Facebook

Archive for 2013

ಕನಸುಗಾರನ ಒಂದು ಸುಂದರ ಕನಸು: ನಟರಾಜು ಎಸ್. ಎಂ.

ಜನವರಿ ತಿಂಗಳ ಒಂದು ದಿನ ನಾಟಕವೊಂದನ್ನು ನೋಡಲು ಬರುವಂತೆ ಹುಡುಗನೊಬ್ಬ ಆಮಂತ್ರಣ ನೀಡಿದ್ದ. ಆ ದಿನ ಸಂಜೆ ಆರು ಗಂಟೆಗೆ ಜಲ್ಪಾಯ್ಗುರಿಯ ಆರ್ಟ್ ಗ್ಯಾಲರಿ ತಲುಪಿದಾಗ ಆ ಕಲಾಮಂದಿರವನ್ನು ನೋಡಿ ನಾನು ಅವಕ್ಕಾಗಿದ್ದೆ. ಆ ಪುಟ್ಟ ಊರಿನಲ್ಲಿ ಅಷ್ಟೊಂದು ದೊಡ್ಡ ಸುಸಜ್ಜಿತ ಕಲಾಮಂದಿರವಿರುವುದ ಕಂಡು ಖುಷಿ ಸಹ ಆಗಿತ್ತು. ಸುಮಾರು ಎಂಟುನೂರು ಜನ ಕೂರುವಷ್ಟು ಜಾಗವಿರುವ ಇಡೀ ಕಲಾಮಂದಿರ ಜನರಿಂದ ಕಿಕ್ಕಿರಿದು ತುಂಬಿತ್ತು. ಎಷ್ಟೋ ವರ್ಷಗಳ ನಂತರ ನಾಟಕವೊಂದನ್ನು ನೋಡಲು ಹೋಗಿದ್ದೆ. ನಾಟಕ ನೋಡುತ್ತಿದ್ದೇನೆ ಎಂಬ ಖುಷಿಯ […]

ಕೆಂಗುಲಾಬಿ (ಭಾಗ 2): ಹನುಮಂತ ಹಾಲಿಗೇರಿ

ನನ್ನ ಈ ನೌಕರೀ ಬಗ್ಗೆ ಹೇಳೋ ಮುನ್ನ ನನ್ನನ್ನು ಬಾಳಷ್ಟು ಕಾಡಿಸಿ ಪೀಡಿಸಿ ಬದಲಾವಣೆಗೆ ಕಾರಣಾದ ನನ್ನ ಕುಟುಂಬದ ಹಿನ್ನೆಲೆಯ ಬಗ್ಗೆ ಸ್ವಲ್ಪ ಮೊದಲಾ ಹೇಳಿದರೆ ಒಳ್ಳೇದು. ಬಾಗಲಕೋಟಿಯ ಭೀಮನಕೊಪ್ಪ ಅನ್ನೋ ಕುಗ್ರಾಮದ ಮ್ಯಾಲ ಯಾರಾದರೂ ವಿಮಾನದಾಗ ಬಂದ್ರ, ಆ ಊರಿನ ಅಂಚಿನಲ್ಲಿ ನನ್ನ ದಲಿತ ಕೇರಿಯ ಗುಡಿಸಲಗೊಳು ಒತ್ತೊತ್ತಾಗಿ ಚಲ್ಲಿಕೊಂಡಿರುವುದು ಕಾಣಿಸತೈತಿ. ಆ ಗುಡಿಸಲುಗಳ ನಡುವು ಒಂದು ಮಂಗಳೂರು ಹೆಂಚಿನ ಅರಮನೆಯಂಥ ಮನಿ ಎದ್ದು ಕಾಣುತೈತಿ. ಅದು ನನ್ನವ್ವ ತಾರವ್ವ ಜೋಗತಿಯ ಮನಿ. ಅಂದ್ರ ಅದು […]

ಮೂಕ ಕರು: ಸಂತು

  "ಲೋ ಮಗಾ, ಬಿಸಿಲು ನೆತ್ತಿಗೇರ್ತಾ ಅದೆ, ಕರಾನ ಜಮೀನ್ ತಾವ ಹೊಡ್ಕಂಡ್ ಹೋಗಿ ಮರಕ್ ಕಟ್ಟಾಕಿ ಮೇಯಕ್ ಬುಡು. ಹಾಂ… ಹೋಗಕ್ ಉಂಚೆ ಮನೆತಾವ್ ಒಸಿ ನೀರು ಕುಡುಸ್ಬುಡು. ಬರದ್ ಹೊತ್ತಾಗ್ಬೋದು. ಇಸ್ಕೂಲಿಂದ ಬಂದ್ ಮ್ಯಾಕೆ ಮತ್ತೆ ಹೊಡ್ಕಂಡ್ ಬಂದ್ ಕೊಟ್ಟಿಗೇಲಿ ಕಟ್ಟಾಕ್ ಬುಡು. ಮರಿಬ್ಯಾಡ" ಪೇಟೆಗೆ ಹೊರಟಿದ್ದ ನಮ್ಮಪ್ಪ ಕೂಗಿ ಹೇಳಿದರು. ಒಲ್ಲದ ಮನಸ್ಸಿಂದ ನಾ "ಹೂಂ…..ಸರಿ" ಅಂದಿದ್ದು ಅಪ್ಪಂಗೆ ಕೇಳಿಸಲೇ ಇಲ್ಲ.  ನಮ್ಮದೊಂದು ಚಿಕ್ಕ ಹಳ್ಳಿ. ನಮ್ಮ ಜಮೀನಿದ್ದದ್ದು ಹಳ್ಳಿಯಿಂದ ಹೊರಗೆ. ಮೂರು […]

ಮೂವರ ಕವಿತೆಗಳು: ರಾಶೇಕ್ರ, ಮಂಜುಳಾ ಬಬಲಾದಿ, ಲತೀಶ್.

            ಬರೆಯಲೇ ಬೇಕೆಂದು ಕುಳಿತೆ 'ನಾ'? ಬರೆಯಲೇ ಬೇಕೆಂದು ಕುಳಿತೆ 'ನಾ' ಇರಲಾಗಲಿಲ್ಲ ನನ್ನಿಂದ ಬರೆಯದೆ ಇನ್ನೆಷ್ಟು ಕಾಲ, ಕಾಲ ಕೆಳಗೆ ಹೊಸಕಿಸಿಕೊಳ್ಳುವುದು, ಇಲ್ಲವೇ ಇದಕೆ ಇನ್ನೊಂದು ಪರ್ಯಾಯ ಪದ ಹುಡುಕಿ ಬರೆಯುವುದು,  ತುಳಿತಕ್ಕೊಳಗಾದೆ, ತುಳಿದವರ ಮೀಸೆಗೆ ಅಂಟದಾದೆ, ಹಿಡಿದು ಜಗ್ಗಾಡಿ ಆರೋಹಣಕಪವಾದವಾದೆ, ತುಳಿಸಿಕೊಂಡ ಮೇಲೂ ಎದ್ದು ನಿಲ್ಲದಾದೆ, ಹಿಂದೆ ಬಿದ್ದ ಇನ್ನೊಂದು ಕೆರ ಹುಡುಕಿ ನಿಮ್ಮೆದುರು ಗೌಣವಾದೆ, ಹೀಗೇ ಹಿಂದೆ ಬಿದ್ದೆ ಎದ್ದು ಎಡವಿ ಬಿದ್ದೆ, ಹೆಣ್ಮನದ ಪ್ರೀತಿ […]

ಪಿನ್ನಿ-ಪಲ್ಲು ಪ್ರಳಯ ಪ್ರಸಂಗ: ಸುಮನ್ ದೇಸಾಯಿ

      ತಿಂಗಳದ ಎರಡನೆ ಶನಿವಾರ್ ಆಫೀಸಿಗೆ ಸೂಟಿ ಇರತದ. ದಿನಾ ಒಂದಕ್ಕು ಗಂಡಾ ಮಕ್ಕಳಿಗೆ ಮಾಡಿ ಹಾಕಿ,ಆಫೀಸು ಮನಿ ಅಂತ ಬ್ಯಾಸತ್ತ ಶುಕ್ರವಾರ ದಿನಾ ಮುಂಝಾನೆ " ನಾಳೆ, ನಾಡದ ಸೂಟಿ ಅದ, ನಾ ಇವತ್ತ ನಮ್ಮ ಅಮ್ಮನ ಮನಿಗೆ ಹೋಗಿಬರತೇನಿ. ಒಮ್ಮೆಲೆ ಸೋಮವಾರ ಸಂಜೀಕೆ ಆಫೀಸ್ ಮುಗಿಸಿಕೊಂಡ ಬರತೇನಿ" ಅಂತ ಒದರಿದೆ. ಅದಕ್ಕ ಗಂಡಾ ಮಕ್ಕಳು ಕೂಡೆ ಒಂದ ಧ್ವನಿಲೆ "ನಾವು ಬರತೇವಿ  ಅಂತ ಅಂದ್ರು. ಅದಕ್ಕ ನಾ ಒಂದ ನಮ್ಮಮ್ಮನ ಮನಿಗೆ ಕಾಲರ ಇಡ್ರಿ […]

ವಾಸ್ಯ ತಾತ ಈಗ: ಡಾ. ಗವಿ ಸ್ವಾಮಿ

ನೆಂಟರೊಬ್ಬರನ್ನು  ನೋಡಲು ಮೊನ್ನೆ ಆಸ್ಪತ್ರೆಗೆ ಹೋಗಿದ್ದೆ . ಆಸ್ಪತ್ರೆಯ ಗೇಟಿನ ಬಳಿ ಬೈಕು ನಿಲ್ಲಿಸುತ್ತಿದ್ದಾಗ ಇಬ್ಬರು ಹೊರಬರುತ್ತಿದ್ದರು. ಒಬ್ಬ ಹೆಂಗಸು ಮಗುವನ್ನು ಕಂಕುಳಿಗೆ ಹಾಕಿಕೊಂಡಿದ್ದಳು. ಪಕ್ಕದಲ್ಲಿ ಬರುತ್ತಿದ್ದಾತ ಮಗುವಿನ ಕೆನ್ನೆ ಚಿವುಟುತ್ತಾ ಅಂದ, '' ಈ ಗಣಾಂದಾರನ್ಗ ಮುನ್ನೂರ್ರುಪಾಯ್ ಆಯ್ತು ಇವತ್ತು '' ಆ ಹೆಂಗಸು ಹುಸಿಮುನಿಸಿನಿಂದ   ''ಚುರ್ಕ್ ಅಂದ್ಬುಡ್ತನ ನಿನ್ಗ ..  ನೋಡುಕಂದ ತಾತ ವೊಟ್ಟುರ್ಕತನ'' ಎಂದು ಕಂಕುಳಲ್ಲಿದ್ದ ಮಗುವನ್ನು ನೋಡಿ ಹೇಳಿದಳು. ಮಗು ಪಿಳಿಪಿಳಿ ಕಣ್ಣು ಮಿಟುಕಿಸುತ್ತಾ ಅವ್ವನನ್ನು ನೋಡಿತು. ''ಸುಮ್ನಂದಿಕವ್ವೈ ತಮಾಸ್ಗ .. […]

ಪಯಣ : ಪ್ರಶಸ್ತಿ ಅಂಕಣ

ರೈಲು ಸುರಂಗದಲ್ಲಿ ಸಾಗ್ತಾ ಇತ್ತು. ಕತ್ತಲೆಯ ತೀರ್ವತೆ ತಿಳಿಯಲೆಂದೇ ಎಲ್ಲಾ ಲೈಟುಗಳನ್ನೂ ಆಫ್ ಮಾಡಿದ್ದರು. ರೈಲು ಸುರಂಗದಲ್ಲಿ ಸಾಗ್ತಿರೋ ಸದ್ದು ಬಿಟ್ಟರೆ ಬೇರೇನೂ ಇಲ್ಲ. ಎಷ್ಟುದ್ದದ ಸುರಂಗವೋ ತಿಳಿಯದು. ಜೀವನವೇ ಮರಳದ ಕತ್ತಲೆಯ ಕೂಪಕ್ಕೆ ಧುಮುಕಿದಂತೆ ಎಲ್ಲೆಡೆ ಗಾಢಾಂಧಕಾರ. ಕಣ್ಣು ತೆರೆದರೂ , ಮುಚ್ಚಿದರೂ ಒಂದೇ ಎನಿಸುವಂತಹ ಕತ್ತಲು. ಕೆಲ ಕ್ಷಣಗಳ ಮೌನದ ನಂತರ ಎಲ್ಲಾ ಕಿರಿಚತೊಡಗಿದರು. ಕತ್ತಲೆಯನ್ನು ಎಂದೂ ಕಾಣದಂತೆ ಕಂಡ ಖುಷಿಗೋ ಅಥವಾ ಪಕ್ಕದವರು ಕಿರಿಚುತ್ತಿದ್ದಾರೆಂದೋ ತಿಳಿಯದು. ಎಲ್ಲೆಡೆ ಹೋ  ಎಂಬ ಕೂಗು. ಈ […]

ನಾಟಕಕಾರರಾಗಿ ಕುವೆಂಪು (ಭಾಗ-11): ಹಿಪ್ಪರಗಿ ಸಿದ್ದರಾಮ್

ಮಹಾಕವಿಗಳ ‘ಬಿರುಗಾಳಿ’ ರಂಗಕೃತಿಯು ಷೇಕ್ಸ್‍ಪಿಯರ್‍ನ ‘ಟೆಂಪೆಸ್ಟ್’ ನಾಟಕದ ಅನುವಾದವಾದರೂ ಇಂಗ್ಲಿಷ ಬಾರದ ಜನರಿಗೆ ಸ್ವತಂತ್ರ ಕೃತಿಯಂತೆ ಕಾಣುತ್ತದೆ. ಮಾನವನ ಮನೋರಂಗದಲ್ಲಿ ಯಾವಾಗಲೂ ದುಷ್ಟ ಶಕ್ತಿ ಮತ್ತು ಶಿಷ್ಟಶಕ್ತಿಗಳ ಹೋರಾಟ ನಿರಂತರ ನಡೆಯುತ್ತಲೇ ಇರುತ್ತದೆ. ಒಂದು ಕಡೆ ಲೋಭ, ಮೋಹ, ಛಲ, ವಂಚನೆ, ಅಹಂಕಾರ ಮೊದಲಾದ ಪಾಶವೀ ಶಕ್ತಿಗಳು, ಮತ್ತೊಂದು ಕಡೆ ತ್ಯಾಗ, ಪ್ರೇಮ, ಕ್ಷಮೆ, ಸತ್ಯ ಶಾಂತಿ ಮೊದಲಾದ ದೈವೀಶಕ್ತಿಗಳು. ಇವುಗಳ ಹೋರಾಟವೇ ಬಾಹ್ಯಪ್ರಪಂಚದಲ್ಲಿ ಯುದ್ಧ, ಕೊಲೆ, ರಕ್ತಪಾತ ಮೊದಲಾದ ಅನಾಹುತಗಳ ರೂಪದಲ್ಲಿ ಪ್ರಕಟಗೊಳ್ಳುತ್ತವೆ. ಈ ಹೋರಾಟದಲ್ಲಿ […]

ಹೆಂಡತಿಯೊಬ್ಬಳು ಮನೆಯೊಳಗಿದ್ದರೆ: ಉಪೇಂದ್ರ ಪ್ರಭು

’ಹೆಂಡ ಹೆಂಡ್ತಿ ಕನ್ನಡ ಪದಗೋಳ್ ಅಂದ್ರೆ ರತ್ನಂಗ್ ಪ್ರಾಣ" ಅನ್ನೋ ರಾಜರತ್ನಂ ಅವರ ಸಾಲು ಭಾಗಶಃ ನನಗೂ ಅನ್ವಯಿಸುತ್ತದೆ. ಯಾಕೆ ಭಾಗಶಃ ಅಂತೀರಾ? ಆ ಸಾಲಿನ ’ಹೆಂಡ್ತಿ’ ಅನ್ನೋ ಪದ ರತ್ನಂ ಅವರಿಗೆ ಪ್ರಾಣ ಆಗಿರಬಹುದು ಆದ್ರೆ ನನಗಲ್ಲ. ಇರಲಿ ಬಿಡಿ. ಅವಕಾಶ ಸಿಕ್ಕಾಗೆಲ್ಲ (ಹೆಂಡತಿಯ ಗೈರು ಹಾಜರಿಯಲ್ಲಿ) ವಿದೇಶಿ ಹೆಂಡದ ಜತೆ ಕನ್ನಡ ಪದಗಳು ನನ್ನ ಸಂಗಾತಿಗಳಾಗುತ್ತವೆ. ಇಂದೂ ಆಗಿದ್ದು ಅದೇ. ಹೆಂಡತಿ ಮುಖ ಉಬ್ಬಿಸಿಕೊಂಡು ತವರುಮನೆ ಸೇರಿದ್ದ ಕಾರಣ ವ್ಹಿಸ್ಕಿ ಜತೆ ಮೈಸೂರು ಅನಂತಸ್ವಾಮಿಯವರ […]

ಪಂಜು ಚುಟುಕ ಸ್ಪರ್ಧೆ: ರಘು ನಿಡುವಳ್ಳಿ ಅವರ ಚುಟುಕಗಳು

1 ಸಮಾನತೆ ಭೋರ್ಗರೆವ ಶರಧಿ ಅದರ ಸೆರಗಲ್ಲೆ  ಮಹಾಮೌನಿ 'ಹಿನ್ನೀರು' ದಿಗ್ಗನೆ ಬೆಳಗುವ ದೀಪ  ಅದರ ಬದಿಯಲ್ಲೆ ದಿವ್ಯಧ್ಯಾನಿ 'ಕತ್ತಲು ಸೃಷ್ಟಿಗಿಲ್ಲ  ಅದರ ದೃಷ್ಟಿಗಿಲ್ಲ  ಭೇಧ ಬಿನ್ನ ಪಕ್ಷಪಾತ ಹುಟ್ಟು ಸಾವು ನೋವು ನಲಿವು ಎಲ್ಲ ನಮ್ಮ ನಿಮ್ಮ ವರಾತ!   2  ಚೋದ್ಯ ಕತ್ತಲೆಗೆ ಗೊತ್ತಿರುವ.. ಗುಟ್ಟು.. ಬೆಳಕಿನ ಪಾಲಿಗೆ ಅಪರಿಚಿತ  ಹಣತೆ ಕಂಡಿರೋ ಸತ್ಯ.. ಕತ್ತಲಪಾಲಿಗೆ ಅದೃಶ್ಯ .. ಇದು ಸೃಷ್ಟಿಯ..ಚೋದ್ಯ   3 ಅಪೂರ್ಣ ಒರಟು ವಜ್ರಕ್ಕೆ..ಹೊಳಪು ಕೊಟ್ಟ.. ಸುವಾಸನೆ ಕೊಡಲಿಲ್ಲ.. ಮೃದುಲ..ಮಲ್ಲಿಗೆಯಲಿ.. […]