ಹುಟ್ಟು ದರಿದ್ರವಾಗಿದ್ದರೆ ಏನು? ಸಾವು ಚರಿತ್ರೆ ಆಗಿರಬೇಕು: ಸಂತೋಷ್ ಗುರುರಾಜ್

 

 

 

 

 

ಮೊನ್ನೆ ನನ್ನ ಫೇಸ್ ಬುಕ್ ಅಕೌಂಟ್ ನ ಗೋಡೆಯ ಮೇಲೆ ಒಂದು ಸ್ಟೇಟಸ್ ಬಂದಿತ್ತು ,ಆ ಸ್ಟೇಟಸ್ ನೋಡಿ ನನಗೂ ತಕ್ಷಣ ಮನಸ್ಸಿಗೆ ಒಂದು ತರಹದ ಕುತೂಹಲ ಉಂಟಾಯಿತು . ಮತ್ತೆ ಬೇರೆ ಯಾವುದೇ ಸ್ಟೇಟಸ್ ಸಹ ಅಷ್ಟೊಂದು ಮನಸ್ಸಿಗೆ ಹಿಡಿಸಿದ್ದಿಲ್ಲ.ಮತ್ತು ಆ ಸ್ಟೇಟಸ್ ನೋಡಿದಾಗಿನಿಂದ ನಾನು ಅದನ್ನು ಅನುಸರಿಸಬೇಕು ಎಂದು ಅನಿಸತೊಡಗಿತು ಆ ಸ್ಟೇಟಸ್ ಹೀಗಿದೆ ನೋಡಿ 

"ಹುಟ್ಟು ದರಿದ್ರವಾಗಿದ್ದರೆ ಏನು? ಸಾವು ಚರಿತ್ರೆ ಆಗಿರಬೇಕು"

ಇದರಲ್ಲಿ ಬಹಳಷ್ಟು ಸತ್ಯ ಇದೆ ಎಂದೆನಿಸತೊಡಗಿತು . ಹುಟ್ಟು ನಮ್ಮ ಅರಿವಿಗೆ ಇಲ್ಲದೆ ,ಮತ್ತು ನಾವು ಶ್ರೀಮಂತರೋ ದರಿದ್ರರೋ ತಿಳಿಯದೆ ಆಗುವಂತದು,ಅದು ನಮ್ಮ ತಪ್ಪಲ್ಲ ಆದರೆ ಸಾವು ಸಹ ಅದೇ ದರಿದ್ರದಲ್ಲಿ ಆದರೆ ಅದಕ್ಕೆ ಪೂರ್ತಿ ಹೊಣೆ ಆ ಮನುಷ್ಯನೇ ಎಂದೆನಿಸಿತು. ಯಾಕೆಂದರೆ ಹುಟ್ಟಿದ ಕೆಲವು ನಂತರದ ದಿನಗಳ ಬಳಿಕ ಅವನ/ಅವಳ ಜೀವನಕ್ಕೆ ಅವರೇ ಜವಾಬ್ದಾರಿ ಎನ್ನುವುದು ನನ್ನ ವಾದ, ಕಾರಣ ನಮಗೆ ಬುದ್ದಿ ಬಂದಾದ ನಂತರ ನಮ್ಮ ನಮ್ಮ ಜೀವನದ ಗುರಿ ಹೊತ್ತು ನಮ್ಮ ಬಾಳಿನ ದಾರಿಯನ್ನು ಕೊನೆಯತನಕ ಹೇಗೆ ಒಯ್ಯಬೇಕು ಎಂದು ನಿರ್ಧಾರ ಮಾಡುವವರು ನಾವೇ, ಹಾಗಿರುವಾಗ ನಮ್ಮ ಜೀವನದ ಕೊನೆಯ ಹಂತವಾದ  ಸಾವು ಹೇಗಿರಬೇಕು ಎಂದೂ ಸಹ ನಾವೇ ನಿರ್ಧಾರ ಮಾಡಬೇಕಲ್ಲವೇ ?

ಆದೆಷ್ಟೋ ಮಹಾನುಭಾವರು ಹುಟ್ಟುವಾಗ ಬಹಳಷ್ಟು ಬಡವರು, ಅದೇ ಅವರು ಸಾಯುವ ವೇಳೆಗೆ ತಮ್ಮ ತಮ್ಮ ಸಾದನೆಗಳನ್ನು ಚರಿತ್ರೆಯ ಪುಟದಲ್ಲಿ ಎಂದು ಮರೆಯಲಾಗದ ಪುಟಗಳನ್ನಾಗಿ ಮಾಡಿಟ್ಟು ಹೋಗಿದ್ದಾರೆ.ಹಾಗಾದರೆ ಅವರೆಲ್ಲಾ ಏನು ದೈವ ಮಾನವರೇ?? ಇಲ್ಲ . ಅವರಲ್ಲಿ ಏನಾದರು ಸಾದಿಸಬೇಕೆಂಬ ಛಲವಿತ್ತು .ಅದೆಷ್ಟೇ ಕಷ್ಟ ಬಂದರೂ ಅದನ್ನೆಲ್ಲಾ ಮೀರಿ ತಮ್ಮ ಆತ್ಮ ಸ್ಥೆರ್ಯದಿಂದ ಸಾದಿಸಿ ಇಂದು ಚರಿತ್ರೆಯ ಪುಟಗಳಲ್ಲಿ ರಾರಾಜಿಸುತ್ತಿದ್ದಾರೆ. ಅದೆಕ್ಕೆಲ್ಲ ಅವರ ದೃಡ ಮನಸ್ಸು, ಆತ್ಮ ವಿಶ್ವಾಸ. 

ಹೀಗೆ ನಾನು ನನ್ನ ಪಿ ಯು ಸಿ ಮುಗಿಸಿ ಡಿಗ್ರಿ ಮೊದಲನೇ ವರ್ಷಕ್ಕೆ ಹೋದಾಗ ನನ್ನಂತೆಯೇ ಸುಮಾರು ಹೊಸಬರು ಅದೇ ಕಾಲೇಜಿಗೆ ಸೇರಿದ್ದರು . ಆಗ ಮೊದಲ ತರಗತಿ ತಗೆದುಕೊಂಡ ನಮ್ಮ ಶಿಕ್ಷಕರು ಎಲ್ಲಾ ವಿದ್ಯಾರ್ಥಿಗಳನ್ನು ಕುರಿತು ನೀವೆಲ್ಲರೂ ಮುಂದೆ ಏನಾಗುವ ಕನಸು ಹೊತ್ತಿದ್ದಿರಾ ಎಂದು ಕೇಳಲು ಒಬ್ಬೊಬ್ಬರಾಗಿ ತಮ್ಮ ತಮ್ಮ ಕನಸಿನ ಗುರಿಯನ್ನು ಹೇಳತೊಡಗಿದರು . ನನ್ನ ಮುಂದಿನ ಬೆಂಚಿನ ಮೇಲೆ ಕೂತಿದ್ದ ಒಬ್ಬ "ಸರ್ ಎಂದಾದರು ಒಂದು ದಿನ ಎಲ್ಲರೂ ಸಾಯುತ್ತೇವೆ ,ಆದರೆ ನಾನು ಸತ್ತಾಗ ಕನಿಷ್ಠ ೧೦೦ ಜನವಾದರು ಕಣ್ಣಿರು ಹಾಕಬೇಕು ಹಾಗೆ ಬಾಳುವ  ಕನಸು ನನ್ನದು ಎಂದ "ಇದನ್ನು ಕೇಳಿದ ಎಲ್ಲರೂ ಒಂದು ಕ್ಷಣ ಮೌನವಾದರು ಆದರೆ ಅವತ್ತು ಅವನು ಆಡಿದ ಮಾತು ನನ್ನ ಮೇಲೆ ಏನೋ ಒಂದುತರಹದ ಪ್ರಭಾವ ಮೂಡಿತ್ತು. ಅದೇ ತರಹದ ಸ್ಟೇಟಸ್ ಈಗ ಫೇಸ್ಬುಕ್ ನಲ್ಲಿ  ನೋಡಿ ಆ ವಿಷಯದ ಬಗ್ಗೆ ಯೋಚಿಸುವಂತೆ ಮಾಡಿತು . 

ಜೀವನದ ನಮ್ಮ ದಿನಗಳನ್ನು ನಿಮಿಷಗಳಲ್ಲಿ ಎಣಿಸಬಹುದು,ಹೀಗಿರುವಾಗ ಈ ಸ್ವಲ್ಪ ಅವದಿಯಲ್ಲಿ ಆ ದೇವರು ಕೊಟ್ಟಿರುವ ಈ ಜೀವನಕ್ಕೆ ಒಂದು ಒಳ್ಳೆ ರೂಪ ಕೊಟ್ಟು ಏನಾದರು ಸಾದಿಸಿ ಹೋಗಬೇಕಾಗಿರುವುದು ನಮ್ಮ ಕರ್ತವ್ಯ. ಅನವಶ್ಯಕವಾದ ಬೇರೆ ಬೇರೆ ವಿಷಯಗಳಿಗೆ ಪ್ರಾಮುಖ್ಯತೆ ಕೊಡದೆ ಏನಾದರು ಒಂದು ಛಲ ಇಟ್ಟುಕೊಂಡು ಅದನ್ನು ಸಾದಿಸಿ ತೋರಿಸಲು ಪ್ರಯತ್ನ ಪಡೋಣ. ಒಂದು ವೇಳೆ ಗುರಿ ತಲುಪಲು ಸಾಧ್ಯವಾಗದೆ ಹೋದರೆ ಮತ್ತೊಮ್ಮೆ ಪ್ರಯತ್ನಿಸೋಣ, ಕಾರಣ ಎಲ್ಲರೂ ತಮ್ಮ ಮೊದಲ ಪ್ರಯತ್ನದಲ್ಲೇ ಗೆದ್ದು ಚರಿತ್ರೆಯ ಪುಟಕ್ಕೆ ಹೋದವರಲ್ಲ.ಕೆಲ ಗುರಿಗಳು ಅಷ್ಟು ಬೇಗ ಸಿಗುವಂತದ್ದಲ್ಲ ಅವುಗಳನ್ನು ಸೇರಲು ಬಹಳಷ್ಟು ಶ್ರಮಿಸಬೇಕಾಗುತ್ತದೆ ಅದಕ್ಕೆ ಕಾರಣ ಆ ಗುರಿ ಅಥವಾ ಕ್ಷೇತ್ರಕ್ಕೆ ಇರುವ ಮಹತ್ವ. ಅದು ಎಂತದೆ ಇರಲಿ ಮನಸಿದ್ದರೆ ಮಾರ್ಗ ಉಂಟು ಎನ್ನುವಂತೆ ಅದನ್ನು ಬೆಂಬಿಡದೆ ಸಾದಿಸಬೇಕು.  

ಒಂದಂತು ಸತ್ಯ ಹುಟ್ಟು ನಮ್ಮ ಕೈಯಲ್ಲಿ ಇಲ್ಲದೆ ಇರಬಹುದು ಆದರೆ ಸಾವು ಎಲ್ಲರಿಗೂ ಗೊತ್ತಿರುವ ಸತ್ಯ ಅದನ್ನು ಹೇಗೆ ಅಂತ್ಯಗೊಳಿಸಬೇಕು ಎನ್ನುವುದಕ್ಕೆ ಪೂರ್ತಿ ಜವಾಬ್ದಾರಿ ನಾವುಗಳೇ !

******

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

4 Comments
Oldest
Newest Most Voted
Inline Feedbacks
View all comments
prashasti
10 years ago

Sooperb..

Santhosh Gururaj
Santhosh Gururaj
10 years ago
Reply to  prashasti

Thank you

SURENDRA GS
SURENDRA GS
10 years ago

ಲೇಖನ ಸಮಯೋಚಿತವಾಗಿದೆ. ಭಾರತೀಯರು ಪರಂಪರೆಯಲ್ಲಿ ಮೊದಲಿನಿಂದಲೂ ಬರೆಯಲಾರದ ಭಾವಗೀತೆಯಂತೆ ಜನಪದದಲ್ಲಿ ಚರಿತ್ರೆಯಾಗಿದ್ದಾರೆ.ತಮಗೆ ಧನ್ಯವಾಧಗಳು. ನಾವು ಅಥ೵ ಮಾಡಿಕೊಳ್ಳಬೇಕಾಗಿರುವುದು  ಎಲ್ಲಿ ಅನ್ನ, ಾಹಾರ,ವಿದ್ಯೆ ಉಚಿತವಾಗಿ ಎಲ್ಲರಿಗೂ ಸಿಗುತ್ತದೊ ಅದು ಮಾತ್ರ ಭಾರತ. ೆಲ್ಲಿ ಇವು ಬುಸಿನೆಸ್ ಆಗಿದೆಯೋ ಅದು ಬ್ರಿಟೀಷರ ಇಂಡಿಯಾ ಔದಲ್ವಾ ?.

ಸುರೇಂದ್ರ. ಜಿ. ಎಸ್.

ರಾಮಗೊಂಡನಹಳ್ಳಿ.ದಾವಣಗೆರೆ ತಾ..

 

Santhosh Guruaj
Santhosh Guruaj
10 years ago

ಸತ್ಯವಾದ ಮಾತು ಸುರೇಂದ್ರರವರೇ ,

ಎಲ್ಲಿ ಅನ್ನ, ಾಹಾರ,ವಿದ್ಯೆ ಉಚಿತವಾಗಿ ಎಲ್ಲರಿಗೂ ಸಿಗುತ್ತದೊ ಅದು ಮಾತ್ರ ಭಾರತ. 

ಅಂಥಹ ಭಾರತ ನಿರ್ಮಾಣವಾಗಲಿ ಎನ್ನುವುದು ಎಲ್ಲ ಆಶಯ.

ನಿಮ್ಮ ಈ ಪ್ರೋತ್ಸಾಹ ಹೀಗೆ ಇರಲಿ .   

4
0
Would love your thoughts, please comment.x
()
x