ಪಂಜು ಸಾಹಿತ್ಯದ ಚಿಲುಮೆ, ಅಂತರ್ಜಾಲದಲ್ಲಿ ಹೆಸರು ಮಾಡಿದಕ್ಕಿಂತಲೂ ಅಂತರಂಗದಲ್ಲಿ ಸದ್ದಿಲ್ಲದೆ ಸೇರಿಕೊಂಡ ಸಿಹಿ ಪನ್ನೀರು. ಸಾಹಿತ್ಯ ರಚಿಸಿ ಮಸ್ತಕದಿಂದ ಪುಸ್ತಕಕ್ಕೆ ಇಳಿಸಿ ಕೂತವರಿಗೆ; ಪುಸ್ತಕದಿಂದ ಓದುಗರ ಮನೆಗೆ ಮನಸಿಗೆ ತಲುಪಿಸುವಂತಹ ಪರಿಪೂರ್ಣ ಕೆಲಸ ಪಂಜುವಿನಿಂದಾಗಿದೆ. ಪಂಜು ಎಂದರೆ ಬೆಳಕು, ಕತ್ತಲಲ್ಲಿದ್ದವರಿಗೆ ಪಂಜುಹಿಡಿದು ಸಾಹಿತ್ಯ ಬೆಳೆಸುವ ದಾರಿತೋರಿಸಿದೆ ನಾಡಿಗೆ ಪರಿಚಯಿಸಿ ಸಾಹಿತ್ಯ ಲೋಕದಲ್ಲಿ ಗುರುತಿಸಿಕೊಳ್ಳಲು ಸಹಾಯವಾಗಿ ನಿಂತಿದೆ. ಯುವ, ಎಲೆ ಮರೆ ಕಾಯಿಯಂತಹ ಸಾಹಿತಿಗಳಿಗೆ ಉತ್ತಮ ವೇದಿಕೆಯಾಗಿ ನಿಂತು ೭ ವಸಂತಗಳನ್ನು ಪೂರೈಸಿದೆ. ಈ ಸಪ್ತ ವರ್ಷದಲ್ಲಿ ಸಾಕಷ್ಟು ಓದುಗರ ಮನಗೆದ್ದು ಸುಪ್ತವಾದ ಮನಸಲ್ಲಿ ನೆಲೆಯೂರಿದೆ.
ವೈಯಕ್ತಿಕವಾಗ ನನಗೆ ಪರಿಚಯವಾಗಿ ೨-೩ ವರ್ಷಗಳಷ್ಟೇ ಆದರೂ ನನ್ನ ಕವನ ಕಥೆಗಳನ್ನು ಓದುಗರಿಗೆ ಮುಟ್ಟಿಸಿ ಪ್ರೋತ್ಸಹಿಸಿರುವುದು, ಬರವಣಿಗೆಯಲ್ಲಿ ಹೆಚ್ಚು ತೊಡಗುವಂತೆ ಮಾಡಿದೆ. ಕೇವಲ ಒಂದು ಪ್ರಕಾರದ ಸಾಹಿತ್ಯಕ್ಕೆ ಸೀಮಿತಗೊಳಿಸದೆ, ವೈಯಕ್ತಿಕವಾಗಿ ಮಾತಾಡಿ ಇನ್ನಿತರ ಸಾಹಿತ್ಯ ಪ್ರಕಾರಗಳನ್ನೂ ಬರೆಯಿರಿ ಎಂದು ಹುರಿದುಂಬಿಸುವ ಕೆಲಸ ಪಂಜು ಬಳಗ ಮಾಡುತ್ತಿದೆ.
ಪಂಜು ಎಂದರೆ ಸಾಕು, ಪಂಜು ನೆನಪಾದರೆ ಸಾಕು ಏನಾದರೂ ಬರೆದು ಕಳಿಸಬೇಕೆನಿಸುತ್ತದೆ. ತಕ್ಷಣ ಜಾಗೃತನಾಗಿ ಬರೆಯಲು ತೊಡಗುತ್ತೇನೆ. ನನ್ನನ್ನು ಗುರುತಿಸುವವರೂ, ಮತ್ತೊಬ್ಬರಿಗೆ ಪರಿಚಯಿಸಲು ಪಂಜುವಿನಲ್ಲಿ ಇವರ ಕಥೆ ಬಕವನ ಬರುತ್ತೆ ನೋಡಿ; ವರದೇಂದ್ರ ಕೆ ಅಂತ, ಅವರೇ ಇವರು ಎಂದು ಪರಿಚಯಿಸುವುದನ್ನು ಕಂಡು ಕೇಳಿದಾಗ ಪಂಜುವಿನ ಬಗ್ಗೆ ಹೆಮ್ಮೆ ಎನಿಸುತ್ತದೆ.
ಜನವರಿ ೨೧ ರಂದು ಪಂಜುವಿನ ಹುಟ್ಟುಹಬ್ಬ. ಈಗಾಗಲೆ ಏಳು ವರ್ಷಗಳನ್ನು ಪೂರೈಸಿರುವ ಪಂಜು ಹೀಗೆ ನೂರಾರು ವರುಷ ಹುಟ್ಟುಹಬ್ಬ ಆಚರಿಸಿಕೊಳ್ಳಲಿ. ನಾವೆಲ್ಲ ಪಂಜು ಬಳಗದಲ್ಲಿದ್ದುಕೊಂಡು ಪಂಜುವನ್ನು ಉತ್ತಮ ಪತ್ರಿಕೆಯಾಗಿಸೋಣ.
“ಹುಟ್ಟು ಹಬ್ಬದ ಶುಭಾಶಯಗಳು ಪಂಜು”
–ವರದೇಂದ್ರ ಕೆ.
ಜನ್ಮದಿನದ ಹಾರ್ದಿಕ ಶುಭಾಶಯಗಳು💐. ಪಂಜು ಪತ್ರಿಕೆಗೆ.
ನಮ್ಮಂತಹ ಅದೆಷ್ಟೋ ಬರಹಗಾರರ ಬರಹಗಳಿಗೆ ವೇದಿಕೆ ನೀಡಿದ್ದಕ್ಕೆ. ಹಾಗೆಯೇ ತನ್ನ ಬತ್ತಳಿಕೆಯಲ್ಲಿ ತುಂಬಿಸಿಕೊಂಡಿದಕ್ಕೆ. ವಂದನೆಗಳು💐