ಹೆಣ್ಣಿಗೆ ಯಾಕೆ ‘ವಿಧವೆ’ಯೆಂಬ ಹಣೆಪಟ್ಟಿ: ಬಾಬುರೆಡ್ಡಿ.ಕೆ.ಬಿ.


ನಮ್ಮ ಸಮಾಜದಲ್ಲಿ ಹೆಣ್ಣಿಗೆ ತನ್ನದೇ ಆದ ಸ್ಥಾನವನ್ನು ನೀಡಲಾಗಿದೆ. ಹೆಣ್ಣನ್ನು ಭಾರತದಂತಹ ದೇಶದಲ್ಲಿ ಹೆಚ್ಚಾಗಿ ಗೌರವಿಸುತ್ತಾರೆ. ಮಹಾಭಾರತ ಮತ್ತು ರಾಮಾಯಣಗಳಲ್ಲಿ  ಹೆಣ್ಣನ್ನು ಅತ್ಯಂತ ಗೌರವದಿಂದ ನೋಡಿರುವುದನ್ನು ನೋಡಬಹುದಾಗಿದೆ. ಹೆಣ್ಣನ್ನು ದೇಶದಲ್ಲಿ ದೇವರಿಗೆ ಹೋಲಿಸಲಾಗಿದೆ. ಮನುಷ್ಯ ಜನ್ಮವಾಘಬೇಕಾದರೆ ಮಹಿಳೆ ಪಾತ್ರ ಬಹಳ ಮುಖ್ಯವಾದುದಾಗಿದೆ. ಇಂತಹ ಸಂಧರ್ಭದಲ್ಲಿ ಮಹಿಳೆಯನ್ನು ಅತ್ಯಂತ ಕೀಳಾಗಿ ನೋಲು ಪ್ರಾರಂಬಿಸಿರುವುದು ಅವಮಾನಕರವಾದ ಸಂಗತಿಯಾಗಿದೆ.

ಹೆಣ್ಣು ಎಂದ ತಕ್ಷಣ ಅವಳು ಹೀಗೇ ಇರಬೇಕು, ಅವಳು ಹಾಕುವ ಬಟ್ದಟೆಯಿಂದ ಹಿಡಿದು ಅವಳ ಜೀವನ ಪೂರ್ತಿಯಾಗಿ ಸ್ವತಂತ್ರ್ಯವಾಗಿ ಬದುಕಲು ಬಿಡುತ್ತಿಲ್ಲ ಸಮಾಜ. ಅವಳಿಗಿರುವ ಸಮಾನ ಅವಕಾಶಗಳನ್ನು ಕಿತ್ತು ಕೊಳ್ಳಲಾಗುತ್ತಿದೆ. ಸಮಾಜದ ಯಾವ ಕಡೆ ನೋಡಿದರೂ ಸಹ ಶೋಷಣೆ, ದಬ್ಬಾಳಿಕೆ, ದೌರ್ಜನ್ಯಗಳು ನಡೆಯುತ್ತಲೇ ಇವೆ. ಸಂವಿಧಾನಾತ್ಮಕವಾದ ಈ ದೇಶದಲ್ಲಿ ಎಲ್ಲರೀಗೂ ಸ್ವತಂತ್ರ್ಯವಾಗಿ ಬದುಕುವ ಅವಕಾಶಗಳಿವೆ. ಈ ವ್ಯವಸ್ಥೆಯಲ್ಲಿ ಹೆಣ್ಣಿಗೆ ಯಾಕೆ ಕಡೆಯ ಸ್ಥಾನವನ್ನು ನೀಡಲಾಗುತ್ತದೆ. ಅವಳನ್ನು ಯಾಕೆ ಶೋಷಣೆ ಮಾಡುತ್ತಾರೆ.

ಸ್ವಾತಂತ್ರ್ಯ ಸಿಕ್ಕ ನಂತರ ಹೆಣ್ಣು ಸ್ವತಂತ್ರ್ಯವಾಗಿ ಬದುಕುಬಹುದು ಎಂದು ಕೊಂಡರು ಹೋರಾಟಗಾರು. ಆದರೆ ಅವರ ಆಶಯಗಳು ಈಡೇರಲಿಲ್ಲ. ಇಂದು ದೇಶದಲ್ಲಿ ಮಹಿಳೆ ಹಲವು ಸಾಧನೆಗಳನ್ನು ಮಾಡಿದ್ದಾಳೆ. ಆಟೋ ಡ್ರೈವರ್ ನಿಂದ ಹಿಡಿದು ಎಂಜಿನಿಯರ್, ಡಾಕ್ಟರ್, ಐಎಎಸ್, ಕೆಎಎಸ್ ಹಾಗೂ ಇನ್ನಿತರೆ ಹಲವು ಉನ್ನತ ಹುದ್ದೆಗಳಲ್ಲಿ ತಮ್ಮ ಸಾದನೆಯನ್ನು ಮಾಡಿ ತೋರಿಸಿದ್ದಾರೆ. ಗಗನಕ್ಕೆ ಹಾರಿದ್ದಾರೆ ತಮ್ಮ ಸಾಧನೆಯನ್ನು ತೋರಿಸಿದ್ದಾರೆ. ಅಂದು ಮಹಿಳೆದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದಳು ಇಂದು ಅದೇ ಹೆಣ್ಣು ಅವಳ ರಕ್ಷಣೆಗಾಗಿ ಹೊರಾಡಬೇಕಾಗಿ ಬಂದಿದೆ. 

 ಸಿಕ್ಕಪಟ್ಟೆ ಗೌರವ ಮತ್ತು ಸಮಾನತೆಯನ್ನು ನೀಡುವಂತಹ ನಮ್ಮ ದೇಶದಲ್ಲಿ ಹೆಣ್ಣಿಗೆ ಯಾಕೆ ‘ವಿಧವೆ’ಯೆಂಬ ಹಣೆ ಪಟ್ಟಿಯನ್ನು ಕಟ್ಟಲಾಗುತ್ತದೆ. ಅವಳನ್ನು ಯಾಕೆ ಆ ಹೆಸರಿನಲ್ಲಿ ಶೋಷಣೆಯನ್ನು ಮಾಡಲಾಗುತ್ತಿದೆ. ಇಷ್ಟ ಗೌರವನ್ನು ನೀಡುವ ನಮ್ಮ ದೇಶದಲ್ಲಿ ಇದು ಎಷ್ಟರ ಮಟ್ಟಿಗೆ ಸರಿ. ಮದುವೆಯ ಸಂಧರ್ಭದಲ್ಲಿ ಹೆಣ್ಣಿಗೆ ಅಪಾರವಾದ ಗೌರವನ್ನು ನೀಡಲಾಗುತ್ತದೆ. ಅವಳ ಮೇಲೆ ಎಲ್ಲಿ ಇಲ್ಲದ ಗೌರವ ಮತ್ತು ಪ್ರೀತಿ ಉಕ್ಕಿ ಬರುತ್ತದೆ. ಆದರೆ ಮದುವೆಯಾದ ಮೇಲೆ ಅನಿವಾರ್ಯವಾಘಿ ಗಂಡ ಸತ್ತರೆ ಅವಳನ್ನು ಯಾಕೆ ದೂರ ಇಟ್ಟು ನೋಡಲಾಗುತ್ತದೆ. ಅವಳ ಹಣೆಯಲ್ಲಿ ಕುಂಕುಮ ಅಳಿಸಿ, ಕೈಯಲ್ಲಿನ ಬಳೆಗಳನ್ನು ಕಿತ್ತು ಹಾಕಿ, ಬಿಳಿ ಸೀರೆ ತೊಟ್ಟು ಮೂಲೆಯಲ್ಲಿ ಕೂರಿಸಲಾಗುತ್ತದೆ. ಅವಳು ಯಾವುದೇ ತಿರ್ಮಾನ, ನಿರ್ದಾರಗಳಿಗೆ ಅರ್ಹಳಲ್ಲ ಎಂದು ಹೇಳಲಾಗುತ್ತದೆ. ‘ತಾಯಿ’ ಎಂದು ಕರೆದು ನಂತರ ಅವಳನ್ನು ‘ವಿಧವೆ’ ಎಂದು ಕರೆಯಾಲುತ್ತಿದೆ. ಇದು ನಮ್ಮ ದೇಶದ ಸಂಸ್ಕøತಿಯೆಂದು ಒಪ್ಪಿಕೊಳ್ಳುವುದಾದರು ಹೇಗೆ. 

ಇಂದು ಹೆಣ್ಣನ್ನು ಇಷ್ಟು ಮಾತ್ರಕ್ಕೆ ಬಿಟ್ಟಿದ್ದಾರಾ ಎಂಬುದು ನೋಡುವುದಾದರೆ ಇಲ್ಲ. ವಿಧವೆಯಾದ ನಂತರ ಈ ಸಮಾಜದಲ್ಲಿ ಅವಳನ್ನು ಮೂಲೆಗುಂಪು ಮಾಡುವದಿರಲಿ ಅವರನ್ನು ಕನಿಷ್ಟ ಗೌರವ ಕೊಟ್ಟು ನೋಡುವಂತಹ ಸಂಧರ್ಭವಿಲ್ಲ. ನಮ್ಮ ಸಮಾಜವಿಂದು ವಿಧವೆಯರನ್ನು ಎಷ್ಟು ಕಡೆಗಣಿಸಿದ್ದಾರೆ ಎಂಬುದಕ್ಕೆ ಒಂದು ಉತ್ತಮ ಉದಾಹರಣೆ ಹೇಳಬಹುದು. ಶ್ರೀ ಕೃಷ್ಣಜ ಜನ್ಮ ಸ್ಥಾನವಾದ ಮಥುರಾದ ವೃದ್ದಾವನದಲ್ಲಿ 15 ಸಾವಿರ ವಿಧವೆಯರಿದ್ದರು. ಅಲ್ಲಿ ಸತ್ತವರನ್ನು ಭಾಗಭಾಗಗಳಾಗಿ ಕತ್ತರಿಸಿ, ಅವರನ್ನು ಗೋಣಿ ಚೀಲದಲ್ಲಿ ತುಂಬಿಸಿ ಬಿಸಾಡುತ್ತಾರೆ. ಇದಕ್ಕೆ ಕಾರಣವನ್ನು ಕೇಳಿದರೆ ಶವ ಸಂಸ್ಕಾರಕ್ಕೆ ಹಣವಿಲ್ಲ ಎಂದು ಹೇಳುತ್ತಾರೆ(ಅಂತರ್ಜಾಲದಿಂದ ಮಾಹಿತಿ ಸಂಗ್ರಹ). ಇತರರಿಗೆ ಬೇಕಾದರೆ ಹಣ ಇರುತ್ತದೆ, ಇವರಿಗೆ ಯಾಕೆ ಇಷ್ಟು ಅವಮಾನ? ಇದನ್ನು ಯಾರು ಯಾಕೆ ಪ್ರಶ್ನಿಸುವುದಿಲ್ಲ. ದೇಶದ ಸಾವಿರಾರು ಕುಟುಂಬಗಳಲ್ಲಿ ವಿಧವೆಯರನ್ನು ಕಾಣಬಹುದಾಗಿದೆ. ಆದರೆ ಇವರ ತಪ್ಪು ಏನು ಪತಿ ಸಾಯುವುದೇ? ಅವರು ಮದುವೆ, ಔತಣಗಳಲ್ಲಿ ಭಾಗವಹಿಸುವಂತಿಲ್ಲ, ಶೃಂಗಾರ ಮಾಡುವಂತಿಲ್ಲ ಎಂಬ ನಿಭಂದನೆಗಳ ಪಟ್ಟಿಯನ್ನು ಅವರಿಗೆ ಕಟ್ಟಲಾಗಿದೆ. ವಿಧವೆ ಅಮಂಗಳಿಯಾದರೆ, ವಿಧುರ ಹೇಗೆ ಮಂಗಳನಾಗುವನು.

ಮದುವೆಯಾದ ಮೇಲೆ ಹೆಣ್ಣು ಪರದವಳು, ಬೇರೆ ಕುಲದವರಿಗೆ ಸೇರಿದವಳೆಂದು ನಮ್ಮ ಸಮಾಜದಲ್ಲಿ ಬಲವಾಗಿ ನಂಬಲಾಗಿದೆ(ನಂಬಿಸಲಾಗಿದೆ). ಪತಿಯ ಮರಣ ನಂತರ ಮಹಿಳೆ ಪರಾವಲಂಬಿಯಾಗಿ ಜೀವನ ನಡೆಸಬೇಕಾಗುತ್ತದೆ. ಹಲವಾರು ಮಹಿಳೆಯರು ಆರ್ಥಿಕ ನೆರವಿಗಾಗಿ ಬೇರೆಯವರ ಮೇಲೆ ಅವಲಂಭನೆಯಾಗುವುದು ಸಹಜ. ಇಂತಹ ಸಂಧರ್ಭದಲ್ಲಿ ಹಲವಾರು ಸಮಸ್ಯೆಗಳನ್ನು ಅವಳು ಎದುರಿಸಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ. ಇಂದು ಸಮಾಜದಲ್ಲಿ ಒಬ್ಬ ಗಂಡ ಸತ್ತ ಮಹಿಳೆಯನ್ನು ನೋಡುವ ಸ್ಥಿತಿ: ಅವಳು ಎಷ್ಟೆ ಒಳ್ಳೆಯವಳಾಗಿದ್ದರೂ, ಒಳ್ಳೆಯುದಾಗಿ ನಡೆದುಕೊಂಡರೂ ಸಹ ಅವಳನ್ನು ಕೆಟ್ಟ ದೃಷ್ಟಿಯಿಂದಲೇ ನೋಡಲಾಗುತ್ತೆ. ಗಂಡನಿರುವ ಒಬ್ಬ ಮಹಿಳೆ ಪಕ್ಕದ ಮನೆಯ ಪುರುಷನನ್ನು ಮಾತನಾಡಿಸಿದರೆ ಅದು ಸರಿ ಆದರೆ ಅದೇ ಗಂಡ ಸತ್ತ ಒಬ್ಬ ಹೆಂಗಸು ಮಾತನಾಡಿದರೆ ಅದು ನೂರಾರು ಅನುಮಾನಕ್ಕೆ ದಾರಿ ಮಾಡಿಕೊಟ್ಟಿರುತ್ತೆ. ವಿಧವಾ ಹೆಣ್ಣು ಎಷ್ಟೇ ಶುದ್ದವಾದ ನಡತೆಯಿದ್ದರೂ ಸಹ ಅವಳು “ಮಂಗಳ ಸೂತ್ರ ರಹಿತ ಸ್ತ್ರೀ” ಯೇ ಆಗಿರುತ್ತಾಳೆ. ಮುಟ್ಟದ ಬಂಧನಗಳು, ಅಶುಭ ದರ್ಶನಗಳು ಮತ್ತು ಅವಳು ಎಷ್ಟು ದುಡಿದರೂ, ಎಷ್ಟೇ ಶ್ರಮ ಪಟ್ಟರೂ ಸಹ ಅವಳನ್ನು ಬೇಡದ ವಸ್ತುವಂತೆ ಕಾಣಲಾಗುತ್ತಿದೆ. ಪತಿಯ ಮರಣ ನಂತರ ಪತ್ನಿಗೆ ಆಸ್ಥಿಯಲ್ಲಿ ಹಕ್ಕನ್ನು ಪಡೆಯಲು ಕಾಯ್ದೆಯ ಪ್ರಕಾರ ಅವಕಾಶ ಇದೆ. ಆದರೆ ಇದು ಎಷ್ಟು ಪ್ರಮಾಣದಲ್ಲಿ ಪಡೆದುಕೊಳ್ಳಲು ಸಾದ್ಯವಾಗಿದೆ ಎಂದು ನಾವು ಯೋಚಿಸಬೇಕಿದೆ. ನಮ್ಮ ಸಮಾಜದಲ್ಲಿ ಇಷ್ಟು ಅಮಾನವೀಯ ಮಾನಸಿಕ ಹಿಂಸೆಯನ್ನು ನೀಡಲಾಗುತ್ತಿದ್ದರೂ ನಾವು ಮೌನವಾಗಿರುವುದೇಕೆ?

21 ನೇ ಶತಮಾನದಲ್ಲಿ ಅವಮಾನ, ಶೋಷಣೆ, ದಬ್ಬಾಳಿಕೆ, ದಮನ, ಅತ್ಯಾಚಾರ, ಲೈಂಗಿಕ ಕಿರುಕುಳ ಮತ್ತು ಮಾನಸಿಕ ಕಿರುಕುಳಗಳಿಗೆ ಹೆಣ್ಣು ಬಲಿಯಾಗುತ್ತಿದೆ. ಇವೆಲ್ಲವೂ ಇದ್ದರೂ ಸಹ ಹೆಣ್ಣು ಗಂಡನ ಮಾನ ಉಳಿಸಲೆಂದೋ ಅಥವಾ ಗಂಡನ ಮೇಲಿನ ಗೌರವ ಮತ್ತು ಸಮಾಜದಲ್ಲಿನ ಸ್ಥಾನಮಾನಕ್ಕಾಗಿ, ತಮ್ಮ ಕುಟುಂಬದ ಗೌರವಕ್ಕಾಗಿ ಎಷ್ಟು ರೀತಿಯ ಅವಮಾನಗಳು ನಡೆದರೂ ಸಹ ಸಹಿಸಿಕೊಂಡು ಜೀವನ ನಡೆಸುವವರು ಹೆಣ್ಣು. ಇಂತಹ ಹೆಣ್ಣಿಗೆ ನಮ್ಮ ಸಮಾಜದಲ್ಲಿ ನೀಡುತ್ತಿರುವ ಗೌರವ ಆದರೂ ಏನು. ಕುಟುಂಬಗಳಲ್ಲಿ ಅವರಿಗೆ ಸಿಗುತ್ತಿರುವ ಸ್ಥಾನ ಯಾವುದು. ಕೊನೆಗೆ ಅವರ ಮರಣ ನಂತರ ಸಹ ಅವರನ್ನು ಸಾಂಪ್ರದಾಯಕವಾಗಿ ಅಲ್ಲದಿದ್ದರೂ ಕನಿಷ್ಟ ಗೌರವನ್ನು ನೀಡುವಲ್ಲಿ ನಮ್ಮ ಸಮಾಜವಿಲ್ಲ. ದೇಶ ರಕ್ಷಕರು, ಹೆಣ್ಣಿಗೆ ಗೌರವ ಕೊಡುತ್ತೇವೆ ಹಲವು ಸಂಘಟನೆಗಳು, ಅವಳ ಕಷ್ಟಕ್ಕೆ ನೆರವಾಗುತ್ತೇವೆಂದು ಹೇಳುವ ಹಲವು ಮಹಿಳಾ ಸಂಘಗಳು ಇವರೆಲ್ಲರ ಪಾತ್ರ ಏನು? ಎಷ್ಟು ಜನ ಇಂತಹ ವ್ಯವಸ್ಥೆಯ ವಿರುದ್ದ ಬೀದಿಗಿಳಿದಿದ್ದಾರೆ? ಹೆಣ್ಣು- ಗಂಡು ನಡುವಿನ ಮಾತುಕತೆ ಮಾತ್ರ ಸಂಸ್ಕøತಿನಾ? ವಿಧವೆಯರನ್ನು ಗೌರವಿಸುವುದು ಸಂಸ್ಕøತಿ ವಿರೋದಿಯಗುತ್ತದಯೇ. ನಮ್ಮ ದೇಶ ಎಷ್ಟೇ ಮುಂದುವರಿದರೂ ಸಹ ಸಮಾನ ಅವಕಾಶ, ಸಮಾನ ಆಶಯಗಳು ವಿಧವಾ ಮಹೊಇಳೆಯರಿಗೂ ಸಿಕ್ಕರೂ ಸಹ ಅವರನ್ನು ಎರಡನೇ ದರ್ಜೆಯ ಮಹಿಳೆಯನ್ನಾಗಿ ನೋಡಲಾಗುತ್ತಿದೆ. ಇದು ಯಾಕೆ? ಎಲ್ಲರಂತೆಯೇ ಅವಳು ಸ್ತ್ರೀಯಲ್ಲವೇ. ಅವಳಿಗೂ ನಮ್ಮ ತರ ಬದುಕುವ ಹಕ್ಕಿಲ್ಲವೇ? ನಮ್ಮ ಭವ್ಯ ಸಮಾಜ ಅತ್ತ ಕಡೆ ಯೋಚಿಸಬೇಕಾಗಿದೆ. ಆಗ ಮಾತ್ರ ನಾವು ಬದಲಾವಣೇಯನ್ನು ಕಾಣಬಹುದಾಗಿದೆ.


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x