Facebook

Archive for 2013

ದ್ವಂದ್ವ:ಸಂಯುಕ್ತಾ ಪುಲಿಗಲ್ ಬರೆದ ಸಣ್ಣಕತೆ

“ವಾಟ್ ಅಬೌಟ್ ಯುವರ್ ಪ್ರೋಪೋಸಲ್ಸ್ ಯಾ?”, ಡಬ್ಬಿಯಲ್ಲಿನ ಚಿತ್ರಾನ್ನದ ಸಾಸಿವೆ ಕಾಳನ್ನು ಸ್ಪೂನಿಂದ ಕೆದಕುತ್ತಾ ಕುಳಿತಿದ್ದ ಪೂರ್ಣಿಗೆ ತನ್ನ ಸಹೋದ್ಯೋಗಿ ನಿರ್ಮಲ ಕೇಳಿದ ಪ್ರಶ್ನೆ. ನಿರ್ಮಲ ತನ್ನ ಬಾಳಿನ ಸಾಕಷ್ಟು ಸಿಕ್ಕುಗಳನ್ನು ಈಗಾಗಲೇ ಬಿಡಿಸಿಕೊಂಡು ತಕ್ಕಮಟ್ಟಿಗೆ ನೆಮ್ಮದಿಯ ಬದುಕು ಸಾಗಿಸುತ್ತಿರುವವಳು. ತಮಿಳುನಾಡಿನಿಂದ ಬಂದ ಈಕೆಯದು ಒಟ್ಟು ಕುಟುಂಬ, ಶಾಲೆ ಕಲಿಯುವ ಮಗ, ಈಗೊಮ್ಮೆ ಆಗೊಮ್ಮೆ ಕರೆಮಾಡುವ ಯಜಮಾನ. ಇದು ನಿರ್ಮಲಳ ಪ್ರಪಂಚ. ಸ್ವಲ್ಪ ಮುಂಗೊಪಿಯಾಗಿದ್ದರೂ ಪೂರ್ಣಿಗಿವಳು ಒಳ್ಳೆಯ ಸಹೋದ್ಯೋಗಿ. ನಿರ್ಮಲಳ ಪ್ರಶ್ನೆಗೆ ಪೂರ್ಣಿ ಉತ್ತರಿಸುವಷ್ಟರಲ್ಲೇ ತನ್ನ ಹೊಳಪಿನ […]

ಚಿಟ್ಟು ಕುಟುರದ ಮರಿಗಳ ಕತೆ: ಅಖಿಲೇಶ್ ಚಿಪ್ಪಳಿ ಅಂಕಣ

ಮಲೆನಾಡು ಈಗ ಅಕ್ಷರಶಃ: ಮಳೆನಾಡು. ಹಾಗೆಯೇ ಪ್ರಕೃತಿಯ ಅಚ್ಚರಿಗಳ ಗೂಡು. ಲಕ್ಷಗಟ್ಟಲೆ-ಕೋಟಿಗಟ್ಟಲೆ ಖರ್ಚು ಮಾಡಿ, ಪರಿಸರದಿಂದ ಬಗೆದು ತಂದ ಕಲ್ಲು-ಮರಳು-ಕಬ್ಬಿಣದ ಮಾನವ ನಿರ್ಮಿತ ತಾರಸಿ ಮನೆಗಳು ಧಾರಾಳವಾಗಿ ಸೋರುತ್ತಿವೆ. ಮನೆಯೆಲ್ಲಾ ಥಂಡಿ-ಥಂಡಿ. ಇಂತಹ ಮಳೆಗಾಲದಲ್ಲೂ ಹಕ್ಕಿಗಳು ಒಣ ಎಲೆಯನ್ನು, ಹುಲ್ಲನ್ನು ಎಲ್ಲಿಂದ ಸಂಪಾದಿಸಿ ತರುತ್ತವೆ ಎಂಬುದು ಚಿದಂಬರ ರಹಸ್ಯವೇ ಸೈ. ಸಾಗರ ತಾಲ್ಲೂಕಿನ ಹೊಸೂರಿನಲ್ಲಿ ಒಬ್ಬರ ಮನೆಯ ಹಿತ್ತಲಲ್ಲಿ 3 ಇಂಚು ಅಗಲದ ಪಿ.ವಿ.ಸಿ ಪೈಪೊಂದನ್ನು ಹಿತ್ತಿಲಿನ ಧರೆಗೆ ಆನಿಸಿ ನಿಲ್ಲಿಸಿದ್ದರು. ಅದನ್ನು ಉಪಯೋಗಿಸದೇ ವರ್ಷಗಳೇ ಆಗಿತ್ತು. ಚಿಕ್ಕ […]

ನಾನು,ಗುರಿ ಮತ್ತು ಅಶ್ವಿನಿ ಸ್ಟುಡಿಯೋ: ಹೃದಯಶಿವ ಅಂಕಣ

ಆಗಿನ್ನೂ  ನಾನು  ಅವಕಾಶಗಳ  ಹುಡುಕಾಟದಲ್ಲಿದ್ದೆ. ಗುರುಕಿರಣ್  ಬೆನ್ನು ಬಿದ್ದಿದ್ದೆ. ಅಶ್ವಿನಿಸ್ಟುಡಿಯೋ  ಮುಂದೆ  ಕೆ.ಎ.19ರಿಂದ  ಶುರುವಾಗುವ  ನಂಬರ್  ಪ್ಲೇಟುಳ್ಳ, ಹಿಂಬದಿಯ  ಗ್ಲಾಸಿನ  ಮೇಲೆ  ಕಂಟ್ರಿಕ್ಲಬ್ಬಿನ  ಸ್ಟಿಕ್ಕರುಳ್ಳ  ಒಂದು  ಸ್ಯಾಂಟ್ರೋ ಕಾರು  ಅಲ್ಲಿ  ನಿಂತಿತ್ತು  ಅಂದ್ರೆ  ಗುರುಕಿರಣ್ ಸ್ಟುಡಿಯೋ  ಒಳಗಡೆ  ಇದ್ದಾರೆ  ಅಂತ ಅರ್ಥ. ಅವರು  ಹೊರಗೆ  ಬರುವವರೆಗೂ  ನಾನು  ಕಾಯಬೇಕು. ಎಷ್ಟು  ಹೊತ್ತಿಗೆ  ಬರುತ್ತಾರೋ  ಯಾರಿಗೆ ಗೊತ್ತು?  ಒಂದು  ವೇಳೆ  ಕೆಲಸದ  ಗುಂಗಿನಲ್ಲಿ  ಬರದೇ  ಅಲ್ಲೇ ಉಳಿದುಬಿಟ್ಟರೆ  ಏನು ಗತಿ?  ನನ್ನ  ಬಾಡಿಗೆಮನೆ  ಇರೋದು  ಬನ್ನೇರುಘಟ್ಟ ರೋಡಿನ  ತುದಿಯಲ್ಲಿ. […]

ಸಾಮಾಜಿಕ ಮಾಧ್ಯಮಗಳು ಮತ್ತು ಸಮಾಜ:ಪ್ರಶಸ್ತಿ ಅಂಕಣ

ಈ ಫೇಸ್ಬುಕ್ಕು, ಟ್ವಿಟ್ಟರ್ರು, ಆರ್ಕುಟ್ಗಳಂತಹ ಸಾಮಾಜಿಕ ಮಾಧ್ಯಮಗಳು ಅಂದರೆ ಬರೀ ಟೈಂಪಾಸಿಗೆ ಅನ್ನೋ ಮನೋಭಾವ ಹಲವರಲ್ಲಿದೆ. ಏನಪ್ಪಾ ಇಪ್ಪತ್ನಾಲ್ಕು ಘಂಟೆ ಫೇಸ್ಬುಕ್ಕಲ್ಲಿ ಇರ್ತೀಯ ಅನ್ನೋದು ಮುಂಚೆ  "ಇಡೀ ದಿನ ಊರೂರು ಅಲಿತಿರ್ತಾನೆ, ಅಬ್ಬೇಪಾರಿ .. "ಅಂತ ಬಯ್ತಿದ್ದ ಶೈಲಿಯ ಬಯ್ಗುಳವಾಗಿಬಿಟ್ಟಿದೆ. ಒಟ್ನಲ್ಲಿ ಸಾಮಾಜಿಕ ಮಾಧ್ಯಮಗಳನ್ನು ಉಪಯೋಗಿಸ್ತಾ ಇರೋರು ಅಂದ್ರೆ ಬರೀ ಕಾಲಹರಣ ಮಾಡೋರು, ಬೇರೆ ಯಾವ್ದೂ ಕೆಲಸ ಇಲ್ದೇ ಇದ್ದೋರು ಅನ್ನೋ ಭಾವ. ಅವು ತಕ್ಕಮಟ್ಟಿಗೆ ನಿಜವಾದ್ರೂ ಅದೇ ನಿಜವಲ್ಲ. ಈ ಸಾಮಾಜಿಕ ಮಾಧ್ಯಮಗಳಿಂದ ಸಖತ್ ಲಾಭಗಳಾಗೋದೂ […]

ಕೆಂಗುಲಾಬಿ (ಭಾಗ 7): ಹನುಮಂತ ಹಾಲಿಗೇರಿ

ಹಾವೇರಿಯ ಸಂವರ್ಧನ ಎನ್‍ಜಿಓದಲ್ಲಿ ನನಗೆ ತರಬೇತಿಯಾದ ಮೇಲೆ ಹಾವೇರಿ ಮೂಲೆಯೊಂದರಲ್ಲಿರುವ ಹಳ್ಳಿಯ ಸ್ವಸಹಾಯ ಸಂಘಗಳ ಸಮುದಾಯ ಅಧಿಕಾರಿ ಎಂದು ಕಳುಹಿಸಿಕೊಟ್ಟಿದ್ದರು. ನಾನು ಹಲಗೇರಿಗೆ ಬಂದಿಳಿದಾಗ ನನ್ನನ್ನು ಆ ಸುಡು ಬಿಸಿಲಿನಲ್ಲಿ ಎದುರುಗೊಂಡವನು ತಿಪ್ಪೇಶಿ. ಅವನು ಅಲ್ಲಿ ನನಗೆ ಆ ಹಳ್ಳಿಯ ಮಾಹಿತಿ ನೀಡುವ ಫೀಲ್ಡ್ ಗೈಡ್ ಆಗಿ ಕೆಲಸ ಮಾಡತಿದ್ದ. ನಮ್ಮ ಸಂಸ್ಥೆ ಕೆಲಸ ಮಾಡುವ ಪ್ರತಿ ಹಳ್ಳಿಯಿಂದಲೂ ತಿಪ್ಪೇಶಿಯಂತಹ ಒಬ್ಬರನ್ನು ಸಂಘಗಳ ಅಧಿಕಾರಿ ಎಂದು ನೇಮಿಸಿಕೊಂಡಿರುತ್ತಿದ್ದರು. ತಿಪ್ಪೇಶಿ ಹೊರಲಾರದಂತಹ ನನ್ನ ಎರಡು ಬ್ಯಾಗುಗಳನ್ನು ಹೆಗಲಿಗೆ ನೇತು […]

ಕೊಠಡಿ ಪುರಾಣ: ಶ್ರೀವಲ್ಲಭ

ಮ್ಯಾಲಿನ ಈ ಶೀರ್ಷಿಕೆಯನ್ನು ನೋಡಿದಾಗ ನಿಮಗ ಗೊತ್ತಾಗಿರಬೇಕು ನಾ ಏನು ಹೇಳಲಿಕ್ಕೆ ಹೊ೦ಟೇನಿ ಅ೦ತ. ನೀವು ಅನ್ಕೊ೦ಡ ಹ೦ಗ ನಾನು ನನ್ನ ಮಾಸ್ತರಕಿ ವೇಳ್ಯಾದಾಗ ಕ್ಲಾಸ (ಕೊಠಡಿ) ಒಳಗ ಏನೇನು ಮಜಾ ಮಜಾ ಸುದ್ದಿ ಇರತಾವು ಅನ್ನೋದನ್ನ ಹೇಳತೆನಿ ಕೇಳ್ರಿ… ಈ ಹುಡುಗರು (ಹುಡುಗಿಯರು ಕೂಡ) ಒ೦ದು ಭಾಳ ವಿಚಿತ್ರ ಜನಾ೦ಗ ರೀ. ಮು೦ಜಾನೆ ಎದ್ದು ಠಾಕು ಠೀಕು ಅ೦ತ ತಯ್ಯಾರ ಆಗಿ ಅಗದಿ ಸೀರಿಯಸ್ ಮೂಡ್ ನ್ಯಾಗ ಕಾಲೇಜಿಗೆ ಬರತಾರ, ಇವತ್ತ ನಾ ಕ್ಲಾಸಿಗೆ ಚಕ್ಕರ ಹಾಕ೦ಗಿಲ್ಲಾ […]

ಬೀಗರನ ಕಳಸೊ ಸಂಭ್ರಮ: ಸುಮನ್ ದೇಸಾಯಿ ಬರೆವ ನಗೆ ಅಂಕಣ

ನನ್ನ ಜೊಡಿ ಕೆಲಸ ಮಾಡೊ ಗೆಳತಿ ಸುಧಾ ಅವರ ಊರಿಗೆ ಜಾತ್ರಿಗೆ ಅಂತ ಅವರ ಹಳ್ಳಿಗೆ ಹೋಗಿದ್ದೆ. ಸಣ್ಣದಿದ್ರು ಸಮೄಧ್ಧಿಯಿಂದ ಕೂಡಿದ ಊರು. ನನ್ನ ಗೆಳತಿಯವರದು ಅವಿಭಕ್ತ ಕುಟುಂಬ. ದೊಡ್ಡ ಮನಿ, ಮನಿ ತುಂಬ ಮಂದಿ. ಹೇಳಿಕೇಳಿ ಹಳ್ಳಿ ಮಂದಿ. ಎಲ್ಲಾರು ಹೆಜ್ಜಿ ಹೆಜ್ಜಿಗು ಉಪಚಾರ ಮಾಡೊವರನ. ಅವತ್ತ ಎಲ್ಲಾರು ಮಾತಾಡಕೊತ ಕೂತಾಗ ಹಿಂಗಾ ಆತು. ಸಂಜಿಮುಂದ ಐದ ಗಂಟೆ ಆಗಿತ್ತು. ಚಹಾದ ಟೈಮ್ ಆಗಿತ್ತು. ಅಷ್ಟರಾಗ ಒಳಗಿಂದ ಒಂದ ಐದು ವರ್ಷದ ಸುಧಾನ ತಮ್ಮನ ಮಗಳು […]

ನಾಟಕಕಾರರಾಗಿ ಕುವೆಂಪು (ಭಾಗ-16) : ಹಿಪ್ಪರಗಿ ಸಿದ್ದರಾಮ್

ಆತ್ಮೀಯ ಓದುಗಪ್ರಭುಗಳೇ, ಷೇಕ್ಸ್ ಪಿಯರ್‍‍ನ ‘ಹ್ಯಾಮ್ಲೆಟ್’ ನಾಟಕದ ಆತ್ಮವನ್ನು ಇಟ್ಟುಕೊಂಡು ಶರೀರವಾಗಿಯೆಂಬಂತೆ ಕನ್ನಡದ ಪರಿಸರಕ್ಕೆ ಸ್ವತಂತ್ರ ಕಥಾನಕವೆನಿಸುವಂತೆ ರೂಪಾಂತರಿಸಿದ ‘ರಕ್ತಾಕ್ಷಿ’ ರಂಗಕೃತಿಯ ಸಂದರ್ಭದಲ್ಲಿ ಮೂಲಕೃತಿಯ ತಾತ್ವಿಕತೆಗೆ ಭಿನ್ನವಾದ ದೃಷ್ಟಿಕೋನವನ್ನು ಮಹಾಕವಿಗಳು ಪ್ರತಿಪಾದಿಸುವ ಮೂಲಕ ಸಾಂಸ್ಕೃತಿಕವಾಗಿ ಒಂದು ಮಹತ್ವದ ಬದಲಾವಣೆಯೆಂಬಂತೆ, ಅದರಲ್ಲೂ ಮುಖ್ಯವಾಗಿ ಶಪಿಸಲಾರದ, ಕೇವಲ ಆಶೀರ್ವದಿಸಬಲ್ಲ ಮನಸ್ಸು ‘ರಕ್ತಾಕ್ಷಿ’ಯಲ್ಲಿ ಪ್ರಧಾನವಾಗಿ ಕಂಡು ಬರುತ್ತದೆ. ಇಂತಹ ಮಹಾನ್ ರಂಗಕೃತಿಯನ್ನು ಕನ್ನಡ ನಾಡಿನ ಇತಿಹಾಸದ ನೈಜ ಘಟನೆಯೊಂದಕ್ಕೆ ತಳುಕು ಹಾಕಿ, ಮೈಸೂರು ಪ್ರಾಂತದ ಬಿದನೂರಿನ ರಾಜಮನೆತಕ್ಕೆ ಸಂಬಂಧ ಕಲ್ಪಿಸಿಕೊಂಡು ರೂಪಾಂತರಿಸಿರುವುದನ್ನು […]

ವ್ಯಕ್ತಿತ್ವಗಳ ಸಂಘರ್ಷದ “ಕ್ರಿಮ್ಸನ್ ಟೈಡ್”:ವಾಸುಕಿ ರಾಘವನ್ ಅಂಕಣ

ಆಕ್ಷನ್ ಚಿತ್ರ ಅಂದ ಮಾತ್ರಕ್ಕೆ ‘ಪಾತ್ರ’ಗಳ ಕಡೆ ನಿರ್ಲಕ್ಷ್ಯ ಹರಿಸುವಂತಿಲ್ಲ. ಹೊಡೆದಾಟದ ಥ್ರಿಲ್ ಕೊಡುತ್ತಲೇ ಕಥೆಯಲ್ಲಿನ ಹಲವು ಪದರಗಳನ್ನು ತೋರಿಸುತ್ತಾ, ಪಾತ್ರಗಳಿಗೆ ತಮ್ಮದೇ ಆದ ಮೆರಗುಗಳನ್ನು ಕೊಡುತ್ತಾ ಹೋದರೆ ಚಿತ್ರಕ್ಕೆ ಹಲವು ಆಯಾಮಗಳು ಸಿಗುತ್ತವೆ. ಆಗ ಮಾತ್ರ ಒಂದು ಆಕ್ಷನ್ ಚಿತ್ರ ‘ಡಿಶೂಂ ಡಿಶೂಂ’ ಚಿತ್ರವನ್ನು ಮೀರಿ ಬೆಳೆಯುತ್ತದೆ. 1995ರ ಟೋನಿ ಸ್ಕಾಟ್ ನಿರ್ದೇಶನದ “ಕ್ರಿಮ್ಸನ್ ಟೈಡ್” ನಮ್ಮನ್ನು ಚಿಂತನೆಗೆ ಹಚ್ಚುವ ಅಂತಹ ಒಂದು ಆಕ್ಷನ್ ಚಿತ್ರ. ಇಡೀ ಚಿತ್ರ ನಡೆಯುವುದು ಒಂದು ಸಬ್ ಮರೀನ್ ಒಳಗೆ. […]

ಶಾಪ (ಕೊನೆಯ ಭಾಗ):ಪಾರ್ಥಸಾರಥಿ ಎನ್.

ನೋಡಿದರೆ ಖಾಲಿ ಜಾಗ, ಎದುರು ರಾಮಕೃಷ್ಣಯ್ಯ ಹಾಗು  ಅವರ ಪತ್ನಿ ಜಾನಕಿ ನಿಂತಿದ್ದರು, ಅವರ ಎರಡು ವರ್ಷದ ಮಗು  ಅಲ್ಲೆಲ್ಲ ಓಡಿಯಾಡುತ್ತ ಆಡಿಕೊಳ್ಳುತ್ತಿತ್ತು. “ನೋಡು  ಈ ಸೈಟ್ ನಮ್ಮದಾಗುವ ಹೊತ್ತಿಗೆ ಸಾಕು ಸಾಕಾಯಿತು, ಎಂತ ಕಾಲ ಬಂದಿತು, ನನ್ನಿಂದ ಅಡ್ವಾನ್ಸ್ ಹಣವನ್ನು ಪಡೆದ   ಅ ದಲ್ಲಾಳಿ ನಂತರ ಸೈಟ್ ಬೇರೆ ಯಾರಿಗೊ ಆಗಿದೆ ಅನ್ನುತ್ತಾನಲ್ಲ, ಹಾಗೆಂದು ಇಲ್ಲಿ ಸೈಟ್ಗಳಿಗೆ ಅಂತಾ ಬೆಲೆ ಏನು ಇಲ್ಲ, ನಮ್ಮ ಹತ್ತಿರ ನಾಟಕವಾಡಿ ಸೈಟಿನ ಬೆಲೆ ಏರಿಸಲು ಪ್ರಯತ್ನಿಸಿದ, ಹೇಗೊ […]