ಅಜ್ಜಿ ಹೇಳಿಕೊಟ್ಟ ಮಾತದು, ನಾವು ಕಲಿಯಲಿಲ್ಲ.
ನಮ್ಮ ಹಿರಿಯರ ಮಾತಿನಲ್ಲಿ ಉದ್ದೇಶ, ಪ್ರಯೋಜನ ಹುಡಿಕಿದ ನಾವು, ಹಿಂದೆ ಮುಂದೆ ನೋಡದೆ ಉದ್ದೇಶ, ಪ್ರಯೋಜನ ಕೇಳದೆ, ತಿಳಿಯದೆ ಹೊರಗಡೆ ಅಂತರ್ರಾಷ್ಟ್ರೀಯ ಆಚರಣೆಗಳನ್ನು ಅಪ್ಪಿಕೊಂಡೆವು .
ನಿಜ, ನಮ್ಮ ಹಿರಿಯರು ಅವರ ಆಚರಣೆಗೆ ಪ್ರಯೋಜನ, ಉದ್ದೇಶಗಳನ್ನು ಬರೆದಿಡಲು ಅಥವಾ ಮುಂದಿನ ಪೀಳಿಗೆಗೆ ಹೇಳಲು ಸೋತರು ಆದ್ರೆ ತಪ್ಪಾಗಿರಲಿಲ್ಲ.
ಈಗ ಕೊರೋನ ಎಂಬ ವೈರಸ್ ಪ್ರಪಂಚ ನುಂಗಲಾರಂಭಿಸಿದೆ. ಪ್ರಪಂಚ ನಮ್ಮ ಹಿರಿಯರ ಆಚರಣೆ, ಅನುಸರಣೆಗಳನ್ನು ಅಪ್ಪುತ್ತಿವೆ. ಈಗ ಬೇರೆಯವರು ಹಿಂದಿನ ಆಚರಣೆಗಳತ್ತ ಮುಖ ಮಾಡಿದಾಗ ಅದರ ಪ್ರಯೋಜನ, ಪರಿಣಾಮಗಳು ನಮಗೆ ಅರಿವಾಗುತ್ತಿದೆ
ಪ್ರಪಂಚದುದ್ದಕ್ಕೂ ನಮಸ್ಕರಿಸಿ, ಕೈ ಕುಲಕಬೇಡಿ ಎಂಬ ಕರೆ ಕೊಡಲಾಗಿದೆ (ವಿಶ್ ಇನ್ ಇಂಡಿಯನ್ ಸ್ಟೈಲ್ ಅಂಡ್ ಡೋಂಟ್ ಹ್ಯಾಂಡ್ ಶೇಕ್ ಪ್ಲೀಸ್ ಎಂಬ ಕರೆ ಕೇಳುತಿದೆ). ಹೇಗೆ ಹತ್ತಾರು ವಿಷಯಗಳು ನಮ್ಮ ಹಿರಿಯರು ಪಾಲಿಸಿದ್ದು ನಾವು ಬಿಟ್ಟಿದ್ದು ಕೆಲ ದಿನಗಳಿಂದ ನನ್ನ ಅರಿವೆಗೆ ಬಂದಿದ್ದು ಎಲ್ಲಿದೆ.
- ಹೊರಗಡೆ ಹೋದವರು ಕೈ, ಕಾಲು ತೊಳೆಯದೆ ಒಳಗಡೆ ಬರಕೂಡದು. ಹೊರಗಡೆ ಸುತ್ತಾಡಿ ಬಂದ ವ್ಯಕ್ತಿ ಹೋದ ಕಡೆ ಇಂದ ಗೊತಿಲ್ಲದೆ ತನ್ನ ಜೊತೆ ತರುವ ಕಾಯಿಲೆಗಳ್ಳನ್ನು/ಬ್ಯಾಕ್ಟೀರಿಯಾಗಳು ಹೊರಗಡೆ ಸ್ವಚ್ಛ ಮಾಡಿಕೊಂಡು ಒಳಗಡೆ ಬರಲಿ ಎಂದು.
- ಹೊರಗಡೆ ಇಂದ ಬಂದ ಅತಿಥಿಗಳಿಗೆ ನಮಸ್ಕಾರ ಮಾಡಲು ಅಭ್ಯಾಸ ಮಾಡಿಸಿದರೆ ಹೊರತು ಹ್ಯಾಂಡ್ ಶೇಕ್ ಅಲ್ಲ. ಅತಿಥಿ ಬಂದೊಡನೆ ಕೈ ಕಾಲಿಗೆ ನೀರು ಕೊಟ್ಟು ಶುದ್ಧವಾದ ಕರವಸ್ತ್ರ ಕೊಡಲು ಕಲಿಸಿದ್ದರು.
- ಚಪ್ಪಲಿಗಳನ್ನು ಹೊರಗಡೆ ಬಿಡುತಿದ್ದರು ನಾವು ಅದನ್ನು ಒಳಗೆ ಬಿಟ್ಟುಕೊಂಡೆವು. ಇದರ ಜೊತೆ ನಮಗರಿವಿಲ್ಲದೆ ಹೊರಗಡೆ ಇಂದ ಬಂದ ಬ್ಯಾಕ್ಟೀರಿಯಾಗಳನ್ನೂ ಮನೆಯೊಳಗೆ ಸೇರಿಸಿದೆವು.
- ಊಟಕ್ಕೆ ಮುಂಚೆ ಕೈ ತೊಳೆಯಬೇಕು. ಕೈಯಲ್ಲಿ ತಿನ್ನಿ ಅಥವಾ ಚಮಚದಲ್ಲಿ, ಕೈ ತೊಳೆಯಲು ಮನೆಯ ಹಿರಿಯರ ಆದೇಶ. ಇದರಿಂದ ತನ್ನ ಕೈ ಮೂಲಕ ಯಾವ ವೈರಸ್/ಬ್ಯಾಕ್ಟೀರಿಯಾ ತನ್ನ ದೇಹ ಸೇರಬಾರದು ಎಂದು.
- ಪಾತ್ರೆಗಳನ್ನು ಹೊರಗೆ ಹಿತ್ತಲಲ್ಲಿ ತೊಳೆಯೋ ಅಭ್ಯಾಸವಿತ್ತು ನಾವು ಅದನ್ನ ಸೀದಾ ಅಡುಗೆ ಮನೆಗೆ ತಂದೆವು.
- ಸೂತಕದ ಮನೆ/ಸಾವಿನ ಮನೆ ಇಂದ ಬಂದರೆ ಸ್ನಾನ ಮಾಡಿ ಒಳಗಡೆ ಬರವುದು ವಾಡಿಕೆ. ಅಲ್ಲಿಂದ ಬೇರೆ ಏನೋ ಗೊತಿಲ್ಲದ ಕಾಯಿಲೆ ಮನೆಯೊಳಗೆ ಬೇಡವೆಂದಷ್ಟೇ.
- ಶೌಚಾಲಯ ಮನೆಯಿಂದ ಹೊರಗಡೆ ಇತ್ತು. ಹೋಗಿ ಬಂದರೆ ಕೈ ಕಾಲು ಶುದ್ಧ ಮಾಡಿಕೊಂಡು ಮನೆಯೊಳಗೇ ಪ್ರವೇಶ.
- ಮುಟ್ಟಾದ ಮಹಿಳೆಯರು 3 ದಿನ ಹೊರಗಡೆ ಇರುವುದು ಅವರ ದೇಹ ನಿಶಕ್ತಿಯಾಗಿರುವುದು & ಇಲ್ಲಿ ಉಂಟಾಗುವ ಡೆಫಿಸೈನ್ಸಿ ಕೆಲಸದಿಂದ ಹೆಚ್ಚಾದೀತು ಎಂಬ ಕಾರಣಕ್ಕಿರಬಹುದು ಹೊರತು ಬೇರೆ ತಪ್ಪು ಕಲ್ಪನೆ ಏನಿಲ್ಲ.
- ಹೆರಿಗೆಯಾದ 16 ದಿನ ಜನಗಳಿಂದ ದೂರ ಕತ್ತಲೆಯಲ್ಲಿ ಇಡುವುದು ಅವಳ ಒಳ್ಳೆಯದಕ್ಕೆ. ದೇಹ ಈ ಕಾಲದಲ್ಲಿ ನಿಶಕ್ತಿಯಿಂದ ಇರುತ್ತದೆ ಹಾಗು ಕೆಲ ಬ್ಯಾಕ್ಟೀರಿಯಾಗಳನ್ನೂ ಆಕರ್ಷಿಸಬಹುದು ಎಂದು. ಅದರಿಂದ ಆಕೆ ಸುಳಿವಿಲ್ಲದ ಕಾಯಿಲೆಗಳಿಗೆ ಈಡಾಗಬಹುದು ಎಂದು.
- ಉಪ್ಪು, ಬೇವಿನ ಕಡ್ಡಿಯಲ್ಲಿ ಹಲ್ಲನ್ನು ತಿಕ್ಕುತಿದ್ದರು ಆದ್ರೆ ಟೂತ್ ಪೇಸ್ಟ್ ಬಂದು ಇದೆಲ್ಲ ಮರೆತೆವು. ಈಗ ಟೂತ್ ಪೇಸ್ಟಿನಲ್ಲಿ ಉಪ್ಪಿದೆಯೇ ಎಂದು ಕೇಳುತಿದ್ದಾರೆ, ಬೇವಿದೆಯೇ ಎಂದು ಕೇಳುವ ದಿನ ದೂರ ಇಲ್ಲ. ಅವರು ಕೇಳುವ ಮೊದಲು ನಾವಾಗಿಯೇ ಬೇವಿನ ಅಂಶವಿರುವ ಟೂತ್ ಪೇಸ್ಟ್ ಬಳಸೋಣ.
ಇದೆಲ್ಲ ಕೇವಲ ಕೆಲ ಉದಾಹರಣೆಗಳಷ್ಟೇ ಆದರೆ ಹೇಗೆ ಪಾಲಿಸಲು ನಮ್ಮ ಹಿರಿಯರು ನಮಗೆ ಮೊದಲೇ ಸೂಚಿಸಿದ್ದರು. ನಾವು ಅವರ ಆಚರಣೆಗಳನ್ನು ಅಲ್ಲಗಳೆದು ಅದರ ಹಿಂದಿರುವ ಉದ್ದೇಶ ಅರ್ಥ ಮಾಡಿಕೊಳ್ಳದೆ ಪ್ರಯೋಜನ ಹುಡುಕಿ, ಗೇಲಿ ಮಾಡಿ ಬೇರೆಯವರ ಆಚರಣೆಗಳನ್ನು ಅಳವಡಿಸಿಕೊಂಡೆವು.
ನಾವೆಲ್ಲ ಕಲಿತ ಬುದ್ದಿವಂತರೋ ಅಥವಾ ಹಿರಿಯರ ಮಾತು ಅಲ್ಲೆಗಳೆದ ಅವಿವೇಕಿಗಳೂ ಅರಿಯೆ. ಇನ್ನಾದರೂ ನಮಗೆ ಹೇಳಿಕೊಟ್ಟ ಒಳ್ಳೆಯ ಪಾಲನೆಗಳನ್ನು ರೂಡಿ ಮಾಡಿಕೊಳ್ಳೋಣ, ಅಭ್ಯಾಸ ಮಾಡಿಸೋಣ ಹಾಗು ಪ್ರಚಾರ ಮಾಡೋಣ.
–ಶೀಲಾ. ಎಸ್. ಕೆ.