ವೇದಾವತಿ ಹೆಚ್.ಎಸ್. ಅಂಕಣ

ಹುರುಳಿ ಕಾಳಿನ ಬಸ್ಸಾರು, ಹುರುಳಿ ಕಾಳಿನ ಉಸುಲಿ ರೆಸಿಪಿ: ವೇದಾವತಿ ಹೆಚ್. ಎಸ್.

ಹುರುಳಿ ಕಾಳು ದ್ವಿದಳ ಧ್ಯಾನವಾಗಿದ್ದು, ಅನೇಕ ರೀತಿಯ ಆರೋಗ್ಯ ಸಂಗಾತಿ ಗುಣ ಹೊಂದಿದೆ. ಬಹಳ ರುಚಿಯಾದ ಹಾಗೂ ಪೋಷಕಾಂಶಯುಕ್ತ ಆಹಾರ ಪದಾರ್ಥಗಳಲ್ಲೊಂದಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಪ್ರೊಟೀನ್, ವಿಟಮಿನ್, ಜೀವಸತ್ವ, ಖನಿಜ, ಕಬ್ಬಿಣ, ಫಾಸ್ಪರಸ್, ಕ್ಯಾಲ್ಸಿಯಂ ಹೊಂದಿದೆ.

1.ಹುರುಳಿ ಕಾಳಿನ ಬಸ್ಸಾರು.
ಬೇಕಾಗುವ ಸಾಮಾಗ್ರಿಗಳು:
ಮೊಳಕೆ ಕಟ್ಟಿದ ಹುರುಳಿ ಕಾಳು 1ಕಪ್
ತೆಂಗಿನ ತುರಿ ಅರ್ಧ ಕಪ್/ಆಗಲೇ ತುರಿದದ್ದು.
ಹುಣುಸೆ ಹಣ್ಣಿನ ರಸ ಸ್ವಲ್ಪ
ಜೀರಿಗೆ ಒಂದು ಟೀ ಚಮಚ
ಸಾಸಿವೆ ಅರ್ಧ ಟೀ ಚಮಚ
ಇಂಗು ಚಿಟಿಕೆ
ತುಪ್ಪ ಎರಡು ಚಮಚ
ರಸಂ ಪೌಡರ್ ಮೂರು ಚಮಚ
ಉಪ್ಪು ರುಚಿಗೆ ತಕ್ಕಷ್ಟು
ಬೆಲ್ಲ ಸ್ವಲ್ಪ
ಕೊತ್ತಂಬರಿ ಸೊಪ್ಪು ಸ್ವಲ್ಪ
ಕರಿಬೇವು ಸೊಪ್ಪು ಸ್ವಲ್ಪ
ಬೆಳ್ಳುಳ್ಳಿ ಎಸೆಳುಗಳು ಹತ್ತು
ನೀರು ಹತ್ತು ಕಪ್.

ತಯಾರಿಸುವ ವಿಧಾನ:
ಮೊಳಕೆ ಕಟ್ಟಿದ ಹುರುಳಿ ಕಾಳನ್ನು ಆರು ಕಪ್ ನೀರು ಹಾಕಿ ಕುಕ್ಕರ್ನಲ್ಲಿ ಹತ್ತು ವಿಷಲ್ ಕೂಗಿಸಿ.ಕುಕ್ಕರ್ ಇಳಿದ ನಂತರ ಜರಡಿಯಲ್ಲಿ ಸೋಸಿ ಕೊಂಡು ನೀರು ಮತ್ತು ಕಾಳನ್ನು ಬೇರೆ ಬೇರೆ ತೆಗೆದಿಡಿ. ನಂತರ ಸೋಸಿದ ಹುರುಳಿ ಕಾಳುಗಳಿಗೆ ಮೂರು ಕಪ್ ನೀರು ಹಾಕಿ ಒಂದು ಪಾತ್ರೆಯಲ್ಲಿ ಪುನಃ ಒಲೆಯಲ್ಲಿ ಬೇಯಿಸಿ. ಪೂರ್ತಿ ಅದರಲ್ಲಿರು ಕಟ್ಟು ಬಿಡಲಿ.ನಂತರ ಜರಡಿಯಲ್ಲಿ ಸೋಸಿ. ಎಲ್ಲಾ ಹುರುಳಿ ನೀರನ್ನು ಒಟ್ಟಿಗೆ ಸೇರಿಸಿ.
ಮಿಕ್ಸಿಯಲ್ಲಿ ತೆಂಗಿನ ತುರಿ, ಹುಣಸೆ ರಸ, ರಸಂ ಪೌಡರ್ ಮತ್ತು ಅರ್ಧ ಕಪ್ ಬೇಯಿಸಿದ ಹುರುಳಿ ಕಾಳು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
ಬಾಣಲೆಯಲ್ಲಿ ತುಪ್ಪವನ್ನು ಹಾಕಿ.
ಸಾಸಿವೆ, ಜೀರಿಗೆ, ಕರಿಬೇವು ಮತ್ತು ಚಿಕ್ಕದಾಗಿ ಕತ್ತರಿಸಿದ ಬೆಳ್ಳುಳ್ಳಿಯನ್ನು ಹಾಕಿ ಹುರಿಯಿರಿ.
ಒಗ್ಗರಣೆಗೆ ಹುರುಳಿ ನೀರನ್ನು ಸೇರಿಸಿ. ಜೊತೆಗೆ ರುಬ್ಬಿದ ಮಸಾಲೆ ಮಿಶ್ರಣವನ್ನು ಹಾಕಿ. ಉಳಿದ ನೀರನ್ನು ಸೇರಿಸಿ. ಬೆಲ್ಲವನ್ನು ಹಾಕಿ. ಚೆನ್ನಾಗಿ ಕುದಿಸಿ. ಕುದಿ ಬಂದ ನಂತರ ಕೊತ್ತಂಬರಿ ಸೊಪ್ಪನ್ನು ಹಾಕಿ ಒಲೆಯಿಂದ ಇಳಿಸಿ. ರುಚಿಯಾದ ಹುರುಳಿ ಕಾಳಿನ ಬಸ್ಸಾರು ಅನ್ನ,ರಾಗಿ ಮುದ್ದೆ, ಇಡ್ಲಿಯೊಂದಿಗೆ ಸವಿಯಲು ರುಚಿಯಾಗಿರುತ್ತದೆ. ಮಾರನೆಯ ದಿನಕ್ಕೆ ಬಸ್ಸಾರು ಇನ್ನೂ ರುಚಿಯಾಗಿರುತ್ತದೆ.

2.ಹುರುಳಿ ಕಾಳಿನ ಉಸುಲಿ.
ಬೇಕಾಗುವ ಸಾಮಾಗ್ರಿಗಳು:
ಮೊಳಕೆ ಬಂದ ಹುರುಳಿ ಕಾಳು ಒಂದು ಕಪ್
ಈರುಳ್ಳಿ ಎರಡು
ಹಸಿ ಮೆಣಸಿನಕಾಯಿ ಎರಡರಿಂದ ಮೂರು
ಕರಿಬೇವು ಸ್ವಲ್ಪ
ತೆಂಗಿನ ತುರಿ ಅರ್ಧ ಕಪ್
ತೆಂಗಿನ ಎಣ್ಣೆ/ಎಣ್ಣೆ ಎರಡು ಚಮಚ.
ಕೊತ್ತಂಬರಿ ಸೊಪ್ಪು ಸ್ವಲ್ಪ.
ಉಪ್ಪು ರುಚಿಗೆ ತಕ್ಕಷ್ಟು.
ಒಗ್ಗರಣೆಗೆ:
ಸಾಸಿವೆ ಒಂದು ಚಮಚ
ಕಡಲೆಬೇಳೆ ಒಂದು ಚಮಚ
ಉದ್ದಿನಬೇಳೆ ಒಂದು ಚಮಚ

ತಯಾರಿಸುವ ವಿಧಾನ:
ಮೊಳಕೆ ಕಟ್ಟಿದ ಹುರುಳಿ ಕಾಳನ್ನು ಚನ್ನಾಗಿ ಬೇಯಿಸಿ.
ಈರುಳ್ಳಿಯನ್ನು ಚಿಕ್ಕದಾಗಿ ಹೆಚ್ಚಿಕೊಳ್ಳಿ‌.
ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಹಾಕಿ ಬಿಸಿ ಮಾಡಿ ಕೊಳ್ಳಿ.
ಸಾಸಿವೆ, ಕಡಲೆಬೇಳೆ, ಉದ್ದಿನ ಬೇಳೆ ಮತ್ತು ಕರಿಬೇವು ಹಾಕಿ ಒಗ್ಗರಣೆ ಮಾಡಿ.
ನಂತರ ಈರುಳ್ಳಿಯನ್ನು ಹಾಕಿ ಕೆಂಬಣ್ಣ ಬರುವರೆಗೆ ಹುರಿಯಿರಿ. ಬೇಯಿಸಿ ಕೊಂಡ ಹುರುಳಿ ಕಾಳನ್ನು ಹಾಕಿ ಮಿಶ್ರಣ ಮಾಡಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ತೆಂಗಿನ ತುರಿ ಹಾಕಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪನ್ನು ಹಾಕಿ ಅಲಂಕರಿಸಿ.
ರುಚಿಯಾದ ಮತ್ತು ಆರೋಗ್ಯಕರವಾದ ಹುರುಳಿ ಉಸುಲಿ ತಯಾರಿಸಿ ಸವಿಯಿರಿ.

ವೇದಾವತಿ ಹೆಚ್. ಎಸ್.

ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *