ಹೀಗೊಂದು ಕಥೆ : ಇಬ್ಬನಿಯ ಹುಡುಗ ರಾಮು


ಅವನು ಕಡುಬಡವ ಕುಟುಂಬದಿಂದ ಬಂದಿದ್ದ, ತಾಯಿಯ ಪ್ರೀತಿಯ ಬೆಲೆ ತಿಳಿದಿದ್ದ, ಕಷ್ಟ ಏನಂತ ಸ್ವತಃ ಅನುಭವಿಸಿದ್ದ ಕೂಡ, ಕಿತ್ತು ತಿನ್ನುವ ಬಡತನದ ಮಧ್ಯೆ ಬದುಕಿನಲ್ಲಿ.ಸಾಧಿಸಬೇಕೆಂಬ ಕನಸು ಕಂಡಿದ್ದ ಆ ಕನಸುಗಳನ್ನು ನನಸಾಗಿಸಲು ಹೊರಟ ಹಾದಿಯಲ್ಲಿ ಎದುರಾದ ಸವಾಲುಗಳೇ ಈ "ಹಿಗೋಂದು ಕಥೆ" ಎಂಬ ಲೇಖನ.

ತಂದೆಯನ್ನು ಕಳೆದುಕೊಂಡಾಗ ಅವನ ವಯಸ್ಸು ೭ ವರ್ಷ, ಬೀದಿಪಾಲಾಗಿ ಒಂದು ಒಪ್ಪತ್ತು ಅನ್ನ ನೀರಿಗೂ ಕಷ್ಟ ಪಡುವ ಪರಿಸ್ಥಿತಿ ಎದುರಿಸಿದ್ದ, ಅವ್ವನ ತವರು ಮನೆಯಲ್ಲಿ ಆಶ್ರಯಿಸಿದ್ದ ಅಲ್ಲೆಯೆ ಅವನ ಕನಸಿಗೆ ಕಲ್ಪನೆಯೂ ಮೂಡಿದ್ದು, ತಾಯಿಯ ಕಷ್ಟ ನು ದಿನ ನಿತ್ಯ ನೋಡುತ್ತಿದ್ದ ಅವನ ಮನುಸು ಧೃಡವಾಗುತ್ತಿತ್ತು, ಅದಕ್ಕೆ ಓದಿದ ಓದಲಾರಂಭಿಸಿದ ತರಗತಿಯಲ್ಲಿ ಶತದಡ್ಡನಿದ್ದವನು ಕೆಲವೇ ತಿಂಗಳಲ್ಲಿ ತರಗತಿಗೆ ಮೊದಲಿಗನಾಗಿ ಬೆಳದಿದ್ದೆ ಒಂದು ಪವಾಡ ಅಲ್ಲವೇ?

ಅವನು ಓದುತ್ತಾ ಹಿಂತಿರುಗಿ ನೋಡಲೇ ಇಲ್ಲಾ, ೧೦ ನೇ ತರಗತಿಯಲ್ಲಿ ಶಾಲೆಗೆ ಮೊದಲಿಗನಾದ ಪಿಯುಸಿಯಲ್ಲಿ ತಾಲ್ಲೂಕಿಗೆ ಮೊದಲಿನಾಗಿ ಬಹುಮಾನ ಗಿಟ್ಟಿಸಿದ, ಅವನ ಮೇಲಿನ ದೇವರ ಕರುಣೆ ಹೆತ್ತಬ್ಬೆಯ ಆಶ್ರೀವಾದವೋ ಗೊತ್ತಿಲ್ಲಾ ಅವನಿಗೆ ಸರ್ಕಾರಿ ಹುದ್ದೆ ದೊರಕಿತ್ತು, ಕನಸುಗಳಿಗೆ ರೆಕ್ಕೆ ಪುಕ್ಕಗಳು ಬಂದಿತ್ತು ಸಾಗಬೇಕಾದ ದಾರಿ ಬಹುದೂರವಿತ್ತು ಜೊತೆಗೆ ದೈಹಿಕ ವಿಕಲಾಂಗತೆ ಕುಗ್ಗಿಸಿತ್ತು, ಆದರೆ ನಮಗಿಂತ ಕಷ್ಟದಲ್ಲಿದ್ದವರನ್ನ ನೋಡು ಮಗಾ ಅವರಗಿಂತ ನೀನೆ ಲಕ್ಕಿ ಅಲ್ವವೇನೊ ಅನ್ನೋ ಗೆಳೆಯರ ಮಾತು ಅವನಿಗೆ ಸ್ಪೂರ್ತಿಯಾಗಿತ್ತು. ನೋಡುತ್ತಲೆ ಸರ್ಕಾರಿ ಕೆಲಸ ಸೇರಿದ, ದೂರವಿದ್ದ ಸಂಬಂಧಿಗಳು ಹತ್ತಿರವಾದರು, ಬದುಕಿನಲ್ಲಿ ತನ್ನ ಕಾಲ ಮೇಲೆ ತಾನು ನಿಂತಿದ್ದ, ಜೊತೆಯಲ್ಲಿ ಅವನ ಸಹದ್ಯೋಗಿಗಳ ಕೊಂಕು ಮಾತು ಅವನ ಕುಗ್ಗಿಸಲಿಲ್ಲ, ಅವನ್ನನ್ನು ಅಚಲವಾಗಿಸುತ್ತ ಸಾಗಿದವು,ಸರ್ಕಾರಿ ಇಲಾಖೆ ಎಂದಮೇಲೆ ಲಂಚಾ ಪ್ರಕರಣಗಳು ಸಾಮಾನ್ಯ ಅಲ್ವಾ ಹೊಸಬನಾಗಿದ್ದ ಇವನಿಗೆ ಹಿರಿಯ ಅಧಿಕಾರಿಯನ್ನು ವಿರೋದಿಸಲಾಗದೆ ಮನದಲ್ಲೇ ಶಪಿಸಿ ಸುಮ್ಮನಾಗಿಬಿಡುತ್ತಿದ್ದ ಅವನಿಗೆ ಸಹಾಯ ಮಾಡಬೇಕೆಂಬ ಮನಸಿತ್ತು ಹೃದಯ ವೈಶಾಲ್ಯವಿತ್ತು , ಹಂಬಲವಿತ್ತು ಕೂಡ .

ಅಂದೊಮ್ಮೆ ಕಛೇರಿಯಲ್ಲಿ ಅಜ್ಜಿಯೊಂದು ಪಿಂಚಣಿ ಸೌಲಭ್ಯ ಪಡೆಯಲು ಬಂದಿತ್ತು, ಅವರ ವಯಸ್ಸು ಎಪ್ಪತಾಗಿತ್ತು, ಸೀರೆ ಹರಿದಿತ್ತು ಮುಖ ಬಾಡಿತ್ತು ಮಾತು ತುಂಬಾ ಕ್ಷೀಣಿಸಿತ್ತು, ೫೦೦ರೂಪಾಯಿ ಮಾಸಿಕ ವೇತನ ಪಡೆಯಬೇಕೆಂಬ ಹಂಬಲವಿತ್ತು, ಬೊಗಸೆ ತುಂಬಿಕೊಂಡು ಬಂದಿದ್ದ ಮುದುಡಿದ ೧೦೦ ರ ಐದು ನೋಟುಗಳಿದ್ದವು, ಹಿರಿಯ ಅಧಿಕಾರಿಗಳಿಗೆ ದುಡ್ಡು ಕೊಟ್ಟ ಅಜ್ಜಿಯ ಕೊನೆಯ ಸರದಿ ಈ ಇವನದಾಗಿತ್ತು(ಕಥಾನಾಯಕ)

ಅಜ್ಜಿ ಅವನ ಬಳಿ ಬಂದಾಗ ಅಜ್ಜಿಯ ಮೇಲ್ನೋಟ ಕಂಡ ಅವನ ಮನಸ್ಸು ಕರಗಿತ್ತು, ಮೊದಲೆ ಬಡತನ ಗೊತ್ತಿತಲ್ಲಾ ಆಧಾರದಿಂದ ಮಾತನಾಡಿಸಿದ, ವಿಷಯ ತಿಳಿದು ಕೂಡಲೇ ಪಿಂಚಣಿ ಪತ್ರ ನೀಡಿಯೇ ಬಿಟ್ಟ ಇದರಿಂದ ಅಜ್ಜಿಯ ಖುಷಿಗೆ ಪಾರವೇ ಇರಲಿಲ್ಲ, ಆ ಖುಷಿಯಲ್ಲಿ ಅಜ್ಜಿ ತನ್ನ ಚೀಲದಿಂದ ಮಡಚಿ ಮುದ್ದೆಯಾಗಿದ್ದ ಹಣ ಕೊಡಲು ಮರೆಯಲಿಲ್ಲಾ ಗಮನಿಸಿದ್ದ ಅವನಿಗೆ ಕೋಪ ಪ್ರೀತಿ ಒಟ್ಟೊಟ್ಟಿಗೆ ಬಂದು " ಅಜ್ಜಿ ನಿಮಗಾರು ಕೊಟ್ಟರು ಈ ಹಣ ನೀಡುವ ಸುಪಾರಿ ಚೇ ಹಾಗೇಲ್ಲಾ ಕೊಡಬಾರದು ಯಾಕೇಂದ್ರೆ ನೀವು ಎಲ್ಲಿವರೆಗೂ ಕೊಡ್ತೀರಾ ಅಲ್ಲಿವರೆಗೂ ತಗೋಳೊರು ಜಾಸ್ತಿ ಅಗ್ತಾರೆ ಯೋಚನೆ ಮಾಡಿ ಅಜ್ಜಿ ಅಷ್ಟಕ್ಕೂ ನನಗೆ ಕೊಡಬೇಕು ಅನ್ನೋ ಪ್ರೀತಿ ಇದ್ದರೆ ನನಗೆ ಕೊಡೊ ಈ ದುಡ್ಡಲ್ಲಿ ನಿಮಗೆ ಒಂದೊಳ್ಳೆ ಸೀರೆ ತಗೋಳ್ಳಿ ಅಂದ ಅವನ ಮಾತನ್ನು ಕೇಳಿದ ಅಜ್ಜಿಗೆ ಒಂದು ಅರೆ ಕ್ಷಣ ಮಾತು ಬಾರದಾಗಿ ಕಣ್ಣು ಮಾತನಾಡಿತು, ಹೃದಯ ಕರಗಿ ನೀರಾಗಿತ್ತು, ಮಕ್ಕಳು ಇದ್ದರು ಅವರಿಂದ ಹೊರದೂಡಲ್ಪಟ್ಟ ಅಜ್ಜಿಗೆ ಮೊದಲ ಸಲ ಮಗ ನೆನಪಾಗಿದ್ದ. ಆ ಕ್ಷಣ ಮಾತು ಮರೆಯಾಗಿ ಮೌನ ಆವರಿಸಿತ್ತು, ಹೊರಡುವ ಮುನ್ನ ಅಜ್ಜಿಯ ಮೊಗದಲ್ಲಿದ್ದ ಧನ್ಯತೆ ನಗು ಕಂಡ ಇವನಿಗೇ ಏನು ಹೊಸದನ್ನು ಸಾಧಿಸಿದ ಅನುಭವ ಅಗಿತ್ತು. ಅದಾಗಲೇ ಅಜ್ಜಿ ಊರ ದಾರಿ ಹಿಡಿದಾಗಿತ್ತು.

ಹೀಗೆ ನಡೆಯುತ್ತಿರುವ ಅವನ ಜೀವನವೇ ಒಂದು ಕಥೆಯಾಗುತ್ತಿದೆ, ಗುರಿಯೆಡಿಗಿನ ಅವನ ನಿರ್ಧಾರ ಗಟ್ಟಿಯಾಗುತ್ತಿದೆ,.ಹೀಗಿದ್ದರು ಅವನ ಸಮಸ್ಯೆಗಳಿಗೆ ಕೊರತೆ ಇಲ್ಲ.ಹಾಗಂತ ಸಮಸ್ಯನೇ ಜೀವನ ಅಲ್ಲಾ ಬದಲಾಗಿ ಸಾಧನೆ ಜೀವನ ಅಂತ ಅಚಲ ನಂಬಿಕೆಯೊಂದಿಗೆ ಹೊರಟಿದ್ದಾನೆ….

ಪ್ರೀಯ ಗೆಳಯರೆ ಜೀವನದಲ್ಲಿ ಸಮಸ್ಯೆಗಳಿಗೆ ಎದೆಗುಂದದಿರಿ
ಎಲ್ಲಾವನ್ನು ಸವಾಲಾಗಿ ಸ್ವೀಕರಿಸಿ ಮುನ್ನುಗ್ಗಿರಿ ಜಯ ಯಾವಾಗಲು ನಿಮ್ಮದೇ.. all the best
ಜೀವನದಲ್ಲಿ ಎಷ್ಟು ದುಡ್ಡು ಗಳಿಸಿದಿವಿ ಅನ್ನೋದು ಮುಖ್ಯವಲ್ಲಾ, ಎಷ್ಟು ಜನರ ಮನದಲ್ಲಿ ನೆಲಸಿದಿವಿ ಅನ್ನೋದು ಮುಖ್ಯ..

ಈ ಕಥೆ ಕಾಲ್ಪನಿಕನಾ ಅಥವಾ ವಾಸ್ತವ ನಾ ನೀವೆ ಯೋಚಿಸಿ..

-ಇಬ್ಬನಿಯ ಹುಡುಗ –ರಾಮು 


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x