![](https://panjumagazine.com/wp-content/uploads/Deepa-G-S-258x300.jpg)
ಈಗಿನ ಸ್ವತಂತ್ರದ ಬದುಕಿನಲ್ಲಿ ಒಂದು ಹೆಣ್ಣನ್ನ ನಾಲ್ಕು ಗೋಡೆಗಳ ಮಧ್ಯೆ ಬಂಧಿಸಿ ಅವಳಿಗೆ ಕಾನೂನಿನ ಚೌಕಟ್ಟನ್ನ ನಿರ್ಮಿಸಿ ಅವಳ ಜೀವನವನ್ನ ಕತ್ತಲಿನ ಕೋಣೆಗೆ ತಳ್ಳಿ. ಅವಳಿಗೆ ಜೀವನ ಅಂದರೆ ಏನು ಅನ್ನೋದು ಅವಳಿಗೆ ತಿಳಿಯದ ಹಾಗೆ ಅವಳ ಭಾವನೆಗಳನ್ನ ಹೊಸಕಿ ಹಾಕಿ ಸಂಸಾರದ ಸಾಗರದಲ್ಲಿ ಜವಾಬ್ದಾರಿ ಅನ್ನುವ ಗುಂಡಿಗೆ ತಳ್ಳಿ, ಅಲ್ಲೂ ಅವಳನ್ನ ಎಲ್ಲಾ ತರದಲ್ಲು ಮೂರ್ಖಳನ್ನಾಗಿ ಮಾಡಿ ಅವಳ ಕನಸುಗಳನ್ನ ನುಚ್ಚು ನೂರು ಮಾಡಿ ವ್ಯಂಗ್ಯ ಮಾಡುವ ಈ ಸಮಾಜದಲ್ಲಿ ದೈರ್ಯದಿಂದ ಬದುಕಿ ಬಾಳಿ ತೋರಿಸುವಂತ ದಿಟ್ಟ ತನದ ಒಂದು ಹೆಣ್ಣಾಗ ಬೇಕೆ ಹೊರತು ಹೇಡಿಯ ತರ ಒಂದು ಮೂಲೆಯಲ್ಲಿ ಕುಳಿತು ಕನಸುಗಳನ್ನ ಮಣ್ಣು ಮಾಡಿ, ಆರಿ ಹೋದ ದೀಪದ ಮುಂದೆ ಕಣ್ಣೀರು ಇಟ್ಟರೆ ಯಾರಿಗೆ ತಾನೇ ತಿಳಿದಿತು..?
ನಮಗೆಲ್ಲ ತಿಳಿದಿರುವ ಹಾಗೆ 1947ರಲ್ಲಿ ನಮಗೆ ಸ್ವತಂತ್ರ ಸಿಕ್ಕಿತು ಎಂದು ಪ್ರತಿಯೊಬ್ಬರಿಗೂ ತಿಳಿದಿರುವ ವಿಷಯವಿದು. ಆದ್ರೆ ನನಗೇಕೋ ನಂಬಲಾಗುತ್ತಿಲ್ಲ..! ಏಕೆಂದರೆ ಒಂದು ಹೆಣ್ಣಿಗೆ ಸ್ವತಂತ್ರ ಇಲ್ಲದೇನೆ ಯಾರದೋ ಅಡಿಯಾಳಾಗಿ ನಾಲ್ಕು ಗೋಡೆಗಳ ಮದ್ಯೆ ಅವಳ ಭಾವನೆ ಮಣ್ಣಾಗಿ, ಕನಸುಗಳು ನುಚ್ಚು ನೂರಾಗಿ ಹಿಂಸೆ, ಕಿರಿ ಕಿರಿ ಎಲ್ಲವನ್ನ ಸಹಿಸಿಕೊಂಡು ಅವಳು ಬದುಕುತ್ತಿದ್ದಾಳೆ ಅನ್ನುವ ಭಾವನೆ ಒಬ್ಬ ಹೆಣ್ಣಿನ ಮನಸ್ಸಿನಲ್ಲಿ ಅಲ್ಲದೆ ಇನ್ಯಾರ ಮನಸ್ಸಿನಲ್ಲಿ ಬರಲು ಸಾಧ್ಯ…? ಎಲ್ಲಿದೆ ಹೆಣ್ಣಿಗೆ ನ್ಯಾಯ…?ಎಲ್ಲಿದೆ ಹೆಣ್ಣಿಗೆ ಬೆಲೆ…? ಎಲ್ಲಿದೆ ಅವಳಿಗೆ ಹಕ್ಕು..? ಹೆಣ್ಣಿಗೆ ಸ್ವತಂತ್ರ ಇಲ್ಲ, ನ್ಯಾಯ ಇಲ್ಲ, ಹೇಗೆ ತಾನೇ ಬದುಕಬೇಕು ಆ ಹೆಣ್ಣು,ಹೇಗೆ ತಾನೇ ಜೀವನ ನಡೆಸಬೇಕು.ಹೇಗೆ ತಾನೇ ಸಾಧನೆಯ ದಾರಿ ತಲುಪಬೇಕು. ಆ ದಾರಿಯಲ್ಲೇ ಕೆಲ ಒಂದಿಷ್ಟು ದುಷ್ಟ ಜನರು ಮಾನವೀಯತೆಯನ್ನ ಮರೆತು ಅವಳನ್ನ ಹೊತ್ತುಕೊಂಡು ಹೋಗಿ ಅತ್ಯಾಚಾರ ಮಾಡಿ ಅವಳ ಜೀವನ ನಾಶ ಮಾಡೋ ಈ ಜನರಿಗೆ ಒಂದು ಗತಿ ಕಾಣಿಸಬೇಕು ಅಲ್ವಾ!?
ಎಲ್ಲೋ ಕೇಳಿದ್ದೆ.. ಎಲ್ಲೋ ಕೆಲ ಕಡೆ ನೋಡಿದ್ದೆ.. ಹೆಣ್ಣು ಅಂದರೆ ದೇವತೆ, ಹೆಣ್ಣು ಅಂದರೆ ಭೂತಾಯಿ, ಹೆಣ್ಣು ಅಂದರೆ ಅನ್ನದಾತೆ, ಹೆಣ್ಣು ಅಂದರೆ ಅಮ್ಮ, ಅಕ್ಕ, ತಂಗಿ, ಅನ್ನುವ ಕೇಳುವ ಈ ಮಾತು ದೂರ ಸರಿಯುತಾ ಇದೆ. ಇಂದೇಕೋ ಯಾರನ್ನು ನಂಬಲಾಗುತ್ತಿಲ್ಲ!? ಯಾರನ್ನೇ ನೋಡಿದರೂ ಮನಸ್ಸಿನಲ್ಲಿ ತಳ ಮಳ ಶುರುವಾಗುತ್ತದೆ ಅದೇಕೋ ಅವರನ್ನ ನೋಡಿದರೆ ಸಾಕು ಭಯವಾಗುತ್ತದೆ. ಹಾಗಂತ ಹೆಣ್ಣು ಎಲ್ಲವನ್ನ ಸಹಿಸಿಕೊಳ್ಳಬೇಕು ಅಂತ ಯಾರೂ ಹೇಳಿಲ್ಲ ಅವಳಿಗೆ ಬದುಕೋ ಹಕ್ಕಿದೆ ಜೀವನ ನಡಿಸೋ ಛಲವಿದೆ. ಹೆಣ್ಣಿಗೆ ಚಿತ್ರ ಹಿಂಸೆ ಕೊಟ್ಟು,ಕೊಂದು, ಮೃಗಗಳ ಹಾಗೆ ನಡೆದುಕೊಳ್ಳುವ ಕೆಟ್ಟ ಜಾತಿಯ ಪ್ರಾಣಿಗಳನ್ನ ಹೋಡಿಯೋ ಶಕ್ತಿ ಹೆಣ್ಣಿಗೆ ಬರುವುದಿಲ್ಲವೋ ಅಲ್ಲಿಯ ತನಕ ಹೆಣ್ಣು ತಲೆ ಕೆಳಗೆ ಮಾಡಿ ಮುಖದ ತುಂಬಾ ಸೆರಗು ಹೊತ್ತುಕೊಂಡು ಬರಿ ತಾನು ನಡೆಯುವ ದಾರಿಯನ್ನೆ ನೋಡಬೇಕಾಗುತ್ತದೆ.
ಈ ಜೀವನ ನನ್ನದು. ನಾನು ಹೆಣ್ಣಾಗಿ ಹುಟ್ಟಿದ್ದು ತಪ್ಪಲ್ಲ. ನಾನು ಈ ಎಲ್ಲ ಕಷ್ಟಗಳನ್ನ ಅನುಭವಿಸಿ ಸಹಿಸಿಕೊಂಡು ಇಲ್ಲಿಯವರೆಗೆ ಬಂದೇನೆಲ್ಲ ಅದು ನನ್ನ ದೊಡ್ಡ ತಪ್ಪು ಎಂದು ಅವಳ ಮನಸ್ಸಿನಲ್ಲಿ ಅನಿಸುತ್ತದೆ. ಈ ಎಲ್ಲಾ ಹೆಣ್ಣಿಗಾಗಿ ನನ್ನ ಬದುಕಿನ ಮುಂದಿನ ಹೆಜ್ಜೆ.. ಹೋರಾಡುವ ಸಮಯವಿದು ಸುಮ್ಮನಿದ್ದರೆ ಸಿಗದು ಈ ಹೆಣ್ಣಿಗೆ ನ್ಯಾಯ..? ಎಷ್ಟೇ ಕೆಟ್ಟ ಹುಳುಗಳು ಬಂದರು ಸಹ ಹೊಸಕಿ ಹಾಕುವ ದೈರ್ಯ ನನ್ನಲ್ಲಿದೆ ನನಗಾಗಿ ನಾನು ಬದುಕಬೇಕು. ಹೆಣ್ಣು ಆಸಹಾಯಕಳಲ್ಲ ಶಕ್ತಿವಂತ ಛಲವಂತೆ. ಬುದ್ಧಿವಂತೆ ಅನ್ನುವುದನ್ನ ತೋರಿಸುವ ಸಮಯ ಈಗ ಬಂದಿದೆ.ಇನ್ನೂ ಹೆದರುವ ಕಾಲ ನನ್ನದಲ್ಲ.
ಯಾವಾಗಲೂ ಯೋಚಿಸಿದಂತೆ ಒಂದು ಹೆಣ್ಣು, ಗಂಡನ ಮನೆಗೆ ಹೋಗಿ ಪಾತ್ರೆ, ಬಟ್ಟೆ,ಬರೆ, ಅತ್ತೆ ಮಾವ, ಗಂಡ, ಮಕ್ಕಳು, ಹೀಗೆ ಚಾಕರಿ ಮಾಡೋದೆ ಜೀವನಾನ…? ಇಷ್ಟೇನಾ ಹೆಣ್ಣಿನ ಜೀವನ….ನಾಲ್ಕು ಗೋಡೆಗಳ ಮಧ್ಯೆ ಅವಳ ಜೀವನಾನ….? ಅವಳಿಗೂ ಒಂದು ಕನಸಿರುತ್ತೆ. ಅದನ್ನ ಅವಳು ನನಸು ಮಾಡ್ಕೋಬೇಕು. ಏನಾದ್ರೂ ಸಾಧಿಸಬೇಕು ಅನ್ನೋ ಛಲ, ಅವಳ ಹಕ್ಕು, ಜವಾಬ್ದಾರಿ ಅವಳಿಗೆ ಬೇಕು ಅಲ್ವಾ…..!? ಅವಳನ್ನ ನಾಲ್ಕು ಗೋಡೆಗಳ ಮದ್ಯೆ ಕಟ್ಟಿ ಹಾಕೊದ್ರಿಂದ ಈ ಅತ್ಯಾಚಾರ ಆಗೋದನ್ನ ತಪ್ಪಿಸಬಹುದಾ!! ಹಾಗಾದ್ರೆ ಅವಳ ಕನಸು ಏನಾಗಬೇಕು!! ಒಂದೊಮ್ಮೆ ಯೋಚನೆ ಮಾಡಿದ್ರೆ ಎದೆ ಜಲ್ ಅನ್ನುವಷ್ಟು ಆಘಾತ ಆಗುತ್ತದೆ. ಹಾಗಿದ್ರೆ ಚಿಕ್ಕ ಮಕ್ಕಳಿದ್ದಾಗ ಯಾಕೆ ಓದಿಸಬೇಕು ಓದಿ ನೀವು ದೊಡ್ಡ ಕೆಲ್ಸಕ್ಕೆ ಸೇರಬೇಕು ಅನ್ನೋ ಆಸೆ ಆ ಮಕ್ಕಳಿಗೆ ಹುಟ್ಟಿಸಿ ಈಗ ಆ ಕನಸನ್ನ ನನಸು ಮಾಡೋ ಹೊತ್ತಲ್ಲಿ ಬೇಡ ನೀವು ಹೊರಗಡೆ ಹೋಗೋದು ಬೇಡ.. ಬೇಡ ಅನ್ನೋ ಮಾತು ಯಾಕೆ…?
ಸಾಕು ಇನ್ನು ಈ ಕತ್ತಲು ಕವಿದ ಜೀವನ ನನ್ನ ಕನಸು ನನಸು ಮಾಡಬೇಕು ಎಂದರೆ ನಾನೇ ಹೊರಡಬೇಕು ಸ್ವಂತ ನಿರ್ಧಾರ ತೆಗೆದುಕೊಳ್ಳಬೇಕು ಎಲ್ಲರ ಮುಂದೆ ಸ್ವಾಭಿಮಾನಿಯಾಗಿ ಬದುಕಬೇಕು.ಯಾರಿಗೂ ಹೆದರದೆ ಮುನ್ನುಗಬೇಕು ಎಲ್ಲರಿಗೂ ಈ ಹೆಣ್ಣು ಛಲವಂತೆ ಎಂದು ಗೊತ್ತಾಗಬೇಕು ತಲೆ ಬಾಗಿ ನಮಸ್ಕಾರ ಮಾಡ್ಬೇಕು ಅಲ್ಲಿಯವರೆಗೆ ನನ್ನ ಹೊರಟ ನಿರತವಾಗಿರಬೇಕು. ಅನ್ನೋ ಛಲ ಅವಳಲ್ಲಿ ಬರುವವರೆಗೆ ಈ ಸಮಾಜದಲ್ಲಿ ಒಂದು ಹೆಣ್ಣನ್ನ ನೋಡುವ ದೃಷ್ಟಿ ಬದಲಾಗಲ್ಲ.
-ದೀಪಾ ಜಿ.ಎಸ್.