಅಂದರೆ ನಾವು ನೋಡಿದ್ದು, ಯೋಚಿಸಿದ್ದೇ ರೂಪಾಂತರವಾಗಿ ಕನಸಾಗುತ್ತೆ ಅಂತ.. ಆದರೆ ತಾವು ನೋಡದ್ದು ಯಾಕೆ ಕನಸಾಗ್ತಿದೆ ಅಂತ ನಿದ್ದೆ ಬಾರದೇ ಎದ್ದು ಕುಳಿತ ಜಗರಾಂ ಯೋಚಿಸುತ್ತಾ ಕುಳಿತು ,ಕುಳಿತಲ್ಲಿಯೇ ತೂಕಡಿಸಿ […]