ಮಹೋತ್ಸವ
ಗಿಡ ನೆಟ್ಟರೆ
ವನ ಮಹೋತ್ಸವ
ಇಂಟರ್ ನೆಟ್ಟಿರೆ
ಮನ ಮಹೋತ್ಸವ..!
ಆಮಂತ್ರಣ
ಅನ್ನುವುದಿಲ್ಲ ನಾ
ಊರು ಕೊಳ್ಳೆ ಹೊಡೆದ ಮೇಲೆ
ಮುಚ್ಚಿದಂತೆ ಊರ ಬಾಗಿಲು,
ಬಾ ಗೆಳತಿ ಸೂರೆ ಮಾಡು
ಎನ್ನ ಹೃದಯ ಸದಾ
ತೆರೆದ ಬಾಗಿಲು..!
ರಂಗು
ಎಷ್ಟೊಂದು ರಂಗು
ಮನುಜನ ಕಾಯಕೆ
ನೆರಳು ಕಪ್ಪು
ಊಟ
ನೀರವ ರಾತ್ರಿಯಲ್ಲಿ
ನೂರು ಭಾವನೆಗಳ
ವಿನಿಮಯದ ನೋಟ..;
ಆಹಾ ಅದೆಷ್ಟು ಚೆನ್ನ ಪ್ರಿಯೆ
ಕಣ್ಣುಗಳಾ ಈ
ಬೆಳದಿಂಗಳ ಊಟ..!
ಲೋಕ
ಎಷ್ಟು ವಿಚಿತ್ರ
ಭಾವನೆಗಳ ಲೋಕ
ನಕ್ಕು ಅಳುವ
ಅತ್ತು ನಗುವ ಶೋಕ
ಬಾಳು ನೀರವ ಶ್ಲೋಕ..!
ಕ್ಷಣಿಕ
ಕತ್ತಲೆ ಕೂಪ
ಕ್ಷಣಿಕ ಮರೆ ಅದು
ಕಿರಣ ತೂರಿ
ಹೊರಬಂದೊಡೆ ಪ್ರಭೆ
ಕಾಲ ಎಂದೂ ನಿಲ್ಲದು
–ಆರ್.ಸುನೀಲ್.ತರೀಕೆರೆ.
ಫೇಸ್ಬುಕ್ಕು.. ವಾಟ್ಸಪ್ಪು….
–ಕೊರಗು–
ಮೊದಲು ಸಿಗುತ್ತಿತ್ತು
ನಲ್ಲೆಯ ಸಿಹಿ ಅಪ್ಪುಗೆ |
ಈಗ ಅವಳ ಸಮಯ ಸೀಮಿತ
ಕೇವಲ ಫೇಸ್ಬುಕ್ಕು ವಾಟ್ಸಪ್ಪಿಗೆ ||
–ವಿಪರ್ಯಾಸ–
ಫೇಸ್ಬುಕ್ಕ್ನಲ್ಲಿ ಕಂಡ
ರಾಜಕುಮಾರಿ |
ಮನೆಯ ಹತ್ತಿರ ಹೋದಾಗ
ಮಾಡುತ್ತಾ ಕಂಡಳು ಕಸ ಮುಸುರಿ ||
–ಜನರೇಶನ್ ಗ್ಯಾಪು–
ತರಲೆ ಮಾಡಿದಕೆ ಕೊಟ್ಟ
ಅಪ್ಪ ಒಂದು ಏಟು|
ಇದು ಮಗನ
ಫೇಸ್ಬುಕ್ ಅಪಡೇಟು||
–ಆದ್ಯತೆ–
ಎರಡು ಗಂಟು ಕಟ್ಟಿ
ಮದುಮಗ ನಿಲ್ಲಿಸಿದ ಕಟ್ಟುವದನ್ನು ತಾಳಿ|
ಹಿರಿಯರು ಸಿಟ್ಟಿಗೆದ್ದಮೇಲೆ ಅಂದ ಫೇಸ್ಬುಕ್ ಸ್ಟೇಟಸ್
ಅಪಡೇಟ್ ಆಗತಾಇದೆ ಎರೆಡು ನಿಮಿಷ ತಾಳಿ||
–ಮಾನದಂಡ–
ನೀನೆಷ್ಟು
ಲಾಯಕ್ಕು |
ತಿಳಿಯುವ ಹೊಸ ಮಾನದಂಡ
ಫೇಸ್ಬುಕ್ನಲ್ಲಿ ನಿನಗೆ ಬಂದ ಲೈಕು ||
–ಸೇಡು–
ಶೋಷಿತ ಪತಿಯರ
ಜೀವನದ ಒಂದೇ ಎಮು|
ಹೇಗಾದರೂ ಮಾಡಿ ಆಡಿಸುವದು
ಹೆಂಡಂದಿರಿಂದ ಬ್ಲೂ ವ್ಹೇಲ್ ಗೇಮು||
–ಎಮೋಜಿ–
ಮೊದಲು ಭಾವನೆಗಳನು ವ್ಯಕ್ತ ಪಡಿಸುವದು
ಆಗಿತ್ತು ತುಂಬಾ ಈಜಿ |
ಆದರೆ ಈಗ ಬೇಕು
ಸರಿಯಾದ ಎಮೋಜಿ ||
–ಬದಲಾವಣೆ–
ತಾಂತ್ರಿಕ ಯುಗದಲ್ಲಿ
ಮಾನವನಾಗಿದ್ದಾನೆ ಮಷಿನ್ನು |
ಭಾವನೆಗಳೂ ತಂತ್ರಜ್ಞಾನದಡಿಯಲಿ ಸಿಕ್ಕಿ
ಆಗಿವೆ e-ಮೋಷನ್ನು ||
–ವಾದಿರಾಜ ಕುಲಕರ್ಣಿ, ಪುಣೆ
ಪ್ರೇಮ
ನನ್ನ ಮಾತಿಗೆ ನಿನ್ನ ಮೌನ ಜೊತೆಯಾಗಲಿ
ನನ್ನ ಹೃದಯಕ್ಕೆ ನಿನ್ನ ಮಿಡಿತ ಉಸಿರಾಗಲಿ
ಈ ಕಣ್ಣುಗಳಿಗೆ ನಿನ್ನ ಕನಸು ಕೊಸರಾಗಲಿ
ಈ ಪ್ರೀತಿಗೆ ನಿನ್ನ ನಗುವೇ ಸಮ್ಮತಿಯಾಗಲಿ!!
ವಿರಹ
ನಿದಿರೆಗೂ ಗೊತ್ತಿರಲಿಲ್ಲ
ತನ್ನ ಕನಸು ನೀನೆಂದು
ಹೃದಯಕ್ಕೂ ತಿಳಿದಿರಲಿಲ್ಲ
ಆ ಮಿಡಿತ ನಿನ್ನದೆಂದು!!
ಭಗ್ನ
ಒಲವಿನ ಸೇತುವೆ ಮೇಲೆ ಹರಿದಾಡಿದ ಪ್ರೀತಿ
ಹೃದಯದೊಳಗೆ ಇಳಿದು ಬಡಿತವ ನಿಲ್ಲಿಸಿ ಹೋಯಿತು
ಜೀವನದ ದಾರಿಯಲ್ಲಿ ಹೂವಾಗಿ ಅರಳಿದ್ದ ಈ ಪ್ರೀತಿ
ಮುಳ್ಳಾಗಿ ಸೇರಿ ಜೀವ ತೆಗೆದು ಹೋಯಿತು!!
ಹಾಸ್ಯ
ನಿನ್ನ ಪ್ರೀತಿ ಒಪ್ಪಿಕೊಳ್ಳಲು ಆಗುವುದಿಲ್ಲ ಮಿತ್ರ
ನನಗಿದ್ದಾಳೆ ಒಬ್ಬಳೇ ಒಬ್ಬಳು ಅಕ್ಕ ಸುಮಿತ್ರ
ಅವಳ ಕೊರಳಿಗೆ ಬಿದ್ದರೆ ಬೇಗ ಮಂಗಳ ಸೂತ್ರ
ನಾನಗುವೆನು ನಿನ್ನ ಜೀವನದಲ್ಲಿ ಅತೀ ಮುಖ್ಯ ಪಾತ್ರ
-ಪುಷ್ಪ ಪ್ರಸಾದ್, ಉಡುಪಿ