ಹರಳೆಣ್ಣೆ ಡಬ್ಬಿ ಮತ್ತು ಹಳೇ ಪ್ರೇಮ ಪುರಾಣ..!: ರಶ್ಮಿ ಜಿ ಆಳ್ವ

ಪ್ರೀತಿ ಅನ್ನುವ ಎರಡಕ್ಷರವನ್ನು ದ್ವೇಷಿಸುವಂತೆ ಮಾಡಿದ್ದು ನೀನು… ಪ್ರೀತಿ ಅಂದರೆ ಅರಿಯದ ದಿನಗಳವು… ರೋಮಿಯೋ-ಜ್ಯೂಲಿಯೆಟ್, ಲೈಲಾ-ಮಜ್ನು ಪ್ರೀತಿಗಾಗಿ ಸತ್ತರು ಇಷ್ಟೇ ನನಗೆ ಗೊತ್ತಿದ್ದಿದ್ದು. ಆದರೆ ಕಾಲೇಜಿನ ದಿನಗಳಲ್ಲಿ ಲೆಕ್ಚರರೊಬ್ಬರು ತುಂಬಾ ಇಷ್ಟವಾಗಿದ್ದರು. ಅವರು ಮಾಡುತ್ತಿದ್ದ ಪಾಠವೂ ಅಷ್ಟೇ ಆಕರ್ಷಕ. ನಮ್ಮ ಗರ್ಲ್ಸ್ ಕಾಲೇಜ್ ಹೀರೋ ಅವರು. ಅವರು ಮಾಡುತ್ತಿದ್ದ ‘ಡಿಮಿನಿಶಿಂಗ್ ಮಾರ್ಜಿನಲ್ ಯುಟಿಲಿಟಿ’ಯ ಪಾಠ ಇಂದಿಗೂ ಮರೆತಿಲ್ಲ. ಕಾಲೇಜಿನ ಕೊನೆಯ ದಿನಗಳಲ್ಲಿ ಅವರು ನನ್ನ ಆಟೋಗ್ರಾಫ್‌ನಲ್ಲಿ ಬರೆದಿದ್ದು, ‘ಲವ್ಲೀ ಹ್ಯೂಮನ್‌ಬಿಯಿಂಗ್ ವಿತ್ ಮೋಸ್ಟ್ ಎಕ್ಸ್‌ಪ್ರೆಸಿಂಗ್ ಐಸ್’ ಕಣ್ಣಿಗೆ ಅಷ್ಟರವರೆಗೆ ಕಾಡಿಗೆ ಮಾತ್ರ ಹಾಕುತ್ತಿದ್ದ ನಾನು ಮರುದಿನದಿಂದಲೇ ಕಣ್ಣಿಗೆ ಹಚ್ಚಲೆಂದು ಮಸ್ಕರಾ ಕೊಂಡುಕೊಂಡಿದ್ದೆ. ಅಷ್ಟೇ ಅಲ್ಲದೆ ಒಂದು ಹರಳೆಣ್ಣೆ ಡಬ್ಬಿಯೂ ಕೂಡಾ… ಎಲ್ಲೋ ಓದಿದ ನೆನಪಿತ್ತು. ರೆಪ್ಪೆಗಳ ಹುಬ್ಬು ಗಾಢವಾಗಿ ಬೆಳೆಯಲು ಹರಳೆಣ್ಣೆ ಉಪಯುಕ್ತ ಎನ್ನುವುದು…

ಕಾಲೇಜು ಮುಗಿದ ನಂತರ ಅವರ ನಂಬರ್ ಇದ್ದರೂ ಯಾವತ್ತೂ ಅವರನ್ನು ಸಂಪರ್ಕಿಸುವ ಪ್ರಯತ್ನ ನಾನು ಮಾಡಲಿಲ್ಲ. ಕ್ರಷ್ ಅಂದರೆ ಇದೇ ಇರಬಹುದಾ? ಇದನ್ನೆಲ್ಲ ನನಗೆ ಯಾವತ್ತೂ ಹೇಳಬೇಕು ಎಂದು ಅನ್ನಿಸಿರಲಿಲ್ಲ. ಆದರೆ ಇಂದು ಅದೇಕೋ ಅಂಗಡಿಯಲ್ಲಿ ಹರಳೆಣ್ಣೆ ಡಬ್ಬಿ ಕಂಡಾಗ ಪಕ್ಕನೆ ಆತನ ನೆನಪಾಯಿತು. ಇನ್ನು ಬಾಳ ಹಾದಿಯಲ್ಲಿ ನಿನ್ನ ಪರಿಚಯ ತೀರಾ ಆಕಸ್ಮಿಕ. ನಿನ್ನ ನಾ ಅಷ್ಟು ಇಷ್ಟಪಡಲು ಕಾರಣ? ಕಾರಣಗಳ ಬಗ್ಗೆ ಯೋಚಿಸಲು ಕುಳಿತರೆ ನಾನು ಖಾಲಿ… ಕಾರಣಗಳು ಇದ್ದರೆ ಅದು ಪ್ರೀತಿಯಾದರೂ ಹೇಗಾಗುತ್ತದೆ? 

ಆದರೆ ನಿನ್ನ ನಗು ನನಗೆ ಮೋಡಿ ಮಾಡಿದ್ದು… ನಿನ್ನ ಮಾತುಗಳೂ ಕೂಡಾ… ನೀನು ತುಂಬಾ ಸಾಫ್ಟ್ ಎಂದು ನನಗನಿಸಿತ್ತು. ಅದು ಸುಳ್ಳೆಂದು ಈಗ ಅನಿಸುತ್ತಿದೆ… ಅದು ನೀನು ನಿನ್ನ ಹಳೆಯ ಪ್ರೇಮ ಪುರಾಣಗಳ ಬಗ್ಗೆ ಹೇಳುತ್ತಿದ್ದೆ, ನಿನ್ನ ಮುಖ, ಕಣ್ಣುಗಳಲ್ಲಿ ತೀರದ ಉಲ್ಲಾಸ… ಇದನ್ನೆಲ್ಲ ನೀನು ನನ್ನ ಜೊತೆ ಹಂಚಿಕೊಳ್ಳುತ್ತಿದ್ದರೆ ನೀನೆಷ್ಟು ಸಾಥ್ವಿ ಎಂದು ನನ್ನ ಮನಸ್ಸು ಖುಷಿಪಟ್ಟಿತ್ತು. ಆದರೆ ನನ್ನನ್ನು ಈ ಕ್ಷಣಕ್ಕೂ ಕಾಡುವ ಪ್ರಶ್ನೆಯೊಂದೇ, ನೀನು ನಿನ್ನ ಜೀವನದಲ್ಲಿ ಬಂದ ಪ್ರತೀ ಹುಡುಗಿಯರನ್ನೂ ನಿಜವಾಗಿಯೂ ಪ್ರೀತಿಸಿದ್ದೀಯಾ? ನೋಡಿದವರನ್ನೆಲ್ಲ ಇಷ್ಟಪಡಲು, ಪ್ರೀತಿಸಲು ಸಾಧ್ಯಾನಾ? ಇದು ನಿಜವಾಗಿಯೂ ಪ್ರೀತೀನಾ ಅಥವಾ ಅವಕಾಶ ಸಿಕ್ಕರೆ ಬಳಸಿ ಜಾರಿಕೊಳ್ಳಲು ಆ ಎರಡಕ್ಷರ ಬಳಸಿಕೊಂಡೆಯಾ? 

ನನ್ನ-ನಿನ್ನ ಪ್ರಥಮ ಭೇಟಿ ನನಗೆ ನಿರಾಸೆಯನ್ನೇ ತಂದಿತ್ತು. ನಾನು ಇಷ್ಟಪಟ್ಟು ಬೆಳೆಸಿದ್ದ ಉಗುರುಗಳನ್ನು ನಿನ್ನಲ್ಲಿದ್ದ ನೇಲ್ ಕಟ್ಟರ್‌ನಿಂದ ಕತ್ತರಿಸಿದ್ದೆ. ನಿನಗೆ ಉದ್ದನೆಯ ಉಗುರುಗಳು ಇಷ್ಟವಾಗಲಿಲ್ಲ. ಹಾಗೆಂದು ನಿನ್ನ ತಲೆಯ ಕೂದಲು ಮಾಸಿದ ಮಧ್ಯಭಾಗ ಕೂಡಾ ನನಗೆ ಇಷ್ಟವಾಗಲಿಲ್ಲ. ಆದರೆ ನಾನು ನಿನ್ನಷ್ಟು ಸ್ವಾರ್ಥಿಯಲ್ಲ ನೋಡು… ಪ್ರೀತಿಸುವ ಭರದಲ್ಲಿ ಒಪ್ಪಿಕೊಂಡಿದ್ದೆ. ನಿನ್ನ ಅಕ್ಷೇಪಣೆ ನಾನು ಹಚ್ಚಿದ್ದ ನೈಲ್ ಪಾಲಿಶ್ ಮೇಲೂ ಇತ್ತು. ಮನೆಗೆ ಬಂದ ಮೇಲೆ ನನ್ನ ನಿರ್ಧಾರ ಸ್ಪಷ್ಟವಾಗಿತ್ತು. ಮತ್ತೊಮ್ಮೆ ನಿನ್ನ ಭೇಟಿಯಾಗುವುದು ಅರ್ಥವಿಲ್ಲ ಎಂದು ರಾತ್ರಿಯಿಡೀ ಅತ್ತಿದ್ದೆ, ಮರುದಿನ ನೀನು ಕರೆ ಮಾಡಿದಾಗ ನನ್ನ ನಿರ್ಧಾರ ಯಾಕೋ ಬದಲಾಗಿತ್ತು. ಆದರೆ ಮನಸ್ಸಿನಲ್ಲಿ ಬೇಜಾರು ಮಾತ್ರ ಕಮ್ಮಿಯಾಗಲಿಲ್ಲ. 

ನನ್ನ-ನಿನ್ನ ಪ್ರೀತಿಯ ಬಗ್ಗೆ ಅಷ್ಟರಲ್ಲೇ ಮನೆಯಲ್ಲಿ, ಗೆಳೆಯರಲ್ಲಿ ಎಲ್ಲರಲ್ಲಿ ಹೇಳಿಕೊಂಡಿದ್ದೆ. ನನ್ನ ಪ್ರಥಮ ಪ್ರೀತಿ ನೀನು, ಒಮ್ಮೊಮ್ಮೆ ಬದುಕು ನಮ್ಮನ್ನು ಎಷ್ಟು ಮೂರ್ಖರನ್ನಾಗಿಸುತ್ತೆ ಅಲ್ವಾ? 

ನಿನಗೆ ನೆನಪಿರಬಹುದು. ಅಂದು ನೀನು ನನ್ನನ್ನು ನಿನ್ನ ಸ್ನೇಹಿತ ರವಿಪ್ರಕಾಶ್ ಮನೆಗೆ ಕರೆದೊಯ್ದಿದ್ದೆ. ನೀನು ಮತ್ತು ಅವರು ಮಾತಿನಲ್ಲಿ ಬ್ಯುಸಿಯಾಗಿದ್ದರೆ ನನ್ನ ದೃಷ್ಟಿ ಹೊರಗಿದ್ದ ಪೇರಳೆ ಮರದ ಮೇಲಿತ್ತು. ನಿನ್ನ ಸ್ನೇಹಿತ ನನ್ನನ್ನು ಅರ್ಥಮಾಡಿಕೊಂಡವರಂತೆ ತನ್ನ ಮಗನನ್ನು ಕರೆದು ಪೇರಳೆ ತೆಗೆದುಕೊಡಲು ಹೇಳಿದ್ದರು. ನಾನು ಅವರು ತೆಗೆದುಕೊಟ್ಟಷ್ಟನ್ನೂ ಬಿಡದೆ ಮುಕ್ಕಿದ್ದೆ. ನಾನು ಖುಷಿಯಾಗಿದ್ದರೆ ನಿನ್ನ ಮುಖ ಊದಿಕೊಂಡಿತ್ತು. ಅಲ್ಲಿಂದ ಹಿಂತಿರುಗುವಾಗ ನೀನು ನನ್ನ ಬಳಿ ಒಂದು ಮಾತನ್ನೂ ಆಡಲಿಲ್ಲ. ಕಾರಣ ತಿಳಿದಿದ್ದು ಅಂದು ರಾತ್ರಿ ನೀನು ಕರೆ ಮಾಡಿದಾಗ… ನಾನು ಪೇರಳೆ ತೆಗೆದುಕೊಂಡು ತಿಂದಿದ್ದು ನಿನಗಿಷ್ಟವಾಗಲಿಲ್ಲ ಎಂದಾಗ ನಿನ್ನ ಸಣ್ಣತನ ಕಂಡು ವ್ಯಥೆಪಟ್ಟಿದ್ದೆ. ಇದು ನಿನಗೆ ಪ್ರಸ್ಟೀಜ್ ಪ್ರಶ್ನೆಯಾಗಿತ್ತು… ಆದರೆ ನನಗೆ ಮಾತ್ರ ತೀರಾ ಸಿಲ್ಲಿ…

ಅರಳುವ ಹೂವು, ಈಜುವ ಮೀನು, ಆಗಸದ ನೇಸರ, ಶಶಿಯ ಆಗಮನ, ಬೆಳದಿಂಗಳು ಇಂಥ ಜೀವನದ ಸಣ್ಣ ಸಣ್ಣ ಕ್ಷಣಗಳಿಗೂ ಖುಷಿ ಪಡೋಳು ನಾನು. ಮಳೆ ಹನಿದಾಗ ಬೇಕೆಂದೇ ಹೊರಬಂದು ಮಣ್ಣಿನ ಘಮದಲ್ಲಿ ಸಂತಸ ಪಡುವವಳು ನಾನು. ನಿನ್ನ ಭಾವನೆಗಳು ನನ್ನಂತಿಲ್ಲ, ನಿನ್ನನ್ನು ಅಲ್ಲಿ ಕಲ್ಪಿಸಿಕೊಳ್ಳುವುದೂ ನನಗೆ ಕಷ್ಟ. ಇನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ಅರ್ಥವಿಲ್ಲ ಎಂದು ನನಗರ್ಥವಾಗುತ್ತಿದೆ. ಅರ್ಥಮಾಡಿಕೊಂಡು ಸಾಧಿಸುವುದಾದರೂ ಏನು? ನಿನಗಾಗಿ ನಾನು ನನ್ನತನ ಕಳೆದುಕೊಂಡು ಬದಲಾಗುವುದು ಅರ್ಥವಿಲ್ಲದ ಮೇಲೆ…

******

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

22 Comments
Oldest
Newest Most Voted
Inline Feedbacks
View all comments
B T Jahnavi
B T Jahnavi
10 years ago

Dear Rashmi….

Good attempt! You have got the style ! Keep writing !

All the best!

Jahnavi

shashidhara bangera
10 years ago

ಬಹಳ ಸೊಗಸಾಗಿದೆ… ಪ್ರತೀ ಸಾಲುಗಳಲ್ಲಿ ಏನೋ ತುಡಿತವಿದೆ… ಮೊದಲ ಪ್ರೀತಿ ಬಗೆಗಿನ ಕಾತರ, ಕೌತುಕ ಹಿಡಿದಿಟ್ಟು ಓದಿಸುತ್ತದೆ. ಉತ್ತಮ ಬರಹವಾಗಲು ಇಷ್ಟು ಸಾಕು,, ಇನ್ನೇನು ಬೇಕು? ಜೈಹೋಪ 🙂

shanthi k a
shanthi k a
10 years ago

superb …

 

shanthi k a
shanthi k a
10 years ago

ಸುಂದರ ಬರಹ .. ಸೊಗಸಾಗಿ ಬರೆದಿದ್ದೀರಿ 

JSD Pani
JSD Pani
10 years ago

ಹನಿಗವಿತೆಗಳಿಂದ ಕಿರುಗತೆಯ ಸಾಹಿತ್ಯಕ್ಕೆ ಪ್ರಮೋಷನ್. ಒಳ್ಳೆಯದು. 
ಜೀವನ ಅನ್ನೋದು ಹೆಣ್ಣು ಗಂಡಿನ ನಡುವಿನ ಪ್ರೀತಿಗಷ್ಟೇ ಮೀಸಲಲ್ಲ. ಹೆಣ್ಣು ಗಂಡಿನ ನಡುವೆಯ ಸಹಜ ಆಕರ್ಷಣೆ ಬಹಳಷ್ಟು ಬಾರಿ ಪ್ರೀತಿ ಎನ್ನುವ ಹೆಸರನ್ನು ಪಡೆದುಕೊಳ್ಳುತ್ತದೆ.
ಒಳ್ಳೆಯ ಪ್ರಯತ್ನ. ಮುಂದುವರೆಯಲಿ.

  
Sent from http://bit.ly/KIoyYL

 

Veeru Hemmige
Veeru Hemmige
10 years ago

ನೃತ್ಯ ರಂಗದಲ್ಲಿ ಹೆಸರು ಮಾಡಿ ಕವಿಯತ್ರಿಯಾಗಿ ಪ್ರವರ್ಧಮಾನಕ್ಕೆ ಬರುತ್ತಿರುವ ಹಾಗು ಲೇಖಕಿಯಾಗಿ ಪರಿಚಿತರಾಗುತ್ತಿರುವ ನನ್ನ ಸೋದರಿ ರಶ್ಮಿ ಗೆ ಶುಭಾಶಯಗಳು , ನಿನ್ನ ಲೇಖನದಲ್ಲಿ ಬಳಸಿರುವ ಪದಗಳಲ್ಲಿ ಶಕ್ತಿ ಇದೆ, ಓದಿಸಿಕೊಂಡು ಹೋಗುವ ಗುಣವಿದೆ ಮುಂದುವರಿಸು, ಮತ್ತಷ್ಟು ಅರ್ಥಪೂರ್ಣ ಲೇಖನಗಳು ನಿನ್ನಿಂದ ಬರಲಿ ಎಂದು ಹಾರೈಸುವೆ 

madhu kumar
madhu kumar
10 years ago

Good mam. Con………….

 

 

Savita Inamdar
10 years ago

ತನ್ನತನವನ್ನೂ ಬಿಟ್ಟೇನು ಇನಿಯ

ನಿನ್ನ ಸನಿಹ ಬಯಸಿ

ನಿನ್ನ ಸಣ್ಣತನವ ಹ್ಯಾಗೆ ಒಪ್ಪೇನು ಗೆಳೆಯ

ನನ್ನ ಆತ್ಮ ವಂಚಿಸಿ???

ನಿನ್ನ ಬರಹ ಸುಂದರವಾಗಿ ಮೂಡಿ ಬಂದಿದೆ ರಷ್ಮಿ.. ಮನದ ಭಾವನೆಗಳನ್ನು ಹೊರತರಲು ಲೇಖನಿಯ ಸಂಗ ಸುಖವೇ ಪರಮ ಸುಖವಲ್ಲವೆ??

Dr.D.T.Krishnamurthy.
Dr.D.T.Krishnamurthy.
10 years ago

ಸುಂದರ ಬರಹ.ಬರವಣಿಗೆ ಮುಂದುವರಿಸಿ.

venki
venki
10 years ago

good write up rashmi ji, painful old memories 🙁

ಡಾ.ಶಿವಾನಂದ ಕುಬಸದ
ಡಾ.ಶಿವಾನಂದ ಕುಬಸದ
10 years ago

ಬಹಳ ಒಳ್ಳೆಯ ಲೇಖನ ..ಮೊದಲ ಪ್ರಯತ್ನದಲ್ಲೇ ಬೌಂಡರಿ…

"ನಿನಗಾಗಿ ನಾನು ನನ್ನತನ ಕಳೆದುಕೊಂಡು ಬದಲಾಗುವುದು ಅರ್ಥವಿಲ್ಲದ ಮೇಲೆ…" ಇಷ್ಟವಾಯಿತು…

ಶುಭವಾಗಲಿ…

 

lokesh mosale
10 years ago

:-)…..lovely …….;-(

Azad
10 years ago

ರಶ್ಮಿ, ಒಪ್ಪಬೇಕು ನಿಮ್ಮ ಬರವಣಿಗೆಯ ಶೈಲಿ ನೀವು ಮೊದಲ ಲೇಖನ ಬರೆದಂತೆ ಅನ್ನಿಸುತ್ತಿಲ್ಲ.. ಪದಗಳನ್ನು ಭಾವದೊಂದಿಗೆ ಮೇಳೈಸಿ ಬರೆಯುವುದು ಅದರಲ್ಲೂ ಈ ಕೆಳಗಿನ ಸಾಲುಗಳನ್ನು ಕಂಡು- ಹೇಳಲಾಗದು….!! ಚನ್ನಾಗಿದೆ ಲೇಖನ.

ಅರಳುವ ಹೂವು, ಈಜುವ ಮೀನು, ಆಗಸದ ನೇಸರ, ಶಶಿಯ ಆಗಮನ, ಬೆಳದಿಂಗಳು ಇಂಥ ಜೀವನದ ಸಣ್ಣ ಸಣ್ಣ ಕ್ಷಣಗಳಿಗೂ ಖುಷಿ ಪಡೋಳು ನಾನು. ಮಳೆ ಹನಿದಾಗ ಬೇಕೆಂದೇ ಹೊರಬಂದು ಮಣ್ಣಿನ ಘಮದಲ್ಲಿ ಸಂತಸ ಪಡುವವಳು ನಾನು. ನಿನ್ನ ಭಾವನೆಗಳು ನನ್ನಂತಿಲ್ಲ, ನಿನ್ನನ್ನು ಅಲ್ಲಿ ಕಲ್ಪಿಸಿಕೊಳ್ಳುವುದೂ ನನಗೆ ಕಷ್ಟ. ಇನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ಅರ್ಥವಿಲ್ಲ ಎಂದು ನನಗರ್ಥವಾಗುತ್ತಿದೆ. ಅರ್ಥಮಾಡಿಕೊಂಡು ಸಾಧಿಸುವುದಾದರೂ ಏನು? ನಿನಗಾಗಿ ನಾನು ನನ್ನತನ ಕಳೆದುಕೊಂಡು ಬದಲಾಗುವುದು ಅರ್ಥವಿಲ್ಲದ ಮೇಲೆ…

ಸಣ್ಣ ಸಣ್ಣ ಎಂದು ದೊಡ್ಡವಿಷಯದ ಗಂಭೀರತೆಯನ್ನು ಸುಲಭ ಎನ್ನುವಂತೆ ಅರ್ಥೈಸಿಕೊಂಡ…ನಿಮ್ಮ ಲೇಖನ ಚನ್ನಾಗಿದೆ

ದಿವ್ಯ ಆಂಜನಪ್ಪ
ದಿವ್ಯ ಆಂಜನಪ್ಪ
10 years ago

ಅರಳುವ ಹೂವು, ಈಜುವ ಮೀನು, ಆಗಸದ ನೇಸರ, ಶಶಿಯ ಆಗಮನ, ಬೆಳದಿಂಗಳು ಇಂಥ ಜೀವನದ ಸಣ್ಣ ಸಣ್ಣ ಕ್ಷಣಗಳಿಗೂ ಖುಷಿ ಪಡೋಳು ನಾನು. ಈ ಸಾಲುಗಳಲ್ಲಿ ನನ್ನನ್ನೇ ನಾ ಓದಿಕೊಂಡೆ…. 🙂

ಸೊಗಸಾಗಿದೆ ರಶ್ಮಿ ಮೇಡಂ… ಧನ್ಯವಾದಗಳು

Manjunatha HN Pura
Manjunatha HN Pura
10 years ago

Good attempt Rashmiyavare, first ballinalle sixer hodedideeri.  Keep writing.

sunil
sunil
10 years ago

jeevanasalli yenanno padeyalu siguva sanna sanna santasada kshanagalannu kaledukooalalu siddanilla…… yavade karanakku adu pritine irabahudu adakkagi nammatana bidabaradu aa nittinalli sundaravad article …. i like it ,,, rashmi bareyuva shali channagide ,,,,saralavagide …

Keep it up

srivalli manjunath
srivalli manjunath
10 years ago

very nice. 

 

 

ಜಯಪ್ರಕಾಶ್ ಇ
ಜಯಪ್ರಕಾಶ್ ಇ
10 years ago

ನಾಲ್ಕು ಸಾಲು ಬರೆಯುವ ನಾ ಎನು ಬರೆಯಲಿಕ್ಕಾಗುವುದು, ಈ ನಿನ್ನ ಬರವಣಿಗೆ, ಮೆರವಣಿಗೆ ತರಹ ಸಾಗಲಿ, ಅಡೆ ತಡೆಯಿಲ್ಲದೆ, ಗಮ್ಯ ಸ್ಥಾನ ಸೇರಿದ ಮೇಲೆ ಅಂದುಕೊಂಡಿದ್ದು ಪರರಿಗಾಗುವುದು, ನಿನ್ನತನವನ್ನು ತೇಯ್ದು ಸುವಾಸನೆ ಹಚ್ಚಿದಂತು ನಿಜ, ಹಚ್ಚಿದ ಸುವಾಸನೆ ಕ್ಷಣಿಕ, ಬರಹ ಬಹಳ ಚೆನ್ನಾಗಿದೆ ಮೆರವಣಿಗೆ ತರಹ ಮುಂದುವರಿಸು….ಶುಭವಾಗಲಿ…,

Roopa Satish
10 years ago

 ಸೂಪರ್ ಇಷ್ಟವಾಯ್ತು ನಿಮ್ಮ ನಿಲುವು, ಬರವಣಿಗೆ 🙂 

Gururaj
10 years ago

Thumba channagide ,,
modala preethi mosada reethi

ಬಿ.ಗಂಗಾಧರ ನಾಯಕ್
ಬಿ.ಗಂಗಾಧರ ನಾಯಕ್
10 years ago

ರಶ್ಮೀ, ನಿಮ್ಮ ಒಡಲಾಳ ಎಷ್ಟು ಸೃಜನಶೀಲವಾಗಿದೆ! ಓದಿ ಭಾವುಕನಾದೆ. ಪ್ರೀತಿ ಮಧುರ ಮಧುರ ಎಂದೇ ತಿಳಿದವರಿಗೆ, ಪ್ರೀತಿ ಎಂದರೆ ಕೋಮಲವಾದ ಹೂವು ಎಂದು ಭ್ರಮಿಸಿದವರಿಗೆ ಸತ್ಯ ದರ್ಶನ ಮಾಡಿರುವಿರಿ..ಯಾರೂ ಮೋಸ ಹೋಗದಂತೆ ..! ಹೂವಿನ ಹಿಂದೇ ಚುಚ್ಹುವ ಮುಳ್ಳು ಕೂಡಾ ಇದೆ ತಾನೇ?.

jay kishen
jay kishen
10 years ago

ತುಂಬ ಆಕರ್ಷವಾದ ನಿಮ್ಮ ಬರಹ ಇಟ್ ಶೋವ್ಸ್ ಯು ಹವೆ ಅ ಗ್ರೇಟ್ ಫ್ಯೂಚರ್ ಅಸ ಅ writer..
ಕೇಪ್ ರೈಟಿಂಗ್ ..ರಶ್ಮಿ ಜಿ

22
0
Would love your thoughts, please comment.x
()
x