ಅಲ್ಲೊಂದು ಪುಟ್ಟ ಸಂಸಾರ, ತಂದೆ-ತಾಯಿ, ಮಗಳು-ಮಗ ಈ ಪುಟ್ಟ ಸಂಸಾರದ ಸಂತಸಕ್ಕೆ ಕೊರತೆಯಿರಲಿಲ್ಲ, ಜೀವನದ ಹಾಯಿ ದೋಣಿ ಅಲೆ, ತೆರೆಗÀಳ ಸೆಳೆತವಿಲ್ಲದೆ ಬದುಕಿನ ಪಯಣ ಸಾಗಿತ್ತು. ತಂದೆ ವೈದ್ಯ ತಾಯಿ-ಗೃಹಿಣಿ, ಮಕ್ಕಳು ಬಲು ಬುದ್ದಿವಂತರು, ಚೂಟಿಯಾಗಿದ್ದರು ಬದುಕಿನಲ್ಲಿ ಮುಂದೊಂದು ದಿನ ಪ್ರಜ್ವಲಿಸುವ ನಕ್ಷತ್ರವಾಗುವ ಸುಳಿವು ಈಗಲೇ ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವಂತೆ ರೂಪಗೊಳ್ಳುತ್ತಿದ್ದರು, ಮಗಳ ಹೆಸರು ಶ್ವೇತಾ, ಹೆತ್ತ ಜೀವಗಳಿಗೆ ಜೀವಜಲ, ಗುರುಗಳಿಗೆ ಸದಾ ಮೆಚ್ಚಿನ ಶಿಷ್ಯೆ, ಚತುರೆ, ಬದುಕಿನಲ್ಲಿ ಗುರಿಯಡೆಗಿನ ತನ್ನ ರಾಮಬಾಣ ಹೂಡುವಲ್ಲಿ ಹಗಲಿರುಳೆಲ್ಲೆನ್ನದೆ ಶ್ರಮಿಸುತ್ತಿದ್ದ ಹುಡಗಿ, ಅವಳನ್ನು ಕಂಡು ಸಮಯವೇ ಸೋತು ಶರಣಾಗಿತ್ತು, ಗುರಿಯಡೆಗಿನ ಅವಳ ದಾರಿ ನಿಚ್ಛಳವಾಗಿತ್ತು, ನೋಡು ನೋಡುತ್ತಲೆ ಮೇಟ್ರಿಕ್ಯುಲೇಷನ್ ಪರಿಕ್ಷೆಯಲ್ಲಿ ಶೇ 92% ಅಂಕ ಗಳಿಸಿದ್ದ ಅವಳು ಶಾಲೆಗೆ ಮೊದಲಿಗಳಾಗಿದ್ದಳು, ಬದುಕಿನಲ್ಲಿ ತನ್ನ ಮೊದಲ ಹೆಜ್ಜೆಯೇ ಗಟ್ಟಿಯಾಗಿಟ್ಟಿದ್ದಳು. ಗುರುಗಳ ಆನಂದಕ್ಕೆ ಕೊನೆಯಿರಲಿಲ್ಲ, ಹೆತ್ತ ಜೀವಗಳ ಸಂತಸಕ್ಕೆ ಪಾರವಿರಲಿಲ್ಲ. ಮಗಳ ಸಾಧನೆಯನ್ನು ಕಂಡು ಹೊಗಳುವ ಊರಿನ ಜನರು ಮುಗಿದಿರಲಿಲ್ಲ, ಶ್ವೇತಾ ತನ್ನ ಮುಂದಿನ ಕನಸಿನ ಬಗ್ಗೆ ಲೆಕ್ಕಹಾಕತೊಡಗಿದ್ದಳು, ಕನಸಿನ ಅರಮನೆಗೆ ಹೇಗೆ ಪೈನಲ್ ಟಚ್ ಕೊಡಲಿ ಎಂಬುದರ ಬಗ್ಗೆ ಊಹಿಸತೊಡಗಿದ್ದಳು,.
ಹೀಗೆ ಸಾಗಿದ್ದ ಅವಳ ಸಂಸಾರದ ದೋಣಿ ದೇವರ ಕಿಬ್ಬೊಟ್ಟೆ ಸಂಕಟವೇನು ಅವರ ಸಂಸಾರದಲ್ಲಿ ಮಹಾ ಒಡಕು ಉಂಟಾಗಿತ್ತು, ಅಪ್ಪ ಬೇರೊಬ್ಬಳೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ, ಅಮ್ಮ ಕತ್ತಲೆಯ ಕೋಣೆಯಲ್ಲಿ ಒಂಟಿಯಾಗಿ ಕಣ್ಣೀರ ಹಾಕುತಿದ್ದ ದೃಶ್ಯ ಮನಕಲುಕುವಂತಿತ್ತು ಶ್ವೇತಾಳ ಬದುಕಿನಲ್ಲಿ ಕಂಡು ಕಾಣದ ದುರಂತವೊಂದು ಬಂದೊದಗಿತ್ತು, ಕಣ್ಣಿರ ಒರೆಸುವ ಕೈಗಳೇ ಕೊಂದು ಹೋದಾಗ ಕಣ್ಣೀರಿಗೆ ಬೆಲೆ ಎಲ್ಲಿದೆ ? ಅಮ್ಮನ ಈ ಪರಿಸ್ಥಿತಿಯ ಕಂಡು ಶ್ವೇತಾ ಜರ್ಜರಿತಳಾದಳು, ಮಾನಸಿಕವಾಗಿ ಕುಂದಿದಳು, ಅಪ್ಪನ ಅನೈತಿಕ ಸಂಬಂಧ ಮದುವೆಯಲ್ಲಿ ಕೊನೆಗೊಂಡಾಗ ಕುಸಿದು ಬಿದ್ದಿದ್ದಳು, ಅಮ್ಮನ ಕಣ್ಣೀರು, ತಮ್ಮನ ಮುಗ್ಧನೋಟ ಅಪ್ಪನ ಮೋಸದಾಟ, ಸೌವತಿ ಮನೆಯಲ್ಲಿ ನಾಲ್ಕು ದಿನ ಕಟ್ಟಿಕೊಂಡ ಹೆಂಡತಿ ಮನೆಯಲ್ಲಿ ಎರಡು ದಿನ ಇರಲಾರಂಬಿಸದ ತಂದೆಯ ನಡೆಯೇ ಅವಳ ಹೃದಯವನ್ನು ಛಿದ್ರಗೊಳಿಸಿತ್ತು ಅಮ್ಮ ಜಿಗಪ್ಸೆಗೊಂಡು ಆತ್ಮಹತ್ಯಗೆ ಪ್ರಯತ್ನಿಸಿದಾಗ ಮೊದಲು ಉಸಿರು ನಿಂತಂತಾಗಿತ್ತು, ಜೀವ ಬರಡು ಭೂಮಿ ಅನಿಸಿದ್ದು ಅವಾಗಲೇ, ಮಾಡಿದ ಪಾಪಕ್ಕೆ ಶಿಕ್ಷೆಯಾಗುತ್ತದೆ ಅಲ್ಲವೇ? ಹಾಗೇಯೇ ಅಂದೊಂದು ದಿನ ಅಪ್ಪ ಸತ್ತೋದ, ಸತ್ತನಷ್ಟೆ ಅಲ್ಲ ಇದ್ದಾಗ ಸಹಿಸಲಾಗದಷ್ಟು ನೋವು ಕೊಟ್ಟಿದ್ದ ಮಹಾನುಭಾವ ಸತ್ತ ನಂತರ ಹನ್ನೇರಡು ಲಕ್ಷ ಸಾಲ ಹೋರಿಸಿ ಮಸಣ ಸೇರಿದ್ದ, ಮೀಸೆ ಚಿಗುರದ ಅವಳ ತಮ್ಮ ಮನೆಯಲ್ಲಿ ಒಪ್ಪೊತ್ತಿಗೆ ಅನ್ನವಿಲ್ಲ, ಮುಂದೆ ಹೇಗೆ ಬದುಕು ಎಂದು ತೋಚದೆ, ಅವಳ ತಮ್ಮ ವಿಷ ಅನ್ನವನ್ನುಂಡು ಸಾವು ಬದುಕಿನ ನಡುವೆ ಹೊರಾಟ ಆರಂಭಿಸಿದ್ದ, ಅತ್ತು ಕಣ್ಣೀರು ಬತ್ತಿದ್ದ ಅವಳ ಕಣ್ಣಿಗೆ ಈಗ ಕೆಲಸವಿರಲಿಲ್ಲ, ತಮ್ಮನ ಆಸ್ಪತ್ರೆಗೆ ಸೇರಿಸಿ ಮದ್ದು ಮಾತ್ರೆ ತಿನ್ನಿಸಿ ಮತ್ತೆ ಎಂದಿನಂತೆ ಮಾಡಿದಳು. “ ಲೋ ತಮ್ಮ ಯಾರು ಅನುಭವಿಸದ ನೋವು ನಾವು ಅನುಭವಿಸಿದ್ದೆವೆ, ಹುಟ್ಟಿ ಸೋತು ಸತ್ತು ಹೋದರೆ ಅದಕ್ಕೆ ಅರ್ಥ ಇರಲ್ಲ, ಬದುಕಿ ಸೋತು ಗೆದ್ದು ಸಾಧಿಸಿ ತೋರಿಸಿದರೆ ಅದೇ ನಿಜವಾದ ಜೀವನ ಕಣೊ” ಎಂಬಾ ಮಾತು ಅವನಲ್ಲಿ ದೀರ್ಘ ಸಂಚಲನವೇ ಉಂಟುಮಾಡಿತ್ತು.
ಅಂದಿನಿಂದ ಅಕ್ಕ-ತಮ್ಮ ಬದುಕಿನೊಂದಿಗೆ ಹೋರಾಟಕ್ಕಿಳಿದರು, ಹೆತ್ತಮ್ಮನ ಪಾದಕ್ಕೆ ಮುತ್ತಿಟ್ಟು ಕೆಲಸಕ್ಕೆ ಶುರುವಿಡುತ್ತಿದ್ದರು, ಅವರು ಅಕ್ಕ-ತಮ್ಮನಷ್ಟೆ ಅಲ್ಲಾ ಎರಡು ಜೀವ ಒಂದು ದೇಹ, ಆತ್ಮೀಯ ಸ್ನೇಹಿತರು, ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡಿದ್ದ ಆ ಜೀವಗಳ ಸಂಬಂಧಕ್ಕೆ ಹೆಸರಿಡುವುದು ಕಷ್ಟವಾಗಿತ್ತು, ತಮ್ಮ ಅನುಕಂಪದ ಆಧಾರದ ಮೇಲೆ ಅಪ್ಪನ ಹುದ್ದೆ ಗಿಟ್ಟಿಸಿದ್ದ, ಕಿತ್ತು ತಿನ್ನುವ ಬಡತನದಲ್ಲಿ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶೇ ಎಪ್ಪತೈದು ಅಂಕ ಪಡೆದಿದ್ದ ಶ್ವೇತಾಳ ಇಚ್ಛಾಶಕ್ತಿಯನ್ನು ಮೆಚ್ಚಲೆಬೇಕು, ಇಂಜಿನಿಯರಿಂಗ್ ಸೇರಬೇಕೆಂಬ ಅವಳ ಕನಸಿಗೆ ಮಹಾ ತಡೆಗೋಡೆಯಾಗಿದ್ದು ಅವಳ ಬಡತನ, ಆ ಕನಸಿಗೆ ಆಗಲೇ ಪೂರ್ಣವಿರಾಮವಿಟ್ಟು, ಡಿ-ಇಡಿ ಸೇರಿದಳು ಕಲಿತಳು, ಓದಿದಳು, ಜಗತ್ತನ್ನೇ ಮರೆತು ಓದಿದರ ಫಲವಾಗಿ ಡಿ-ಇಡಿ ಕಾಲೇಜ್ ಗೆ ಅತ್ತುತ್ಯಮ ಪ್ರಶಿಕ್ಷಣಾರ್ಥಿಯಾಗಿ ಮಿಂಚಿದ ಅವಳ ಮೊಗದಲ್ಲಿ ನಗುವಿತ್ತು, ಆ ನಗುವಿನಿಂದೆ ನಗಲಾರದಷ್ಟು ಅಳುವಿತ್ತು. ಡಿ-ಇಡಿ ಮುಗಿಸಿದ ನಂತರ ಅವಳು ತನ್ನ ಕಾಲಮೇಲೆ ತಾನು ನಿಂತುಕೊಳ್ಳಲು ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಗಿ ಸೇರಿದ್ದಳು, ದುಡಿಯಲು ಶುರುವಿಟ್ಟ ಅವಳಿಗೆ ವಾಸ್ತವ ಪರಿವು ಇರಲಿಲ್ಲಾ ಅಷ್ಟು ಕೆಲಸಕ್ಕೆ ಅರ್ಪಿಸಿಕೊಂಡಿದ್ದಳು. ಅವಳ ಬದುಕಿನಲ್ಲಿ ಮೊದಲ ಸಲ ಪ್ರೀತಿ ಆಂಕುರವಾಗಿತ್ತು, ಇದುವರೆಗೂ ಕನ್ನಡಿ ಮುಂದೆ ತನ್ನ ದೇಹಸಿರಿಯನ್ನು ನೋಡಿಕೊಂಡಿರದ ಅವಳು ಮೊದಲ ಸಲ ನೊಡಿಕೊಂಡಳು, ಮುಸಿ ನಕ್ಕಳು, ಜಗತ್ತಿನಲ್ಲಿ ನನ್ನನ್ನು ಇಷ್ಟಪಡೋ ಜೀವಾ ಇದಿಯಾ ಅಂದಾಗ ಅವಳು ನಾಚಿ ನೀರಾದಳು, ಶ್ವೇತಾ ಮೊದಲ ಸಲ ಹೆಣ್ಣಾಗಿದ್ದಳು ಅಲ್ಲಿಂದ ಅವಳ ಪ್ರೇಮ ಬೆಳೆದು ಹೆಮ್ಮರವಾಯಿತು, ಕಷ್ಟ ಸುಖ ಹಂಚಿಕೊಳ್ಳದ ಜೀವವೊಂದು ಜೊತೆಯಾಯಿತು ಅಷ್ಟೇ ವೇಗವಾಗಿ ಅವಳ ಪ್ರೀತಿ ಸತ್ತಿದ್ದು ಒಂದು ದುರಂತವೇ ಸರಿ, ಶ್ವೇತಾ ಮತ್ತೆ ದುರಂತದ ಕಡಲ ಮಡಿಲು ಸೇರಿ ರೋದಿಸುವ ಶಿಶುವಾಗಿದ್ದಳು, ಜೀವನದಲ್ಲಿ ಸಾಧಿಸಬೇಕೆಂಬ ಅವಳ ಛಲಕ್ಕೆ ಅಂಕುಶವಿಟ್ಟಿದ್ದರು, ಒಬ್ಬ ಧನಿಕನಿಗೆ ಮದುವೆ ಮಾಡಿದ್ದರು, ಗಂಡನ ಮನೆ ಸೇರಿದ ಅವಳಿಗೆ ಮತ್ತೆ ನರಕ ದರ್ಶನ ಆರಂಭವಾಯಿತು, ಅತ್ತೆಯ ಚುಚ್ಚು ಮಾತು, ಗಂಡನ ಬಿರಸು ನುಡಿಗಳು ಶ್ವೇತಾಳಿಗೆ ನುಂಗಲಾರದ ತುತ್ತಾಗಿದ್ದವು.
ಪ್ರತಿದಿನವು ಈ ಚುಚ್ಚು ಮಾತುಗಳಿಂದ ನೋವಾಗುವ ಪರಿ ಅಷ್ಟಿಷ್ಟಲ್ಲ, ಹೆಣ್ಣಾಗಿ ಹುಟ್ಟೋದೇ ತಪ್ಪಾ? ಹೆಣ್ಣು ಪಾಪಿನಾ ? ಎನ್ನುವ ಅವಳ ಒಳಮನಸ್ಸು ಕಣ್ಣಿಗೆ ಕಾಣದೆ ಸತ್ತು ಸ್ವರ್ಗ ಸೇರಿತ್ತು. ಅವಳ ಓದು, ಅವಳ ನಡೆನುಡಿ ಪ್ರತಿಯೊಂದಕ್ಕು ಅವಮಾನಿಸಿ, ಅನುಮಾನಿಸಿ ಅಡ್ಡಗಾಲು ಅಗುತ್ತಿದ್ದ, ಅವಳ ಗಂಡನೇ ಅವಳಿಗೆ ವೈರಿಯಾದ, ಶತ್ರುವಾದ ಬದುಕಿನ ಗುರಿಗೆ ತಡೆಗೊಡೆಯಾಗಲಾರಂಬಿಸದ, ಇದರ ಮಧ್ಯೆ ಅವಳ ತಮ್ಮ ಅವಳ ಆಶಾಕಿರಣ, ಬದುಕಿನ ಬ್ಯಾಕ್ ಬೋನ್, ಸ್ಪೂರ್ತಿ, ಒಲುಮೆಯ ಜೀವವಾಗಿದ್ದ, ಅವಳ ಕಷ್ಟದಲ್ಲಿ, ನೋವಿನಲ್ಲು ತನ್ನ ಪಾಲನ್ನು ತೆಗೆದುಕೊಂಡು ಅವಳ ದುಃಖವನ್ನು ಮರೆಸುವ ಕೆಲಸ ಮಾಡುತ್ತಿದ್ದ, ಹೀಗೆ ಸಾಗಿದ ಅವಳಲ್ಲಿ ಧೃಡ ನಿರ್ದಾರ ಆಛಲವಾಯಿತು. ಮುಕ್ತ ವಿಶ್ವಾವಿಧ್ಯಾನಿಲಯದಿಂದ ಪದವಿ ಪಡೆದಳು; ಗಂಡನ ಕೊಂಕು ಮಾತು, ಅತ್ತೆಯ ಚುಚ್ಚುಮಾತುಗಳಿಗೆ ಕಿವುಡಿಯಾದಳು ಇಡೀ ಎರಡು ವರ್ಷ ತಮ್ಮನ ಸ್ಪೂರ್ತಿ, “ ಶ್ವೇತಾ ನಿನ್ನಲ್ಲೊಂದು ಶಕ್ತಿ ಇದೆ ಅದನ್ನು ಎಷ್ಟೆ ಕಷ್ಟವಾದರು ತೋರಿಸು, ಶಕ್ತಿ ಸಾಯಬಾರದು, ಗೆಲ್ಲಬೇಕು ” ಎನ್ನುವ ಅವಳ ಆತ್ಮಿಯ ಗುರುಗಳ ಮಾತುಗಳು ಅವಳನ್ನು ಕೆಚ್ಚೆದೆಯ ವೀರವನಿತೆಯನ್ನಾಗಿಸಿತ್ತು, ಜೋತೆಗೆ ಅವಳ ತಮ್ಮ ಅಕ್ಕ “ ಓದು ಓದು ಓದು ಜಗತ್ತೆ ಭಯಪಡುವಷ್ಟು ಓದು ಆಗ ನಿನ್ನನ್ನೆ ಸಕಲವು ಅರಸಿಕೊಂಡು ಬರುತ್ತದೆ” ಎನ್ನುವ ಮಾತು ಅವಳನ್ನು ಸ್ಫೂರ್ತಿಗೊಳಿಸಿತ್ತು.
ಇದರ ಫಲವಾಗಿ ಭರ್ತಿ ಎರಡು ವರ್ಷ ಸ್ಪರ್ಧಾತ್ಮಕ ಪರಿಕ್ಷೆ ತಯಾರಿ ನಡೆಸಿದಳು ಪ್ರತಿ ಪುಸ್ತಕ, ಪತ್ರಿಕೆ, ಮ್ಯಾಗಜೀನ್, ಕಥೆ, ಕವಿತೆ, ಕಾದಂಬರಿ ಎಲ್ಲವನ್ನು ಇಂಚಿ ಇಂಚಿ ಓದಿದಳು, ಗೆಳೆಯರೊಂದಿಗೆ ಚರ್ಚಿಸಿದಳು, ಗುರುಗಳೊಂದಿಗೆ ಅವಲೋಕಿಸಿದಳು. ತದನಂತರ ಅವಳ ಕನಸಿಗೆ ರೆಕ್ಕೆ ಪುಕ್ಕ ಬಂದಿದ್ದು ಸರ್ಕಾರ ಕೆ.ಎ.ಎಸ್.ಹುದ್ದೆಗೆ ಆಹ್ವಾನಿಸಿದಾಗ. ಕೆ.ಎ.ಎಸ್ ಗೆ ಮತ್ತೆ ಆರು ತಿಂಗಳು ಎಡೆ ಬಿಡದೆ ಹಗಲು ರಾತ್ರಿಯೆನ್ನದೆ ಓದಿದಳು ಎಂಬುದಕ್ಕೆ ಅವಳ ಕಣ್ಣ ಮೇಲಿನ ಕನ್ನಡಕ, ಕಣ್ಣು ಕೆಳಗಿನ ಕಪ್ಪು ಕಲೆ ಕುರುಹುಗಳಾಗಿದ್ದವು. ನಿರೀಕ್ಷೆಯಂತೆ ಕೆ.ಎ.ಎಸ್ ಪೂರ್ವಭಾವಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳೊಂದಿಗೆ ತೇರ್ಗಡೆಯಾದಳು, ಮುಖ್ಯ ಪರಿಕ್ಷೆಗೆ ಸಿದ್ದತೆ ನಡೆಸಿ ಅಲ್ಲಿಯು ಯಶಸ್ವಿಯಾದಳು, ಕೊನೆಗೆ ಸಂದರ್ಶನವನ್ನು ಲೀಲಾಜಾಲವಾಗಿ ಎದುರಿಸುವ ಸಮಯ ಅವಳ ಬದುಕಿನ ಕಥೆ, ನಡೆದು ಬಂದ ದಾರಿ ಕುರಿತು ತಿಳದಾಗ ಸಂದರ್ಶಕರ ಮಾತು ಕಪ್ಪಿಟ್ಟಿತು, ಗಂಟಲು ತುಂಬಿ ಬಂದು, ಕಣ್ಣೀರು ಜಾರಿತ್ತು, ‘ ಶ್ವೇತಾ ಯು ಆರ್ ಎ ಇನ್ಸ್ಫೈರೇಬಲ್ ಹ್ಯುಮೆನ್, ವಿ ಆರ್ ಫ್ರೌಡ್ ಆಫ್ ಯು’ ಎಂಬ ಮಾತನಾಲಿಸಿದ ಶ್ವೇತಾಳ ಆನಂದಬಾಷ್ಪ ಕನ್ನೆ ಸವರಿ ನೆಲ ಸೇರಿತ್ತು. ಅಂತೂ ಜೀವನದಲ್ಲಿ ಅವಳು ಗೆದ್ದಿದ್ದಳು, ಕನಸಿನ ಅರಮನೆ ಪ್ರವೇಶಿಸಿದ್ದಳು.
ಜೀವನದಲ್ಲಿ ತನ್ನ ಮುಳ್ಳಿನ ಹಾದಿಯಲ್ಲಿ ಗುಲಾಬಿಯ ಪಕಳೆಗಳು ಅರಡಿದ್ದಳು, ಕೆ.ಎ.ಎಸ್ ಪರಿಕ್ಷೆಯಲ್ಲಿ ರಾಜ್ಯಕ್ಕೆ 15 ನೇ ರ್ಯಾಂಕ್ ಗಳಿಸಿದ್ದಳು ಅವಳ ಕಷ್ಟ ಶ್ರಮಕ್ಕೆ ಅರ್ಥ, ವಿಶಾಲಾರ್ಥ ದೊರಕಿದ್ದು ಅವಾಗಲೇ. ಶ್ವೇತಾಳ ಗಂಡ ಮೂಕನಾಗಿದ್ದ, ಅವಳ ಅತ್ತೆ ಗೆ ತಪ್ಪಿನ ಅರಿವಾಗಿತ್ತು, ತಮ್ಮನ ಖುಷಿ ಮುಗಿಲು ಮುಟ್ಟಿತ್ತು, ಅಮ್ಮನ ಕೂಗು ಕೋಗಿಲೆಯ ಧ್ವನಿಯನ್ನು ಮರೆಸಿತ್ತು, ಶ್ವೇತಾಳ ಸಾಧನೆಯ ಕಂಡು ರಾಜ್ಯ ಮಹಿಳಾ ಆಯೋಗ ಸನ್ಮಾನ ಸಮಾರಂಭ ಏರ್ಪಡಿಸಿತು, ಅವಳ ಕಾಣಲು ಕಿಕ್ಕಿರಿದು ಸೇರಿದ್ದ ಜನ, ಅವರ ಪ್ರತಿ ಧ್ವನಿಯಲ್ಲಿ ಶ್ವೇತಾ ಶ್ವೇತಾ ಎಂದೂ ಕೂಗು, ಗಣ್ಯಾತೀತಿಗಳ ಮಧ್ಯೆ ಶ್ವೇತಾಳ ರಾಜಗಾಂಭಿರ್ಯ ನೋಟ, ವೇದಿಕೆ ಮುಂಭಾಗದಲ್ಲಿ ಗಂಡ, ಅತ್ತೆ, ತಮ್ಮ, ತಾಯಿ ತನ್ನ ಗುರುಗಳು ಆಶೀನರಾಗಿದ್ದರು, ಜೀವನದಲ್ಲಿ ಎಂದೂ ಅನುಭವಿಸದ ಕ್ಷಣವೊಂದು ಶ್ವೇತಾಳ ಬದುಕಲ್ಲಿ ಧಾವಿಸಿ ಬಂದಿದೆ, ಸಭೆಯ ಅಧ್ಯಕ್ಷರು ಶ್ವೇತಾಳನ್ನು ಪರಿಚಯಿಸಿತ್ತು ‘ ಹೆಣ್ಣು ಅಭಲೆಯಲ್ಲ ಅದೊಂದು ಜ್ಞಾನದ ಸಲೆ’, ಎಂಬುದಕ್ಕೆ ಶ್ರೀಮತಿ ಶ್ವೇತಾ ಮಂಜುನಾಥ ಜ್ವಲಂತಾ ಉದಾಹರಣೆ. ಅವರು ತಮ್ಮ ಎರಡು ಮಾತುಗಳನ್ನಾಡಬೇಕು ಎಂದಾಗ ತನ್ನ ಮಾತು ಶುರುವಿಟ್ಟ ಶ್ವೇತಾ ಜೀವನದ ಪ್ರತಿಕ್ಷಣವನ್ನು ಕಣ್ಣಿಗೆ ಕಟ್ಟುವಂತೆ ಎಲ್ಲವನ್ನು ಒಂದೆ ಉಸಿರಿನಲ್ಲಿ ಹೇಳಿಬಿಟ್ಟಳು, ಪ್ರೇಕ್ಷಕರು ಮೌನವಾದರು, ಮೂಕರಾದರು; ಎಲ್ಲಾಕಡೆ ನಿಶ್ಯಬ್ಧ ನಿರವ ಮೌನ ಆವರಿಸಿತ್ತು, ಅವರ ಕಂಗಳು ಒದ್ದೆಯಾಗಿದ್ದವು, ದುಃಖತಪ್ತ ಕಂಬನಿ ಕಣ್ಣಲ್ಲು ಏನೊ ಸಾಧಿಸಿದ ಅನುಭವಾಗಿ ಚಪ್ಪಾಳೆಯ ಸದ್ದು ಮೊಳಗತೊಡಗಿತು, ಕೊನೆಗೆ ಅವಳು ನನ್ನೆಲ್ಲ ಈ ಸಾಧನೆಗೆ; ನನ್ನ ಪ್ರತಿ ವೇದನೆಯಲ್ಲು ಸಹಪಾಲು ಪಡೆದ ; ನನ್ನ ಬದುಕಿಗೆ ಒಂದು ಸ್ಫೂರ್ತಿಯ ಆಶಾಕಿರಣ ಆಗಿದ್ದ ಜೀವವೇ ನನ್ನ ಮುದ್ದಿನ ತಮ್ಮ, ಹಿ ಇಸ್ ಮೈ ಗಾಡ್ ಫಾಧರ್..!! ಎಂದು ಹೇಳುತ್ತ ಶ್ವೇತಾ ತನ್ನ ಮಾತಿಗೆ ಪೂರ್ಣ ವಿರಾಮವಿಟ್ಟಳು, ಅವಲ ಬದುಕಿನಲ್ಲಿ ಒಂದು ಹೊಸ ಅಧ್ಯಾಯ ಆರಂಭವಾಯಿತು..
–ಇಬ್ಬನಿಯ ಹುಡುಗ ರಾಮು
wondeful !! very inspiring ….
thanks chaithra mam
super ramu
ನಿಮ್ಮ ಸಾಧನೆಗೆ ನನ್ನ ಕಣ್ಣಿರ ಉಡಗೊರೆ. ನಿಮ್ಮ ಕಥೆ ಕೇಳಿ ನನ್ನಿಂದ ಮಾತನಾಡಲು ಶಭ್ದಗಳೆ ಸಿಗುತ್ತಿಲ್ಲ ಅಕ್ಕ. ನನ್ನ ಸಾಧನೆಗೂ ನಿಮ್ಮಂತಹ ಸಾಧಕರ ಕಥೆಗಳು ಸ್ಪೂರ್ಥಿ ಸೆಲೆಯಾಗಲಿ
ನಿಮ್ಮ ಕತೆಯನ್ನು ಕೇಳಿದಾಕ್ಷಣ ಕಣ್ಣಲ್ಲಿ ನೀರು ಜಿನುಗುತ್ತಿವೆ. ನಿಮ್ಮ ಸಾಧನೆ ನನ್ನ ಜೀವನಕ್ಕು ಸ್ಪೂತಿ೯.