ಕಥಾಲೋಕ

ಹೀಗೊಂದಿಷ್ಟು ಕಥೆಗಳು (ಕಥೆಗಳಾ !!?) … : ಸುನೀತಾ ಮಂಜುನಾಥ್

ಹೀಗೊಂದಿಷ್ಟು ಕಥೆಗಳು
ಪುಟ್ಟ ಪಾದಗಳಿಗೆ ಗೆಜ್ಜೆ ತೊಡಿಸಿದ್ದ ಅಪ್ಪ 'ಮಹಾಲಕ್ಷ್ಮಿಯ ಕಾಲು ಅಂತ ಮುತ್ತಿಟ್ಟಿದ್ದ  … 
ಮದುವೆಯಾದ ವರ್ಷದೊಳಗೆ ಕುಡಿತ ಚಟವಾಗಿದ್ದ ಮಾವ ತೀರಿ ಹೋದ
ಅತ್ತೆ ಮೈದುನಂದಿರು 'ಅದ್ಯಾವ ಘಳಿಗೆಯಲ್ಲಿ ಕಾಲಿಟ್ಟಳೋ ಮಾವನ್ನೇ ತಿಂದ್ಬಿಟ್ಲು' ಅಂತ ಮುಖ ಮುರಿದರು … 

****

ಈವತ್ತು ಉಪವಾಸದ ಹಬ್ಬ (ಏಕಾದಶಿ )' ಅಂದ್ಲು ಅಮ್ಮ .
ನಕ್ಕುಬಿಟ್ಟಳು  
'ಅದೆಷ್ಟೋ ವರ್ಷಗಳಿಂದ  ದಿನಾ ಎರಡ್ಹೊತ್ತು ಉಪವಾಸ ಮಾಡ್ತಾನೆ ಇದ್ದೇವೆ . ಅದಕ್ಕೂ ಒಂದು ಹಬ್ಬ ಬೇಕೇ'   ಎಂಬಂತೆ  .. 

****

'ಇಲ್ಲ ಬಿಡು ಮಗ … ಆಗ್ಲೇ ಒಂದಷ್ಟು ಕಾಯಿಲೆಗಳು,.. ಎಷ್ಟ್ ದಿನ ಇರ್ತಾಳೋ ಏನೋ '
'ಅಯ್ಯೋ ಬಿಡಪ್ಪ , ಎಲ್ಲಾ ಸರಿಯಾಗಿರೋ bodyಗಳೇ ರಾತ್ರಿ ಮಲಗಿ ಬೆಳಿಗ್ಗೆ ಎದ್ದೇಳೋದಿಲ್ಲ' …… !!!

ಒಂದಷ್ಟು ವಾಸ್ತವಗಳು ……….!!!

ಹೆರಿಗೆ ಮಾಡಿದ ವೈದ್ಯ:"ಗಂಡು ಮಗು" ಅಂದ್ರು 
ಹುಡುಗಿಯ ತಾಯಿ:"……." ಕಣ್ಣ ತುಂಬಾ ನೀರು.
ವೈದ್ಯ: "ಗಂಡು ಮಗು ಅಂದಾಗ ಅತ್ತಿದ್ದು ನೀವೆ ಮೊದಲಿರಬೇಕು "… 
ಹುಡುಗಿಯ ತಾಯಿ : 'ಅವರ ಅಪ್ಪನ ಹಾಗೆ ಆಗದೆ ಇರಲಿ ಅಂತ ಡಾಕ್ಕ್ತ್ರೆ "
ಆ ಪುಟ್ಟ ಅವಿವಾಹಿತ ಹೆಣ್ಣು , ಆಗಷ್ಟೇ ಹುಟ್ಟಿದ ಗಂಡು ಮಗುವಿನ ತಾಯಿ ಇನ್ನು ಕಣ್ಣು ಬಿಡದೆ ಮಲಗಿತ್ತು !!

****

ಬೆಳಗು ಬೈಗಿನ ಅನ್ನಕ್ಕೆ ಆ ಹೋಟಲಲ್ಲಿ ದುಡಿವ ಅವನು ಚೆಂದದ ಹುಡುಗ
ನನ್ನ ಮಗಳ ವಯಸ್ಸೇ ಏನೋ … 
ಒಂದಷ್ಟು ನೀರೆರೆದು ಹೊಸ ಬಟ್ಟೆ ಹಾಕಿದರೆ ನನ್ನ ಮಕ್ಕಳಿಗಿಂತ ಚೆಂದವೇನೋ …
ಒಂದಷ್ಟು ಓದು ನೀಡಿದರೆ ನನ್ನ ಮಕ್ಕಳಿಗಿಂತ ಎತ್ತರಕ್ಕೇರುವನೇನೊ ….
'ಶಾಲೆಗೆ ಹೋಗುವೆಯೇನೋ ಪುಟ್ಟ'ಅಂದೆ
'ಈಗ ಹೋಗಿಬಂದೆ ಅವ್ವ, ಟೀ ಕೊಟ್ಟು ಬಂದೆ' ಅಂದ …. !!!!!!!

****

'ನಾ ಅಮ್ಮ ಆಗ್ತಾ ಇದ್ದೀನಿ ' ಅಂದ್ಲು
ಅವನ ಕಣ್ಣಲ್ಲಿ ಖುಷಿ ….
ಸಂಜೆ ಬಂದ ಅವನಲ್ಲಿ ಕುಡಿದ ವಾಸನೆ ಇಲ್ಲ 
ಇಷ್ಟು ದೊಡ್ಡ ಉಡುಗೊರೆ ನಿರೀಕ್ಷಿಸದ ಅವಳಿಗೆ ಅವನ ಬಗ್ಗೆ ಹೆಮ್ಮೆ ಗೌರವ ..!!!!

****

ಅಂದು 'ಅತ್ತಿಗೆ , ಹೊಂದ್ಕೊಂಡ್ ಹೋಗಿ ಅಮ್ಮನಿಗೂ  ವಯಸ್ಸಾಗ್ತಾ  ಅಲ್ವ '
ಇಂದು 'ಅತ್ತಿಗೆ, ಅಮ್ಮಂಗೆ ಹೇಳಿ ಹೊಂದ್ಕೊಂಡು ಹೋಗೋಕೆ , ನನ್ ಹೆಂಡ್ತಿನೂ ಎಷ್ಟೂ ಅಂತ ಮಾಡ್ತಾಳೆ !!!'


 

ಕನ್ನಡದ ಬರಹಗಳನ್ನು ಹಂಚಿ ಹರಡಿ

9 thoughts on “ಹೀಗೊಂದಿಷ್ಟು ಕಥೆಗಳು (ಕಥೆಗಳಾ !!?) … : ಸುನೀತಾ ಮಂಜುನಾಥ್

  1. ಸುನೀತಾ ಮಂಜುನಾಥ  ಅವರೇ ನ್ಯಾನೋ ಕಥೆಗಳು ಚೆಂದಿವೆ. ಇಷ್ಟವಾದವು.:-)

Leave a Reply

Your email address will not be published. Required fields are marked *