ಲೇಖನ

ಹೊಸ ವರ್ಷದ ರೆಸೊಲ್ಯೂಶನ್: ಚಂದನ್ ಶರ್ಮ ಡಿ.

ಎಲ್ಲರಿಗೂ ಹೊಸ ವರ್ಷದ ಶುಭಾಷಯಗಳನ್ನು ಹೇಳುತ್ತಾ… ಇಲ್ಲೊಬ್ಬ ೨೩ ವರ್ಷದ ಇಂಜೆನಿಯರಿ೦ಗ್ ಮುಗಿಸಿ ಕೊನೆಯ ವರ್ಷದ MBA ಅಭ್ಯಾಸ ಮಾಡುತ್ತಿರುವ ವಿಧ್ಯಾರ್ಥಿಯ ಹೊಸ ವರ್ಷದ ರೆಸೊಲ್ಯೂಶನ್ ಬಗ್ಗೆ ಹೇಳ್ಬೇಕು.

ಅವನು Writer ಆಗಬೇಕಂತೆ! ಪಂಜು ಪತ್ರಿಕೆ ಇಂದ  ಲೇಖನ ಬರೆಯೋಕೆ ಸ್ಟಾರ್ಟ್  ಮಾಡ್ತಾನಂತೆ! ಚೇತನ್ ಭಗತ್ ಸ್ಪೂರ್ತಿ ಅಂತೆ! “ಚೇತನ್ ಭಗತ್ ನನ್ ತರಾನೆ; ಬಿ.ಇ ಮೆಕ್ಯಾನಿಕಲ್ ಅಂಡ್ ಒಃಂ ಇನ್ ಫೈನಾನ್ಸ್-ಮಾರ್ಕೆಟಿಂಗ್, ನಾನ್ಯಾಕೆ ನೆಕ್ಸ್ಟ್ ಚೇತನ್ ಭಗತ್ ಆಗಬಾರದು?!” ಅಬ್ಬಾ! ಹಿಂಗೆ ಹೇಳೋ ಇವನಿಗೆ ಎಷ್ಟು ಕೊಬ್ಬು! ಬಾವಿ-ಕಪ್ಪೆ!. ಆದ್ರೆ ಈ ಹುಡ್ಗಂಗೆ ಒಂದು ಪ್ರಾಬ್ಲಮ್; ಚೇತನ್ ಭಗತ್ ಸ್ಟ್ಯಾಂಡರ್ಡ್ ಇಂಗ್ಲಿಷ್ ರೈಟರ್ ಅಲ್ವಂತೆ!. ಅಲ್ಲದೆ ಈಗಿನ ದಿನಗಳಲ್ಲಿ  ನೋವೆಲಿಸ್ಟ್ ಆಗೋದು ಐಐಎಂ ಪಾಸ್ ಔಟ್ ಗಳಿಗೆ ಕಾಮನ್ ಆಗಿದೆ; ಅಮೀಶ್ ತ್ರಿಪಾಠಿ, ರಶ್ಮಿ ಬನ್ಸಾಲ್ ಹೀಗೆ ಒಬ್ರಾ- ಇಬ್ರ?!. ಇವನು ಮೂರರಲ್ಲಿ ಮತ್ತೊಬ್ಬ ಆಗ್ತಾನೆ ಅಂತ ಇವನಿಗೇ ಅನ್ಸತ್ತಂತೆ, ಅಷ್ಟಕ್ಕೂ ಇವನು ಐಐಎಂ ಏನು ಅಲ್ಲ ಬಿಡಿ. ಸದ್ಯಕ್ಕೆ ಈ  ರೆಸೊಲ್ಯೂಶನ್ ಪೆಂಡಿಗ್ ಇದೆ.

ಇವನಿಗೆ ಜರ್ನಲಿಸ್ಟ್ ಆಗಬೇಕಂತೆ; ಅದೂ ಅರ್ನಬ್ ಗೋಸ್ವಾಮಿ ತರ ಯಾಕೇ ಅಂದ್ರೆ ಟಿವಿ ಪರದೇ ಮುಂದೆ “Nation wants to know“, ಅಂತ ಡಿಬೇಟ್ ಹೆಸರಲ್ಲಿ ಒನ್ ಮ್ಯಾನ್ ಶೋ ನೆಡ್ಸೋದು ಸುಮ್ನೆನಾ! ಆದರೆ ಪ್ರತೀ ವಿಷಯಕ್ಕೂ ಕೂಗೋದು-ಕಿರಚೋದು ಮಾಡೋಕೆ ಈ ಹುಡುಗಂಗೆ ಇಷ್ಟ ಇಲ್ಲವಂತೆ. ಅಲ್ಲದೆ ರಾಜ್ ದೀಪ್, ಭರ್ಕ, ಪ್ರಣಬ್ ಹೀಗೆ  ಹತ್ತಾರು ಜನ ಇರುವಾಗ ಗುಂಪಲ್ಲಿ ಗೋವಿಂದ ಹೇಳ್ಕೊಂಡು ಇರಬೇಕು; ಅಷ್ಟೇ ಅಂತ ಅವನಿಗೇ ಅನ್ಸತ್ತಂತೆ. ಈ ರೆಸಲ್ಯೂಶನ್ ಬಗ್ಗೆ ಇನ್ನೂ ಯೋಚನೆ ಮಾಡ್ತಾ ಇದಾನೆ!

ಶಾರುಖ್ ಖಾನ್, ಆಮೀರ್ ಖಾನ್ ಆಗೋ ಆಸೆ ಅಂತೆ; ಆದರೆ ದೇಶನ ‘ಅಸಹಿಷ್ಣು’ ಅಂತ ಕರೆಯೋ ಅವರು ಸದ್ಯಕ್ಕೆ ಸ್ಪೂರ್ತಿ ಅಲ್ಲವಂತೆ. ಮತ್ತೇ  ನಟನೇ ಅಂದ್ರೆ ಸುಮ್-ಸುಮ್ನೇ ಇಲ್ಲದ ನಾಟಕ ಮಾಡೋದು; ಅದೆಲ್ಲ ಇವನಿಗೆ ಆಗಿ ಬರಲ್ವಂತೆ.ಸೈಡ್ ಅಲ್ಲಿ ರಣಭೀರ್, ರಣವೀರ್, ಸಿದ್ದಾರ್ಥ್, ವರುಣ್ ಹೀಗೆ ಎಷ್ಟೋ ಜನ ಇನ್ನೂ ಅದ್ರುಷ್ಟ ಪರೀಕ್ಷೆ ಮಾಡ್ತಾ ಇರುವಾಗ ಈ ಹುಡ್ಗಂಗೆ ಸುಮ್ನೇ ಮಧ್ಯಕ್ಕೆ ಸೇರೋದು ಸರಿ ಅನ್ಸಲ್ವಂತೆ! ಹೊಸಾ ವರ್ಷದ ಹೊಸಾ ಧ್ಯೇಯದಿಂದ ಇದು ದೂರ.

ಸುಂದರ್ ಪಿಚಾಯಿ ತರ ಟೆಕ್ಕಿ ಆಗಾಬೇಕು ಅಂತ; ಆದ್ರೆ ಜೀವ್ನಾ ಪೂರ್ತಿ ನಾಲ್ಕು ಕೋಡ್ ಬರ್ಯೋದೋ ಅತ್ವಾ ಐದು ಕೋಡ್ ಸೃಷ್ಠಿ ಮಾಡೋದ್ರಲ್ಲಿ ಕಳೆಯೋಕೆ ಕಷ್ಟ ಅನ್ನೋ ಅಭಿಪ್ರಾಯ.

ರಾಜಕಾರಣಿ ಆಗಬೇಕು ಅನ್ನೋ ಹಂಬಲ ಆದ್ರೆ ಹಗರಣ ಮುಕ್ತನಾಗಿರಬೇಕು ಅನ್ನೋ ಬಯಕೆ. ದೇಶಗಳನ್ನ ಸುತ್ತಬೇಕಂತೆ ಬಟ್ ಟ್ರಾವಲಿಂಗ್ ಲೈಕ್ ಆಗಲ್ವಂತೆ. ಸಮುದ್ರದ ಕಿನಾರೆಯಲ್ಲಿ ಈಜ ಬೇಕು ಅಂತ ಆಸೆ ಆದ್ರೆ ಸುನಾಮಿ ಭಯ. ಸ್ಕೈ ಡೈವಿಂಗ್ ಮಾಡ್ಬೇಕು ಆದ್ರೆ ಕೊನೆ ಕ್ಷಣದಲ್ಲಿ ಪ್ಯಾರಶುಟ್ ಓಪನ್ ಆಗದೆ ಹೋದ್ರೆ! ಕಡ್ಲೆ ಬೀಜ ಹೂರಿದು ತಿನ್ನಬೇಕು ಅಂತ ಬಟ್  ಬೈ ಚಾನ್ಸ್ ಸುಟ್ಟು ಹೋದ್ರೆ! ರಿಸ್ಕ್ ಬೀಡವಂತೆ.

ಒಟ್ನಲ್ಲಿ ಸುತ್ತಾ-ಮುತ್ತಾ ಇರೋದೆಲ್ಲ ೧೦೦% ಸರಿ ಆದ್ಮೇಲೆ, ಅದರಲ್ಲಿ ಒಂದು ಸಲೀಸ್ ಆದ ಅಡ್ವೆಂಚರ್ ಮಾಡ್ಬೇಕು ಅನ್ನೋದು ಪ್ರತೀ ವರ್ಷದ ರೆಸಲ್ಯೂಶನ್. ಸಧ್ಯಕ್ಕೆ ಇಷ್ಟು ಹೇಳ್ಕೊಂಡಿದ್ದೇ ಸಾಧನೆ.

-ಚಂದನ್ ಶರ್ಮ ಡಿ.


 

ಕನ್ನಡದ ಬರಹಗಳನ್ನು ಹಂಚಿ ಹರಡಿ

7 thoughts on “ಹೊಸ ವರ್ಷದ ರೆಸೊಲ್ಯೂಶನ್: ಚಂದನ್ ಶರ್ಮ ಡಿ.

  1. haha !! namgella onthara different agidda aa chandan anne nodo aase, aa resolution matra sakappa, berenu beda !!

  2. ಶರ್ಮಾ!..ಚೆನ್ನಾಗಿದೆ ನಿನ್ನ ಹೊಸ ವರ್ಷದ ಸ್ಪಷ್ಟತೆ..ತಿಳಿ ಹಾಸ್ಯದಿಂದ ಕೂಡಿದ ಲೇಖನವು ಈಗಿನ ಯುವ ಮನಸ್ಸುಗಳ ಪ್ರತಿಬಿಂಬದಂತಿದೆ.ಆಮೇಲೆ..ಯೋಗರಜ ಭಟ್ಟರು ನಿನ್ನ ಕೇಳ್ತಿದ್ರು..ಒಬ್ಬ ಪ್ರತಿಭಾವಂತ ಚಿತ್ರ ಸಾಹಿತಿ ಬೇಕಂತೆ..

Leave a Reply

Your email address will not be published. Required fields are marked *